ಅಂದು ಭಾನುವಾರ, ನನ್ನ ತಂದೆ ತಾಯಿಯೊಂದಿಗೆ ಅವಳನ್ನು ನೋಡಲು, ಅವಳ ಊರಿಗೆ ಹೋಗಿದ್ದೆ. ಅವರ ಮನೆಯಲ್ಲಿ ಹುಡುಗಿ ನೋಡುವ ಶಾಸ್ತ್ರಕ್ಕೆ ವೇದಿಕೆ ಸಿದ್ಧವಾಗಿತ್ತು. ಅವಳ ತಂದೆ, ತಾಯಿ, ಅವಳ ತಮ್ಮ ಹಾಗು ಅವಳ ಬಂಧುಗಳು ನಮ್ಮನ್ನು ಆದರದಿಂದ ಬರಮಾಡಿಕೊಂಡರು. ನಮ್ಮನ್ನು ಸೋಫಾದ ಮೇಲೆ ಕೂರಿಸಿದರು.
ನಾವು ತಂದ ಹೂವು, ಹಣ್ಣು ಹಾಗು ಶಾಸ್ತ್ರಕ್ಕಾಗಿ ಒಯ್ಯುವ ಕೆಲವು ಸಾಮಗ್ರಿಗಳನ್ನು ಅವರಿಗೆ ಕೊಟ್ಟೆವು. ಸ್ವಲ್ಪ ಸಮಯದ ನಂತರ ಹುಡುಗಿಯ ತಂದೆ "ಹುಡುಗಿಯನ್ನು ಕರೆಸೋಣವ?" ಎಂದರು. "ಹಾ ಕರೆಯಿಸಿ" ಎಂದರು ನನ್ನ ತಂದೆ.
ಹಸಿರು ಸೀರೆ, ಹಣೆಯಲ್ಲಿ ಚಿಕ್ಕದಾದ ಕುಂಕುಮದ ಬಟ್ಟು, ಎರಡು ಕೈಗಳಲ್ಲಿ ನಾಲ್ಕು ನಾಲ್ಕು ಬಳೆಗಳು, ಎಡಗೈಯಲ್ಲಿ ಸುಂದರವಾದ ಚಿಕ್ಕದಾದ ವಾಚು, ಕಿವಿಯಲ್ಲಿ ಬೆಂಡೋಲೆ ಇವುಗಳ ನಡುವೆ ಕಂಗೊಳಿಸುವ ಅವಳ ಕಣ್ಣುಗಳು, ಸುಂದರವಾದ ಅವಳ ಮುಖ. ಅವಳನ್ನು ಕರೆತಂದು ನನ್ನ ಮುಂದೆ ಇರುವ ಒಂದು ಕುರ್ಚಿಯ ಮೇಲೆ ಕೂರಿಸುವುದರೊಳಗೆ ನಾನವಳಿಗೆ ಮನಸು ಕೊಟ್ಟುಬಿಟ್ಟಿದ್ದೆ. ....
ಹುಡುಗಿಯನ್ನು ಏನಾದ್ರು ಕೇಳುವುದಿದ್ದರೆ ಕೇಳಿ ಎಂದು ಹುಡುಗಿಯ ತಂದೆ, ನನ್ನ ತಂದೆಗೆ ಹೇಳಿದರು.
ಆಗ ನನ್ನ ತಂದೆ, ನಿನ್ನ ಹೆಸರು ಏನಮ್ಮ ? ಎಂದರು.
ಅವಳು ಸಣ್ಣ ಧ್ವನಿಯಲ್ಲಿ "ಸುಮ" ಎಂದಳು.
"ಹೆದರಬೇಡ, ಸ್ವಲ್ಪ ಜೋರಾಗಿ ನಿನ್ನ ಹೆಸರು ಹೇಳು, ನಾವ್ಯಾರು ಹುಲಿಗಳಲ್ಲ" ಎಂದರು ನಮ್ಮ ತಂದೆ.
ಮುಗುಳ್ನಗುತ್ತ ಸ್ವಲ್ಪ ಮೇಲುಧ್ವನಿಯಲ್ಲಿ "ಸುಮ" ಎಂದಳು.
ನಾನಂತೂ ಸುಮ್ಮನೆ ಏನು ಮಾತಾಡದೆ ಸ್ವಲ್ಪ ಹೆದರಿಕೆಯಿಂದಲೇ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೆ. ಅವಳು ಕೂಡ ನನ್ನನ್ನು ಕದ್ದು ಕದ್ದು ನೋಡುವುದನ್ನು ಗಮನಿಸುತ್ತಿದ್ದೆ. ಅವಳು ನನ್ನ ನೋಡಿದಾಗೆಲ್ಲ ಒಂದು ಕಿರುನಗೆ Exchange ಆಗುತ್ತಿತ್ತು . ಜನುಮದ ಗೆಳತಿ ಸಿಕ್ಕ ಸಂಭ್ರಮ ನನಗೆ.
