Tuesday, June 29, 2010

ಹೊಗೆನಿಕಲ್ ಜಲಪಾತ

ಮೊನ್ನೆ ಶನಿವಾರ ಹೊಗೆನಿಕಲ್ ಜಲಪಾತ ನೋಡಲು ನಾವು ಸ್ನೇಹಿತರೆಲ್ಲ ಸೇರಿ ಹೋಗಿದ್ದೆವು. ಈ ಪ್ರವಾಸದ ಬಗ್ಗೆ ಹೆಚ್ಚಾಗಿ ಬರೆಯದೆ ಸುಮ್ಮನೆ ಅಲ್ಲಿ ನಾವು ತೆಗೆದ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ.








ಪ್ರವಾಸದ ದಿನಾಂಕ: ೨೬ ಜೂನ್ ೨೦೧೦ ಶನಿವಾರ.
ನಾವು ಹೋಗಿಬಂದ ಮಾರ್ಗ: ಬೆಂಗಳೂರು -> ಹೊಸೂರು -> ಹೊಗೆನಿಕಲ್. ಇಲ್ಲಿಗೆ ಕೊಳ್ಳೇಗಾಲದ ಮುಖಾಂತರವು ಹೋಗಿಬರಬಹುದು.
ನದಿಯ ಹೆಸರು: ಕಾವೇರಿ. (ನದಿಯ ಒಂದು ಕಡೆ ಕರ್ನಾಟಕ. ಇನ್ನೊಂದು ಕಡೆ ತಮಿಳುನಾಡು ಇದೆ.)
ದೂರ: ೧೮೦ ಕಿಲೋಮೀಟರು.
ವಾಹನ: ಕ್ವಾಲಿಸ್.
ನಮ್ಮ ಟೀಮ್: ನಾನು (ಶಿವಪ್ರಕಾಶ್), ರಘು, ಮಂಜು, ರಾಮು, ನಿಶಾ, ಸುಷ್ಮಾ.
ಸ್ಥಳದ ಮಾಹಿತಿ: http://en.wikipedia.org/wiki/Hogenakkal_Falls ಗೆ ಭೇಟಿ ಕೊಡಿ.

ಈ ಪ್ರವಾಸ ತುಂಬಾ ಚನ್ನಾಗಿತ್ತು. ನೀರಿನಲ್ಲಿ ಈಜಾಡಿದ್ದು, ತೆಪ್ಪದಲ್ಲಿ ಹೋಗಿದ್ದು. ಇನ್ನೊಂದು ತೆಪ್ಪದಲ್ಲಿ ಬಂದ ಮೊವಿಂಗ್ ರೆಸ್ಟೋರೆಂಟ್ ನಲ್ಲಿ ಖರೀದಿ ಮಾಡಿದ್ದು (ಮೇಲಿನ ಚಿತ್ರ ನೋಡಿ). ಸತ್ತು ಬಿದ್ದಿದ್ದ ಮೀನುಗಳಿಂದ ಬಂದ ವಾಸನೆಯಿಂದ ಮೂಗು ಮುಚ್ಚಿಕೊಂಡಿದ್ದು. ಎಲ್ಲರೂ ಸೇರಿ ಹರಟೆ ಹೊಡೆದಿದ್ದು. ನಮ್ಮ ನಮ್ಮ ಸಂತೋಷದ ಹಾಗು ಉಲ್ಲಾಸದ ನೆನಪುಗಳನ್ನು ನೆನಪಿಸಿಕೊಂಡಿದ್ದು. ಒಬ್ಬರನ್ನೊಬ್ಬರು ಚೂಡಯಿಸಿದ್ದು. ರಸ್ತೆ ಮಧ್ಯದಲ್ಲಿ ಕುಳಿತು ಫೋಟೋ ತೆಗಿಸಿಕೊಂಡಿದ್ದು. ಒಟ್ಟಿನಲ್ಲಿ ಇದು ನನ್ನ ನೆನಪಿನ ಪುಟಗಳಲ್ಲಿ ಒಂದು ಮರೆಯಲಾರದ ದಿನ.
Share/Save/Bookmark

