Tuesday, January 12, 2010

ಹುಡುಕಿಕೊಟ್ಟು ಹೋಗು ಬಾ



ಅದೆಂತಹ ಬಯಕೆ ಕಣೆ ನಿನ್ನದು,
ಖಾಲಿ ಖಾಲಿ ರಸ್ತೆಯಲ್ಲಿ,
ನನ್ನ ಜೊತೆಗೂಡಿ ನಡೆಯುವುದು...
ನಿನ್ನಿಂದಾಗಿ,
ನನ್ನಲ್ಲೂ ಅದೇ ಬಯಕೆ ಮೂಡಿಬಿಟ್ಟಿದೆ.

ಅದೆಂತಹ ಹುಚ್ಚುತನ ಕಣೆ ನಿನ್ನದು,
ರಸ್ತೆಯ ಪಕ್ಕದಲ್ಲಿ ಬೆಳೆದುನಿಂತ ಮರಗಳಿಂದ ಆಗಾಗ ಉದುರುವ ಎಲೆಗಳು,
ನೆಲತಾಗುವ ಮುನ್ನ ಹಾರಿ ಹಿಡಿಯುವುದು,
ನಿನ್ನಿಂದಾಗಿ,
ನನ್ನಲ್ಲೂ ಅದೇ ಹುಚ್ಚುತನ ಹುಟ್ಟಿಬಿಟ್ಟಿದೆ.

ಅದೆಂತಹ ಧೈರ್ಯ ಕಣೆ ನಿನ್ನದು,
ಅದೇ ಖಾಲಿ ಖಾಲಿ ರಸ್ತೆಯಲ್ಲಿ,
ನನ್ನ ಹೆಗಲಮೇಲೆ ಕೈಹಾಕಿ ನಡೆಯುವುದು,
ನಿನ್ನಿಂದಾಗಿ,
ನನಗೂ ಆ ಧೈರ್ಯ ಬಂದುಬಿಟ್ಟಿದೆ.

ನಿನ್ನಂತೆಯೇ,
ಖುಷಿಯಿಂದ ಕುಣಿದು,
ಕುಪ್ಪಳಿಸುವ ಮನಸಾಗಿದೆ,
ನಗುತ,
ನಗಿಸುತಿರುವ ಮನಸಾಗಿದೆ.

ನಾವು ತಿರುಗಾಡಿದ ಆ ಖಾಲಿ ಖಾಲಿ ರಸ್ತೆ ಇಂದು ಖಾಲಿಯಾಗಿ ಉಳಿದಿಲ್ಲ,
ವಾಹನಗಳು ಹೆಚ್ಚಾಗಿ,
ಅಲ್ಲಿ ಉಸಿರಾಡಲಾಗುತ್ತಿಲ್ಲ ...
ಅದೇ ರಸ್ತೆಪಕ್ಕದಲ್ಲಿದ್ದ ಮರಗಳಿಂದು ನೆಲಕ್ಕುರುಳಿವೆ,
ಇನ್ನೂ ಎಲೆಗಳನು ಹಾರಿ ಹಿಡಿಯುವ ಮಾತೆಲ್ಲಿ...?.

ಎಲ್ಲದಕ್ಕಿಂತ ಹೆಚ್ಚಾಗಿ,
ನನ್ನ ಹೆಗಲಮೇಲೆ ಕೈಹಾಕಿ ನಡೆಯುತ್ತಿದ್ದ ನೀನಿಲ್ಲ...
ಒಂದೇ ಒಂದು ಹೆಜ್ಜೆ ಇಡಲಾಗುತ್ತಿಲ್ಲ ಕಣೆ...,
ನಗಿಸುವುದನ್ನ ಕಲಿಸಿದ ನೀನೆ,
ನನ್ನ ಅಳಿಸಿಹೊದೆಯಲ್ಲ....

ನಿನ್ನದೇ ನೆನಪಿನಲ್ಲಿ,
ನಾ ಕಳೆದುಹೊಗುತ್ತಿರುವೆ....
ಮನ ಖಾಲಿಯಾಗಿಹೋಗಿದೆ,
ಹುಡುಕಿಕೊಟ್ಟು ಹೋಗು ಬಾ,
ನನ್ನನ್ನು, ನನ್ನ ಮನಸ್ಸನ್ನು....

