Monday, December 14, 2009

ಹೇ... ಗಾಡಿ ನಿಲ್ಸೋ

ಮೊನ್ನೆ ಭಾನುವಾರ, ನನ್ನ ದ್ವಿಚಕ್ರ ವಾಹನದಲ್ಲಿ ಜಯನಗರ 4th ಬ್ಲಾಕ್ ಕಡೆಯಿಂದ ಬನಶಂಕರಿ ಕಡೆ ಹೋಗ್ತಾ ಇದ್ದೆ.
ಜಯನಗರ 4th ಬ್ಲಾಕ್ ಅಂದ್ರೆ ಕೇಳಬೇಕೆ..?. ಅದರಲ್ಲೂ ಅವತ್ತು ಭಾನುವಾರ, ಎತ್ತ ನೋಡಿದರು ಸುಂದರವಾದ ಹುಡಿಗೀಯರು. ಅವರತ್ತ ನೋಡದೆ ಇರಲು ಮನಸು ಕೇಳಲಿಲ್ಲ. ನಿಧಾನವಾಗಿ ಹುಡುಗಿಯರತ್ತ ಕಣ್ಣಾಡಿಸುತ್ತಾ ಹೋಗ್ತಾ ಇದ್ದೆ. ತಪ್ಪು ತಿಳಿಬೇಡಿ. ವಯಸ್ಸಿನ ಹುಡುಗ.
ಸರಿ ಹೀಗೆ ಹೋಗ್ತಾ ಇರುವಾಗ, ನನ್ನ ಗಾಡಿಯನ್ನು ದಾಟಿ ಇನ್ನೊಂದು ದ್ವಿಚಕ್ರ ವಾಹನ ಹೋಯ್ತು. ಆ ಬೈಕ್ನಲ್ಲಿ ಒಬ್ಬ ಹೆಲ್ಮೆಟ್ ದಾರಿ ವ್ಯಕ್ತಿ ಇದ್ದ. ಹಿಂದುಗಡೆ ಒಂದು ಸುಂದಾರವಾದ ಹುಡುಗಿ ಕೂತಿದ್ಲು. ಹುಡುಗಿ ನೋಡೋಕೆ ತುಂಬಾ ಚನ್ನಾಗಿದ್ಲು. ಹಾಗೆ ಆ ಹುಡುಗಿಯನ್ನೇ ನೋಡಿದೆ. ನೋಡ್ತಾನೆ ಗಾಡಿ ನಡಿಸ್ತಾ ಇದ್ದೆ.
ಒಂದು ಸಿಗ್ನಲ್ ಬಂತು. ಅವರ ಗಾಡಿ ನಿಂತಿತು. ಆ ಗಾಡಿಯ ಹಿಂದೆ ಸ್ವಲ್ಪ ದೂರದಲ್ಲೇ ನಿಂತೆ. ಆ ಹುಡುಗಿಯನ್ನೇ ನೋಡಿದೆ. ನೋಡುತ್ತಲೇ ಇದ್ದೆ.
ಸಿಗ್ನಲ್ ಬಿಡ್ತು. ನಾನು ನೋಡೋದು ಆ ಹುಡುಗಿಗೆ ಗೊತ್ತಾಯ್ತೋ ಏನೋ. ಅವರ ಗಾಡಿ ಸ್ವಲ್ಪ ನಿಧನಾವಾಗಿ ಹೋಗೋಕೆ ಶುರು ಆಯ್ತು. ಆ ಗಾಡಿ ಹೊಡಿಯೋ ವ್ಯಕ್ತಿಯನ್ನು ನೋಡಿದೆ. ನನ್ನೇ ನೋಡ್ತಾ ಇರೋ ಹಾಗೆ ಕಾಣ್ತು.
ಅಯ್ಯೋ ದೇವರೇ... ಹುಡುಗಿಯರ ಸಹವಾಸವೇ ಬೇಡ ಅಂತ ಹೇಳಿ, ನನ್ನ ಗಾಡಿಯ ಆಗ್ಜಿಲರೆಟರ್ ಜೋರಾಗಿ ತಿರುಗಿಸಿ, ವೇಗವಾಗಿ ಅವರನ್ನು ದಾಟಿ ಹೋದೆ.
ನನ್ನ ಪಾಡಿಗೆ ನಾ ಹೋಗುತ್ತಿದ್ದಾಗ, ಆ ವ್ಯಕ್ತಿ ನನ್ನ ಹಿಂಬಾಲಿಸುವುದು ಕಾಣಿಸಿತು.
ಇನ್ನೂ ಜೋರಾಗಿ ಹೊಡೆದೆ. ಆ ವ್ಯಕ್ತಿ ಇನ್ನೂ ಜೋರಾಗಿ ಹೊಡೆದು, ನನ್ನ ದಾಟಿ, "ಹೇ... ಗಾಡಿ ನಿಲ್ಸೋ" ಅಂತ ಹೇಳಿ, ಅವನ ಗಾಡಿ ಅಡ್ಡ ಹಾಕಿಕೊಂಡು ನಿಂತ.