ಹೀಗೆ ನನ್ನ ತಂದೆ ಕೆಲವು ಪ್ರಶ್ನೆಗಳನ್ನು ಕೇಳಿದ ಬಳಿಕ, "ನೀವು ಕೂಡ ಹುಡುಗನಿಗೆ ಏನಾದ್ರು ಪ್ರಶ್ನೆ ಕೇಳೋದಿದ್ರೆ ಕೇಳಿ" ಎಂದು ಹುಡುಗಿಯ ತಂದೆಗೆ ಹೇಳಿದರು.
ಈಗ ಅವಳ ನಂತರ ನನಗೆ ಪ್ರಶ್ನೆಗಳ ಸುರಿಮಳೆ.. "ನಿಮ್ಮ ಹೆಸರೇನು..? ನೀವು ಎಲ್ಲಿ ಕೆಲಸ ಮಾಡ್ತಾ ಇದೀರಿ..?". ಎನ್ನುವ ಪ್ರಶ್ನೆಗಳಿಗೆಲ್ಲ ಉತ್ತರಿಸಿದೆ.
ನಂತರ ಅವಳನ್ನು ಒಳಗಡೆ ಕರೆದುಕೊಂಡು ಹೋದರು. ಸ್ವಲ್ಪ ಸಮಯದ ನಂತರ ಉಪಹಾರ ಮತ್ತು ಟೀ ಗಳೊಂದಿಗೆ ಮತ್ತೊಮ್ಮೆ ಅವಳ ದರ್ಶನ ಭಾಗ್ಯ ಕೊಟ್ಟರು. ಉಪಹಾರ, ಟೀ ಎಲ್ಲಾ ಆದ ಬಳಿಕ ಹುಡುಗೀಯ ತಂದೆಯಲ್ಲಿ "ಹುಡುಗಿಯೊಂದಿಗೆ ಸ್ವಲ್ಪ ಮಾತಾಡಬಹುದೇ...?" ಎಂದು ಕೇಳಿಕೊಂಡೆ. ಅವರು "ದಾರಾಳವಾಗಿ" ಎನ್ನುತ್ತಾ ಹುಡುಗಿಯೊಂದಿಗೆ ನನ್ನನ್ನು ಟೆರೆಸ್ ಮೇಲೆ ಕಳುಹಿಸಿಕೊಟ್ಟರು.
ನನ್ನ ಹೃದಯ ಬಡಿತ ಹೆಚ್ಚಾಗಿತ್ತು. ಅವಳಂತೂ ನಡುಗುತ್ತಿದ್ದಳು. ನನಗೆ ಧೈರ್ಯ ಸಾಲದಿದ್ದರು ಅವಳಿಗೆ "ಅಯ್ಯೋ ಹಾಗೆಲ್ಲ ನೀವು ಹೆದರಬೇಡಿ" ಎನ್ನುತ್ತಾ ಮಾತು ಶುರು ಮಾಡಿದೆ.
"ನನಗೆ ನೀವು ತುಂಬ ಇಸ್ಟವಾಗಿದ್ದೀರಿ. ನಿಮಗೆ ನಾನು ಇಷ್ಟವಾಗಿದ್ದರೆ, ನನ್ನ ತಂದೆ ತಾಯಿಗೆ ಮುಂದುವರೆಯಲು ಹೇಳುತ್ತೇನೆ" ಎಂದೆ.
ಅವಳು "ಅಪ್ಪ, ಅಮ್ಮ ಹ್ಯಾಗೆ ಹೇಳ್ತಾರೋ ಹಾಗೆ" ಎಂದಳು.
"ಮದುವೆ ಆಗ್ತಾ ಇರೋರು ನೀವು, ನಿಮಗೆ ನಾನು ಒಪ್ಪಿಗೇನ ?. ನಾನು ನಿಮಗೆ ಇಷ್ಟ ಆಗಿದೀನ ಇಲ್ವಾ..?" ಎಂದೆ.
"ಹಾಗೇನಿಲ್ಲ, ಅಪ್ಪ ಅಮ್ಮನಿಗೆ ಒಪ್ಪಿಗೆಯಾದರೆ, ನನಗೆ ಒಪ್ಪಿಗೆಯಾದಂತೆ..." ಎಂದಳು.
ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತಿತ್ತು ಅವಳ ಉತ್ತರ. ಆದರೆ ಅವಳ ಕಣ್ಣುಗಳು ನನಗಾಗಲೇ ಉತ್ತರ ಕೊಟ್ಟುಬಿಟ್ಟಿದ್ದವು. ಆದರೆ ವಿದ್ಯಾವಂತ ಹುಡುಗಿ ಇಸ್ಟೊಂದು ಹೆದರುತ್ತಿರುವುದು ನನಗೆ ವಿಚಿತ್ರ ಎನಿಸಿತು.
ನಿಮಗೆ ನನ್ನ ಬಗ್ಗೆ ಇನ್ನೂ ಏನಾದರು ತಿಳಿದುಕೊಳ್ಳಬೇಕು ಎನಿಸಿದರೆ ನನ್ನ ಮೊಬೈಲ್ ನಂಬರ್ ಗೆ ಕರೆಮಾಡಿ ಎಂದು ಹೇಳಿ ನನ್ನ ವಿಸಿಟಿಂಗ್ ಕಾರ್ಡ್ ಕೈಗಿಟ್ಟೆ. ಮುಂದೆ ಏನು ಮಾತಾಡಬೇಕೋ ತಿಳಿಯದೆ "ನನ್ನ ಕಡೆಯಿಂದ ಒಪ್ಪಿಗೆಯಿದೆ ಎಂದು ಹೇಳುತ್ತೇನೆ" ಎಂದು ಹೇಳಿದೆ. ಅದಕ್ಕೂ ಅವಳ ಮುಗುಳ್ನಗೆಯೇ ಉತ್ತರವಾಗಿತ್ತು.
