
(ಚಿತ್ರ ಕೃಪೆ: ಅಂತಾರ್ಜಾಲ)
ಬಂದು ನಿಂತಿವೆ
ಹತ್ತಾರು ಬಸ್ಸುಗಳು
ನನ್ನ ಮುಂದೆ.
ಹತ್ತಬೇಕಾಗಿದೆ
ಯಾವುದಾದರೊಂದು.
ರಾಜಹಂಸ,
ಐರಾವತ,
ಡೀಲಕ್ಸು, ಸೆಮಿ-ಡೀಲಕ್ಸು
ಹಾಗು ಕೆಂಪು ಬಸ್ಸು.
ಎಲ್ಲ ಬಸ್ಸುಗಳಿಂದ
ಕೈಬೀಸಿ ಕರೆಯುತಿಹರು
ನಿರ್ವಾಹಕರುಗಳು.
ಹತ್ತುವ ಮುಂಚೆ
ಹಲವಾರ ಆಲೋಚನೆಗಳು,
ಯಾವ ಬಸ್ಸು ಹತ್ತಲೆಂದು.
ಎಲ್ಲ ಬಸ್ಸುಗಳಿಗೂ
ಅದರದೆ ಆದ ವಿಶೇಷತೆ.ರಾಜಹಂಸ, ಐರಾವತ
ಹತ್ತಿದರೆ
(ನಮಗೆ) ಬೆಲೆ ಜಾಸ್ತಿ,
ಹಾಗೆ
ತೆರಿಗೆನೂ ಜಾಸ್ತಿ.
ಡೀಲಕ್ಸು,
ಸೆಮಿ-ಡೀಲಕ್ಸು
ಹತ್ತಿದರೆ
ಅತ್ತಾ ಸಮಾಧಾನನೂ ಇಲ್ಲ,
ಇತ್ತಾ ಅಸಮಾಧಾನನೂ ಇಲ್ಲ.
ಕೆಂಪು ಬಸ್ಸು
ಹತ್ತಿದರೆ,
ಆಗುವುದು
ತಗ್ಗು ದಿಣ್ಣಿಗಳ ನರ್ತನ,
ಮಧುರ ಸಂಗೀತದ ಠಣ ಠಣ..
ದೇಹದಲ್ಲಿರುವ ಎಲ್ಲ ಭಾಗಗಳ ಉಚಿತ ದರ್ಶನ.
ಕೆಂಪು ಬಸ್ಸು ಹತ್ತಿ,
ಪಯಣಿಸುವುದು
ಸ್ವಲ್ಪ ಕಸ್ಟ.
ಆದರೂ
ಯಾಕೊ
ಅದಾಗುತಿದೆ
ನನಗಿಸ್ಟ...
ಸ್ವಲ್ಪ ಆಲೋಚಿಸಿ ಹತ್ತಾಬೇಕಾದ ಬಸ್ಸಿದು... ಅಲ್ಲವೇ...??
ನೀವೇ ಹೇಳಿ, ಯಾವ್ ಬಸ್ ಹತ್ತಿದ್ರೆ ಚನ್ನಾ...
ಇಂತಿ,
(ಬಸ್) ಪಯಣಿಗ,
ಶಿವಪ್ರಕಾಶ್
This comment has been removed by the author.
ReplyDeleteಒಳ್ಳೇ ಬಸ್ಸನ್ನೇ ಹತ್ತುತಾದ್ದೀಯಾ ಬಿಡಪ್ಪ... ಎಲ್ಲರ ಇಷ್ಟ ಬೇಡ ನಿನ್ನ ಇಷ್ಟದ ಬಸ್ಸ್ ಹತ್ತು ಆಯ್ತ.... ಏಕಮುಖ ನಿರ್ಧಾರ ಇದ್ದರೆ ಒಳ್ಳೆದು... ಒಬ್ಬೊಬ್ಬರು ಒಂದೊಂದು ಬಸ್ಸುಹತ್ತು ಅಂತ ಹೇಳ್ತೀವಿ ಅಮೇಲೆ ನಿನ್ಗೆ ಕಷ್ಟ ಹಹಾಹ್ಹ
ReplyDeleteha ha ha nimma bus kavite vaastavika vaagi chennaagide.
ReplyDeletechennagide shivu second partu yaavaaga?