ನಾನು ತಬ್ಬಿಬ್ಬಾದೆ.
ನನ್ನ ಹೃದಯ ಬಡಿತ ಜೋರಾಯ್ತು.
ಅಯ್ಯೋ ದೇವರೇ... ಹುಡುಗಿರನ್ನು ನೋಡಿದ್ದೇ ತಪ್ಪಾಯ್ತ...?...
ನಾನು ಹೆದರಿಕೊಂಡು, ಮಾತನಾಡದೆ, ಸುಮ್ಮನೆ ಮೌನವಾಗಿ, ಗಾಡಿ ನಿಲ್ಲಿಸಿ, ನಿಂತೆ.
ಆ ವ್ಯಕ್ತಿ ತನ್ನ ಹೆಲ್ಮೆಟ್ ಅನ್ನು ನಿಧನಾವಾಗಿ ತೆಗೆದ.
ಹೆಲ್ಮೆಟ್ ತೆಗೆಯುತ್ತಾ ನೋಡಿದ... "ಏನ್ಲಾ ಶಿವ, ಹೆಂಗೀದಿಯಾ...?"
ಒಹ್ ದೇವರೇ... ಹೆಲ್ಮೆಟ್ ದಾರಿ ವ್ಯಕ್ತಿ, ನನ್ನ ಗೆಳೆಯ. ಹಿಂದೆ ಕೂತಿದ್ದು ಅವನ ಹೆಂಡತಿ.
ನಾನು ಸಣ್ಣ ದ್ವಾನಿಯಲ್ಲೇ..."ನಾನು ಚನ್ನಾಗಿದೀನಿ ಕಣೋ... ನೀನು ಹೇಗಿದಿಯಾ...?"
ಅವನು..."ನಾನು ಚನ್ನಾಗಿದೀನಪ್ಪ... 4th ಬ್ಲಾಕ್ ನಿಂದ ನಿನ್ನ ನೋಡ್ತಾನೆ ಇದ್ದೆ..."
ಒಹ್......!!!
ನಾನು ಮತ್ತದೇ ಸಣ್ಣ ದ್ವನಿಯಲ್ಲಿ... "ನನ್ನನ್ನೇ....?"
ಅವನು..."ಹಾ. ನಿನ್ನನ್ನೇ. ನೀನೋ, ಅಲ್ವೋ ಅಂತ ಅಲ್ಲಿಂದಾ, ನೋಡ್ತಾನೆ ಬರ್ತಾ ಇದೀನಿ. ಧೈರ್ಯ ಮಾಡಿ, ನೀನೆ ಇರ್ಬೇಕು ಅಂತ, ಗಾಡಿ ನಿಲ್ಲಿಸಿದೆ" ಅಂದ.
ಅಯ್ಯೋ. ನಾನು ಅವನ ಹೆಂಡತಿಯನ್ನು ನೋಡಿದ್ದು ಅವನಿಗೆ ಗೊತ್ತಾಯ್ತೋ.... ಏನೋ... ಛೇ... ಕ್ಷಮೆ ಕೇಳುವುದು ಕೂಡ ಸರಿಯಲ್ಲ.
ಬಹುಶ ಅವನಿಗೆ ಆ ಸಂದೇಹ ಬಂದಿರಲಿಲ್ಲ ಎನ್ನುವುದು ಮಾತನಾಡುತ್ತ ತಿಳಿಯಿತು.
ಎಂದಿನಂತೆ ತುಂಬಾ ಆತ್ಮೀಯವಾಗಿ ಮಾತನಾಡಿಸಿದ. ಅರ್ಧ ಗಂಟೆ ಅಲ್ಲೇ ರಸ್ತೆ ಪಕ್ಕದಲ್ಲಿ ನಿಂತು, ಮಾತಾಡಿದೆವು.
ಕಾಲೇಜಿನ ದಿನಗಳನ್ನು ಜ್ಞಾಪಿಸಿಕೊಂಡು, ಸ್ವಲ್ಪ ಹರಟೆ ಹೊಡೆದೆವು.
ಬಹುಶಃ ನನ್ನ ಮನಸಿನಲ್ಲಾದ ಅಲ್ಲೋಲ ಕಲ್ಲೋಲಗಳು ನಿಮಗೆ ಅರ್ಥವಾಗಿರಬೇಕು.... ಅಲ್ವಾ...?.
ಬಹಳ ಹುಷಾರಾಗಿರಬೇಕು ಗುರು....
Share/Save/Bookmark