ನನ್ನ ಕಡೆಯಿಂದ ನನ್ನ ತಂದೆಗೆ ಒಪ್ಪಿಗೆ ಸೂಚಿಸಿದ್ದೆ. ತಂದೆ ತಾಯಿಗೂ ಹುಡುಗಿ ಇಸ್ಟವಾಗಿದ್ದಳು. ಹುಡುಗೀಯ ಕಡೆಯವರಿಗೂ ಕೂಡ ನಾನು ಇಷ್ಟವಾಗಿದ್ದೆ. ಅವರು ನನ್ನ ಜಾತಕವನ್ನು ತೆಗೆದುಕೊಂಡಿದ್ದರು. ನಾವು ಕೂಡ ಹುಡುಗೀಯ ಜಾತಕವನ್ನು ತೆಗೆದುಕೊಂಡು ಹಿಂತಿರುಗಿದ್ದೆವು. ಜಾತಕ ಕೂಡ ಸರಿಯಾಗಿ ಕೂಡಿ ಬಂದಿತ್ತು.
ಹುಡುಗೀಯ ಕಡೆಯವರು, ಮುಂದಿನ ವಾರ ಯಾರೋ ಸ್ವಾಮೀಜಿ ನಮ್ಮ ಮನೆಗೆ ಬರುತ್ತಾರೆ. ಅವರಿಗೆ ಒಮ್ಮೆ ಜಾತಕ ತೋರಿಸಿ ನಿಮಗೆ ತಿಳಿಸುತ್ತೇವೆ ಎಂದು ಹೇಳಿದ್ದರು.
ಮೊಬೈಲ್ ನಂಬರ್ ಕೊಟ್ಟು ಬಂದಿದ್ದು ವ್ಯರ್ಥವಾಗಿರಲಿಲ್ಲ. ಅವಳು ಪ್ರತಿನಿತ್ಯ "ಶುಭ ರಾತ್ರಿ" ಎನ್ನುವ ಸಂದೇಶ ನನ್ನ ಮೊಬೈಲ್ ಗೆ ತಲುಪಿಸುತ್ತಿದ್ದಳು. "ಶುಭ ರಾತ್ರಿ" ಎನ್ನುವ ಸಂದೇಶ ಹಾಗು ನನ್ನ ಒಂದೆರೆಡು ಪ್ರಶ್ನೆಗಳಿಗೆ ಉತ್ತರಿಸಿದ್ದು ಬಿಟ್ಟರೆ ಬೇರೆ ಯಾವ ಮೆಸೇಜ್ಗೂ ಅವಳು ಉತ್ತರಿಸುತ್ತಿರಲಿಲ್ಲ. ಕೆಲವೊಮ್ಮೆ ಅವಳು ಉತ್ತರಿಸದಿದ್ದುದ್ದಕ್ಕೆ ಸಿಟ್ಟು ಬಂದರೂ, ಅವಳು ತುಂಬ ಹೆದರುತ್ತಾಳೆ ಎಂದು ಸುಮ್ಮನಿರುತ್ತಿದ್ದೆ.
ಅದ್ಯಾವ ಸ್ವಾಮೀಜಿ ಏನು ಹೇಳಿದ್ದನೋ?, ಏನೋ? ಈ ಸಂಬಂಧಕ್ಕೆ ತಿಲಾಂಜಲಿ ಬಿದ್ದಿತ್ತು. ನನಗೆ ತುಂಬ ಬೇಸರವಾಗಿ, ಅವಳಿಗೆ "ನಿನ್ನ ಜೀವನ ಶುಭಕರವಾಗಿರಲಿ" ಎನ್ನುವ ಸಂದೇಶದೊಂದಿಗೆ ವಿದಾಯ ಹೇಳಿಬಿಟ್ಟೆ. ಅದಕ್ಕೂ ಕೂಡ ಅವಳು ಉತ್ತರಿಸಲಿಲ್ಲ. ಸುಂದರ ಮೊಗದ ಕನ್ಯೆ ಕೊನೆಗೂ ತನ್ನ ಉತ್ತರ ತಿಳಿಸದೆ ನೆನಪಿನ ಪುಟದಲಿ ನನ್ನ ಕಣ್ಣಿನ ಕ್ಯಾಮರದಲ್ಲಿ ತೆಗೆದ ಚಿತ್ರವಾಗಿಬಿಟ್ಟಳು.
===================
ಮೊನ್ನೆ ಭಾನುವಾರ ಹೆಂಡತಿ ಸ್ನೇಹ ಜೊತೆ ಶಾಪಿಂಗ್ ಮಾಲ್ ಗೆ ಹೋಗಿದ್ದೆ. ನನ್ನವಳು ಸೀರೆ ಆರಿಸಿಕೊಳ್ಳುತ್ತಾ "ಈ ಸೀರೆ ಹೇಗಿದೆ?, ಆ ಸೀರೆ ಹೇಗಿದೆ?" ಎನ್ನುವ ಪ್ರಶ್ನೆಗಳಿಗೆ ನನಗೆ ಅರ್ಥವಾದಸ್ಟು(???), ತಿಳಿದಷ್ಟು ಹೇಳಿದೆ. ಆಯುವ ಕೆಲಸ ಭರದಿಂದ ಸಾಗುತ್ತಿತ್ತು. ನಾನು ಕೂತು ಕೂತು ಸಾಕಾಗಿ, "ನಾನು ಇಲ್ಲೇ ಹೊರಗಡೆ ಇರ್ತೀನಿ, ನೀನು ಸೀರೆ ತೆಗೆದುಕೊಂಡಮೇಲೆ ಫೋನ್ ಮಾಡು" ಎಂದು ಹೇಳಿ ಶಾಪಿಂಗ್ ಮಾಲಿಂದ ಹೊರಬಂದೆ.
ಎದುರಾಗಿದ್ದು ಆ ನನ್ನ ನೆನಪಿನ ಚಿತ್ರ.... ಹೌದು ಅವಳೆ... ಸುಂದರ ಮೊಗದ ಬಟ್ಟಲು ಕಣ್ಣಿನ ಕನ್ಯೆ... ಅದೇ ರೂಪ, ಅದೇ ಸೌಮ್ಯತೆ ನೆನಪು ಮಾಸದಂತೆ ಕಣ್ಣೆದುರು ನಿಂತಿದ್ದಳು.......
ಎರಡು ವರ್ಷಗಳ ನಂತರ ಅವಳು ಶಾಪಿಂಗ್ ಮಾಲಿನಲ್ಲಿ ನನ್ನ ಎದುರಿಗೆ ಬಂದಾಗ ಒಂದು ಕ್ಷಣ ಇಬ್ಬರು ನಿಂತಲ್ಲೇ ನಿತ್ತುಬಿಟ್ಟೆವು. ನಂತರ ಪ್ರಜ್ಞೆ ಬಂದು "ನೀವು ಸುಮ ಅಲ್ವಾ?" ಎಂದು ಗೊತ್ತಿದ್ದರು ಕೇಳಿದೆ.
ಅವಳು "ಹೌದು. ನೀವು ಶಿವಪ್ರಕಾಶ್ ಅಲ್ವಾ ?" ಎಂದಳು.
ಮುಗುಳ್ನಗುತ್ತ ಹೌದು ಎಂದೆ.
"ಮತ್ತೆ, ನೀವೇನು ಇಲ್ಲಿ? ಅದು ಒಬ್ಬರೇ...?" ಎಂದೆ.
"ಇಲ್ಲ, ನನ್ನ ಕಸಿನ್ ಒಬ್ಳು ಹತ್ತು ನಿಮಿಷದಲ್ಲಿ ಬರ್ತಾಳೆ... ಕಾಯ್ತಾ ಇದ್ದೀನಿ..." ಅಂದ್ಲು.
ನಾನು "ನಿಮ್ಮ ಕಸಿನ್ ಬರುವವರೆಗೂ ಕಾಫಿ ಕುಡಿಯೋಣವ..?" ಎಂದೆ.
ಅವಳು "ಆಗಬಹುದು" ಎಂದಳು. ಅಲ್ಲೇ ಪಕ್ಕದಲ್ಲಿ ಇದ್ದ ಕಾಫಿ-ಡೇ ಒಳಹೊಕ್ಕೆವು. ಎರಡು ಕಾಫಿ ಹೇಳಿ ಕುಳಿತುಕೊಂಡೆವು. ಮಾತು ಶುರುಮಾಡುವುದರೊಳಗೆ ಕಾಫಿ ಟೇಬಲ್ ಮೇಲಿತ್ತು. ಕಾಫಿ ಹೀರುತ್ತಾ ಮಾತು ಶುರುಮಾಡಿದೆವು.
"ನೀವು ಒಬ್ಬರೇ ಬಂದಿದ್ದೀರಾ...?" ಎಂದಳು.
"ಇಲ್ಲ ಹೆಂಡತಿ ಜೊತೆ ಬಂದಿದೀನಿ. ಅವಳು ಸೀರೆ ತಗೋತ ಇದಾಳೆ.. ನನಗೆ ಬೋರ್ ಹೊಡಿತ ಇತ್ತು. ಹಾಗಾಗಿ ಹೊರಗಡೆ ಬಂದೆ, ಅಸ್ಟರಲ್ಲೇ ನೀವು ಸಿಕ್ಕಿರಿ" ಎಂದೆ.
"ನಿಮಗೆ ಮದುವೆ ಯಾವಾಗ ಆಯ್ತು...?" ಅಂದ್ಲು.
"ನೀವು ಕೈಕೊಟ್ಟ ಮೂರು ತಿಂಗಳಲ್ಲಿ..." ಎಂದೆ.
ಇದಕ್ಕೂ ಕೂಡ ಅವಳ ನಗುವೇ ಉತ್ತರ...
