Wednesday, August 11, 2010

ಕೊನೆಗೂ ನೋಡಲಿಲ್ಲ ನಿನ್ನ....

ಸೆಮಿಸ್ಟರ್ ಪರೀಕ್ಷೆ ಮುಗಿಸಿಕೊಂಡು ಮೈಸೂರಿನಿಂದ ನನ್ನ ಊರಿಗೆ ಹೋಗಲು ಬಳ್ಳಾರಿ ಬಸ್ ಹತ್ತಿದೆ. ಮೈಸೂರಿನಿಂದ ಬಳ್ಳಾರಿಗೆ ಇರುವುದು ಎರಡೇ ಬಸ್ಸು, ಹತ್ತು ಗಂಟೆಗಳ ಪ್ರಯಾಣ, ಸೀಟು ಸಿಗುವುದು ಕಷ್ಟ. ಹಾಗಾಗಿ ಮುಂಚೆಯೇ Reservation ಮಾಡಿಸಿದ್ದೆ. ರಾತ್ರಿ ೮:೩೦ಕ್ಕೆ ಮೈಸೂರಿನ ಬಸ್ ನಿಲ್ದಾಣದಿಂದ ಬಸ್ ಬಿಟ್ಟಿತು. ಬೇರೆ ವಿಧಿಯಿಲ್ಲದೇ ಬಸ್ಸಿನಲ್ಲಿ ಜನರು ಕುರಿಗಳಂತೆ ತೂರಿಕೊಂಡಿದ್ದರು. ನಾನು ಮುಂಚೆಯೇ Reservation ಮಾಡಿಸಿದ ಫಲವಾಗಿ ಕಿಟಕಿ ಪಕ್ಕದ ಸೀಟು ದೊರತಿತ್ತು. ನಾನು ಆ ಸದ್ದು ಗದ್ದಲದ ನಡುವೆಯೂ ನಿಧಾನವಾಗಿ ಗಾಡವಾದ ನಿದ್ದೆಗೆ ಜಾರಿದೆ.

ಡ್ರೈವರ್ ಹಾಕಿದ ಸಡನ್ ಬ್ರೇಕಿನ ಪರಿಣಾಮವಾಗಿ ಮುಂದಿನ ಸೀಟಿಗೆ ತಲೆ ಬಡಿಸಿಕೊಂಡೆ. ಯಾವುದೋ ಊರು ಬಂದಿತ್ತು. ಡ್ರೈವರ್ ಊರು ಬಂದಿದೆ ಎಂದು ಹೇಳಲು ಈ ರೀತಿಯ ಬ್ರೇಕ್ ಹಾಕಿದ್ದ ಅನ್ನಿಸುತ್ತೆ. ಬಸ್ಸಿನಿಂದ ಕೆಲವರು ಇಳಿದರು. ಹಾಗೆ ಹೊರಗಡೆ ಕಣ್ಣಾಡಿಸಿದೆ. ಒಂದು ಸುಂದರವಾದ ಹುಡುಗಿ, ಅವಳ ಅಪ್ಪನ ಜೊತೆ ನಮ್ಮ ಬಸ್ ಹತ್ತುವುದನ್ನು ಗಮನಿಸಿದೆ. ಎಂತಹ ಚೆಲುವೆ ಅವಳು. ಮೊದಲ ನೋಟದಲ್ಲೇ ನನ್ನ ಸೆರೆಹಿಡಿದಳಲ್ಲ.

