Wednesday, October 21, 2009

ಸವಾರಿ, ನನ್ನವಳ ಜೊತೆಗೆ...

ನಾನು, ಸ್ನೇಹ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾಳೆ ಅವಳ ಹುಟ್ಟುಹಬ್ಬ. ಹೇಗಾದರೂ ಮಾಡಿ, ನಾಳೆ ಅವಳ ಜೊತೆ ಒಂದೆರೆಡು ಗಂಟೆ ಎಲ್ಲಾದರೂ ಸುಂದರವಾದ ಪ್ರದೇಶದಲ್ಲಿ ಕುಳಿತು ಮಾತನಾಡುವ ಮನಸಾಯಿತು. ಅವಳ ಒಪ್ಪಿಗೆ ಪಡೆಯಲು ಫೋನಾಯಿಸಿದೆ.
'ಹಾಯ್ ಸ್ನೇಹ'
'ಹಾಯ್ ಶಿವು'
'ನಾಳೆ ಎಲ್ಲಾದರೂ ಪಿಕ್ನಿಕ್ ಹೋಗೋಣ್ವಾ ?'
'Sorry ಕಣೋ, ನಾಳೆ ಆಗೋಲ್ಲ...'
'ಪ್ಲೀಸ್ ಕಣೆ....'
'ಯಾಕೆ ನಾಳೆ... ?, ಬೇಕಂದ್ರೆ ನಾಡಿದ್ದು ಹೋಗೋಣ. ನಾಳೆ ನನಗೆ ಸ್ವಲ್ಪ ಕೆಲಸ ಇದಾವೆ'.
ನನಗೆ ಗೊತ್ತಾಯ್ತ. ನನ್ನ ಚೂಡಯಿಸಲೆಂದೇ ಈ ಥರ ಪ್ರಶ್ನೆ ಮಾಡ್ತಾ ಇದಾಳೆ. ಆದರೂ ಮುಂದುವರೆಸಿದೆ.
"ನಾಳೆನೆ ಯಾಕೆ ಅಂತ ನಿನಗೆ ಗೊತ್ತಿಲ್ವಾ ?? ' ಅಂತ ಕೇಳಿದೆ.
'ಇಲ್ಲಪಾ, ನನಗೆ ಗೊತ್ತಿಲ್ಲ' ಅಂದ್ಲು.
'ನೀನು ಕಳ್ಳಿ, ಗೊತ್ತಿದ್ರು Acting ಮಾಡ್ತಿಯ...ಇರಲಿ ಇರಲಿ... ನಾನೇ ಹೇಳ್ತೀನಿ... ನಾಳೆ ನಿನ್ನ ಹುಟ್ಟು ಹಬ್ಬ ಅಲ್ವಾ...' ಅಂತೇಳಿ ಗುಟ್ಟು ಬಿಟ್ಟು ಕೊಟ್ಟೆ.
'ಹ್ಹಾ ಹ್ಹಾ ಹ್ಹಾ... ನನಗೆ ಗೊತ್ತಿತ್ತು' ಅಂತ ಹೇಳಿ ನಗಲು ಶುರುಮಾಡಿದಳು.
ಅದರಲ್ಲಿ ಅಂತ ಜೋಕ್ ಏನಿತ್ತೋ ಅಂತ ನನಗೆ ಗೊತ್ತಿಲ್ಲ.
'ಸರಿ. ನೀನೆ ಗೆದ್ದಿದಿಯ. ನಾಳೆ ಪಿಕ್ನಿಕ್ ಹೋಗೋಣ್ವಾ...?' ಅಂತ ಕೇಳಿದೆ.
'ನಾಳೆ ಕಷ್ಟ ಕಣೋ. ಆಗೋಲ್ಲ. ನಾಳೆ ಮಧ್ಯಾನ ಕೆಲವು ಅಥಿತಿಗಳು ನನ್ನ ಮನೆಗೆ ಬರ್ತಾ ಇದಾರೆ. ಹಾಗಾಗಿ ಮನೆಯಲ್ಲೇ ಇರ್ಬೇಕು..." ಅಂದ್ಲು.
'ಬೆಳಿಗ್ಗೆ ಐದು ಗಂಟೆಗೆ ನೀನು ಜಾಗಿಂಗ್ ಹೋಗ್ತಿಯ ಅಲ್ವಾ... ನಾನು ನಾಳೆ ಬೆಳಿಗ್ಗೆ ನಿಮ್ಮ ಮನೆ ಹತ್ರ ಬರ್ತೀನಿ. ಇಬ್ಬರು ಆಲ್ಲಿಂದ ನನ್ನ ಬೈಕ್ನಲ್ಲಿ ಹೋಗೋಣ.. ಓಕೆ ನಾ..?' ಅಂದೆ.
'ಸರಿ ಬರ್ತೀನಿ. ಆದರೆ ಬೆಳಿಗ್ಗೆ ಏಳು ಗಂಟೆಗೆಲ್ಲ ವಾಪಾಸ್ ಬರಬೇಕು.. ಓಕೆ ನಾ.. ?'
'ಆಯ್ತು ಮೇಡಂ...ನೀವು ಹೇಗೆ ಹೇಳ್ತಿರೋ, ನಾವು ಹಾಗೆ ಕೇಳ್ತಿವಿ..ಸದಾ ನಿಮ್ಮ ಸೇವಯಲ್ಲಿ....'
'ನಾಳೆ ಸಿಗು, ವಿಚಾರ್ಸಿಕೊಳ್ತಿನಿ.. ಹ್ಹಾ ಹ್ಹಾ ಹ್ಹಾ... bye' ಅಂತ ಹೆದರಿಸಿ ಫೋನ್ ಇಟ್ಟಳು.

