
ಗೆಳೆಯ,
ನೆನಪಿನ ಪುಟದಲಿ ಜೊತೆಯಾದ ನೀನು,
ನೋವು ನಲಿವಿನಲ್ಲಿ ಬಾಗಿಯಾದೆ,
ನಿನ್ನ ಸ್ನೇಹಕ್ಕೆ ನಾ ಎಷ್ಟು ಹುಚ್ಚಿಯಾಗಿರುವೆಯೆಂದರೆ,
ನಿನ್ನ ನೆನಪಿಸದ ದಿನ ಕ್ಷಣವಿಲ್ಲದಾಗಿದೆ.
ನೋವಲ್ಲಿ ಸಾಂತ್ವನ ಹೇಳಿದೆ,
ಖುಷಿಯಲಿ ಬಾಗಿಯಾದೆ,
ಉಸಿರಾಡುವ ಉಸಿರಾದೆ,
ನನ್ನೆಲ್ಲ ಕಷ್ಟ ಸುಖಗಳು ನಿನ್ನದೆಂದುಕೊಂಡು.
ನಿನ್ನೀ ಸ್ನೇಹಕೆ ಮಾರುಹೋದೆ,
ಸ್ನೇಹ ನನಗರಿವಿಲ್ಲದೆ ಪ್ರೀತಿಯಾಗಿಬಿಟ್ಟಿದೆ,
ಪ್ರೀತಿಯ ಈ ವೇದನೆ, ಹಿತವಾಗಿದೆ,
ಸದಾ ನಿನ್ನ ಜೋತೆಯಲಿರಬೇಕೆನ್ನುವ ಆಸೆ ಮೂಡಿಸಿದೆ,
ಅದೆಸ್ಟೋ ಬಾರಿ ನಿನ್ನಲ್ಲಿ ಹೇಳಿಕೊಳ್ಳೋಣವೆಂದು ಬಂದೆ,
ನಿನ್ನ ಮಾತುಗಳನ್ನು ಕೇಳುತ್ತಾ,
ಹೇಳುವುದನ್ನು ಮರೆತೇನೋ,
ಅಥವಾ ಹೇಳಲಾಗದೆ ಹೋದೇನೋ,
ಅಥವಾ ಹೇಳಿದರೆ, ಇರುವ ನಿನ್ನ ಈ ಹಿತವಾದ ಸ್ನೇಹವ ದೂರ ಮಾಡಿಕೊಳ್ಳುವೆನೆಂದೋ,
ಹೇಳದೆ ಹೋದೆ.
ಅಂದೊಂದು ದಿನ ನೀ,
ತುಂಬ ಸಂತೋಷದಿಂದ ಓಡಿ ಬಂದು,
ನಿನ್ನ ವಿವಾಹ ಆಮಂತ್ರಣ ಪತ್ರ ನನ್ನ ಕೈಗಿಟ್ಟೆ,
ಅದ ನೋಡಿ ನನಗರಿವಿಲ್ಲದೆ ಕಣ್ಣಹನಿಯೊಂದು ಜಾರಿಬಿಟ್ಟಿತು.
ನೀ "ಯಾಕೀ ಕಣ್ಣಿರು" ಎಂದೆ,
"ನೀ ಮದುವೆಯಾದಮೇಲೆ ದೂರವಾಗುವೆಯಲ್ಲ...?" ಎಂದು ನಾನೆಂದೆ,
ಅದಕೆ ನೀ "ಅಯ್ಯೋ ಪೆದ್ದಿ, ನಾನು ಹೇಗೇ ಇದ್ದರು, ಎಲ್ಲೇ ಇದ್ದರು ನಿನ್ನ ಗೆಳೆಯನಲ್ಲವೇ..?" ಎಂದೆ.
ತಡೆದುಕೊಳ್ಳಲಾಗದೆ ನಿನ್ನ ತಬ್ಬಿಕೊಂಡು ಒಂದೇ ಸಮನೆ ಅತ್ತುಬಿಟ್ಟೆ,
ಆಗಲೂ ನಿನಗರ್ಥವಾಗಲಿಲ್ಲವಲ್ಲ ಗೆಳೆಯ....
ಇಂತಿ,
ನಿನ್ನ ಪ್ರೇಯಸಿಯಾಗಲಿಚ್ಚಿಸಿದ್ದ ಗೆಳತಿ
:-( "ಬಾಯಿ ಬಿಟ್ಟು ಹೇಳ್ಬೇಕ್ರಿ ಕೆಲವು ಹುಡುಗರಿಗೆ... ಕೂಗಿ ಕೂಗಿ ಹೇಳಬೇಕು. ಅವಾಗಲೇ ಅವರಿಗೆ ಕೇಳಿಸೋದಂತೆ"- ಅಮೆರಿಕ ಅಮೆರಿಕೆ ಮೂವಿ dialouge ...:-)
ReplyDeletenice
ReplyDeletecooool...... very nice shipra.....