ಬಸ್ ಹತ್ತಿ ನಾನು ಕೂತಿದ್ದ ಸೀಟಿನ ಪಕ್ಕದಲ್ಲೇ ಅಪ್ಪ, ಮಗಳು ಬಂದು ನಿಂತರು. ಅಪ್ಪನಿಗೆ ಸುಮಾರು ಐವತ್ತು ವರ್ಷವಿರಬಹುದು. ನಾನು ಹೇಗೋ ಕಸ್ಟಪಟ್ಟು ಕದ್ದು ಕದ್ದು ಆ ಹುಡುಗಿಯನ್ನು ನೋಡುತ್ತಾ ಇದ್ದೆ. ಹಾಗೆ ನೋಡುವುದು ಎಷ್ಟು ಕಷ್ಟ ಅಂತ ಕಷ್ಟಪಟ್ಟವರಿಗೆ ಗೊತ್ತು. ಇದ್ದಕ್ಕಿದ್ದಂತೆ ನನ್ನ ಪಕ್ಕದ ಸೀಟಿನಲ್ಲಿ ಕೂತಿದ್ದ ನನ್ನ ವಯಸ್ಸಿನ ಒಬ್ಬ ಹುಡುಗ ಎದ್ದು ನಿಂತು "ಇಲ್ಲಿ ಕೂತ್ಕೊಳಿ ಸರ್" ಎಂದ (ಬಹುಶ ಹುಡುಗಿಯನ್ನು Impress ಮಾಡಲು ಹಾಗೆ ಮಾಡಿದ್ದ ಅನ್ಸುತ್ತೆ.
ಇಲ್ಲವಾದರೆ ಬಸ್ಸಿನಲ್ಲಿ ಅಸ್ಟೊಂದು ಜನ ನಿಂತಿದ್ದರೂ, ಇವರಿಗೇ ಯಾಕೆ ಕೂಡಲು ಅವಕಾಶ ಮಾಡಿಕೊಡುತ್ತಿದ್ದ). ಆಗ ಅವರು "ಪರವಾಗಿಲ್ಲ... ಥ್ಯಾಂಕ್ಸ್" ಅಂದ್ರು. ಮತ್ತೊಮ್ಮೆ ಕೇಳಿದ, ಕೊನೆಗೆ ಅವರ ಮಗಳನ್ನು ನನ್ನ ಪಕ್ಕದಲ್ಲಿ ಕೂರಿಸಿದರು.

ಛೇ.. ದೂರ ಎಲ್ಲಾದರೂ ನಿಂತ ಹುಡುಗಿಯನ್ನು ಕಣ್ತುಂಬ ನೋಡಬಹುದು ಆದರೆ, ನನ್ನ ಪಕ್ಕದಲ್ಲೇ ಕೂತ ಹುಡುಗಿಯ ಮುಖವನ್ನು ನೋಡುವುದು ಹೇಗೆ..? ನೋಡಲು ಸಾಧ್ಯವಾಗಲಿಲ್ಲ. ಮನಸಲ್ಲೇ ಕೊರಗಿದೆ. ಮೊದಲೇ ಸಿಕ್ಕಾಪಟ್ಟೆ ನಾಚಿಕೆ ಸ್ವಭಾವದ ಹುಡುಗ ನಾನು. ಕಿಟಿಕಿಯತ್ತ ಮುಖ ಮಾಡಿ, ಹೊರಗಡೆ ಕತ್ತಲಲ್ಲಿ ಏನು ಕಾಣದಿದ್ದರೂ ದಿಟ್ಟಿಸಿ ನೋಡುತ್ತಿದ್ದೆ. ನಿರ್ವಾಹಕ ಎಲ್ಲರೂ ಟಿಕೆಟ್ ತೆಗೆದುಕೊಂಡ ಮೇಲೆ, ಡ್ರೈವರ್ ಗೆ ಬಸ್ಸಿನಲ್ಲಿ ಉರಿಯುತ್ತಿದ್ದ ದೀಪವನ್ನು ಆರಿಸಲು ಸಿಗ್ನಲ್ ಕೊಟ್ಟ. ಬಸ್ಸಿನಲ್ಲೂ ಕತ್ತಲು. ಹೊರಗಡೆಯೂ ಕತ್ತಲು. ಹೊಳೆವ ಮಾಣಿಕ್ಯದ ಪಕ್ಕ ನಾನು. ಆದರೂ ನೋಡಲಾಗುತ್ತಿಲ್ಲ... ತುಂಬ ವೇದನೆ ಪಟ್ಟುಕೊಂಡು ಕಿಟಿಕಿಯಾಚೆ ಮುಖಮಾಡಿ ನೋಡುತ್ತಿದ್ದೆ.

ಆ ಕತ್ತಲಲ್ಲಿ, ಅವಳು ತನ್ನ ಕಾಲನ್ನು ನನ್ನ ಕಾಲಿಗೆ ತಾಗಿಸಿದಳು. ಏನೋ ಒಂದು ರೀತಿಯ ರೋಮಾಂಚನವಾಯಿತು. ನಾನು ನಾಚಿಕೊಂಡು ನನ್ನ ಕಾಲನ್ನು ಸ್ವಲ್ಪ ಹಿಂದಕ್ಕೆ ಸರಿಸಿಕೊಂಡೆ. ಅವಳು ಪುನಃ ತನ್ನ ಕಾಲನ್ನು ನನ್ನ ಕಾಲಿಗೆ ತಾಗಿಸಿದಳು. ನನ್ನ ಹೃದಯ ಬಡಿತ ಹೆಚ್ಚಾಯಿತು. ನಾನು ನನ್ನ ಕಾಲು ಎಸ್ಟೇ ಹಿಂದಕ್ಕೆ ಸರಿಸಿಕೊಂಡರು ಅವಳು ಮತ್ತೆ ಮತ್ತೆ ತನ್ನ ಕಾಲನ್ನು ತಾಗಿಸಿದಳು. ನನಗೆ ಬೇಸರವಾಯಿತು. ಎಂತಹ ಸುಂದರವಾದ ಹುಡುಗಿ ಈ ರೀತಿ ವರ್ತಿಸಬಹುದೇ...? ಎಂದುಕೊಂಡೆ. ಹುಟ್ಟಿದ್ದ ಪ್ರೀತಿ ದೂರವಾಯಿತು.

ಅಂತು ಆ ಅಪ್ಪ ಮಗಳು ಇಳಿಯಬೇಕಾದ ಊರು ಬಂತು. ಬಸ್ಸು ನಿಂತಿತ್ತು. ಅವಳ ಮುಖವನ್ನು ನಾನು ನೋಡಲಿಲ್ಲ. ಅವಳ ಆ ವರ್ತನೆಯಿಂದ ನನಗೆ ಬೇಸರವಾಗಿತ್ತು. ಅವಳು ಇಳಿದು ಹೋದಳು. ನನ್ನ ಪಕ್ಕದಲ್ಲಿ ಆ ಸೀಟು ದಾನ ಮಾಡಿ ನಿಂತಿದ್ದ ಹುಡುಗ ಮತ್ತೆ ಕೂತ. ನಿರ್ವಾಹಕ ಟಿಕೆಟ್ ತೆಗೆದುಕೊಂಡಮೇಲೆ ಉರಿಯುತ್ತಿದ್ದ ದೀಪವನ್ನು ಚಾಲಕ ಆರಿಸಿದ. ಬಸ್ ಸ್ವಲ್ಪ ದೂರ ಹೋಯಿತು. ಅವಳ ನೆನಪಲ್ಲೇ ಕೂತಿದ್ದ ನನಗೆ ಪುನಃ ಅವಳು ಕಾಲು ತಾಕಿದಂತೆ ಬಾಸವಾಯಿತು. ಅವಳು ನನ್ನಲ್ಲಿ ಈ ಭ್ರಮೆ ಸೃಷ್ಟಿಸಿ ಹೋಗಿದ್ದಾಳೆ ಎನ್ನಿಸಿತು. ಮತ್ತೆ ಪುನಃ ಪುನಹ ಅವಳ ಕಾಲು ತಾಕಿದಂತಾಯಿತು. ಕೊನೆಗೆ ಸೀಟಿನ ಕೆಳಗೆ ಬಗ್ಗಿ ನೋಡಿದೆ.

ನನ್ನ ಮೇಲೆ ನನಗೆ ಬೇಸರವಾಯಿತು. ಇಲ್ಲಿಯವರೆಗೂ ನನ್ನ ಕಾಲನ್ನು ತಾಕಿಸಿದ್ದು ಅವಳಲ್ಲ. ಯಾವುದೋ ಕಟ್ಟಿಗೆಯ ದಪ್ಪದಾದ ಉದ್ದವಾದ ಕೋಲು. ಕಲ್ಪನಾ ಲೋಕದಲ್ಲಿ ನಾನು ಏನೇನನ್ನೋ ಊಹಿಸಿಕೊಂಡು, ಸುಮ್ಮಸುಮ್ಮನೆ ಅವಳನ್ನು ಮನಸ್ಸಿನಲ್ಲಿ ನಿಂದಿಸಿದೆನಲ್ಲ. ಛೇ... ಕೊನೆಯಲ್ಲಿ ಅವಳ ಮುಖವನ್ನು ಕೂಡ ತಿರುಗಿ ನೋಡಲಿಲ್ಲ ಎನ್ನುವುದು ತುಂಬ ನೋವುಕೊಟ್ಟಿತು.

