Thursday, November 12, 2009

ಕುಲನಾಮ (Surname)

ಅಂದು ರಮೇಶ್, ಇಟಲಿಯಲ್ಲಿರುವ ರಾಬರ್ಟೊ ಎನ್ನುವ ವ್ಯಕ್ತಿಯೊಡನೆ ಚಾಟ್ (text - chat) ಮಾಡುತ್ತಿದ್ದ.
ನಾನು, ರಮೇಶ್, ಸತೀಶ್, ರಾಬರ್ಟೊ ಹಾಗು ಇನ್ನೂ ಹತ್ತಾರು ಜನ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡೋದು.
ಹೀಗೆ ಚಾಟ್ ಮಾಡುತ್ತಿರುವಾಗ ರಾಬರ್ಟೊ, ರಮೇಶನಿಗೆ ... 'ನಾನು ನಿನ್ನ ಒಂದು ವಯ್ಯುಕ್ತಿಕ ವಿಷಯ ಕೇಳಬಹುದೇ...?' ಎಂದ..
'ಹಾ, ಕೇಳು ರಾಬರ್ಟೊ... ಅದರಲ್ಲೇನಿದೆ...' ಎಂದ ರಮೇಶ್.
'ಸತೀಶ್... ನಿನ್ನ ಸಹೋದರನೆ.... ?' .
ಸತೀಶ್ ನಮ್ಮ ಸಹದ್ಯೋಗಿ, ಸಹೋದರನಲ್ಲ. ಆದರೆ ನಮ್ಮ ರಮೇಶನಿಗೆ, ರಾಬರ್ಟೊ ಹಾಗೆ ಯಾಕೆ ಕೇಳಿದ ಎಂದು ಅರ್ಥವಾಗಲಿಲ್ಲ. ಅವನಿಗೆ ಈ ಥರ ಆಲೋಚನೆ ಯಾಕೆ ಬಂದಿರಬಹುದು..? ಎಂದು ಆಲೋಚಿಸಿದ. ತಿಳಿಯಲಿಲ್ಲ. ಯಾಕಿರಬಹುದು ಎಂದು ಆಲೋಚಿಸುತ್ತಲೇ, ಒಂದು ಸಂದೇಶ ಕಳಿಸಿದ...
'ಯಾಕೆ ರಾಬರ್ಟೊ, ಆ ತರಹದ ಆಲೋಚನೆ ಬಂತು...?'
'ಇಲ್ಲ, ಇಬ್ಬರ Surname (ಕುಲನಾಮ) ಒಂದೇ ಇದೇ ಅಲ್ವಾ... ಅದೇ "ಕುಮಾರ್"...ಅಂತ.. "ರಮೇಶ್ ಕುಮಾರ್", "ಸತೀಶ್ ಕುಮಾರ್" ಅದಕ್ಕೆ ಹಾಗೆ ಕೇಳಿದೆ ' ಅಂದ.
ನಮ್ಮ ರಮೇಶ್, ಇದನ್ನು ಹೇಗೆ ವಿವರಿಸಿ ಹೇಳಬೇಕು ಎಂದು ಆಲೋಚಿಸುತ್ತ ನನ್ನ ಕೇಳಿದ.
ನಾನು ಇವರಿಬ್ಬರ ಸಂದೇಶಗಳನ್ನು ಓದಿದೆ. ಸ್ವಲ್ಪ ಆಲೋಚಿಸಿ ಅವರಿಗೆ ಹೀಗೆ ಸಂದೇಶ ಕಳಿಸಿದೆ...
'..."ಕುಮಾರ್" ಎನ್ನುವುದು ಕುಲನಾಮವಲ್ಲ...
ಕುಮಾರ ಎಂದರೆ ನಿಮ್ಮ ಭಾಷೆಯಲ್ಲಿ Son (ಮಗ) ಎಂದು ಅರ್ಥ..
ಇನ್ನೂ ರಮೇಶ್, ಸತೀಶ್ ಎನ್ನುವ ಹೆಸರುಗಳು, ದೇವರ ಹೆಸರುಗಳು..
ನಾವೆಲ್ಲರೂ ದೇವರ ಮಕ್ಕಳಿದ್ದಂತೆ ಅಲ್ಲವೇ...
ಹಾಗಾಗೆ ದೇವರ ಹೆಸರಿನ ಪಕ್ಕ "ಕುಮಾರ್" ಎಂದು ಸೇರಿಸಿ ಹೆಸರಿಡುತ್ತಾರೆ...
ನಿಮ್ಮಲ್ಲಿ ... ಜಾನ್ಸನ್(Johnson), ಪೀಟರ್ಸನ್ (Peterson) ಹೇಗೋ ಹಾಗೆ...' ಎಂದು ಕಳಿಸಿದೆ...
ಆಗ ರಾಬರ್ಟೊ...'ಒಹ್... ಹಾಗಾ...' ಎಂದು ಅವರ ಕೆಲವು ಹೆಸರುಗಳ ಉದಾಹರಣೆಗಳನ್ನು ಕೊಟ್ಟ.
ನಾನು, ರಮೇಶ ಒಳಗೊಳಗೇ ನಕ್ಕೆವು.

16 comments:

sunaath said...

ಶಿವು,
ಉತ್ತರ ಭಾರತೀಯ ಪತ್ರಿಕೆಗಳು ಕಮಲಹಾಸನ್ ಅಂದರೆ ಕಮಾಲ ಹಸನ್ ಎನ್ನುವ ಮುಸ್ಲಿಮ್ ಎಂದು ತಿಳಿದು ಬರೆಯುತ್ತಿದ್ದರು, ನೋಡಿ!

ಬಾಲು said...

ನಮ್ಮ ಆಫೀಸ್ ನಲ್ಲಿ ಸುಮಾರು ಜನ S ನಿಂದ ಶುರು ಆಗೋ ಹೆಸರು, ಶ್ವೇತ, ಸುಷ್ಮಾ.... ಹಾಗಾಗಿ ದುಬೈ ನ ನಂ ಕಲೀಗ್ ಶಾಸ್ತ್ರಿ ಕೂಡ ಹುಡುಗಿ ಅಂತ ತೀರ್ಮಾನಿಸಿದ್ದಳು.

ನೀವು ಚೆನ್ನಾಗಿ ಉದಾಹರಣೆ ಕೊಟ್ಟಿದ್ದೀರ.

ದಿನಕರ ಮೊಗೇರ.. said...

ಶಿವಪ್ರಕಾಶ್,
ಇಂಥವೆಲ್ಲಾ ಪ್ರಸಂಗ ನಮ್ಮೊತ್ತಿಗೂ ನಡೆದಿರತ್ತೆ, ಆದ್ರೆ ನೀವು ಅದನ್ನ ಹೇಳೋ ರೀತಿ ಮಾತ್ರ ಸುಪರ್ಬ್.....

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ ನಿಮ್ಮ ಉತ್ತರ,
ಅವರಿಗೆ ಅರ್ಥ ಮಾಡಿಸುವುದು ಕಷ್ಟವೇ?

ಸಂತೋಷ್ ಚಿದಂಬರ್ said...

Chenaagide.. :)

Snow White said...

tumba chennagide :) :)

SSK said...

nice example!

Raghu said...

ಹ್ಹ ಹ್ಹ ಹ್ಹ ಹ್ಹ ಹ್ಹ... ಕೇಳಿದ ಪ್ರಶ್ನೆಗೆ ಒಳ್ಳೆ ಟೈಮಿಂಗ್ answer.. :)
Raaghu...

Divya Hegde said...

he he...nice one...
Good sense of humour...

shivu said...

ಶಿವಪ್ರಕಾಶ್,

ಕುಮಾರ್ ಅನ್ನುವುದು ಸರ್‍ನೇಮ? ಅಂತ ಆತ ಕೇಳಿದ್ದು ಓದಿದಾಗ ತುಂಬಾ ನಗು ಬಂತು. ನಿಮ್ಮ ಉತ್ತರವೂ ತುಂಬಾ ಚೆನ್ನಾಗಿತ್ತು.

ಸವಿಗನಸು said...

ಶಿವು,
ತುಂಬಾ ಚೆನ್ನಾಗಿದೆ...

ಮನಸು said...

hahaha super nimma uttara chennagide

Deepasmitha said...

ನಿಮ್ಮ ಉತ್ತರ ಸೂಪರ್ಬ್. ಆದರೂ ವಿದೇಶೀಯರ ಕುತೂಹಲದ ಸ್ವಭಾವವನ್ನು ನಾವು ನಿಜಕ್ಕೂ ಮೆಚ್ಚಲೇಬೇಕು. ಗಂಭೀರವಾಗಿ ಯೋಚಿಸಿದರೆ, ಹೌದು, ಈ ಹೆಸರುಗಳೆಲ್ಲ ಹೇಗೆ ಹುಟ್ಟಿಕೊಂಡವು ಎಂದು ಆಶ್ಚರ್ಯವಾಗುತ್ತದೆ.

ಸುಧೀಂದ್ರ said...

Good one

Anonymous said...

Saada Dose thindang ide..
i expect 'Masala dose' from you!!

Anyway, olle baravanige..

Anonymous said...

November 22, 2009 9:13 AM
-Nataraj

Post a Comment