ಇಂತಿ ನಿನ್ನ ಪ್ರೀತಿಯ,
ಶಿವಪ್ರಕಾಶ್


Share/Save/Bookmark

28 comments:

  1. ಓಕೆ, ಅವಳಿಗೆ thanks ಹೇಳಿ, ನಿಮ್ಮಲ್ಲಿ ಇಷ್ಟೊ೦ದು ಧೈರ್ಯ ತು೦ಬಿದ್ದಾಳಲ್ಲ, ಆಕೆಯ contribution ತು೦ಬಾ ದೊಡ್ಡದು, ಅದು ನಿಮ್ಮ ಮು೦ದಿನ ಯತ್ನಕ್ಕೆ ಹಾದಿತೋರಲಿದೆ.ಚೆನ್ನಾಗಿದೆ.

    ReplyDelete
  2. ಶಿವಪ್ರಕಾಶ್,
    ತುಂಬಾ ನೋವಿದೆ ಕವಿತೆಯ ಹಿಂದೆ.... ಕೊನೆ ಕೊನೆಗೆ ಯಾರೂ ಇರಲ್ಲ ಬ್ರದರ್, ನಾವು, ನಮ್ಮ ನೆನಪು...... ಆದರೂ ಅವರು ಕಳಿಸಿ ಹೋದ ಪಾಠಕ್ಕೆ ಚಿರರುಣಿಗಲಾಗಿರಬೇಕು .... .........
    ಮುಂದೆ ನಡೆ....
    ಇನ್ನ ಮುಂದಿದೆ ದಾರಿ......
    ಇನ್ನ್ಯಾರೋ ಗೆಳೆಯರು...
    ಇನ್ಯಾರದೋ ಹೆಗಲು....

    ReplyDelete
  3. ಶಿವು,
    ನಿಮಗಿಂತ ಆಕೆಗೆ ಧೈರ್ಯ ಬಿಡಿ....
    ಆದರೆ ಈಗ ಆಕೆಯ ಹುಚ್ಚುತನ, ಧೈರ್ಯ, ಬಯಕೆ ಎಲ್ಲ ಇಡೇರಿಸಲು ಬೇರೆ ರಸ್ತೆ ನೋಡಿಕೊಳ್ಳಬೇಕು.........
    ಕಾಂಕ್ರೀಟ್ ಕಾಡಿನಲ್ಲಿ ಎಲ್ಲಿ ಸಾದ್ಯ ಗುರು.....
    ಚೆನ್ನಾಗಿ ಬರೆದಿದ್ದೀರ....

    ReplyDelete
  4. ಖಾಲಿ ರಸ್ತೆಯಲ್ಲಿ ಮನೆಗಳನ್ನು ತು೦ಬಿದ೦ತೆ
    ನಿಮ್ಮ ಖಾಲಿ ಮನದೊಳಗೆ ತನ್ನ ನೆನಪನ್ನ ತು೦ಬಿದ್ದಾಳೆ ...
    ತು೦ಬಿದ ರಸ್ತೆಯಲ್ಲಿ ಮತ್ಯಾರೋ ಸಿಗಬಹುದು...
    ಅಲ್ ದಿ ಬೆಸ್ಟ್...

    ReplyDelete
  5. ಕವನ ದ ಹಿಂದೆ ಇರುವ ನೋವು ಅರ್ಥ ಆಗುತ್ತೆ.... ಬರೀ ನೆನಪಿನಲ್ಲೇ ಕಾಲ ಕಳೆಯುವುದು, ಸರಿಯಲ್ಲ.... ಮುಂದೆ ಸಾಗ್ತಾ ಇರಿ.... ಇನ್ನು ಚೆನ್ನಾಗಿ ಇರುವ ಅರ್ಥ ಮಾಡಿಕೊಳ್ಳುವ ಗೆಳೆಯ ಗೆಳೆತಿಯರು ಸಿಗುತ್ತಾರೆ.....
    ಗುರು

    ReplyDelete
  6. ಶಿವು ಮಹರಾಜ್ ಯಾಕೋ blog ನಲ್ಲಿ ಕಾಣಿಸ್ತಾ ಇಲ್ವಲ್ಲಾ ಅಂದ್ಕೊಂಡೆ....ತಕ್ಷಣ ಬಂದ್ರಿ...ಆದ್ರೆ ಇಷ್ಟು sentimental ಆದ್ರೆ ಹೇಗೆ (ತಮಾಷೆಗೆ !) ....ಕವನ ಚೆನ್ನಾಗಿದೆ..ಭಾವಪೂರ್ಣವಾಗಿದೆ.... ದಾಸರು ಹೇಳಿಲ್ವೇ.."ಆದದ್ದೆಲ್ಲಾ ಒಳಿತೇ ಆಯಿತು" ಅಂತ...ಹಾಗಿದ್ದುಬಿಡಿ ಅಷ್ಟೆ..!!

