Monday, July 7, 2014

ದೇವರಿದ್ದಾನೆ...!!!

ಹೌದು. ದೇವರಿದ್ದಾನೆ. ಅವನಿಲ್ಲ ಎಂದು ಊಹಿಸಿಕೊಳ್ಳಲು ಕೂಡ ನನ್ನಿಂದಾಗದು. ಅವನಿದ್ದಾನೆ ಎಂಬ ನಂಬಿಕೆಯೇ ಅದೆಸ್ಟೋ ಜನರಿಗೆ ಆಶಾಕಿರಣ. ಯಾರೊಂದಿಗೂ ಹಂಚಿಕೊಳ್ಳಲಾಗದ ನೋವುಗಳನ್ನು ಅವನೊಂದಿಗೆ ಮಾತ್ರ ಹಂಚಿಕೊಳ್ಳಬಹುದು. ನಮ್ಮ ಮಾತನ್ನು ಅವನು ಯಾವತ್ತು ಕೇಳುವುದಿಲ್ಲ ಎಂದಿಲ್ಲ. 

"ದೇವ ನಿನ್ನ ಇರುವ ನಂಬಿ ಜೀವ ಕೋಟಿ ಸಾಗಿದೆ". ಹೌದು ನಿನ್ನನ್ನು ನಂಬಿ ಜೀವನ ಸಾಗಿಸುವವರ ಜ್ಯೋತಿ ನೀನು. ನೀನಿರುವೆ ಎಂದು ಅದೆಸ್ಟೋ ಸಲ ಸಾಭೀತು ಪಡಿಸಿರುವೆ. ಬೇರೆ ಬೇರೆ ರೂಪದಲ್ಲಿ ದರ್ಶನವನಿಟ್ಟು ಬದುಕುವ ಮಾರ್ಗವನ್ನು  ಹೇಳಿಕೊಟ್ಟಿರುವೆ. ಕೆಲವರು ನೀನು ಹಾಕಿಕೊಟ್ಟ ಮಾರ್ಗದಲ್ಲಿ ಶ್ರದ್ದೆಯಿಂದಲೋ, ಇನ್ನೂ ಕೆಲವರು ಭಯದಿಂದಲೋ(ತಪ್ಪು ಮಾಡಿದರೆ ನೀ ಶಿಕ್ಷಿಸುವೆ) ಜೀವನ ಸಾಗಿಸುತ್ತಿದ್ದಾರೆ. 

ಹಾಗೆ ನಿನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುವವರು ಕೂಡ ಇದ್ದಾರೆ. ನಿನ್ನನ್ನು ಹಣ ಮಾಡುವ ಯಂತ್ರದಂತೆ, ಮತ ಹುಟ್ಟಿಸುವ ಗುಂಪಿನಂತೆ, ರಕ್ತ ಚಲ್ಲಿಸುವ ದ್ವೇಷದಂತೆ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಹೀಗೆ ಜನರಿಗೆ ಮೋಸ ಮಾಡಲು ನೀನು ಅವರ ಕೈಗೆ ಅಸ್ತ್ರ ಆಗಿಬಿಟ್ಟಿದೀಯ. ಬಹುಶಃ ಅಂತವರನ್ನು ತಿದ್ದಲು ನೀನು ಮತ್ತೊಂದು ಅವತಾರ ಪಡೆಯಬೇಕೆನೋ. 

ನಿನ್ನ ಮೇಲಿನ ಭಯ ಭಕ್ತಿ ನಿನ್ನ ನಂಬಿದವರಿಗೆ ಎಂದಿಗೂ ಕಡಿಮೆಯಾಗಿಲ್ಲ, ಕಡಿಮೆಯಾಗುವುದಿಲ್ಲ. ನೀನು ಬೇಕು. ಕಷ್ಟ ಕೊಟ್ಟರೂ, ಸುಖ ಕೊಟ್ಟರೂ ನೀನು ಬೇಕು. ನೀನಿಲ್ಲ ಎಂದು ಊಹಿಸಿಕೊಳ್ಳುವುದು ಆಸಾಧ್ಯ. "ನೀನಿಲ್ಲ" ಎಂಬ ಒಂದೇ ಒಂದು ಮಾತು ಜನ ನಂಬಿದ್ದಾರೆ, ಈ ಜೀವಕುಲ ಅದೆಂದೋ ನಿರ್ನಾಮವಾಗುತ್ತಿತ್ತು. ನೀನು ಬದುಕುವ ನಿಯಮವಾಗಿ, ಧರ್ಮ ಪಟಿಸುವ ಮಂತ್ರವಾಗಿ ನೀನು ಬೇಕು. ನೀನು ನಮಗೆ ಬೇಕು. 

"ನೀನಿಲ್ಲದ ನಾವು, ಕುರುಬನಿಲ್ಲದ ಕುರಿಗಳ ಮಂದೆ" ನಮ್ಮ ಪ್ರತಿ ನಡೆಯಲ್ಲೂ ನೀನಿರುವೆ. ಇದು ನಿನ್ನದೇ ಆಟ. ನಡೆಸು ನಮ್ಮನು ಕೈಹಿಡಿದು. ತಪ್ಪು ಮಾಡದ ಹಾದಿಯಲ್ಲಿ ಮುನ್ನೆಡೆಸು. ನಿನ್ನ ನಂಬಿದ ನಮ್ಮ ಹೆಸರಿಗೆ ಕಳಂಕ ಬರದಂತೆ. 

ನಿನ್ನಿಸ್ಟದಂತೆ ನೀ ಬರೆಸಿಕೊಂಡ ಲೇಖನವಿದು, ಹಾಗಾಗಿ ಇದರ ಕತೃ ಕೂಡ ನೀನೆ. ನಾನು ಬರೆಸಿಕೊಳ್ಳಲು ಉಪಯೋಗಿಸಿಕೊಂಡ ಯಂತ್ರಮಾನವ ಅಸ್ಟೇ. 

  ಇಂತಿ,  
ದೇವರು.  
೨ ಜೂನ್ ೨೦೧೪. ಬೆಳಿಗ್ಗೆ ೨:೩೦  

Share/Save/Bookmark