ಮತ್ತೆ ಅವಳ ಮುಖವನ್ನು ನೋಡಬೇಕೆನಿಸುತಿದೆ. ಬಾಳ ಪಯಣದಲ್ಲಿ ನನ್ನ ಜೊತೆ ಬಸ್ಸಿನಲ್ಲಿ ಪಯಣಿಸಿದ ಆ ಸುಂದರವಾದ ಹುಡಿಗಿಯನ್ನು ಇನ್ನೊಮ್ಮೆ ನೋಡಬೇಕೆನಿಸುತಿದೆ.....!!!!

Share/Save/Bookmark

23 comments:

  1. ಕೆಲವೊಮ್ಮೆ ಹಲವರಿಗೆ ಹಾಗೇ ಆಗುತ್ತದೆಯಲ್ಲವೇ, ಸುಂದರ ಹುಡುಗಿ ಪಕ್ಕಕ್ಕೆ ಕೂತರಂತೂ ಅವಳ ಕೈಕಾಲೇ ತಾಗಿತೇನೋ ಅಂತ ಬಹಳ ಜನ ಅಂದುಕೊಳ್ಳುತ್ತೇವೆ, ಆದ್ರೆ ವಾಸ್ತವವಾಗಿ ಅಲ್ಲಿ ತಾಗುತ್ತಿರುವುದು ಬೇರೆ ಆಗಿರುತ್ತದೆ, ನಿಮಗೂ ನಿಮ್ಮ ವಯಸ್ಸಿಗೂ ಹಾಗನ್ನಿಸಿದ್ದು ತಪ್ಪಲ್ಲ ಬಿಡಿ, ನಾವು ಈ 'ಸ್ಪರ್ಶ ಜ್ಞಾನ'ವನ್ನು ಈಗ ಕಳೆದುಕೊಂಡಿದ್ದೇವೆ, ನಿಮ್ಮ ಅನಿಸಿಕೆ ಚೆನ್ನಾಗಿದೆ, ಹುಡುಕುತ್ತಿರಿ-ಸಿಕ್ಕರೂ ಸಿಗಬಹುದು!

    ReplyDelete
  2. chendada lekhana shivanna. bahala super barediddiraa...

    nimma vayassina sahaja bhaavanegalanna aaptavagi hanchikondiddiraa...

    adare bhattaru maatra sullu heltha iddare"sparshajnana" kalkondiddevendu. avara jnana hechchagirute iga yaavadu kolu yavadu hudugi kaalu , yaavadu huduganadu anthaa kannu muchchi helovashttara mattige sparshajnana hechchaagirute.
    yenu bhatare nanu heliddu sari ideyo illavo???

    ReplyDelete
  3. ಶಿವೂ...

    ನಿಜ ಕೆಲವೊಮ್ಮೆ ವಿವೇಚನೆಯಿಲ್ಲದೆ...
    ವಿಚಾರ ಮಾಡಿ..
    ವಿಷಾದ...ಪಡುತ್ತೇವೆ...

    ವಿಷಾದಗಳನ್ನು..
    ಸುಂದರವಾಗಿಸುವ
    ಮತ್ತದೆ ...
    ಹಳೆಯ ನೆನಪುಗಳು ಹಸಿರಾಗಿರಲಿ... ..

    ಚಂದದ ಬರಹಕ್ಕೆ ಅಭಿನಂದನೆಗಳು...

    ReplyDelete
  4. bahala chennagi heliddeeri Sitaram saahebre !

    ReplyDelete
  5. "ಮೊದಲೇ ಸಿಕ್ಕಾಪಟ್ಟೆ ನಾಚಿಕೆ ಸ್ವಭಾವದ ಹುಡುಗ"....???????

    "ಬಾಳ ಪಯಣದಲ್ಲಿ ನನ್ನ ಜೊತೆ ಬಸ್ಸಿನಲ್ಲಿ ಪಯಣಿಸಿದ ಆ ಸುಂದರವಾದ ಹುಡಿಗಿಯನ್ನು ಇನ್ನೊಮ್ಮೆ ನೋಡಬೇಕೆನಿಸುತಿದೆ"....ee blog post nodi khanditaa bartaale:))..

