Friday, November 19, 2010

ನನ್ನವಳು



ಹತ್ತಿರ ಬಂದರೆ ದೂರ ಹೋಗುವವಳು,
ದೂರ ಹೋದರೆ ಹತ್ತಿರ ಬರುವವಳು,

ಮಾತನಾಡಿಸಿದರೆ ಮೌನವಾಗುವವಳು,
ಮೌನವಾಗಿದ್ದರೆ ಮಾತನಾಡಿಸುವವಳು....

ಹಾಡಿ ಕುಣಿದು ನಕ್ಕು ನಲಿಯುತ ನಾನಿದ್ದೆ,
ಸದ್ದಿಲ್ಲದೇ ಬಂದು ಹೃದಯ ಕದ್ದವಳು,

ಬೇಡ ಬೇಡವೆಂದುಕೊಂಡಸ್ಟು ಬೇಕೆನಿಸುವವಳು,
ಪ್ರೀತಿಯ ಸಿಹಿಕಹಿ ಉಣಬಡಿಸುವವಳು,

ನನ್ನ ಪ್ರಶ್ನೆಗಳಿಗೆ ಪ್ರಶ್ನಾರ್ಥಕವಾದವಳು,
ಅರ್ಥಮಾಡಿಕೊಂಡಸ್ಟು ಅರ್ಥವಾಗದವಳು

ಇವಳು ನನ್ನವಳು, ಇವಳು ನನ್ನವಳು,
ನಿಂತ ನೀರಲ್ಲಿ ಸುನಾಮಿ ಎಬ್ಬಿಸಿದವಳು,

ನನ್ನವಳ ನನ್ನವ,
ಶಿವಪ್ರಕಾಶ್
Share/Save/Bookmark

11 comments:

  1. ಶಿವಪ್ರಕಾಶ ಎಲ್ಲೊ ಕಳೆದು ಹೋಗಿದ್ದಾರೆ ಅಂದ್ಕೊಂಡಿದ್ದೆ. ಈ ಕವನ ಓದಿದಾಗ ಎಲ್ಲಿ ಅಂತ ಗೊತ್ತಾಯ್ತು!

    ReplyDelete
  2. ಒಂತರಾ ಹೊಸದಾಗಿದೆ....ನೈಜತೆಗೆ ತುಂಬಾ ಹತ್ತಿರ ಎನಿಸುತ್ತಿದೆ..

    "ಇವಳು ನನ್ನವಳು, ಇವಳು ನನ್ನವಳು,
    ನಿಂತ ನೀರಲ್ಲಿ ಸುನಾಮಿ ಎಬ್ಬಿಸಿದವಳು"
    ನನಗಿಷ್ಟವಾದ ಸಾಲುಗಳು...

    "ಪ್ರೀತಿಯ ಸಿಹಿಕಹಿ ಉಣಬಡಿಸುವವಳು"ಇನ್ನು,

    ಆದರೆ ಪ್ರೀತಿಯಲ್ಲಿನ ಕಹಿಯ ಅನುಭವ ಆಗದಿರಲಿ ಎಂದು ಬಯಸುತ್ತೇನೆ.
    ಬನ್ನಿ ನಮ್ಮನೆಗೂ,
    chinmaysbhat.blogspot.com

    ReplyDelete
  3. ಇಷ್ಟು ದಿನ ನಾಪತ್ತೆ ಆಗಿದ್ದಕ್ಕೆ ಕಾರಣ ಗೊತ್ತಾಯ್ತು ಬಿಡಿ ಶಿವು :)

    ReplyDelete
  4. ಇವಳು ನನ್ನವಳು, ಇವಳು ನನ್ನವಳು,
    ನಿಂತ ನೀರಲ್ಲಿ ಸುನಾಮಿ ಎಬ್ಬಿಸಿದವಳು,

    ಶಿವೂ ರವರೆ ಈ ಎರಡು ಸಾಲುಗಳು ನನ್ನ ಮನಸ್ಸಿಗೆ ತುಂಬಾ ಇಷ್ಟವಾದವು ಕವಿತೆಯಲ್ಲಿನ ಸಾಲುಗಳು ಚನ್ನಾಗಿ ಜೋಡಣೆ ಮಾಡಿದ್ದೀರಾ ಇಷ್ಟು ದಿನ ಎಲ್ಲಿ ಹೋಗಿದ್ರಿ ಮಾರಾಯ್ರೆ ...

    ReplyDelete
  5. superb poem m loving it...

    ReplyDelete
  6. ಸುನಾಮಿ ಎಬ್ಬಿಸಿದ ನಿನ್ನವಳು ಚೆನ್ನಾಗಿದ್ದಾಳೆ..ಅದಕ್ಕೆ ಹಾಗೆ ಕುಳಿತದ್ದಾ!!!!
    ಪಾಪ ಹಾಗೆ ಆಗಬಾರದಿತ್ತುನಿನಗೆ ....
    ಯಾರು ಅಂತ ಹೇಳು ನಾನು ಒಂದು ಮಾತು ಹೇಳಿ ನೋಡ್ತೀನಿ ಆಯ್ತಾ???

    ReplyDelete
  7. hahaha... nannge gottu bidu tamma... svlpa wait maadu oLLe time barutte ninngu

    ReplyDelete
  8. ade ankonde elli kaledu hogiddare?anta eega gottaaytu sunaami inda surakshitavaagiddira.tumbaa chennaagide kavana.dhanyavaadagalu.kalaravavannu alisalu saadhyave...? dhanyavaadagalu.

    ReplyDelete