"ನಿಜಕ್ಕೂ ಅಂದು ಸಂಬಂಧ ಮುರಿದುಬಿದ್ದಾಗ ನಾನು ತುಂಬ ಬೇಸರಪಟ್ಟಿದ್ದೆ. ನೀವು ಕೂಡ ನನ್ನ ಮೊಬೈಲ್ ಮೆಸೇಜ್ ಗೆ ರಿಪ್ಲೈ ಕೊಡ್ತಾ ಇರ್ಲಿಲ್ಲ. ಇದರ ಬಗ್ಗೆ ನಿಮ್ಮ ಮೇಲೆಯೂ ನನಗೆ ತುಂಬ ಕೋಪ ಇತ್ತು, ಈಗಲೂ ಇದೆ." ಎಂದೆ.
ಅವಳು ನಗುತ್ತಾ, "ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೊಡುವುದು ತುಂಬ ಕಷ್ಟ. ಮೊದಲೇ ನಾನು ತುಂಬ ಹೆದರುತ್ತಿದ್ದೆ. ತಂದೆ ತಾಯಿಯ ಮಾತು ಮೀರದವಳು. ನಿಜ ಹೇಳಬೇಕೆಂದರೆ ನಾನು ನಿಮ್ಮನ್ನೂ ತುಂಬ ಇಷ್ಟಪಟ್ಟಿದ್ದೆ. ಆದರೆ....."
"ಆದರೆ....??".
"ಹೋಗಲಿ ಬಿಡಿ, ನೋವು ತಂದ ಕೆಲವು ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳದಿರುವುದೇ ಒಳ್ಳೆಯದು" ಎಂದಳು.
ಅಂದು ಕೂಡ ಕಾರಣ ಹೇಳಿರಲಿಲ್ಲ. ಇಂದು ಕೂಡ ಹೇಳುತ್ತಿಲ್ಲ. ಏನಾಗಿರಬಹುದು ಎಂದು ಊಹಿಸಿಕೊಳ್ಳುವಸ್ಟು ಬುದ್ದಿವಂತನೂ ನಾನಲ್ಲ.
"ಮತ್ತೆ ನಿಮ್ಮ ಮದುವೆ ಯಾವಾಗ ಆಯ್ತು..?".
"ನಿಮಗೆ ಕೈಕೊಟ್ಟ ಮೂರು ತಿಂಗಳಲ್ಲಿ..." ಎಂದಳು.
ಇಬ್ಬರು ನಗುತ್ತಿರುವಾಗ ನನ್ನ ಮೊಬೈಲ್ ರಿಂಗಾಯಿತು. ನನ್ನ ಹೆಂಡತಿಗೆ ಕರೆ ಅದು. ಫೋನ್ ಎತ್ತಿ, ಅವಳಿಗೆ ಪಕ್ಕದಲ್ಲೇ ಇದ್ದ ಕಾಫಿ-ಡೇ ಗೆ ಬರಲು ಹೇಳಿದೆ.
ನನ್ನವಳು ಕಾಫಿ-ಡೇ ಗೆ ಬಂದಾಗ ಅವಳಿಗೂ ಒಂದು ಕಪ್ ಕಾಫಿ ಹೇಳಿದೆ. ಹಾಗೆ ಸ್ನೇಹಳಿಗೆ ಸುಮಳನ್ನು ಪರಿಚಯಿಸಿದೆ. ನನ್ನವಳಿಗೆ ಸುಮ ಎನ್ನುವ ಹೆಸರು ಹೇಳಿದೊಡನೆಯೇ ಎಲ್ಲ ಅರ್ಥವಾಗಿತ್ತು.
ಸ್ನೇಹ ಸುಮಳಿಗೆ "ನಿಮ್ಮ ಬಗ್ಗೆ ನಮ್ಮವರು ಹೇಳಿದ್ದರು. ಅವರು ನಿಮ್ಮ ಸೌಂದರ್ಯವನ್ನು ಸ್ವಲ್ಪ ಜಾಸ್ತಿಯೇ ವರ್ಣಿಸುತ್ತಿದ್ದಾರೆ ಎಂದುಕೊಂಡಿದ್ದೆ. ಆದರೆ ಅವರು ವರ್ಣಿಸಿದ್ದು ಬಹಳ ಕಡಿಮೆ ಆಯ್ತು ಅಂತ ನಿಮ್ಮ ನೋಡಿದಮೇಲೆ ನನಗೆ ಅನ್ನಿಸ್ತಾ ಇದೆ." ಎಂದು ಹೊಗಳಿದಳು. ಸುಮ ನನ್ನನ್ನೋಡಿ ಒಂದು ಮುಗುಳ್ನಗೆ ಚೆಲ್ಲಿದಳು. ಅಸ್ಟರಲ್ಲೇ ಅವಳ ಕಸಿನ್ ಕರೆಬಂತು. ಅವಳು ಹೊರಡುವುದಾಗಿ ತಿಳಿಸಿದಳು. ಸರಿ ಎನ್ನುತ್ತಾ ಅವಳನ್ನು ಅತ್ತ ಕಳುಹಿಸಿದೆ ಇತ್ತ ನನ್ನವಳೊಂದಿಗೆ ನೆನಪಿನ ಪುಟವನ್ನು ಬಿಚ್ಚದೆಯೇ ಹೆಜ್ಜೆ ಹಾಕಿದೆ.