    ReplyDelete
  7. ಶಿವಪ್ರಕಾಶ್
    ನೀವಿದನ್ನು ಬರೆಯಬಾರದಿತ್ತು, ಬರೆದರೂ ನಾನು ಓದಬಾರದಿತ್ತು. ಎಂಥ ಪ್ರಮಾದವಾಯಿತು! ಹಳೆಯ ಸವಿನೆನಪುಗಳೆಲ್ಲಾ ನೆನಪಾಗಿಬಿಟ್ಟಿತಲ್ಲ, ಇಷ್ಟು ಸರಳವಾಗಿ ಸೊಗಸಾಗಿ ಬರೆದರೇ ಹೇಗೆ ಹೇಳಿ. ಸದ್ಯ ಈ ಕಾಮೆಂಟು ನನ್ನ ಶ್ರೀಮತಿಗೆ ಗೊತ್ತಾಗದಿದ್ದರೆ ಸಾಕು[ತಮಾಷೆಗೆ].

    ನಿಮ್ಮ ಬರಹಗಳಲ್ಲಿ ಇದು ತುಂಬ ಇಷ್ಟವಾಯಿತು.

    ReplyDelete
  8. hahaha nange shivu sir comment nodi nagu bantu!!

    kavana chennagide tammayya bhaavanegaLiddare bhaavapoorna kavana moodutte. munde olle savinenapu sigalendu aashisuttene.

    ReplyDelete
  9. ಜೊತೆಯಲಿ ನಡೆದವರು ನಡುದಾರಿಯಲಿ ಕೈಬಿಟ್ಟರೂ‌ ನೆನಪುಗಳು ಬಿಟ್ಟು ಹೋದಾವೆಯೇ?

    ReplyDelete
  10. ಕವನ ಚೆನ್ನಾಗಿದೆ ಶಿವೂ...
    ನಿಮ್ಮವ,
    ರಾಘು.

    ReplyDelete
  11. wow ಶಿವು, ತುಂಬಾ ಚೆನ್ನಾಗಿ ಬಂದಿದೆ ಕವನ. ಶುರುವಿನ ಪ್ಯಾರಾಗಳಲ್ಲಿ 'ಹಿಂದಿನ' ನೆನಪು ಮತ್ತು ಮುಂದಿನ ಸಾಲುಗಳಲ್ಲಿ 'ಇಂದಿನ' ವಾಸ್ತವ!!
    btw..ಇದು ನಿಮ್ಮ 'ನಿಜ ಅನುಭವವೆ'? dont worry..ಹಳೆಯದು ಹೋಗಿ ಹೊಸತಕ್ಕೆ ದಾರಿ ಮಾಡಿ ಕೊಡುತ್ತೆ !!

    ReplyDelete
  12. ಹಳೆಯ ದಾರಿಯೂ ಇಲ್ಲ, ಮರವೂ ಇಲ್ಲ ಜೊತೆಗೆ ಜೊತೆಗಾತಿ(ರ).
    ನೆನಪಿಸಿ ಚಿ೦ತೆಯಿಲ್ಲ. ಹೊಸ ಹಾದಿಯಲ್ಲಿ, ಹೊಸ ಜೊತೆಗಾರ(ತಿ)ರೊಡನೆ - ಹೊಸಸಸಿಗಳ ನೆಟ್ಟು ಹೊಸ ಮರದ ಬೀಳುವ ಎಲೆಗಳ ಹಿಡಿಯಲು ಕಾಯುವಾ!!
    ಅಯಿತಾ!!
    ಚೆ೦ದದ ಕವನ ಶಿವೂ.

    ReplyDelete
  13. Shiva KAVANA channagide kano...

    -Nataraj

    ReplyDelete
  14. very meaningful
    nanage kavana tumbaaaaaaaaaaaa ishTa aaytu.