29 comments:

  1. ಶಿವಪ್ರಕಾಶ್,

    ಇಂಥ ವಿಚಾರಗಳಲ್ಲಿ ತುಂಬಾ ಟೆಕ್ನಿಕ್ ಇದೆ ಗುರು, ನನ್ನ ಮಿರರ್ ಟೆಕ್ನಿಕ್ ಉಪಯೋಗಿಸಿ. ಮುಂದೆಲ್ಲಾ ಒಳ್ಳೆಯದಾಗುತ್ತದೆ. all the best.

    ReplyDelete
  2. ಪಾಪ ಕಣ್ರೀ ನೀವು .....:( ಹೀಗಾಗ್ಬಾರ್ದಿತ್ತು.....ಒ೦ದಲ್ಲ ಒ೦ದು ದಿನ ನಿಮ್ಗೂ ಒಳ್ಳೇ ಕಾಲ ಬರುತ್ತೆ. ಒ೦ದು ಒಳ್ಳೇ ಹುಡುಗಿ ನಿಮ್ಮನ್ನೋಡಿ ನಗಬಹುದು.......ಅಲ್ಲೀ ವರ್ಗೆ ಸಮಾಧಾನದಿ೦ದಿರಿ.. ಆಯ್ತಾ...?

    ReplyDelete
  3. ಪುಣ್ಯಕ್ಕೆ ಅವನು ನಿಮ್ಮ ಸ್ನೇಹಿತನಾಗಿದ್ದ. ಇಲ್ದಿದ್ರೆ ನಿಮ್ ಗತಿ... ;-)

    ReplyDelete
  4. ಶಿವು ಬೇಟಾ..

    ಹರೆಯದ ವಯಸ್ಸು
    ಹುಚ್ಚುಕೋಡಿಯ ಮನಸು...!

    ನಿಮ್ಮ ತೆರೆದ ಹೃದಯದ ಮಾತು ಇಷ್ಟವಾಯಿತು...

    ನಿಮ್ಮ ಬರವಣಿಗೆ ಬಹಳ ಸೊಗಸಾಗಿದೆ...

    ಅಭಿನಂದನೆಗಳು...

    ReplyDelete
  5. ಅಬ್ಬಾ ಹೀಗೂ ಆಗೋ ಛಾನ್ಸ್ ಬಹಳ ಇರುತ್ತೆ ಅಲ್ವಾ? ನನ್ನ ಫ್ರೆಂಡ್ಸ್ ಎಲ್ಲಾ ಒಬ್ಬಬ್ಬರಾಗಿ ಮದುವೆ ಬೇರೆ ಆಗ್ತಿದಾರೆ... :)
    ಇನ್ಮೇಲೆ ಹುಶಾರಾಗಿರ್ತೀನಿ...
    ಎಚ್ಚರಿಸಿದ್ದಕ್ಕೆ ಧನ್ಯವಾದಗಳು :D