ನಾಳೆ ಬೆಳಿಗ್ಗೆ ಬೇಗ ಏಳಬೇಕಾದುದರಿಂದ, ಬೇಗ ಮಲಗಿದೆ. ಮಲಗಿದ್ದೇನೋ ನಿಜ. ಆದರೆ ಸರಿಯಾಗಿ ನಿದ್ದೆ ಬರ್ಲಿಲ್ಲ. ರಾತ್ರಿ ಹನ್ನೆರೆಡು ಗಂಟೆಗೆ ಅವಳಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಫೋನಿನಲ್ಲಿ ತಿಳಿಸಿದೆ. ಅಂತು ಇಂತು, ಅಲ್ಪ ಸ್ವಲ್ಪ ನಿದ್ದೆ ಮಾಡಿ, ಬೆಳಿಗ್ಗೆ ಬೇಗ ಎದ್ದೆ. ನನ್ನ ಪ್ರಕಾರ ಬೆಳಿಗ್ಗೆ ಬೇಗ ಏಳೋದು ಅಂದರೆ ಒಂದು ಸಾಧನೆ. :P
ನಾನು ನಾಲ್ಕುವರೆಗೆ ಅವಳ ಮನೆಯಮುಂದೆ ಹೋಗಿ ನಿಂತು ಅವಳಿಗೆ ಫೋನ್ ಮಾಡಿ, ನಾನು ಬಂದಿರುವೆನೆಂದು ತಿಳಿಸಿದೆ. ಅವಳು ಕೂಡ ನನಗಾಗಿ ಕಾಯ್ತಾ ಇದ್ಲು, ನಾನು ಫೋನ್ ಮಾಡಿದೊಡನೆ ಮನೆಯಿಂದ ಹೊರಗಡೆ ಬಂದಳು. ಅವಳು ಜಾಗಿಂಗ್ ಡ್ರೆಸ್'ನಲ್ಲಿ ಬರ್ತಾ ಇದ್ಲು. ಮುಂಜಾನೆಯ ನಸುಕಿನಲ್ಲಿ ಅವಳ ಮುಖ ಚಂದ್ರನಂತೆ ಕಂಗೊಳಿಸ್ತಾ ಇತ್ತು. ಅವಳು ತುಂಬಾ ತುಂಬಾ ತುಂಬಾ ಸುಂದರವಾಗಿ ಕಾಣುತ ಇದ್ದಳು. ಜಾಗಿಂಗ್ ಡ್ರೆಸ್ ಹಾಕಿಕೊಂಡಿದ್ದರಿಂದ ಇನ್ನಸ್ಟು ಸುಂದರವಾಗಿ ಕಾಣ್ತಾ ಇದಳೋ ಏನೋ ಗೊತ್ತಿಲ್ಲ. ಅವಳು ನಡೆದು ನನ್ನ ಹತ್ತರ ಬಂದ್ಲು. ನಾನು ಅವಳನ್ನೇ ನೋಡ್ತಾ ಇದ್ದೆ. ಹತ್ತಿರ ಬಂದು ನನ್ನ ಅಲ್ಲಾಡಿಸಿ ಕೇಳಿದಳು... 'ಯಾಕೆ ಹಾಗೆ ನೋಡ್ತಾ ಇದಿಯಾ..?'
'ನೀನು ಇವತ್ತು ತುಂಬಾ ಸುಂದರವಾಗಿ ಕಾಣಿಸ್ತಾ ಇದಿಯ. ನಿನ್ನ ಹಾಗೆ ನೋಡ್ತಾನೆ ಇರ್ಬೇಕು ಅನ್ಸುತ್ತೆ.' ಅಂದೆ.
ಸಾಕು ಸಾಕು ಅಂತ ಹೇಳಿ ನನ್ನ ಗಲ್ಲ ತಿವಿದು, ನನ್ನ ಹಿಂದೆ ಬೈಕ್ ಹತ್ತಿ ಬಿಗಿದಪ್ಪಿಕೊಂಡು ಕುಳಿತಳು. ಇನ್ನು ನಮ್ಮ ಪಯಣ ಮುಂದುವರೆಯಿತು.
ಸ್ನೇಹ: 'ಎಲ್ಲಿಗೆ ಹೋಗ್ತಾ ಇದಿವಿ...?'
ನಾನು 'Secret' ಅಂತ ಹೇಳಿದೆ.
ಕಾಲಿ ಕಾಲಿ ರಸ್ತೆಯಲ್ಲಿ ಸವಾರಿ ಹೊರಟಿತ್ತು.