    All the best. hope she responds
    :-)
    malathi S

    ReplyDelete
  15. ಶಿವೂ
    ತುಂಬಾ ಮುದ್ದಾದ ಕವನ
    ಅದರೊಳಗಿನ ನೋವುಗಳು ತುಂಬಾ ಯಥಾವತ್ತಾಗಿ ಮೂಡಿವೆ

    ReplyDelete
  16. ಸುಂದರ ಕವನಕ್ಕೆ ಸ್ಫೂರ್ತಿ ನೀಡಿದ ಆ ಹುಡುಗಿಗೆ ನನ್ನ ಸಲಾಮ್.
    ಆದರೆ, ಬಾಳು ಇರೋದೇ ಹೀಗೆ, ಶಿವಪ್ರಕಾಶ.
    ಸವಿನೆನಪುಗಳನ್ನು ಮನದಲ್ಲಿ ಇಟ್ಟುಕೊಳ್ಳಿರಿ. ವರ್ತಮಾನದ ಕರ್ತವ್ಯಗಳನ್ನು ಗಮನಿಸಿರಿ!

    ReplyDelete
  17. ಇದೇನು ? ನಗೆಗಾರನ ಪೆನ್ನಲ್ಲಿ ವಿರಹದ ಇಂಕು !

    ReplyDelete
  18. ಶಿವಪ್ರಕಾಶ ಎಷ್ಟು ಛಂದಅದ ಅಲ್ಲ ನೀವ್ಯಾಕ ಹಿಂದೆಲ್ಲ ಆ ಬೈಕು ವಗೈರೆಮೇಲೆ ಬರೆದಿದ್ದು
    ಇನ್ನೊಮ್ಮೆ ಅಭಿನಂದನೆಗಳು...!

    ReplyDelete
  19. very nice shivprakash, etticige tumba gamanisutta eddini nimma lekhanagalu fantastic.... nimmage spoorti niduttiruva a hudigige big hand... nimma e-journey unnati kanali

    ReplyDelete
  20. ಹಿಂದಿನ ನೆನಪು, ಇಂದಿನ ಕಟುವಾಸ್ತವ ಕವನದಲ್ಲಿ ಹೃದಯಸ್ಪರ್ಶಿಯಾಗಿ ಮೂಡಿದೆ

    ReplyDelete
  21. sivaprakash sir tumba chennagide ..

    ReplyDelete
  22. ಚಂದದ ಕವನ ಶಿವೂ ಅವ್ರೆ...

    ReplyDelete
  23. PARAANJAPE K.N. ಅವರೇ,
    ಅವಳಿಗೆ ಈ ವಿಷಯದಲ್ಲಿ ಧನ್ಯವಾದ ಹೇಳಲೇಬೇಕು.. :)
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ದಿನಕರ ಅವರೇ,
    ನಿಜ ಸರ್.. ಎಲ್ಲರೂ ಜೀವನದ ಪ್ರಯಾಣದಲ್ಲಿ ಬಂದು ಹೋಗುವವರು.. :)
    ನಾವು ವಾಸ್ತವಕ್ಕೆ ಹೊಂದಿಕೊಂಡು ಹೋಗಬೇಕಸ್ಟೆ...
    ಪ್ರತಿಕ್ರಿಯೆಗೆ ಧನ್ಯವಾದಗಳು..
    ============

    ಮಹೇಶ್ ಅವರೇ,
    ಹಾ ಹಾ ಹಾ... ಅಲ್ವಾ.. ಬೇರೆ ರೋಡ್ ನೋಡ್ಕೋಬೇಕು...
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಚುಕ್ಕಿಚಿತ್ತಾರ ಅವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು..
    ============

    ಗುರು ಅವರೇ,
    ನಿಜ ರೀ.. ಎಲ್ಲರೂ ಜೀವನದ ಪ್ರಯಾಣದಲ್ಲಿ ಬಂದು ಹೋಗುವವರು.. :)
    ನಾವು ವಾಸ್ತವಕ್ಕೆ ಹೊಂದಿಕೊಂಡು ಹೋಗಬೇಕಸ್ಟೆ...
    ಪ್ರತಿಕ್ರಿಯೆಗೆ ಧನ್ಯವಾದಗಳು..
    ============