ReplyDeletedivya heLiddu sariyide....
very nice nenapu...... konege eenaaytu....
ಪ್ರೀತಿಸುವ ಒಮ್ಮುಕ ಗೆಳತಿಯ ಮನದಾಳವನ್ನ ತುಂಬಾ ಚೆನ್ನಾಗಿ ಕಲ್ಪಿಸಿ ಬರೆದಿದ್ದಿರಾ... ಆದರೆ ಮದುವೆ ಕಾರ್ಡ್ ಕೊಡಬೇಡಿ.
ReplyDeleteತುಂಬಾ ಚೆನ್ನಾಗಿದೆ!
:(..
ReplyDeleteಬರೆದ ಶೈಲಿ ಚೆನ್ನಾಗಿದೆ.
ಏಕಮುಖ ಸಂಚಾರದ ಭಾವನೆಗಳು ಚೆನ್ನಾಗಿ ಬಂದಿದೆ. ಈ ಪ್ರೀತಿ ಒಂಥರಾ...
ReplyDeleteAnthu Inthu Kavana bareyoku shuru madide annu..
ReplyDeleteparvaagilla.. chennagide shivu..
ಕವಿತೆ ಚೆನ್ನಾಗಿದೆ.ಹುಡುಗಿಯೊಬ್ಬಳ ಮನಸಿನ ಹೇಳಲಾಗದ ಮನಸ್ಸಿನ ತುಮುಲಗಳ ಭಾವನೆಗಳು ಕವಿತೆಯಾಗಿ ಹೊಮ್ಮಿದೆ.
ReplyDeleteNice!
ReplyDeletevery nice....
ReplyDeleteಶಿವೂ..ತುಂಬಾ ಚೆನ್ನಾಗಿದೆ..ಹುಡುಗಿಯರು ಹೀಗ್ ಇರ್ತಾರ..??!
ReplyDeleteನಿಮ್ಮವ,
ರಾಘು.
ಶಿವಪ್ರಕಾಶ ,
ReplyDeleteಈ ಪ್ರೀತಿ ಒಂಥರಾ ........ ನಿಜ ಕೆಲವೊಮ್ಮೆ ಯಾರ ಮನಸ್ಸಿನಲ್ಲಿ ಏನಿದೆ ಅನ್ನುವುದು ಅರಿವಾಗುವುದೇ ಇಲ್ಲ..
ಹುಡುಗಿಯ ಮನದ ಮಾತನ್ನು ಚೆನ್ನಾಗಿದೆ ವ್ಯಕ್ತ ಪಡಿಸಿದ್ದೀರಾ ,,,
ತುಂಭಾ ಮೋಹಕವಾಗಿದೆ
ReplyDeletechennagide.. nice one
ReplyDeleteNICE ONE GO AHEAD
ReplyDeleteಶಿವು,
ReplyDeleteಹುಡುಗಿಯ ಮನಸ್ಸಿನ ಭಾವನೆಗಳುಚೆನ್ನಾಗಿ ವ್ಯಕ್ತವಾಗಿವೆ...ಹುಡುಗಿಯರು ಹೀಗೆ ಇರ್ತಾರ ಅಂತ ರಾಘು ಕೇಳಿದ್ದು...ಇನ್ನೂ ಹೇಗೇಗೋ...............ಇರುತ್ತಾರೆ...ಕಷ್ಟ.
good one:-)
ReplyDeleteಚೆನ್ನಾಗಿ ಬರ್ದಿದ್ದೀರಿ
ReplyDeleteಸರ್
ReplyDeleteತುಂಬಾ ಚೆನ್ನಾಗಿ ಬರೆದಿದ್ದಿರಾ
Hii Shivu,
ReplyDeleteChennagide nimma kavana, bareda shali ista aitu.....
omme illi bheti kodi....
http://ashokkodlady.blogspot.com/
Very cool photography style, very unique work.. sailing through your blog is wonderful although I don't understand any of the words... the pictures tell it all.
ReplyDeleteI invite you to follow my blog if you like.
http://cwwongphotography.blogspot.com/
tumba chennagide nimma kavana :)
ReplyDeleteನಿಜವಾಗಲೂ ಚೆನ್ನಾಗಿದೆ ಶಿವು, ಸ್ನೇಹ ಪ್ರೀತಿಯಾಗುತ್ತೆ ಕೆಲವೊಮ್ಮೆ ಅದನ್ನ ಹೇಳಿಕೊಳ್ಳಲಾಗದಂತ ಪರಿಸ್ಥಿತಿಯೂ ಇರುತ್ತೆ ..... ತುಂಬಾ ಚೆನ್ನಾಗಿದೆ ಹೀಗೆ ಬರಿತಾ ಇರು........
ReplyDelete