ಮುಂಜಾನೆಯ ಮಂಜಿನಲಿ,
ತಂಪಾದ ಚಳಿಯಲಿ,
ನಾ ಬೈಕ್ ನಡೆಸುತಿರುವಾಗ,
ನೀ ಹಿಂದಿನಿಂದ ಬಿಗಿದಪ್ಪಿಕೊಂಡಿರಲು,
ಇನ್ನೇನು ಬೇಕು ಈ ಜಗದಲಿ,
ನನ್ನೀ ಪುಟ್ಟ ಪ್ರೀತಿಸುವ ಹೃದಯಕೆ.... :)

ಒಂದು ಸುಂದರವಾದ ಬೆಟ್ಟಕ್ಕೆ ಅವಳನ್ನು ಕರೆದೊಯ್ದೆ. ಇಬ್ಬರು ಬೆಟ್ಟವನ್ನು ಹತ್ತಿದೆವು. ಬೆಟ್ಟದ ತುದಿಯಲಿ ನಾನು ಅವಳು ಅಸ್ಟೆ. ಬೆಟ್ಟದ ತುದಿಯಲಿ ನಿಂತು ಚಲಿಸುವ ಮೋಡಗಳನ್ನೊಮ್ಮೆ ನೋಡಿ 'Wow... Beautiful...' ಎಂದು ಕೂಗಾಡಿದಳು. ಸಂತೋಷದಿಂದ ಬೀಗಿದಳು. ನನ್ನ ಚಲುವೆ ಸಂತೋಷವಾಗಿರುವುದಕ್ಕಿಂತ ಇನ್ನೇನು ಬೇಕು ನನಗೆ. ಅವಳ ಸಂತೋಷವೇ ನನ್ನ ಸಂತೋಷ. ನಾನು ತಂದಿದ್ದ ಪುಟ್ಟದಾದ ಗಿಫ್ಟ್ ಪೊಟ್ಟಣವನ್ನು ಅವಳ ಕೈಗಿಡುತ್ತಾ... 'ಹ್ಯಾಪಿ ಬರ್ತ್ಡೇ ಟು ಯು..' ಅಂದೆ. ಅವಳು ಸಂತೋಷದಿಂದ ಗಿಫ್ಟ್ ಪೊಟ್ಟಣವನ್ನು ತೆಗೆದುಕೊಳ್ಳುತ್ತಾ ಬಿಗಿಯಾಗಿ ಅಪ್ಪಿಕೊಂಡು ಸಿಹಿ ಮುತ್ತೊಂದನು ನನ್ನ ಕೆನ್ನೆಗಿಡುತ್ತಾ 'ಥ್ಯಾಂಕ್ ಯು' ಎಂದಳು. ನಾನು ಅವಳು ಕೊಟ್ಟ ಸಿಹಿ ಮುತ್ತಿಗೆ 'ಥ್ಯಾಂಕ್ ಯು' ಹೇಳಿದೆ. :P

ಬೆಟ್ಟದ ತುದಿಯಲಿ,
ಮೋಡದ ಮರೆಯಲಿ,
ನಿನ್ನದೇ ಧ್ಯಾನದಲಿ ಮುಳುಗಿರುವಾಗ,
ನನ್ನ ಕೆನ್ನೆಗೆ ನೀನೊಂದು ಸಿಹಿಮುತ್ತು ಕರುಣಿಸಿರಲು,
ಇನ್ನೇನು ಬೇಕು ಈ ಜಗದಲಿ,
ನನ್ನೀ ಪುಟ್ಟ ಪ್ರೀತಿಸುವ ಹೃದಯಕೆ.... :)


ಹೀಗೆ ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕುಳಿತಿದ್ದೆವು. ಸಮಯ ಜಾರತೊಡಗಿತು. ಅವಳು ಎಚ್ಚರವಾಗಿ...
'ಅಯ್ಯೋ... ಲೇಟ್ ಆಗುತ್ತೆ ಹೋಗೋಣ...' ಅಂದ್ಲು.
'ಆಯ್ತು ಹೋಗೋಣ...' ಅಂತ ಹೇಳಿ ಎದ್ದು ನಿಂತೆ.
'ಇಲ್ಲಿ ಇರಬೇಕು ಅನ್ಸುತ್ತೆ ಅಲ್ವಾ... ' ಅಂದ್ಲು.
'ಹು' ಅಂದೆ.
'ಇನ್ನೊಂದ್ಸಾರಿ ಮತ್ತೆ ಬರೋಣವಾ.. ?' ಅಂದ್ಲು.
'ನೀನು ಯಾವಾಗ ಅಂದ್ರೆ ಅವಾಗ ಬರೋಣ...' ಅಂದೆ.
ಇನ್ನೊಂದು ಸಿಹಿಮುತ್ತು ಕೊಟ್ಳು.
ಆ ಮುತ್ತಿನ ಮತ್ತಿನಲಿ ತೇಲುತ 'ಸಿಹಿಮುತ್ತು ಸಿಹಿಮುತ್ತು ಇನ್ನೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು' ಎಂದು ಅವಳನ್ನು ಚೂಡಾಯಿಸುತ, ಬೈಕ್ ಹತ್ತಿ ವಾಪಾಸ್ ಅವಳ ಮನೆಹತ್ತಿರ ಬಂದಾಗ, ಬೆಳಿಗ್ಗೆ ಏಳು ಗಂಟೆ ಆಗಿತ್ತು. ಅವಳು ನನಗೆ Bye ಹೇಳಿ, ಮನೆಕಡೆ ನಡೆದಳು.
ಅವಳು ಮರೆಯಾಗುವವರೆಗೂ ಅಲ್ಲೇ ಕಾಯುತ್ತ ನಿಂತೆ......
ನನ್ನ ಆಲಾರಂ ಜೋರಾಗಿ ಹೊಡೆಯಲು ಶುರು ಮಾಡಿತು. ಸದ್ದು ಕೇಳಲಾಗದೆ ಎದ್ದೆ. ಮನಸಿನಲ್ಲಿ ಒಂದು ಚಿಕ್ಕ ಬೇಜಾರು ಮೂಡಿತು...
'ಅಯ್ಯೋ ಇದು ಕನಸೇ... :('.
Share/Save/Bookmark