    ಸುಬ್ರಮಣ್ಯ ಅವರೇ,
    ನಿಜ ಸರ್.. ಆದದ್ದೆಲ್ಲ ಒಳ್ಳೇದಕ್ಕೆ...
    ಹೋಗ್ಲಿಬಿಡು ಹೊಸ ಹುಡುಗಿ ಟ್ರೈ ಮಾಡ್ತೀನಿ... ಹಾ ಹಾ ಹಾ...
    ಪ್ರತಿಕ್ರಿಯೆಗೆ ಧನ್ಯವಾದಗಳು..
    ============

    ಶಿವು ಅವರೇ,
    ನಿಮ್ಮ ಫ್ಲಾಶ್ ಬ್ಯಾಕ್ ಗೆ ಹೋಗಿಬಿಟ್ಟಿರೆ? ಹಾ ಹಾ ಹಾ ಹ...
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಮನಸು ಅವರೇ,
    ಆಯ್ತು ಅಕ್ಕಯ್ಯ, ನಿಮ್ಮ ಆಶಿರ್ವಾದದಂತೆ ನನಗೆ ಒಳ್ಳೆ ಹುಡುಗಿ ಸಿಕ್ಕರೆ, ನಿಮಗೆ ಲೀಲಾ ಪ್ಯಾಲೇಸ್ ನಲ್ಲಿ ಪಾರ್ಟಿ.. ಹಾ ಹಾ ಹಾ...
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಆನಂದ ಅವರೇ,
    ನಿಜ ಸರ್.. ಈ ನೆನಪುಗಳೇ ಹೀಗೆ... ಬೆನ್ನುಬಿಡದೆ ಕಾಡುತ್ತಿರುತ್ತವೆ..
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ರಘು ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಸುಮನ ಅವರೇ,
    ನಾನು ಕಳೆದು ಹೋಗಿದ್ದು ಮಾತ್ರ ನಿಜ.. ಆದರ ರೀತಿ ಮಾತ್ರ ಬೇರೆ ತರ... ಕಳೆದುಹೋದವರ ನೋವೆಲ್ಲ ಒಂದೇ ಅಲ್ಲವೇ..
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  24. ಸೀತಾರಾಮ್ ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ರವಿಕಾಂತ್ ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ನಟರಾಜ್,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಕಣೋ..
    ============

    ಮಾಲತಿ ಅವರೇ,
    ಅದು ಮುಗಿದು ಹೋಗಿದೆ.. ಹೊಸ ಹುಡುಗಿ ನೋಡಿಕೊಳ್ಳಬೇಕಸ್ಟೆ
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಗುರುಮೂರ್ತಿ ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಸುನಾಥ್ ಅವರೇ,
    ನಿಜ ಸರ್.. ಅವಳಿಗೆ ನನ್ನನ್ನು ನೋಯಿಸಿದರು, ನನ್ನಲ್ಲಿ ಪ್ರೀತಿಯ ಅರ್ಥ ಹೇಳಿಕೊತ್ತಿದ್ದಾಳೆ... ಅವಳಿಗೆ ನನ್ನದು ಕೂಡ ಒಂದು ಸಲಾಮ್..
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಗೌತಮ್ ಅವರೇ,
    ಜೀವನದಲ್ಲಿ ಎಲ್ಲರೂ ಸಿಹಿಕಹಿ ತಿನ್ನಲೇ ಬೇಕು ಅಲ್ಲವೇ.. ಹಾಗಾಗಿ ಈ ಕವನ... ಹಾ ಹಾ ಹಾ..
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಉಮೇಶ್ ಅವರೇ,
    ಇದು ನಾನು ಬರೆಯಬೇಕೆಂದು ಬರೆದಿದ್ದಲ್ಲ... ಅವಳು ನೆನಪಾಗಿ ಬಂದು ಬರೆಸಿದ್ದು...
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಸ್ಪೂರ್ತಿ ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಗುರು ಕುಲಕರ್ಣಿ ಅವರೇ,
    ನಿಮ್ಮ ಈ ಪ್ರೋತ್ಸಾಹಕ್ಕೆ ನಾನು ಚಿರಋಣಿ.
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ನಿಶಾ ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ದೀಪಸ್ಮಿತಾ ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ರಂಜಿತಾ ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಸುಧೇಶ್ ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ಶರಶ್ಚಂದ್ರ ಕಲ್ಮನೆ ಅವರೇ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete