Tuesday, December 8, 2009

ಇಂತಿ, ನೀ ಅಗಲಿರುವ ಗೆಳೆಯ



ನೀ
ಪ್ರೀತಿಸಿದೆ,
ನಿನ್ನ ಪ್ರೀತಿಗೆ ಸೋತು,
ನಾನು ನಿನ್ನ ಪ್ರೀತಿಸಿದೆ,
ನಮ್ಮಿಬ್ಬರ ಹೃದಯಗಳು ಒಂದಾದವು.

ನಾ ಮಾತನಾಡಿದಾಗಲೆಲ್ಲ,
ನೀ ಮೂಖಿಯಾಗುತ್ತಿದ್ದೆ.
ನೀ ಮಾತನಾಡಿದಾಗಲೆಲ್ಲ,
ನಾ ಮುಗ್ದನಂತೆ, ನಿನ್ನ ತುಟಿಗಳನ್ನೇ ದೃಷ್ಟಿಸಿ ನೋಡುತ್ತಿದ್ದೆ,
ನಿನ್ನ ತುಟಿಗಳ ನರ್ತನ ನೋಡುವುದೆಂದರೆ,
ನನಗೆ ಅದೇನೋ ಒಂತರ ಕುತೂಹಲ.

ನಮ್ಮಿಬ್ಬರ ಪ್ರೀತಿ,
ಹಕ್ಕಿಯಂತೆ ಹಾರಡುತಿರಲು,
ಬಿರುಗಾಳಿಯೊಂದು ಬೀಸಿತು,
ನಾವು ತಡೆದುಕೊಳ್ಳಲಾಗದೆ ದೂರವಾದೆವು.
ಇಬ್ಬರ ನಡುವೆ ಪ್ರೀತಿಯಿತ್ತು,
ಆದರೂ ಸೇರಲಾಗಲಿಲ್ಲ.

ನೀ ಅಗಲಿದ ಬಳಿಕ,
ದಿನಗಳು ಕಹಿಯಾದವು,
ಕ್ಷಣಗಳು ಯುಗವಾದವು,
ಅಂದು ನೀ ಹುಟ್ಟಿಸಿದ ಪ್ರೀತಿ,
ಇಂದು ಸಂಕಟವಾಗಿದೆ.

ತಿಂಗಳುಗಳು ಸರಿದವು,
ಅದೊಂದು ದಿನ,
ಆಕಸ್ಮಿಕವಾಗಿ ನೀ ಸಿಕ್ಕಿ,
ಮಾತನಾಡಿಸುತ್ತ ನನ್ನ ಕೇಳಿದೆ,
"ನಿಜವಾಗಿಯೂ ನೀ ನನ್ನ ಮರೆತಿದ್ದೀಯಾ....?"
ಅಂದು, ನನಗಾದ ಪ್ರಾಣಸಂಕಟ,
ನಾ ಹೇಗೆ ಹೇಳಲಿ...?.

ನೀ ನನ್ನ ಉಸಿರಾಗಿ ಬೇರೆತುಹೋಗಿರುವಾಗ,
ಮರೆತುಹೋಗುವ ಮಾತೆಲ್ಲಿ...?,
ಒಂದುವೇಳೆ ನಾ ಮರೆತರೆ,
ನನ್ನ ಉಸಿರು ನಿಂತಂತೆ.

ನೀ ಎಲ್ಲೇ ಇರು,
ಹೇಗೆ ಇರು,
ನನ್ನ ಆಶಯ ಇಷ್ಟೇ,
ನೀ ಸಂತೋಷದಿಂದಿರು.

ನನ್ನದೊಂದು ಪ್ರಾರ್ಥನೆ,
ದಯಮಾಡಿ ಇನ್ನೆಂದೂ,
ನನ್ನ ನೆನಪಿನ ಪುಟದಲಿ ಸುಳಿಯದಿರು,
ಈಗಿರುವ ನೋವೆ ತಡೆದುಕೊಳ್ಳಲಾಗುತ್ತಿಲ್ಲ,
ಪುನಃ ನೀ ಕಂಡರೆ,
ಹುಚ್ಚನಾಗಿ ಹೋಗುತ್ತೇನೆ.