31 comments:

  1. hahahhahahhahahhah.. i thought its a 'real one'!!

    ReplyDelete
  2. ಶಿವು,
    ಕನಸು ಕಂಡರೂ ಸವಿಗನಸನ್ನು ಕಾಣಬೇಕು...ಹಹ್ಹಹ್ಹಹಹ್ಹಾ...
    ನಿಮ್ಮ ಕನಸು ನನಸಾಗಲಿ ಎಂದು ಹಾರೈಸುತ್ತ....
    ಸವಿಗನಸು....

    ReplyDelete
  3. ಹಾ ಹಾ, ಬೆಳಗಿನ ಜಾವದ ಕನಸು ಅಲ್ವ,,,ನಿಜವಾಗಲು ನನಸಾಗುತ್ತೆ ಶಿವೂ,,, ಡೋಂಟ್ ವರಿ

    ReplyDelete
  4. ಶಿವಪ್ರಕಾಶ್,
    ನನಗ್ಯಾಕೋ ಇದು ರಿಯಲ್ ಅನಿಸ್ತಾ ಇದೇರಿ...... ಯಾಕಂದ್ರೆ ನಿಮ್ಮ ಹುಟ್ಟು ಹಬ್ಬದ ಆಸುಪಾಸಿನಲ್ಲಿ ಇಂಥದ್ದೇ ಕನಸು ಬೀಳತ್ತೆ ಅಂದ್ರೆ ನಂಬಲಿಕ್ಕೆ ಕಷ್ಟ ಆಲ್ವಾ?..... ಅದಿರಲಿ, ಉತ್ತಮ ಕನಸು........... ನಿಜವಿರದೆ ಹೋದರೆ, ಬೇಗನೆ ನಿಜವಾಗಲಿ....ನನಗೂ ಒಮ್ಮೆ ಇಂಥದ್ದೇ ಕನಸು ಬಿದ್ದಿತ್ತು..... ನನ್ನ ಬ್ಲಾಗ್ನಲ್ಲಿ, '' ಇನ್ನೊಮ್ಮೆ ಬಾ'' ಕಥೆ ಓದಿ.....

    ReplyDelete
  5. ಏನ್ ಸ್ವಾಮೀ ಕನಸ್ನಲ್ಲು ಮಜಾ ತಗೊಂಡ್ರಾ ಆದಸ್ಟು ಬೇಗ ಒಂದು ಟ್ರಿಪ್ ಹೋಗಿಬನ್ನಿ

    ReplyDelete
  6. superb writing..tumba olle kanasu sir,bega nanasaagali endu haarysuve :)

    ReplyDelete
  7. ಹ ಹ ಹ ಹ ...ಉ ಉ ಉ ಊ ಊ ಊ ಹ ಹ ಹ ಹ ...
    ನಗದೋ ಅಳದೋ ಗೊತ್ತಾಗ್ತಾ ಇಲ್ವಲ್ಲಾರಿ !

    ReplyDelete
  8. ಶಿವು,
    ತುಂಬ ಸರಸವಾದ, ಸುರಸವಾದ ಕನಸು ಕಂಡಿದ್ದೀರಿ.
    (ಇಂಥಾ ಕನಸು ನನಗೂ ಬೀಳಬಾರದೆ?)

    ReplyDelete
  9. ಶಿವಪ್ರಕಾಶ್ ಅವರೇ,
    ನಾನು ನಿಮ್ಮ ಬ್ಲಾಗ್ ಗೆ ಬಂದು ಲೇಖನ ಓದಲು ಶುರು ಮಾಡಿದಾಗ ಒಂದು ಕ್ಷಣ ತಬ್ಬಿಬ್ಬಾದೆ, ಯಾಕೆಂದರೆ ಇದೇನಪ್ಪಾ ಬ್ಲಾಗ್ ನೋಡಿದರೆ ಶಿವಪ್ರಕಾಶ್ ಅವರದು ಆದರೆ ಲೇಖನ ಪ್ರಭು ಅವರದಾ ಅಂತ ಅನಿಸಿತು!!!
    ಅಚಾನಕ್ಕಾಗಿ ನೀವೂ ನಿಮ್ಮವಳೊಂದಿಗೆ ಸವಾರಿ ಅಂತ ಎಲ್ಲಾ ಶುರು ಮಾಡಿಕೊಂಡಿದೀರಾ, ಅದೂ ಕನಸಿನಲ್ಲಿ :) !
    ತುಂಬಾ ಚೆನ್ನಾಗಿದೆ, ನಿಮ್ಮ ಬೆಳಗಿನಜಾವದ ಕನಸು ಆದಷ್ಟು ಬೇಗ ನನಸಾಗಲಿ!! ಆಲ್ ದಿ ಬೆಸ್ಟ್......!!!

    ReplyDelete
  10. ಛೆ... ಶಿವಪ್ರಕಾಶ್ ನಿಮಗೆ ಹೀಗಾಗಬಾರದಿತ್ತು!

    ReplyDelete
  11. chennaagide nimma munjaavina kanasu... kanasu beelalu hindina janamadalli swalpa punya madirbeku antha kaanisutte!!

    ReplyDelete
  12. ಶಿವಪ್ರಕಾಶ್,

    ನಮಗನ್ನಿಸಿದನ್ನು ಸದಾ ದ್ಯಾನಿಸುತ್ತಾ ಇದ್ದರೆ ಮುಂದೊಂದು ಅದೇ ಆಗುತ್ತದಂತೆ. ಆದ್ದರಿಂದ ನೀವು ಈ ಕನಸನ್ನು ಸದಾ ಧ್ಯಾನಿಸುತ್ತಿರಿ. ಖಂಡಿತ ಅಂತದೇ ಸಂತೋಷವನ್ನು ಪಡೆಯುತ್ತೀರಿ...all the best!

    ReplyDelete
  13. ಶಿವು....

    ಸೂಪರ್....!

    ಬೆಳಗಿನ ಜಾವದ ಕನಸು ನಿಜವಾಗುತ್ತದಂತೆ...

    ನಿಮ್ಮ ಬರವಣಿಗೆಯ ಶೈಲಿ,.. ತುಂಬಾ ಇಷ್ಟವಾಯಿತು...

    ಈ ನಡುವೆ ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ... ಬೇಸರಿಸದಿರಿ...
    ಇನ್ನು ಒಂದೊಂದಾಗಿ ಎಲ್ಲ ಲೇಖನ ಓದುವೆ...

    ಚಂದದ ಬರಹಕ್ಕೆ ಅಭಿನಂದನೆಗಳು...

    ReplyDelete
  14. ಬೆಳಗಿನಜಾವದ ಕನಸು, ನಿಜವಾಗಬಹುದೇನೋ ಸರ್..ಕಾಯುತ್ತಿರಿ

    ReplyDelete
  15. abba.....bahala sundaravada lekhana :) :)

    ReplyDelete
  16. ಸುಮನ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಮಹೇಶ್ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು, ನನ್ನ ಕನಸು ನನಸಾಗಲೆಂದು ಹಾರೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಗುರು ಅವರೇ,
    ಲೇಖನ ಓದಿ, ಮೆಚ್ಚಿಕೊಂಡು, ನನ್ನ ಕನಸು ನನಸಾಗಲೆಂದು ಹಾರೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ದಿನಕರ ಅವರೇ,
    ಇದು ನಿಜವಾಗಿಯೂ ರಿಯಲ್ ಅಲ್ಲ. ನನ್ನ ಕಲ್ಪನೆ ಅಸ್ಟೆ. :)
    ನನಗೆ ಸ್ನೇಹ ಅನ್ನುವ ಗೆಳತೀನೆ ಇಲ್ಲ... :(
    ಲೇಖನ ಓದಿ, ಮೆಚ್ಚಿಕೊಂಡು, ನನ್ನ ಕನಸು ನನಸಾಗಲೆಂದು ಹಾರೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    UMESH VASHIST H K. ಅವರೇ,
    ನಿಜ ಜೀವನದಲ್ಲಿ ಕಷ್ಟ ಅಲ್ವಾ, ಅದಕ್ಕೆ ಕನಸ್ನಲ್ಲಿ ಮಜಾ ತಗೊಮ್ಬಿಟ್ಟೆ. ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ ಸಲಹೆ ಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    Snow White ಅವರೇ,
    ಲೇಖನ ಓದಿ, ಮೆಚ್ಚಿಕೊಂಡು, ನನ್ನ ಕನಸು ನನಸಾಗಲೆಂದು ಹಾರೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಲೋದ್ಯಾಶಿ ಅವರೇ,
    ನಿಜ ರೀ, ನೀವು ಹೇಳಿದ ಹಾಗೆ, ನನಗೂ ಕೂಡ ನಗುವುದೋ ಅಳುವುದೋ ಗೊತ್ತಾಗ್ತಿಲ್ಲ..
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    sunaath ಅವರೇ,
    ನಿಮಗೆ ಮುದುವೆಯಾಗಿದೆ, ಹಾಗಾಗಿ ಅಂತಹ ಕನಸುಗಳು ಕಾಣುವ ಹಾಗಿಲ್ಲ... ಹ್ಹಾ ಹ್ಹಾ ಹ್ಹಾ... :P
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಮನಸು ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    SSK ಅವರೇ,
    ನಾನು ಪ್ರಭು ಅವರಸ್ಟು ಪ್ರೆಮಕಥೆಗಳಲ್ಲಿ ಪಳಗಿದವನಲ್ಲ. ಅದರ ಅನುಭವವು ನನಗಿಲ್ಲ. ಏನೋ ಒಂದು ಪ್ರಯತ್ನ ಅಸ್ಟೆ.
    ನನಗೆ ಈ ತರಹದ ಲೇಖನಗಳನ್ನು ಬರೆಯುವುದಕ್ಕೆ ಇಷ್ಟ. ನಿಮಗೆ ಇಷ್ಟವಾದರೆ ಮುಂದೊಮ್ಮೆ ಇಂತಹ ಲೇಖನಗಳನ್ನು ಮತ್ತೆ ಬರೆಯುತ್ತೇನೆ.
    ಲೇಖನ ಓದಿ, ಮೆಚ್ಚಿಕೊಂಡು, ನನ್ನ ಕನಸು ನನಸಾಗಲೆಂದು ಹಾರೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಲಕ್ಷ್ಮಣ ಬಿರಾದಾರ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಚಂದಿನ ಅವರೇ,
    ಏನ್ ಮಾಡೋದು ಸರ್, ಈ ಕನಸುಗಳೇ ಹೀಗೆ... ಕೆಲೋವೊಮ್ಮೆ ಕೈಕೊಟ್ಬಿಡ್ತವೆ... :P
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    damu ಅವರೇ,
    ಕನಸು ಬಿಳೋಕು, ನನಸಾಗೊಕೂ ಪುಣ್ಯ ಮಾಡಿರಬೇಕು..
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಸೀತಾರಾಮ. ಕೆ. ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಶಿವು ಅವರೇ,
    ಲೇಖನ ಓದಿ, ಮೆಚ್ಚಿಕೊಂಡು, ನನ್ನ ಕನಸು ನನಸಾಗಲೆಂದು ಹಾರೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಪ್ರಕಾಶ್ ಅವರೇ,
    ನಿಮಗೆ ಕೆಲಸದ ಒತ್ತಡಗಳಿಂದ ಬರಲಾಗಲಿಲ್ಲ ಎಂದು ನನಗೆ ಗೊತ್ತು. ನೀವು ನನ್ನ ಎಲ್ಲಾ ಲೇಖನಗಳಿಗೆ ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆ ನೀಡಿ ಹಾರೈಸಿದ್ದಿರಿ.. ನಿಮ್ಮ ಪ್ರೋತ್ಸಹವೊಂದಿದ್ದರೆ ಸಾಕು..
    ಲೇಖನ ಓದಿ, ಮೆಚ್ಚಿಕೊಂಡು, ನನ್ನ ಕನಸು ನನಸಾಗಲೆಂದು ಹಾರೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    Deepasmitha ಅವರೇ,
    ನನಗಿಷ್ಟವಾದ ಕನಸು ನನಸಾದರೆ ಅದಕ್ಕಿಂತ ಕುಶಿ ಇನ್ನೆಲ್ಲಿದೆ ಹೇಳಿ ... ?
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    Creativity!! ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  17. Humm... Kanse kaantha irteera illa adannu nanasu maadkolloke yenaadru prayatna maadtira??? :-)

    ReplyDelete
  18. ಶಿವು ನನ್ ಮಾತು ಕೇಳು....

    ನನ್ನ ಹತ್ರ ಡಾಟಾಬೇಸ್ ಇದೆ ಅಂತಾ ನಿನಗೆ ನೆನಪಿರಲಿ...

    ಇಂತಿ ನಿಮ್ಮ ಪ್ರೀತಿಯ,

    ಶಿವಶಂಕರ ವಿಷ್ಣು ಯಳವತ್ತಿ
    www.shivagadag.blogspot.com

    ReplyDelete
  19. ರವಿಕಾಂತ ಗೋರೆ ಅವರೇ,
    ಮದುವೆ ಆಗೋವರೆಗೂ ಬರಿ ಕನಸು ಮಾತ್ರ ಕಾಣೋಕೆ ಆಗೋದು ಸರ್.. :D
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    =========

    ಶಿವಶಂಕರ ವಿಷ್ಣು ಯಳವತ್ತಿ ಅವರೇ,
    ಎಲ್ಲಾ ಕೈಕೊಟ್ಟರೆ ಕೊನೆಯಲ್ಲಿ ನಿಮ್ಮ ಡೇಟಬೇಸ್ ನನಗೆ ಗತಿ... ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  20. nimma kanasu chennagide kanri..ella nanasaagali endu haaraisuttene..:)

    ReplyDelete
  21. ಆಕಾಶಬುಟ್ಟಿ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು, ನನ್ನ ಕನಸು ನನಸಾಗಲೆಂದು ಹಾರೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  22. hey it was super imagination man .........................ha ha aha ha ha

    ReplyDelete
  23. ರೂಪ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  24. ತುಂಬಾ ಚೆನ್ನಾಗಿ ಬರೆದಿದ್ದೀರಿ. ನಾನು ರಿಯಲ್ ಅನ್ಕೊಂಡು ಬಿಟ್ಟಿದ್ದೆ ...

    ReplyDelete
  25. Super Shuvu.....Kanasendare heege ira beku....Nimma kanasu bahu bega Nanasagalendu Aashisuttene

    ReplyDelete
  26. ಬರವಣಿಗೆ ಶೈಲಿ ಚೆನ್ನಾಗಿದೆ.... ಅರ್ದ ಓದುವಷ್ಟರಲ್ಲಿ ನನಗೂ ಒಬ್ಬ ಅಂತಹ ಸ್ನೇಹಿತೆ ಬೇಕೆನಿಸಿತು... ಆದರೆ ಕೊನೆಯಲ್ಲಿ ನಿರಾಶೆ ಮಾಡಿದಿರಿ... ಇದೇ ರೀತಿ ಬರೆಯುತ್ತಿರಿ....

    ReplyDelete