    ReplyDelete
  6. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬನ ಮುಂದಿನ ಸೀಟಿನಲ್ಲಿ ಒಬ್ಬ ಅಜ್ಜ ಮತ್ತು ಅವರ ಪಕ್ಕ ಚೆಂದದ ಯುವತಿ ಕುಳಿತಿದ್ದಳು.ಯುವಕ ಮುಂದಿನ ಸೀಟಿನ ಅಡಿಯಲ್ಲಿ ಮೃದುವಾದ ಕಾಲುಗಳ ಸ್ಪರ್ಶ ಸುಖ ಸವಿಸುತ್ತಾ ಸ್ವರ್ಗ ಸುಖ ಅನುಭವಿಸುತ್ತಿದ್ದ.ಮುಂದಿನ ಸ್ಟಾಪೊಂದರಲ್ಲಿ ಅಜ್ಜ ಇಳಿಯಬೇಕಾದಾಗ ಅವರು ಯುವಕನಿಗೆ'youngman, your idea was fine,but the leg was mine'ಎಂದರು.ಯುವತಿ ಮುಸಿ ಮುಸಿ ನಗುತ್ತಿದ್ದಳು.

    ReplyDelete
  7. ಕೋಲು-ಕಾಲು ಗಳ ವ್ಯತ್ಯಾಸವರಿಯದೇ ಹೋಯಿತಲ್ಲ ತಮ್ಮ. ತು೦ಬಾ ಚೆನ್ನಾಗಿದೆ ಬರಹ.

    ReplyDelete
  8. ಬರೀ ಇದೆ ಅಯ್ತಲ್ಲೋ ಶಿಷ್ಯ.. :-) ಹ ಹ

    ReplyDelete
  9. hahaha nice one tammayya... chennagi barediddeeya..

    ReplyDelete
  10. ಹಹಾಹಹ....ಮಸ್ತ್ ಆಗಿತ್ತು...ನಿನ್ನ ಅನುಭವ...

    ReplyDelete
  11. shivprakaash,
    avala adress kodu.... khandita avalige tiLisi ninna hattira kaLisuttene.... hha hhaaa..


    chennaagide niroopaNe...

    ReplyDelete
  12. anubhava chennagi vivarisiddira, aa bejaaru innu kaadtaa idya?

    ReplyDelete
  13. ಅಯ್ಯೋ ಪಾಪ.. ನಿಮ್ಮ ಮನ ಕಾಡುತ್ತಿರುವ ಆ ಚೆಲುವ ಮಲ್ಲಿಗೆ ಹೂ ಇನ್ನೊಮ್ಮೆ ನಿಮಗೆ ನೊಡಲಾದರೂ ಸಿಗಲಿ ಅಂತ ಹಾರೈಸ್ತೀನಿ...

    ReplyDelete
  14. ಶಿವೂ ಬಸ್ ಪಯಣ ಚೆನ್ನಾಗಿತ್ತು.ನಾಚಿಕೆ ಸ್ವಭಾವದ ಹುಡುಗನಿಗೆ ಇಳಿದು ಹೋದ ಹುಡುಗಿಯನ್ನು ಹುಡುಕಿ ಕೊಡಬೇಕೇ ಬೇಕಿದ್ದರೆ ಹೇಳಿ ಸಹಾಯ ಮಾಡುವೆ.ನಮ್ಮ ಪಕ್ಕದ ಮನೆ ಹುಡುಗಿ ಇದೆ ಕತೆ ಹೇಳಿದ್ದಳು ಅವಳೇ ಇರಬಹುದಾ !!!!

    ReplyDelete
  15. ಪ್ಚ್....

    ಭೂಮಿ ದು೦ಡಗಿದೆ... ಸಿಕ್ಕೇ ಸಿಗುತ್ತಾಳೆ :)

    ReplyDelete
  16. ಶಿವೂ... ಆಕೆ ಆದಷ್ಟು ಬೇಗ ನಿಮಗೆ ಕಾಣಸಿಗಲಿ :-)

    ReplyDelete
  17. ನಾನು ನಿಮ್ಮ ಲೇಖನ ಓದ್ತಾ, ಹುಡಗಿ ಹೀಗೆ ಮಾಡೋಕೆ ಸಾಧ್ಯಾನ ಅಂತ ಓದ್ತಿದ್ದೆ... ಎಸ್ಟೆ ಆದರು ಹುಡಗರು ದುಡಕೋದು ಸಹಜಾ :(
    ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು :)

    ReplyDelete
  18. NIce story Shivu anna...

    ReplyDelete
  19. ravikumar maliAug 27, 2010 11:02 AM

    NIce story Shivu anna...

    ReplyDelete