ಇಂತಿ, ನೀ ಅಗಲಿರುವ ಗೆಳೆಯ,
ಶಿವಪ್ರಕಾಶ್...
Share/Save/Bookmark

22 comments:

  1. Shivanna.. kavanavo athava kavitheyo?.. ottinalli tumba chennagide...

    ReplyDelete
  2. ಕವನ ತುಂಬ ಭಾವಪೂರ್ಣವಾಗಿದೆ.

    ReplyDelete
  3. ಶಿವಪ್ರಸಾದ್,
    ತುಂಬಾ ಚನ್ನಾಗಿದೆ ನಿಮ್ಮ ಕವನ...... .... ನಿಮ್ಮ ಗೆಳೆಯನ ಅಗಲಿಕೆಯನ್ನು .. ನಿಮ್ಮ ನೆನಪಿನಿಂದ ಒರಸಿ ಹಾಕಲು ಸಾದ್ಯವಿಲ್ಲ...... ವರ್ಷ ಪೂರೈಸಿ ಕವನದಿಂದ ಶುರು ಮಾಡಿದ್ದೀರಾ...... ಮುಂದುವರೆಸಿ...............

    ReplyDelete
  4. realy its herat touching .............................

    ReplyDelete
  5. ಶಿವು ನಿಮ್ಮ ಮೊದಲ ಪ್ರಯತ್ನದ ಕವನಕ್ಕೆ ಶುಭಹಾರೈಕೆಗಳು, ಭಾವನೆಗಳ ಸರಮಾಲೆ ಇಷ್ಟವಾಯಿತು ಪ್ರೀತಿ ಭಾವನೆಗಳ ಮಹಾಪೂರವನ್ನೇ ಹರಿಸಿಬಿಡುತ್ತದೆ ಎನ್ನುವುದಕ್ಕೆ ನೀವು ಕವನರೂಪದಲ್ಲಿ ತೋರಿಸಿರುವುದೇ ಸಾಕ್ಷಿ. ಚೆನ್ನಾಗಿದೆ ಮುಂದುವರಿ
    ಶುಭವಾಗಲಿ

    ReplyDelete
  6. ಚೆನ್ನಾಗಿದೆ ಚೆನ್ನಾಗಿದೆ... Heart touching..

    ReplyDelete
  7. hmmm very touching. i think i visited ur blog for first time though u r in my followers list.
    will visit again in my leisure
    :-)
    malathi S

    ReplyDelete
  8. ಓದಿದೆ, ಚೆನ್ನಾಗಿದೆ, ಆದರೆ ಇದು ಕೇವಲ ಕವಿತೆಯೋ, ನಿಮ್ಮ ಮನಸ್ಸನ್ನು ನಿಜವಾಗಿ ಕಲಕಿರುವ ಯಾವುದಾದರೂ ವಿಚಾರವೂ ಸ್ಪಷ್ಟ ವಾಗಲಿಲ್ಲ. ಕವನ ರಚನೆ ಮುಂದುವರಿಸಿ.

    ReplyDelete
  9. ಕವನ ಚೆನ್ನಾಗಿದೆ..ಒಳ್ಳೆಯ ಪ್ರಯತ್ನ..

    ReplyDelete
  10. ಏನ್ರೀ ಇದು ನಿಜವಾಗ್ಲೂ ನಡೆದಿದ್ದಾ? ನನ್ನ ಸಹಾನುಭೂತಿಗಳು.... :(
    ಇಲ್ಲವಾದಲ್ಲಿ ಒಳ್ಳೆಯ ಪ್ರಯತ್ನ :)

    ReplyDelete
  11. ಮಾತು ಮಾತಲ್ಲಿ ಪ್ರೀತಿಯ ನೆನಪಲ್ಲಿ.
    ಕನಸ ಬಯಲಲ್ಲಿ ನೀ ನನ್ನ ಸನಿಯದಲ್ಲಿ...

    ನನ್ನ ಒಂದು ಕವನದ ಸಾಲು ನಿಮಗೆ...ನಿಮ್ಮ ಪ್ರೀತಿಗೆ.. :)
    ನಿಮ್ಮವ,
    ರಾಘು.

