Wednesday, August 18, 2010

ಹುಡುಗ ಹುಡುಗೀಯು ಟೆಲಿಫೋನ್ ಸಂಭಾಷಣೆ

ಮದುವೆಯಾಗಲಿರುವ ಹುಡುಗ ಹುಡುಗೀಯು ಟೆಲಿಫೋನ್ ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿರುತ್ತಾರೆ. ಮಾತನಾಡಲು ಅವರು ಬಳಸುವ ವಿಷಯವೇನು...?. ಏನೇನನ್ನು ಮಾತಾಡುತ್ತಾರೆ...? ಎನ್ನುವ ಕುತೂಹಲ ನಮ್ಮಂತಹ ಹುಡುಗರಿಗೆ ಇದ್ದೆ ಇರುತ್ತದೆ. ಮಾತನಾಡುವ ವಿಷಯವಿಲ್ಲದಿದ್ದರೂ ಹುಡುಗ ಹುಡುಗಿಯ ಮಧುರ ಧ್ವನಿ ಕೇಳುವ ಸಲುವಾಗಿಯೋ, ಅಥವಾ ಹುಡುಗಿ ಪ್ರಿಯಕರನ ಮೇಲಿನ ಪ್ರೀತಿಯಿಂದಲೋ ಸಂಭಾಷಣೆಯನ್ನು ಮುಂದುವರೆಸುತ್ತಿರುತ್ತಾರೆ.
ಸಾಮಾನ್ಯವಾಗಿ ಏನೇನು ಮಾತನಾಡಬಹುದು ಎಂದು ಅವರಿವರಿಂದ ತಿಳಿದುಕೊಂಡು ಕೆಳಗಿನ ಪಟ್ಟಿ ಮಾಡಿದ್ದೇನೆ.
1) ನೀವೇ ಹೇಳ್ಬೇಕು....
2) ಆಮೇಲೆ.....?
3) ನೀವು ತುಂಬ ತಮಾಷೆ ಮಾಡ್ತಿರಪ್ಪ...
4) ತರ್ಲೆ....
5) ಕೋತಿ...
6) ಮತ್ತೆ....
7) ಎಲ್ಲಿಗೆ ಹೋಗೋಣ...?
8) ಮನೆನಲ್ಲಿ ಯಾರು ಇಲ್ವಾ..? ಮಾತಾಡಬಹುದಾ...?
9) ಅತಿ ಆಡ್ತೀರಾ....
10) ಯಾಕೋ ಜಾಸ್ತಿ ಆಯ್ತು ನಿಮ್ದು....
11) ಛೀ ತುಂಟ...
12) ಹೇ ಕಳ್ಳ ನೀನು....
13) ಆಮೇಲೆ ಸಿಗು ಮಾಡ್ತೀನಿ ನಿನಗೆ....
14) ಹೋಗಿಪ್ಪ ನೀವೇನೇನೊ ಹೇಳ್ತೀರಾ.....
15) ಮನೇಲಿ ಎಲ್ಲರೂ ಇದ್ದಾರೆ. ಈಗ ಮಾತಾಡೋಕೆ ಆಗೊಲ್ಲ....(ಮೊಬೈಲ್ ಬರೋಕೆ ಮುಂಚೆ ಈಗಿತ್ತು)
16) ಈ ತರಹ ತರಲೆ ಮಾಡಿದ್ರೆ ಇನ್ನೊಂದಿನ ಬರೊಲ್ಲ ನಿನ್ನ ಜೊತೆ...
17) ನಿಮಗೆ ಮೀಸೆ ಇದ್ರೆನೆ ಚೆಂದ....
18) ಥೂ ಹೋಗಿಪಾ... ನನಗೆ ನಾಚಿಕೆ ಆಗುತ್ತೆ..
19) ಸಿಗರೇಟ್ ಸೇದುತ್ತೀರ ನೀವು...ಇಲ್ಲ ತಾನೆ....?
20) ಪ್ರಾಮಿಸ್ ಮಾಡಿ, ಇನ್ಮೇಲೆ ಸಿಗರೇಟ್ ಸೇದೊಲ್ಲ ಅಂತ...
21) ನಿನ್ನೆ ನೀವಾಕಿದ ಬ್ಲೂ ಷರ್ಟ್ ಚೆನ್ನಾಗಿತ್ತು....
22) ನಿನ್ನೆ ನೀನಾಕಿದ ಪಿಂಕ್ ಚೂಡಿ ನೂ ಚೆನ್ನಾಗಿತ್ತು....
23) ನಿನ್ನೆ ರಾತ್ರಿ ನಿದ್ದೆನೆ ಬರಲಿಲ್ಲ...
24) ನನಗೂ ಅಷ್ಟೇ ನಿದ್ದೆ ಬರಲಿಲ್ಲ...
25) ನಿದ್ದೆ ಬರಲಿಲ್ಲ ಅಂದ್ರೆ ದೇವರ ಜಪ ಮಾಡಬೇಕಿತ್ತು....
26) ನಿಮ್ಮ ಮನೆಯಲ್ಲಿ ಎನಾದರೂ ಕಾರಣ ಹೇಳಿ ಮಾಮುಲಿ ಜಾಗಕ್ಕೆ ಬಾ....

ಇಷ್ಟು ಸಾಕು ಅನ್ಸುತ್ತೆ....!!!