    ReplyDelete
  6. ಹುಷಾರು ಶಿವೂ, ಬರಿ ಹುಡುಗಿಯರು ಇರುವಾಗ ನೋಡಿದರೆ ತೊಂದರೆ ಇಲ್ಲ (ಅವರಿಗೂ ಕುಶಿ ಹುಡುಗರು ನೋಡೋ ಅಸ್ಟು ಚೆನ್ನಾಗಿದ್ದೀನಿ ಅಂತ), ಆದ್ರೆ ಜೊತೇಲಿ ಹುಡುಗರಿದ್ರೆ ಅವರಿಗೆ ಉರಿಯೋಕೆ ಶುರು ಆಗುತ್ತೆ. ಬಹುಷಃ ನಿನ್ನ ಹುಡುಗಿನ ಬೇರೆ ಯವರು ನೋಡಿದ್ರೆ ನಿನ್ನ ಪ್ರತಿಕ್ರಿಯೆ ಕೂಡ ಹಾಗೆ ಇರುತ್ತೆ. ಬರಹದ ಜೊತೆಗೆ ಕಾಮೆಂಟ್ಸ್ ಓದಿ ಇನ್ನಸ್ಟು ನಗು ಬಂತು.

    ReplyDelete
  7. ಹೌದು ಶಿಷ್ಯ....
    ಬಾಳ ಹುಸಾರಗಿರ್ಬೇಕು....!!!

    ReplyDelete
  8. oh my god yentha anubhava re nimdhu , yake jayanagr alli mathra hudigiru kanisodhu , swlpa malleshwarm hatra bandh hogi saku , innu anubava hechagguthe , super keep it byeeeeee,,,,,,,,,,,,

    ReplyDelete
  9. ಹುಶಾರ್ರೀ.....ಕೆಲು ಟೈಮು ಕಷ್ಟಕ್ಕಿಟ್ಕೊಳ್ಳತ್ತೆ.....
    ಅನೇಕರ ಶುಭಾಶಯಗಳು ನಿಮಗಿವೆ... ಒಳ್ಳೇ ಹುಡುಗೀನೆ ಸಿಗ್ತಾಳೆ ಬಿಡಿ.. ಬರಹ ಚೆನ್ನಾಗಿದೆ...

    ReplyDelete
  10. ನೋಡದೇ ಇರೋಕೆ ಸಾಧವಿಲ್ಲವೇ೦ದು ನೋಡಿದರೆ,
    ಇಕ್ಕದೇ ಸಾಧ್ಯವಿಲ್ಲ ಎನ್ನೋ ಜನರ ಕಡೆ ನೋಡಿದರೆ
    ಕೇಡು.
    ಶಿವು ಅವ್ರ ಹತ್ತಿರ ಟ್ರೇನಿ೦ಗ್ ತಗೊಳ್ಳಿ.
    ಚೆನ್ನಾಗಿದೆ ತಮ್ಮ ಅನುಭವ.
    ಬೇಗ ಮದುವೆ ಆಗ ಗೊತ್ತಾಗುತ್ತೆ ನಿಮ್ಮ ಹಿ೦ದೆ ಇರೋರನ್ನ ಪಡ್ಡೆ ಹುಡುಗ್ರು ನೋಡಿದ್ರೆ ಎನಾಗುತ್ತೇ ಅ೦ತ
    ಆಗ ಇನ್ನೊ೦ದು ಲೇಖನ ಬರೀರಿ ಕಾಯ್ತಾ ಇರ್ತೇವೆ.

    ReplyDelete
  11. ಗಾಡಿ ಓಡಿಸುವಾಗ ಸ್ವಲ್ಪ ಹುಷಾರು ಕಣಪ್ಪಾ,

    ReplyDelete
  12. ಹಾಹಾಹಾ... ಅದೆಂತೆಂಥಾ ಫಜೀತಿ ತಂದ್ಕೊತೀರಿ ಶಿವೂ...:-) ನೀ ಹಿಂಗ ನೋಡಬ್ಯಾಡ ನನ್ನಾ..

    ReplyDelete
  13. ಹೌದು... ಹೌದು... ಹುಶಾರಾಗಿರಬೇಕು :)

    ReplyDelete
  14. ಹುಷಾರು ಕಣಪ್ಪ....ನೋಡು ಆದ್ರೆ ಹುಷಾರು.....

