Monday, June 13, 2011

ಅಗಲಿದ ಗೆಳೆಯನಿಗೆ...

ಗೆಳೆಯನಾಗಿ,
ಸಹೋದ್ಯೋಗಿಯಾಗಿ,
ಗುರುವಾಗಿ,
ಜೊತೆಗಿದ್ದು,
ಇದ್ದಕ್ಕಿದ್ದಂತೆ
ನೀನಿಲ್ಲ
ಎಂದು
ಒಪ್ಪಿಕೊಳ್ಳಲಾಗುತ್ತಿಲ್ಲ.

ನಿನ್ನೆಯವರೆಗೆ
ನಿ ಇರುವೆ ಎನ್ನುವ
ನಂಬಿಕೆಯಿಂದ
ನಾ ತುಂಬ ಧೈರ್ಯದಿಂದಿದ್ದೆ,
ಹೇಳದೆ ಕೇಳದೆ ನೀ ಇಂದು ದೂರವಾಗಿ ಹೋಗಿರುವೆ
ಬಾ ಎಂದರೂ
ಮರಳಿ ಬಾರದ ಲೋಕಕ್ಕೆ...

ಆ ದೇವರು ನಿನ್ನ ಆತ್ಮಕ್ಕೆ ಶಾಂತಿ ಕೊಡಲಿ.
ನಿಮ್ಮ ಕುಟುಂಬಕ್ಕೆ ಆ ದುಃಖ ಭರಿಸೊ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.
Share/Save/Bookmark

Thursday, June 2, 2011

ಕದ್ದ ಸಾಲುಗಳು - ೧

ತಕರಾರು ಹೇಳಿಕೊಳ್ಳಬೇಕು ಎಂಬ ಆಳವಾದ ಅನಿಸಿಕೆ ಇದೆಯಲ್ಲ ?
ಅದೇ ಮನುಷ್ಯನಿಗೆ "ಭಾಷೆ" ಕಲಿಯುವಂತೆ ಮಾಡಿದ್ದು...!!!

-- ಎಲ್ಲೋ ಓದಿ, ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ ಸಾಲು.
===

ಜಗದೇಕವೀರನಂತೆ ಅವಳಿಗಾಗಿ ಬೆಂಡೋಲೆ ಆಯುವಾಗ
ಬಜೆಟ್ಟಿನ ಆಚೆಗಿನದನ್ನೇ ತೋರಿಸಿ ಹೀಯಾಳಿಸುವವನಂತೆ ಸೇಲ್ಸ್-ಮನ್ ನೀಚ ನಗೆಯಲ್ಲಿ ನಿಟ್ಟಿಸುವಾಗ
ಅವನ ಮೂಕ ಸಂಕಟ ಅರಿತವಳಂತೆ
'ಛೆ... ಚೆನ್ನಾಗಿಲ್ಲ ಇದು, ಇಷ್ಟು ದುಬಾರಿ ಕೊಳ್ಳೋಕೆ ತಲೆ ಕೆಟ್ಟಿದೆಯೆ ? ' -- ಎಂದು ಸೆಕೆಂಡಿನಲ್ಲಿ ಶಾಪ ವಿಮೋಚನೆ ಮಾಡಿ ಅವಳು ಅಂಗಡಿಯಿಂದ ಅವನನ್ನು ಹೊರಗೆಳೆದು ತಂದಿದ್ದು...

-- ತೂಫಾನ್ ಮೇಲ್
===

ಪಾದರಸ ಬಳಿದ ಕನ್ನಡಿ ಕಂಡುಹಿಡಿದ ವಿಜ್ಞಾನಿ ಸ್ತ್ರೀಲೋಕಕ್ಕೆ ಮಾಡಿರುವಸ್ಟು ಅಪಕಾರ ಬೇರೆ ಯಾರೂ ಮಾಡಿಲ್ಲ.

-- ಪಂಜರದ ಗಿಣಿ
===

"ನಾನು ಗಂಡಾಗಿ ಹುಟ್ಟಿಲ್ಲವೆಂದು ಸಂತೋಷಪಡುತ್ತೇನೆ.. ಹಾಗೆ ಹುಟ್ಟಿದರೆ ಹೆಣ್ಣನ್ನು ಮದುವೆಯಾಗಬೇಕಾದ ದುರ್ಭರ ಪ್ರಸಂಗ ಒದಗುತ್ತಿತ್ತು."
-- ಮ್ಯಾದಾಂ. ದಿ. ಸ್ಟೇಲ್ [Madame de Stael ]

-- ಪಂಜರದ ಗಿಣಿ
===
Share/Save/Bookmark