ಮೊದಲ ಬಾರಿಗೆ ಒಂದು ಕಥೆ ಬರೆಯೋಕೆ ಪ್ರಯತ್ನ ಮಾಡಿದೀನಿ..
ತಪ್ಪಿದರೆ ಹೊಟ್ಟೆಗೆ ಹಾಕೊಳ್ಳಿ
===================
ವಿನಂತಿ:ಮೊದಲ ಬಾರಿಗೆ ಒಂದು ಕಥೆ ಬರೆಯೋಕೆ ಪ್ರಯತ್ನ ಮಾಡಿದೀನಿ..
ತಪ್ಪಿದರೆ ಹೊಟ್ಟೆಗೆ ಹಾಕೊಳ್ಳಿ
ನಿಮ್ಮ ಕಥೆಗೆ ನೀವೇ ಹೀರೋ ಎನ್ರೀ.... ಶಿವಪ್ರಕಾಶ್...?
ReplyDeletedoubte bEda, olleya prayatna. chennagide kathe.
ReplyDeletechennagide kathe... heege barita iru tammayya..
ReplyDeleteall the best
Shivu avare...
ReplyDeletetumbaa chennaagide..
ishtavaaytu kanri..:)
ಶಿವು, Super ಆಗಿದೆ ನಿಮ್ಮ ಕಥೆ. ಹೀಗೆ ಮುಂದುವರಿಯಲಿ.
ReplyDeleteನಿಮ್ಮ ಜೀವನದಲ್ಲಿ ನಿಜವಾಗಿ ನಡೆದಿದೆಯೋ ಎನ್ನುವಷ್ಟು ಸಹಜವಾಗಿ ಬರೆದಿದ್ದೀರಿ. ತುಂಬಾ ಚೆನ್ನಾಗಿದೆ
ReplyDeleteಶಿವು;ಕಥೆ ಚೆನ್ನಾಗಿದೆ.ಆದರೆ ಮದುವೆ ಏಕೆ ಮುರಿಯಿತು ಎನ್ನುವುದಕ್ಕೆ ಕಾರಣ ತಿಳಿಯದೆ ಸ್ವಲ್ಪ ನಿರಾಶೆಯಾಯಿತು.ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.
ReplyDeletesuppar kathe saar..... tumbaa chennaagide.... modala prayatnave soooopar aagide.....
ReplyDeleteಕಥೆ ಚೆನ್ನಾಗಿದೆ ಶಿವಪ್ರಕಾಶ್ . ಹೀಗೆ ಬರೀತಾ ಇರಿ.
ReplyDeleteಶಿವಪ್ರಕಾಶ್ ,ಹ ಹ ಹ ಈ ಕಥೆಯನ್ನು ಯಾವ ಬತ್ತಳಿಕೆಯಿಂದ ತೆಗೆದ್ರಿ ಸರ್, ಆದರೂ ಇದು ನಿಮ್ಮ ನಿಜದ ಕಥೆಯೇನೋ ಎಂಬ ಭಾವನೆ ಮೂಡಿಸುತ್ತದೆ.ಕಥೆ ?? ಚೆನ್ನಾಗಿ ಮೂಡಿಬಂದಿದೆ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
sundara kathe shiv. tumba naijate ide... ;)
ReplyDeletehmm...nimaggoo "suma" La haage iro sundara soumya hudugi sigali anta aashirvada maadtidini...:)
ಕಳ್ಳ ನೀನು..
ReplyDeleteಇದು ಮೊದಲ ಪ್ರಯತ್ನ ಅನ್ನಿಸೋದೇ ಇಲ್ಲ. ಅಷ್ಟು ಚೆನ್ನಾಗಿ ಬರೆದಿದ್ದೀರಿ. ಕತೆ ತುಂಬ ಇಷ್ಟ ಆಯ್ತು.
ReplyDelete(ಮ.ಮಾ: ವಾಸ್ತವ ಘಟನೆ ಅಲ್ಲ ತಾನೆ?)
ಮೊದಲ ಕಥೆ ಮೊದಲ ಕಥೆಯನ್ತಿಲ್ಲ .ಚೆನ್ನಾಗಿದೆ :) ಕಥೆಗಳು ಹೀಗೆ ಬರ್ತಾ ಇರ್ಲಿ.ಪ್ರಯತ್ನ ಚಾಲ್ತಿಯಲ್ಲಿರಲಿ :)
ReplyDeleteStory writing is good...:-)U can write good stories..:-)
ReplyDeleteBut to be honest I dint like the story...:(
ಲೋ ಶಿವು.. ಮೊದಲನೇ ಪ್ರಯತ್ನದಲ್ಲೇ ಗೆದ್ದಿಯಲ್ಲೋ.. ಕಥೆ ಸೂಪರ್..
ReplyDeleteಕತೆಯ ವಸ್ತು ಚೆನ್ನಾಗಿದೆ.. ಕುತೂಹಲಕರ ವಾಗಿದೆ. ಚುರುಕಾಗಿದೆ ನಿರೂಪಣೆ... ಸರಳತೆ ಇದೆ.
ReplyDeleteಆದರೆ.... ಕೆಲವೊಂದು ಸಂದೇಹಗಳು ಮೂಡುತ್ತವೆ. :)
ಮೊದಲಿಗೆ :- ಯಾರೂ ಹೆಂಡತಿಜ್ ಒತೆ ಇದ್ದಂತೇ ಮೊದಲ ಹುಡುಗಿ ಸಿಕ್ಕ ಕೂಡಲೇ ಅವಳೊಂದಿಗೆ ಒಬ್ಬರೇ ಕಾಫಿ ಕುಡಿಯಲು ಹೋಗರು.... ಹಾಗೆ ಹುಡುಗ ಕರೆದರೂ ಅಷ್ಟೊಂದು ಹೆದರುತ್ತಿದ್ದ ಹುಡುಗಿಯಂತೂ ಸೀದಾ ಬರಲೊಪ್ಪಳು.
ಎರಡನೆಯದಾಗಿ : ಗಂಡ ಬೇರೆ ಹುಡುಗಿಯನ್ನು ತುಂಬಾ ಹೊಗಳಿದ್ದನ್ನು ಸಹಿಸಿಕೊಂಡಿರುವ ಹೆಂಡತಿಯರೂ ವಿರಳ. ಹಾಗೊಮ್ಮೆ ಇದ್ದರೂ ಇದುರಿಗೇ ಅದೇ ಹುಡುಗಿ ಗಂಡನೊಂದಿಗೆ ಒಬ್ಬಳೇ ಕುಳಿತು ಕಾಫಿ ಹೀರುತ್ತಿದ್ದುದನ್ನು ಕಂಡೂ ನಗುತ್ತಾ ಅವಳ ಅಂದವನ್ನು ಹೊಗಳುವುದು ಮಾತ್ರ ಅಷ್ಟು ಸಹಜವಲ್ಲ.......!!!!:)
ಪ್ರಯತ್ನ ಮುಂದುವರಿಯಲಿ. ಮತ್ತಷ್ಟು ಕಥೆಗಳು ಹೊರಬರಲಿ... ನಿಮ್ಮಲ್ಲಿ ಪ್ರತಿಭೆ ಇದೆ.
shivaprakash attenpt is good. keep it up. hope to hear from u and also waiting for bellary trip in may(as promised by u for ur marraige)
ReplyDeleteontara ishta vaayitu.. adare koothuhalakke ennondu tarahada artha koda bahudagittu annisitu..
ReplyDeleteಏನ್ ಶಿವೂ ಇನ್ನು ನೆನಪಿನ ಕೋಟೆ ಇಂದ ಹೊರಗೆ ಬಂದಿಲ್ವಾ ....!!??
ReplyDelete"ಕಥೆ" ಸರಳವಾಗಿ ಕೊತೂಹಲವಾಗಿದೆ . ಮುಂದಿನ ಸಾರಿ ಆ ಹುಡುಗಿಗೆ
ಗಂಡನ ಜೊತೆ ಬರೋದಕ್ಕೆ ಹೇಳಬೇಕಿತ್ತು ... "ಕಥೆ: ಯಲ್ಲಿ ....!!
Sir
ReplyDeletesuper
heli hogu kaarana da himavanta nenapige banda
ಶಿವೂ...
ReplyDeleteಕಥೆ ಮಸ್ತ್ ಆಗಿದೆ..
ನಿರೂಪಣೆ.. ಶೈಲಿ ಸೊಗಸಾಗಿದೆ...
ಕೆಲಸಕ್ಕೆ ಬಾರದ ವಿಷಯ ತುಂಬಿ...
ಕಷ್ಟಕರ ಶಬ್ಧಗಳನ್ನು ತುರುಕದೆ... ಸರಳವಾಗಿ ಬರೆದಿದ್ದೀರಿ...
ಕಥೆ ಬರೆಯುವ ಪ್ರತಿಭೆ ನಿಮ್ಮಲ್ಲಿದೆ
ಇನ್ನಷ್ಟು ಕಥೆಗಳು ಬರಲಿ...
ಅಭಿನಂದನೆಗಳು.. ಚಂದದ ಕಥೆಗೆ... ಜೈ ಹೋ !
ಹೊಟ್ಟೇಗ್ ಹಾಕ್ಕೊಳ್ಳಿಕ್ಕೆ ಎನೂ ಇಟ್ಟೇ ಇಲ್ಲಾ...:)
ReplyDeleteಶಿವಪ್ರಕಾಶ್,ಕಥೆ ಚೆನ್ನಾಗಿ ಬರ್ದಿದ್ದೀರ.ಬರಿತಾ ಇರಿ.
ಶಿವಪ್ರಕಾಶ...ಕನಸಲ್ಲೇ ಮಂಡಿಗೆ ತಿಂತಿಯೋ ಅಥವಾ ನಿಜವಾಗಿಯೂ ಹುಡುಗೀನ ನೋಡೋ ಶಾಸ್ತ್ರ ಮಾಡ್ತೀಯೋ ..ನೋಡಪ್ಪಾ ನಿನ್ನ ಕಥೆ ಗಿಥೆ ಆಮೇಲೆ..ಈ ಜೂನ್ ಊರಿಗೆ ಬಂದಾಗ ನಿನ್ನ ಮದುವೆ ಅಟೆಂಡ್ ಮಾಡಿನೇ ನಾನು ಕುವೈತ್ಗೆ ವಾಪಸ್ಸಾಗೋದು...ಇದನ್ನ ಮಹೇಶ್, ಸುಗುಣಾ ಮತ್ತೆ ಮನು ಸಹಾ ಒಪ್ಪಿದ್ದಾರೆ,,,..
ReplyDeleteಹಾಂ...ಕಥೆ ಚನ್ನಾಗೇ ಬರೆದಿದ್ದೀಯಾ...ಪರವಾಗಿಲ್ಲ...
ಶಿವೂ ಇದು ಕತೆನಾ!!!!!
ReplyDeleteನಾನು,
ನಿನ್ನ ಕತೆ ಅಂತ 'ಇವನು ಮದುವೆ ಆಗಿದ್ದು' ಹೇಳಲೇ ಇಲ್ಲ ಅಂತ ಕತೆ ಓದುತ್ತ ಯೋಚನೆ ಮಾಡುತ್ತಿದ್ದೆ.......
ಕತೆ ಚೆನ್ನಾಗಿದೆ ಹೀಗೆಯೇ ಬರೆಯುತ್ತ ಇರು....
ಕತೆ ಸರಾಗವಾಗಿ ಓದಿಸಿ ಕೊಂಡು ಹೋಗಿದೆ.
ಹೊಟ್ಟೆಗೆ ಹಾಕಿ ಕೊಂಡರೆ ಆಜೀರ್ಣ ಆಗುತ್ತೆ ಬೇಡ ಆಯ್ತಾ ಹ್ಹಾ ಹ್ಹಾ ಹ್ಹಾ .
idara part 2 bareyiri...
ReplyDeleteShivu avre....
ReplyDeletePaLagidha shaili nimmadhu... modalina kathe antha anisalilla... niroopaNe kooda sulalithavaagidhe...
aadhare katheya vastuvinalli ashtondu gattithana illa anisithu.... OLLoLLeya kathaa vasthugaLannu aarisi innu innu kathegaLannu bareyuttiri... kathana shaili nimage sidhdhisidhe :)
ಶಿವಪ್ರಕಾಶ್,
ReplyDeleteಮೊದಲ ಪ್ರಯತ್ನದಲ್ಲೇ ಅನೇಕ ಟ್ವಿಸ್ಟುಗಳು ಮತ್ತು ಕುತೂಹಲಕಾರಿ ನಿರೂಪಣೆಯಿಂದ ಗೆದ್ದಿದ್ದೀರಿ ಅನ್ನಿಸುತ್ತೆ. ಪ್ರಯತ್ನ ಮುಂದುವರಿಸಿ..
ಕಥೆಯಲ್ಲಿ ಪಾತ್ರದ ಸರಳತೆ ಇಷ್ಟವಾಯಿತು, ತೇಜಸ್ವಿನಿ ಮೇಡಂ ಹೇಳಿದಂತೆ, ಹೆಂಡತಿ ಇದ್ದರೊ ಆಕೆಯ ಜೊತೆ ಟೀ... ಸವಿದಿದ್ದು, ಆಕೆಯಲ್ಲಿಯೇ ಸೌಂದರ್ಯದ ಚಿಂತನೆ, ಸ್ನೇಹಗೊ ಆಕೆ ಇಷ್ಟವಾಗಿದ್ದು, ಇದರಲ್ಲಿ ಸ್ವಲ್ಪ ವಿಶೇಷತೆ ಇದೆ, ಮತ್ತು ಆಲೋಚಿಸುವಂತದ್ದು,
ReplyDeleteಸುಮ ನಿಮ್ಮ ಮೆಸೇಜ್ ಗೆ ಪ್ರತಿ ಮೆಸೇಜನ್ನು ಕಳಿಸಲಿಲ್ಲ ಅನ್ನೋದು ನಿಮಗೆ ಸಿಟ್ಟು ಬರುವಂತಹ ವಿಷಯವಾಗಬಾರದಿತ್ತು.. ಅದು ಆಕೆಯ ಒಳ್ಳೆತನವನ್ನು ಪ್ರತಿಪಾದಿಸುತ್ತದೆ..
ಚನ್ನಾಗಿದೆ ಮುಂದುವರಿಸಿ...
ಚೆನ್ನಾಗಿ ಬರ್ದಿದ್ದೀರ ಶಿವೂ ಬಟ್ ನಿಜವಾಗಿಯೂ ಕತೆನೆನಾ? :D
ReplyDeletesuper shivu...chennagide kathe....bega ade tara hudugi sigali....
ReplyDeleteನೀವು ಪಾತ್ರವಾಗಿ ಒಳ್ಳೆ ನಿರೂಪಣೆ ಮಾಡಿದ್ದೀರಿ.. ಸೂಪರ್ ಆಗಿದೆ..ಇಷ್ಟವಾಯ್ತು..
ReplyDeleteThis comment has been removed by the author.
ReplyDeletekathe anta anisuvude illa....tumba chenagide
ReplyDeletehi... your stories are really superb... obba software engineer kannada dalli barediddu noodi tumba khushi aytu.......dhanyavaadagalu
ReplyDelete