Tuesday, June 15, 2010

ಬಾಗಲಕೋಟೆ ಪ್ರವಾಸ

ನಾವೆಲ್ಲರೂ ಸೇರಿ ಇತ್ತೀಚಿಗೆ ಸ್ನೇಹಿತರ ಮದುವೆಗಳ ಪ್ರಯುಕ್ತ ಬಾಗಲಕೋಟೆಗೆ ಹೋಗಿದ್ದೆವು. ಹಾಗೆ ಹತ್ತಿರವಿರುವ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಬನಶಂಕರಿ, ಮಹಾಕೂಟ, ಪಟ್ಟದಕಲ್ಲು, ಐಹೊಳೆಗೆ ಸಹ ಹೋಗಿಬಂದೆವು. ನಿಜಕ್ಕೂ ಎಂತಹ ಅದ್ಭುತ ಸ್ಥಳಗಳು. ಜೀವನದಲ್ಲಿ ಒಮ್ಮೆಯಾದರು ನೋಡಲೇಬೇಕು.

ಬಾದಾಮಿ:
ವಾತಾಪಿ (ಇಂದಿನ ಬಾದಾಮಿ) ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯ ವಂಶವು ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ. ವಾಸ್ತುಶಿಲ್ಪ ಮತ್ತು ಕಲೆಗೆ ಚಾಲುಕ್ಯ ಸಾಮ್ರಾಜ್ಯದ ಕೊಡುಗೆ ಅಪಾರ.



ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು. ಗುಡ್ಡದ ಕಲ್ಲು ಬಾದಾಮಿ ಪದಾರ್ಥದ ಬಣ್ಣವನ್ನು ಹೋಲುವುದರಿಂದ ಈ ಸ್ಥಳಕ್ಕೆ ಬಾದಾಮಿ ಎಂದು ಹೆಸರು ಬಂತು ಎಂದು ಕೆಲವು ಮೂಲಗಳ ಪ್ರಕಾರ ಹೇಳಲಾಗಿದೆ. ಚಾಲುಕ್ಯರು ಮೂಲತ ವೈಷ್ಣವರು, ನಂತರ ಅವರು ಶೈವಧರ್ಮಕ್ಕೆ ಮತಾಂತರಗೊಂಡರು.


ಹರಿಹರರ ಚಿತ್ರದ ಹಾಗೆ ಪಕ್ಕದಲ್ಲಿನ ಈ ಚಿತ್ರದಲ್ಲಿ ಅವರ ಆನೆ-ನಂದಿ ವಾಹನಗಳನ್ನು ಕೂಡ ಹೊಂದಿಸಿ ಈ ಚಿತ್ರವನ್ನು ಕೆತ್ತಿದ್ದಾರೆ. ವಿಷ್ಣುವಿನ ವಾಹನ ಗರುಡ ಪಕ್ಷಿ, ಆದರೆ ಅದಕ್ಕೂ ಮುಂಚೆ ವಿಷ್ಣುವಿನ ವಾಹನ ಆನೆಯಾಗಿತ್ತಂತೆ.


ಈ ಚಿತ್ರದಲ್ಲಿ ಶಿವನ ವಾಹನವಾದ ನಂದಿಯ ಮೇಲೆ ಶಿವಪಾರ್ವತಿ ಕುಳಿತುಕೊಂಡಿದ್ದಾರೆ. ಪಾರ್ವತಿ ಈ ಚಿತ್ರದಲ್ಲಿ ಇಂದಿನ ಕಾಲದ ಹುಡುಗೀರು ತಮ್ಮ ಬಾಯ್ ಫ್ರೆಂಡ್ ಗಾಡಿ ಓಡಿಸುವಾಗ ಹಿಂದೆ ಕುಳಿತುಕೊಳ್ಳುವ ಶೈಲಿಯಲ್ಲಿ ಕುಳಿತುಕೊಂಡಿರುವುದು ವಿಶೇಷ.

ಪಟ್ಟದಕಲ್ಲು:


ಐಹೊಳೆ:

ನಮ್ಮ ದೇಶದ ಲೋಕಸಭೆಯ ಕಟ್ಟಡವು ಐಹೊಳೆಯಲ್ಲಿನ ಈ ದುರ್ಗಾ ದೇವಾಲಯವನ್ನು ಹೋಲುತ್ತದೆ.


ಚಾಲುಕ್ಯರ ಲಾಂಛನ. ಈ ಲಾಂಛನದಲ್ಲಿ ವರಾಹವನ್ನು ಕಾಣಬಹುದು. ವರಾಹ ಅವತಾರ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದೆನಿಸಿದೆ. ಅವರ ನಾಣ್ಯದಲ್ಲಿ ವರಾಹ ಇದ್ದುದರಿಂದ, ಅವರು ನಾಣ್ಯವನ್ನು ವರಾಹ ಎನ್ನುತ್ತಿದ್ದರು. ನೀವು ಕೂಡ ಕೇಳಿರಬಹುದು. ಉದಾಹರಣೆಗೆ: ರಾಜನು ನೂರು ವರಹಗಳನ್ನು ಕಾಣಿಕೆಯಾಗಿ ಕೊಟ್ಟನು.

ಹೆಚ್ಚಿನ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ
ಚಾಲುಕ್ಯ Chalukya dynasty ಬಾದಾಮಿ ಪಟ್ಟದಕಲ್ಲು ಐಹೊಳೆ
Share/Save/Bookmark

Monday, June 7, 2010

ಬಾ ಮಳೆಯೇ ಬಾ

ಬಿ.ಆರ್. ಲಕ್ಷ್ಮಣರಾವ್ ಅವರು ಬರೆದ "ಬಾ ಮಳೆಯೇ ಬಾ" ನಮ್ಮೆಲ್ಲರಿಗೂ ತುಂಬಾ ಇಷ್ಟವಾದ ಹಾಡು. ಸೋನುನಿಗಮ್ ಕೂಡ ಆ ಹಾಡನ್ನು ತುಂಬ ಸೊಗಸಾಗಿ ಹಾಡಿ, ನಮ್ಮ ಮನದಲ್ಲೇ ಉಳಿಯುವಂತೆ ಮಾಡಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳು.

ಅದೇನೋ ಗೊತ್ತಿಲ್ಲ. ಕೆಲವು ಹಾಡುಗಳು, ನನಗೆ ಬರುವ ಸನ್ನಿವೇಶಕ್ಕೆ ತಕ್ಕಂತೆ ನನ್ನ ಬಾಯಲ್ಲಿ ಬದಲಾಗುತ್ತಿರುತ್ತವೆ. ಹಾಗೆ ಈ ಹಾಡಿನ ಕೆಲವು ಸಾಲುಗಳು ಆಫೀಸ್-ಮನೆ ನಡುವೆ ನನ್ನ ಬಾಯಲ್ಲಿ ಬದಲಾದ ಬಗೆ ನೋಡಿ.

Manager: ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನಮ್ಮ Employees ಆಫೀಸಿಗೆ ಬರಲಾರದಂತೆ
ಅವರಿಲ್ಲಿ ಬಂದೊಡನೇ, ಬಿಡದೇ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, ಹಿಂತಿರುಗಿ ಹೋಗದಂತೆ, ಬಿಡದೇ ಬಿರುಸಾಗಿ ಸುರಿ

Employee: ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನಾನು ಆಫೀಸಿನಿಂದ ಮನೆಗೆ ಬರಲಾರದಂತೆ
ನಾ ಮನೆಗೆ ಬಂದೊಡನೇ, ಬಿಡದೇ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, (ನಾಳೆ ಆಫೀಸಿಗೆ) ಹಿಂತಿರುಗಿ ಹೋಗದಂತೆ, ಬಿಡದೇ ಬಿರುಸಾಗಿ ಸುರಿ

Employee ಹೆಂಡ್ತಿ: ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಕಾದಿಹೆನು ಮನೆಯಲ್ಲಿ, ಅವರಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು, ಮತ್ತೆ ನಾಳೆಯಾಗದಂತೆ.

ಇದಕ್ಕೆ ನಿಮ್ಮ ಕ್ಷಮೆಯಿರಲಿ....

ಇಂತಿ ನಿಮ್ಮ ಪ್ರೀತಿಯ
ಶಿವಪ್ರಕಾಶ್.

Share/Save/Bookmark