    ReplyDelete
  15. ಶಿವು,
    Better luck next time!

    ReplyDelete
  16. nimma lekhanavannu naanu ondu eccharike antha bhavisuve, innu munde hudugiranna gurayisabekadre avara munde kootiruva gandu praniya bagge yochisuve.

    thnx maraya, olle info :)

    ReplyDelete
  17. ಶಿವಪ್ರಕಾಶ್,
    ಹ ಹ ಹ.... ಸಕತ್ತಾಗಿದೆ ನಿಮ್ಮ ಅನುಭವ..... ನನ್ನ ' ಪಾರಿವಾಳ' ದ ಕಥೆ ಕೇಳಿ, ನಿಮ್ಮದೂ ಇದೆ ಥರ ಕಥೆ ಇದೆ ಅಂದಿದ್ದೀರಲ್ಲ...... ಕಾಯ್ತಾ ಇದ್ದೆ ನಿಮ್ಮ ಕಥೆಗೆ..... ಹ ಹಾ ಹಾ..... ಹೌದೂರಿ ಹುಷಾರಾಗಿರಬೇಕು..... ಮದುವೆಯಾದವರೂ ಸಹ...... ಬೈಕ್ ಹಿಂದೆ ನಿಮ್ಮಂಥ ಹುಡುಗರು ಬರುತ್ತಾರೆ.... ಹಾ ಹಾ...................

    ReplyDelete
  18. Ri shivu adakke kanri friends balwantawaagi maduvege kareyoodu. Friends maduvege hogade thappu maadthira. Athwa maduvege hogiyu ee thappu maadiddre (mostly bari maduve ootakke hogiddaga) adu kshamisalarada thappu. Yene erali heege baredu paapavannu tholkolthira alwaa adu great.

    ReplyDelete
  19. ಸದ್ಯ... ಸ್ವಲ್ಪದರಲ್ಲೇ ಬಚಾವ್ ಅದ್ರಲ್ಲ... :) ಒಳ್ಳೇದು...
    ಚೆನ್ನಾಗಿದೆ ಸ್ಟೋರಿ...
    ನಿಮ್ಮವ,
    ರಾಘು.

    ReplyDelete
  20. hahaha... lol..ROTFL... paapa huduga

    ReplyDelete
  21. ಹಹಹ ಚೆನ್ನಾಗಿದೆ ಸದ್ಯ ಬದುಕೊಂಡ್ರಿ ಗಾಡಿ ನಿಲ್ಸೋ ಅಂತ ಹೇಳಿದ್ದು ಎರಡು ಬಾರಿಸೋಕಲ್ಲಾ..ಹಹಹ್, ಹುಚುಕೋಡಿ ಮನಸು ಅದು ಹದಿನಾರರ ವಯಸ್ಸು... ೧೬ ಆಗಿತ್ತಾ ಈ ಘಟನೆ ನೆಡೆದಾಗ ಹಹಹಹ

    ReplyDelete
  22. Olle anubhava Shivu..Nimma aa friend nimma blog nodalla taane?? Illandre urkollo vishyakke bejar madkondre kashta :))

    ReplyDelete
  23. ಶಿವಪ್ರಕಾಶ್ ಅವರೇ ,
    ಹ್ಹ ಹ್ಹ ಹ್ಹ ಚೆನ್ನಾಗಿದೆ ನಿಮ್ಮ ಅನುಭವ.. :)