    ReplyDelete
  12. ಶಿವಪ್ರಕಾಶ,
    ಅಗಲಿಕೆಯ ನೋವು ನಿಮ್ಮ ಕವನದಲ್ಲಿ ತೀವ್ರವಾಗಿ ವ್ಯಕ್ತವಾಗಿದೆ.
    ಒಳ್ಳೆಯ ಕವನಕ್ಕೆ ಅಭಿನಂದನೆ ಹೇಳಲೊ, ನಿಮ್ಮ ನೋವಿಗೆ ಸಹಾನುಭೂತಿ ಹೇಳಲೊ ತಿಳಿಯುತ್ತಿಲ್ಲ.

    ReplyDelete
  13. shivu

    Sunath kaka hagu anand ravara abhiprayave nannadu ditto ditto. kavana thumba chennagide.

    ReplyDelete
  14. ಕವನ ತು೦ಬಾ ಚೆನ್ನಾಗಿದೆ. ನಿಮ್ಮ ಜೀವನದ ಸತ್ಯವಾದರೆ ತು೦ಬಾ ಬೇಸರ ಮೂಡಿಸುವ ವಿಷಯ.

    ReplyDelete
  15. ಶಿವು...

    ಸೊಗಸಾಗಿ ಬರೆದಿದ್ದೀರಿ...

    ಕಡಿಮೆ ಶಬ್ಧಗಳಲ್ಲಿ ನಿಮ್ಮ ಭಾವನೆಗಳನ್ನು
    ಸಮರ್ಥವಾಗಿ ಬಿಡಿಸಿಟ್ಟಿದ್ದೀರಿ...

    ಹುಡುಗಿ ಈ ಕವಿತೆ ಓದಿದರೆ ಮತ್ತೆ ಓಡಿ ಬರುವದೆಂತೂ ಸತ್ಯ...

    ಇದು ಅನುಭವ ಆಗದಿರಲಿ...

    ಚಂದದ..
    ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು....

    ReplyDelete
  16. ಚೆನ್ನಾಗಿದೆ ಸರಳ ಭಾವಾಭಿವ್ಯಕ್ತಿ.
    ಇನ್ನೂ ಕವನಗಳು ಹೊರಬರಲಿ.

    ReplyDelete
  17. ನಿಜಕ್ಕೂ ತುಂಬ ಚೆನ್ನಾಗಿದೆ ..ಭಾವನೆಗಳು ಚೆನ್ನಾಗಿ ಮೂಡಿಬಂದಿವೆ ... :)

    ReplyDelete
  18. ಶಿವೂ
    ತುಂಬಾ ಸುಂದರವಾಗಿ ಭಾವನೆಗಳನ್ನು ತಿಳಿಸಿದ್ದಿರ
    ತುಂಬಾ ಅರ್ಥಪೂರ್ಣವಾಗಿದೆ
    ಅಗಲಿರುವ ಗೆಳೆಯನಿಗೆ ಇದೊಂದು ಪತ್ರವೇ?

    ReplyDelete
  19. ಶಿವಪ್ರಕಾಶ್
    ಅಗಲಿಕೆಯ ನೋವನ್ನು ಕವನದ ಸಾಲುಗಳಲ್ಲಿ ಮನಕಲಕುವಂತೆ ವಿವರಿಸಿದ್ದೀರಿ...

    ReplyDelete
  20. Nimma prayatna chennagide.... In english, there is a saying.. "Attachment never brings pain but detachment always does. Learn to let go" anta... Aadare vishaadavu hechina bhaavanegalannu vyaktapadisalu sahaaya maduttade...

    Do remember that our eyes look forward to life and not backwards :)

    Nimma olleya prayatnakke nanna abhinandanegalu....