ಈ ಪಟ್ಟಿ ಮಾಡಲು ಅನೇಕರು ಸಹಕರಿಸಿದ್ದಾರೆ.. ಅದರಲ್ಲೂ ಸವಿಗನಸು ಬ್ಲಾಗಿನ ಮಹೇಶ್ ಅವರ ಕೊಡುಗೆ ಅಪಾರ. ಎಲ್ಲರಿಗೂ ಧನ್ಯವಾದಗಳು...

Share/Save/Bookmark

22 comments:

  1. ಚೆನ್ನಾಗಿದೆ ಶಿವೂ, ಇದರಲ್ಲಿ ನಿಮ್ಮ ಆಯ್ಕೆಯ, ನೀವು ಹೇಳಬಯಸುವ ಅಥವಾ ನಿಮ್ಮ ಹುಡುಗಿಯಿ೦ದ ಕೇಳಬಯಸುವ ಸ೦ಭಾಷಣೆ ಯಾವುದು?

    ReplyDelete
  2. ಶಿವೂ;ಸಖತ್ತಾಗಿವೆ ಸಂಭಾಷಣೆಗಳು.

    ReplyDelete
  3. hahaha tammayya..... collection madodralli maamana jotege baamaida sari ide jote haha good

    ReplyDelete
  4. ಸಕತ್ತಾಗಿದೆ ಕಲ್ಲೆಕ್ಷನ್ನು. ಇಂಥದ್ದೇ ಸಬ್ಜೆಕ್ಟ್ ಇಟ್ಕೊಂಡು Ph.D ಮಾಡಿ ಹ್ಹ ಹ್ಹ ಹ್ಹ

    ReplyDelete
  5. shivu...
    ivellaa 'SWEET NOTHINGS' ante.....
    koneyalli itta bomb sakkattaagide.... {help maaDidavaru mahesh sir anta}

    ReplyDelete
  6. ಶಿವು,
    ಸಾವಿರ ಸಲಾಮ್ ನಿಮಗೆ!

    ReplyDelete
  7. ಶಿವೂ ಸರ್


    ಬಹಳ ಸಂಶೋಧನೆ ಮಾಡಿರೋ ಹಾಗಿದೆ


    ತುಂಬಾ ಚೆನ್ನಾಗಿ ಹೇಳಿದ್ದಿರಾ :)

    ReplyDelete
  8. ಹಾ, ಹಾ, ಇದೆಲ್ಲ ಏನು ಇಲ್ಲ,,,, ಇನ್ನು ಬಹಳ ಉಂಟು,,,,, ಯಾಕೆ ಅಂದ್ರೆ,,, ಇವಾಗ ಇದನ್ನೇ ನಾನು ಅನುಭವಿಸುತ್ತ ಇರುವುದು..... :-)
    ಅದು ಎಕ್ಷ್ಪ ಅದಾಗಲೇ ಗೊತ್ತಾಗೋದು ,,,,,,, ಹೌದು ಈ ಡೌಟ್ ಯಾಕೆ ಬಂತು ನಿಮಗೆ ಇವಾಗ........

    ReplyDelete
  9. ಹಾಯ್ , ಶಿವು ಮೊದಲ ಬೇಟಿ ನಿಮ್ಮಲ್ಲಿಗೆ .. ತುಂಬಾ ಚೆನ್ನಾಗಿದೆ ಈ ಸಂಭಾಷಣೆ

    ReplyDelete
  10. ಪರ್ವಾಗಿಲ್ವೆ..ಚೆನ್ನಾಗಿದೆ :-)

    ReplyDelete
  11. simle super ಕಣ್ರೀ ಹುಡುಗ ಹುಡುಗಿ ಮಾತಾಡೋದನ್ನ ನೀವೂ ಯಾವಾಗ ಕದ್ದು ಕೇಳಿಸಿಕೊಂಡಿರಿ ...!!! ಇನ್ನೂ ಜಾಸ್ತಿ ಮಾತಾಡ್ತಾರೆ ಯಪ್ಪಾ ಏನೂ ವಿಷ್ಯನೇ ಇರೋಲ್ಲ ಅದರೊ ಗಂಟೆ ಘತ್ತಲೇ ಮಾತಾಡ್ತಾರೆ ನಾನು ಟ್ರೈ ಮಾಡಿದ್ದಿನಿ ಕೆಲ್ಸ್ಕೊಲ್ಲೋಕೆ ಆಗಿಲ್ಲ ಪ . ishtu channagi bareda nimage ನನ್ನ ಹೃದಯಪೂರ್ವಕ ವಂದನೆ .
    ಬಿಡುವು ಮಾಡಿಕೊಂಡು ಒಮ್ಮೆ ನನ್ನವಳಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ

    SATISH N GOWDA
    ನನ್ನ ಸ್ನೇಹಲೋಕ (orkut)
    satishgowdagowda@gmail.com
    nannavalaloka (blog)
    http://nannavalaloa.blogspot.com

    ReplyDelete
  12. ಎಂಥಹ ಅದ್ಬುತ ಅನುಭವದ ಮಾತುಗಳು !!!

    ReplyDelete
  13. ಹೂಂ, ತುಂಬಾ ಅನುಭವ ಇರುವ ಹಾಗಿದೆ ಶಿವು

    ReplyDelete