    ReplyDelete
  24. haahahaha lage raho Shivaprakash bhai
    :-)
    malathi S

    ReplyDelete
  25. ಶಿವು ಅವರೇ,
    ನನ್ನ ಗಾಡಿಗೆ ಮಿರರ್ ಇಲ್ಲ. ಮಿರರ್ ತೆಗೆದಿದ್ದಕ್ಕೆ ಕಾರಣವಿದೆ. :)
    ಲೇಖನ ಓದಿ, ಸಲಹೆ ನೀಡಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಚುಕ್ಕಿಚಿತ್ತಾರ ಅವರೇ,
    ನೀವು ಹೇಳ್ತಾ ಇದ್ದೀರಾ ಅಂತ ಹುಡುಗಿ ಸಿಗೋ ವರೆಗೂ ಸಮಾಧಾನದಿಂದ ಇರ್ತೀನಿ.. ಹ್ಹ ಹ್ಹ ಹ್ಹ..
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    Deepasmitha ಅವರೇ,
    ನಿಜ ಸರ್. ನನ್ ಫ್ರೆಂಡ್ ಆಗಿದ್ದಕ್ಕೆ ಬಚಾವ್...!!!
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಪ್ರಕಾಶಣ್ಣ,
    ನಿಜ ಅಣ್ಣ. ಎಲ್ಲ ವಯಸ್ಸಿನ ಮಹಿಮೆ. :)
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಆನಂದ ಅವರೇ,
    ನಿಜ ರೀ. ನಮ್ ವಯಸ್ಸಿನ ಹುಡುಗರೆಲ್ಲ ಮಾಡುವೆ ಆಗ್ತಾ ಇದಾರೆ..
    ಈ ಸಮಯದಲ್ಲಿ ನಾವು ತುಂಬಾ ಎಚ್ಚರದಿಂದ ಇರಬೇಕು...
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    Nisha ಅವರೇ,
    ನಿಜ ಮೇಡಮ್... ಆಮೇಲೆ ನನಗೆ ಅವನ ಸ್ತಿತಿಯಲ್ಲಿ ನಾನಿದ್ದರೆ ಹೇಗಿತ್ತು ಎಂದು ನೆನೆದು ಫೀಲ್ ಆಯ್ತು...
    ಇನ್ಮೇಲೆ only ಹುಡಿಗೀರು ಇದ್ರೆ ಮಾತ್ರ ನೋಡ್ತೀನಿ.. ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    Divya Hegde ಅವರೇ,
    ಹೌದು ಗುರು, ಇನ್ಮೇಲೆ ತುಂಬಾ ಹುಶಾರಗಿರ್ತೀನಿ.
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ರೂಪ ಅವರೇ,
    ಇನ್ಮೇಲೆ ಹುಡುಗೀರನ್ನ ನೋಡೋಕೆ ಮಲ್ಲೇಶ್ವರಂಗೆ ಬರ್ತೀನಿ ಬಿಡಿ. ಆಹ್ವಾನಿಸಿದ್ದಕ್ಕೆ ಧನ್ಯವಾದಗಳು.. ಹ್ಹಾ ಹ್ಹಾ ಹ್ಹಾ...
    ========

    manamukta ಅವರೇ,
    ಹೌದು ರೀ. ಬಹಳ ಹುಷಾರಾಗಿರಬೇಕು... :)
    ಒಳ್ಳೆ ಹುಡುಗಿ ಸಿಕ್ತಾಳೆ ಎಂದು ಹೇಳಿ ಕುಶಿ ಪಡಿಸಿದ್ದಕ್ಕೆ ಥ್ಯಾಂಕ್ ಯು... ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಸೀತಾರಾಮ. ಕೆ. ಅವರೇ,
    ನಿಜ ಸರ್. ಆಮೇಲೆ ನನಗೆ ಅವನ ಸ್ತಿತಿಯಲ್ಲಿ ನಾನಿದ್ದರೆ ಹೇಗಿತ್ತು ಎಂದು ನೆನೆದು ಫೀಲ್ ಆಯ್ತು...
    ಇನ್ಮೇಲೆ ಹಾಗೆ ಮಾಡೋಲ್ಲ ಬಿಡಿ. ಹುಡುಗೀರು ಇದ್ರೆ ಮಾತ್ರ ನೋಡ್ತೀನಿ.. ಹ್ಹಾ ಹ್ಹಾ ಹ್ಹಾ...
    ಶಿವು ಅವರ ಮಿರರ್ ಟೆಕ್ನಿಕ್ ನನಗೆ ಸಾಧ್ಯವಿಲ್ಲ. ಯಾಕೆಂದರೆ ನನ್ನ ಗಾಡಿಗೆ ಮಿರರ್ ಇಲ್ಲ.
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  26. PARAANJAPE K.N. ಅವರೇ,
    ನಾನು ತುಂಬಾ ವೇಗವಾಗಿ ಓಡಿಸಲ್ಲ. :)
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ರವಿಕಾಂತ ಗೋರೆ ಅವರೇ,
    ಏನ್ಮಾಡೋದು ಹೇಳಿ... ನಾನು ಬೇಕು ಬೇಕು ಅಂತ ಏನು ಮಾಡೋಲ್ಲ. ಎಲ್ಲ ಅದಗಿಯೇ ಆಗಿಬಿಡ್ತಾವೆ. ನಿಮಗೆ ಗೊತ್ತಲ್ವಾ.. ನಾನು ಅಮಾಯಕ ಅಂತ.. :P
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಸುಧೇಶ್ ಶೆಟ್ಟಿ ಅವರೇ,
    ನಿಜ ರೀ. ತುಂಬಾ ಹುಷಾರಾಗಿರಬೇಕು...
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಮಹೇಶ್ ಅವರೇ,
    ಇನ್ಮೇಲೆ ತುಂಬಾ ಹುಷಾರಾಗಿರತಿನಿ.
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    sunaath ಅವರೇ,
    ನಿಮ್ಮ ಬೆಂಬಲಕ್ಕೆ ನನ್ನ ಧನ್ಯವಾದಗಳು... ಹ್ಹಾ ಹ್ಹಾ ಹ್ಹಾ...
    ========