    ReplyDelete
  21. ನವೀನ್ ಅವರೇ,
    ನಿಜಕ್ಕೂ, ನನಗು ಅದೇ ಸಂದೇಹ.
    ನೀವು ಉತ್ತರ ಹೇಳ್ತಿರ ಅಂದ್ರೆ... ನಿಮಗೂ ಅದೇ ಸಂದೇಹಾನ...? ಹ್ಹಾ ಹ್ಹಾ ಹ್ಹಾ...
    ಕವಿತೆ (ಕವನ) ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಸುಮ ಅವರೇ,
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ದಿನಕರ ಮೊಗೇರ ಅವರೇ,
    ನಿಮ್ಮೆಲ್ಲರ ಬ್ಲಾಗುಗಳನ್ನು ನೋಡಿ, ನನಗು ಕವನ ಬರೆಯುವ ಆಸೆ ಹುಟ್ಟಿದೆ.
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ರೂಪ ಅವರೇ,
    Thanks a lot for your comment...
    ==========

    ಮನಸು ಅವರೇ,
    ಬರೆದ ಕವನದ ಡ್ರಾಫ್ಟ್ ಕಾಪಿಯಲ್ಲಿನ ತಪ್ಪುಗಳನ್ನು ತಿದ್ದಿ ಕಳಿಸಿ, ಕವಿತೆ ಬರೆಯಲು ಬೆಂಬಲಿಸಿದಕ್ಕೆ ನಾನು ಚಿರ ಋಣಿ.
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ರವಿಕಾಂತ ಗೋರೆ ಅವರೇ,
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಮಾಲತಿ ಅವರೇ,
    ನನ್ನ ಬ್ಲಾಗಿಗೆ ಭೇಟಿ ಕೊಟ್ಟು, ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    PARAANJAPE K.N. ಅವರೇ,
    ಇದು ಕಾಲ್ಪನಿಕ ಸರ್. ಸ್ವಲ್ಪ ವಾಸ್ತವಿಕ ಕೂಡ ಹೌದು... :P
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಚುಕ್ಕಿಚಿತ್ತಾರ ಅವರೇ,
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಆನಂದ ಅವರೇ,
    ಇದು ಕಾಲ್ಪನಿಕ ಸರ್. ಸ್ವಲ್ಪ ವಾಸ್ತವಿಕ ಕೂಡ ಹೌದು... :P
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ರಘು ಅವರೇ,
    ನಿಮ್ಮ ಸಾಲುಗಳು ಸೊಗಸಾಗಿವೆ..
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಸುನಾಥ್ ಅವರೇ,
    ನಿಜ ಸರ್. ಇಂತಹ ಕವನಗಳಿಗೆ ಪ್ರತಿಕ್ರಿಯಿಸುವುದು ತುಂಬಾ ಕಷ್ಟ.
    ಇದು ಕಾಲ್ಪನಿಕ ಸರ್. ಸ್ವಲ್ಪ ವಾಸ್ತವಿಕ ಕೂಡ ಹೌದು... :P
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    Nisha ಅವರೇ,
    ಇದು ಕಾಲ್ಪನಿಕ. ಸ್ವಲ್ಪ ವಾಸ್ತವಿಕ ಕೂಡ ಹೌದು... :P
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಪರಮ್ ಅವರೇ,
    ಇದು ಕಾಲ್ಪನಿಕ. ಸ್ವಲ್ಪ ವಾಸ್ತವಿಕ ಕೂಡ ಹೌದು... :P
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಪ್ರಕಾಶ್ ಅವರೇ,
    ಓದಿ ಬರುವ ಸ್ತಿತಿಯಲ್ಲಿ ಅವಳಿಲ್ಲ.
    ಬಂದರೂ ಒಪ್ಪಿಕೊಳ್ಳುವ ಸ್ತಿತಿಯಲ್ಲಿ ನಾನಿಲ್ಲ... :(
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಸೀತಾರಾಮ. ಕೆ. ಅವರೇ,
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಸುಮ ಅವರೇ,
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಗುರುಮೂರ್ತಿ ಅವರೇ,
    ಇದು ಅಗಲಿದ ಗೆಳತಿಗೆ ಬರೆದಿದ್ದು... :)
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ಶಿವು ಅವರೇ,
    ಕವನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ==========

    ರಮೇಶ ಅವರೇ,
    Thanks a lot for your wonderful comment and your support..

    ReplyDelete