ReplyDeleteಕೆಂಪು ಬಸ್ಸು
ReplyDeleteಹತ್ತಿದರೆ,
ಆಗುವುದು
ತಗ್ಗು ದಿಣ್ಣಿಗಳ ನರ್ತನ,
ಮಧುರ ಸಂಗೀತದ ಠಣ ಠಣ..
ದೇಹದಲ್ಲಿರುವ ಎಲ್ಲ ಭಾಗಗಳ ಉಚಿತ ದರ್ಶನ.
nice lines :)
hha hha..enthaha kavana idu..
ReplyDeleteninna eegiga paristitige sholuva kavana..
wonderful....
huDugi huDukuva duDukannu hIguuuu bareyabahudendu heLiddiraa....
suppar boss....
Suguna avaru chennaagi heliddaare..hage madri.. :)
ReplyDeleteಬಸ್ಸು ಯಾವುದೇ ಇರಲಿ, ಶಿವಪ್ರಕಾಶ,
ReplyDeleteನಿಮ್ಮೂರಿಗೆ ಹೋಗುತ್ತಿದೆಯೋ ನೋಡಿ.
ಅಥವಾ ಚೆಂದದ ಮುಖ ಕಂಡಿತು ಎಂದು
ಹತ್ಬಿಟ್ಟು, ಯಾವುದೋ ಊರಲ್ಲಿ ಇಳಿಯಬೇಡಿ!
ಶಿವಪ್ರಕಾಶ್ ನೀವು ಯಾವ ಬಸ್ಸಾದರೂ ಹತ್ತಿ.. ಯಾವುದು ಹತ್ತಿದರೂ ಕವನ ಮಾತ್ರ ಚೆನ್ನಾಗಿ ಇದ್ದೇ ಇರುತ್ತದೆ ಎಂದು ಖಚಿತ.. tumba chennagide!
ReplyDeleteಶಿವಪ್ರಕಾಶ್ ಕೆಂಪು ಬಸ್ಸನ್ನೇ ಹತ್ತು ಆದ್ರೆ ಜೊತೆಯಲ್ಲಿ ಸಂಗಾತಿಯೊಂದಿಗೆ ಹತ್ತಿದರೆ ಹಳ್ಳ ದಿಣ್ಣೆ ತಗ್ಗುಗಳಲ್ಲಿ ಕುಲುಕಾಟ ಲಾಭ. ಆ ಸಮಯದಲ್ಲಿ ಇಬ್ಬರೂ ಜೋಕಾಲಿಯಲ್ಲಿ ಕುಳಿತಂತೆ...ಅಲ್ವಾ...
ReplyDeleteಹೆಹೆ...ಸೂಪರ್ ಕಾಮೆಂಟ್ಸ್. :). ಶಿವೂ, ದೊಡ್ಡೋರು ಹೇಳಿರೋದನ್ನು ಅನುಸರಿಸಿ !
ReplyDeleteಶಿವು ಕೆಂಪು ಬಸ್ಸಾದರು ಹತ್ತು,ಯಾವುದಾದರು ಹತ್ತು,ಆದರೆ ಬರುವಾಗ ಆ ಹುಡುಗಿ ಇಂದ ಹಸಿರು ನಿಶಾನೆ ಹೊತ್ತು ಬಾ...
ReplyDeleteshivu,sir, kashtavaadaru...kempu basse..ishta...!!!!!!!!!yaakendre nashta illa..guri muttodu khandita.nivu maadidde..ok
ReplyDeleteಚೆನ್ನಾಗಿದೆ ಶಿವು, ಕವನ. ಏನೇ ಇರಲಿ, ಈಗ ಬಸ್ಸುಗಳಿಗೆ ಐರಾವತ, ರಾಜಹಂಸ, ವಜ್ರ ಮುಂತಾದ ಸುಂದರ ಹೆಸರುಗಳನ್ನಿಡುತ್ತಿದ್ದಾರೆ
ReplyDeleteಬಸ್ ಕವಿತೆ ಚೆನ್ನಾಗಿದೆ ..., ನೀವು ಯಾವುದಾದರು ಬಸ್ ಹತ್ತಿ .. ಬಸ್ ಎದುರು ಮಾತ್ರ ನಿಲ್ಲಬೇಡಿ
ReplyDeleteನರಹಂತಕ BMTC ಅಂತ ಹೆಸರು ತಗೊಂಡಿದ್ದಾರೆ ನಮ್ಮ ಬೆಂಗಳೂರಿನ ಬಸ್ಗಳು
nice.......:)
ReplyDelete