    ಬಾಲು ಅವರೇ,
    ನಿಜ ರೀ. ಬಹಳ ಹುಷಾರಾಗಿರಬೇಕು. ಅವರ ಮುಂದೆ ಕೂತ ಗಂಡು ಪ್ರಾಣಿಯ ಬಗ್ಗೇನೂ ಸ್ವಲ್ಪ ಯೋಚಿಸಬೇಕು.. ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಗುರುಮೂರ್ತಿ ಅವರೇ,
    ಆಯ್ತು ಗುರು.. ಇನ್ಮೇಲೆ ತುಂಬಾ ಹುಶಾರಗಿರ್ತೀನಿ.
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ದಿನಕರ ಮೊಗೇರ ಅವರೇ,
    ಹೌದು ರೀ. ಇದೆ ಆ ಅನುಭವ.
    ನೀವು ಹೇಳಿದ್ದು ನಿಜ. ಮದುವೆ ಆದವರು, ಆಗದವರು ಇಬ್ಬರು ತುಂಬಾ ಹುಷಾರಾಗಿರಬೇಕು.. ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    Anonymous ಅವರೇ,
    ಇನ್ಮೇಲೆ ಆ ಥರ ತಪ್ಪು ಮಾಡೋಲ್ಲ ಕಣ್ರೀ.. :P
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ರಘು ಅವರೇ,
    ನಿಜ ರೀ. ಸ್ವಲ್ಪದರಲ್ಲೇ ಬಚಾವ್..!!
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  27. Raghav/Raghya ಅವರೇ,
    ಹೌದು ಕಣೋ.. ಪಾಪ...
    ನೀನೂ ಕೂಡ ಸ್ವಲ್ಪ ಹುಷಾರಗಿರಪ್ಪ.. ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ವನಿತಾ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಮನಸು ಅವರೇ,
    ಹೌದು ಅಕ್ಕಯ್ಯ.. ಸ್ವಲ್ಪದರಲ್ಲೇ ಬಚಾವ್.. ಹ್ಹಾ ಹ್ಹಾ ಹ್ಹಾ..
    ಇದು ಘಟನೆ ನಡೆದಿದ್ದು ಸ್ವಲ್ಪ ದಿನಗಳ ಹಿಂದಸ್ಟೇ...
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    Ramesha ಅವರೇ,
    ಅವನು ನೋಡ್ತಾನೋ ಇಲ್ವೋ ಗೊತ್ತಿಲ್ಲ ಸರ್. ನೋಡಿದ್ರಂದ್ರೆ ಗ್ಯಾರೆಂಟಿ ಸ್ವಲ್ಪ ಬೇಜಾರ್ ಆಗಬಹುದು... :P
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಸುಮ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ========

    ಮಾಲತಿ ಅವರೇ,
    ಥ್ಯಾಂಕ್ ಯು ರೀ..
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete