Tuesday, October 25, 2011

ಭಯಾನಕ ಪ್ರೀತಿ

ಮದುವೆಯ ಮುಂಚೆ
ಅವಳ ಕರೆ ಬಂದರೆ ಸಾಕು
ಎದ್ದು ಬಿದ್ದು ಹೋಗಿ
ಎತ್ತುತ್ತಿದ್ದ ಫೋನ್
ಅವಳ ಮೇಲಿನ
ಪ್ರೀತಿಯಿಂದ.....


ಮದುವೆಯ ನಂತರವೂ
ಹಾಗೆಯ
ಎದ್ದು ಬಿದ್ದು ಹೋಗಿ
ಎತ್ತುತಾನೆ ಫೋನ್,
ಅವಳ ಮೇಲಿನ
ಭಯದಿಂದ..

ಸದ್ಯಕ್ಕೆ ಪ್ರೀತಿಯಿಂದ,
ಶಿವಪ್ರಕಾಶ್

Share/Save/Bookmark

Wednesday, October 19, 2011

ಏನು ಮಾಡೋದು.. ಇಂತ ಟೈಮಲ್ಲಿ..?

ಮೈಮರೆತು ಹೃದಯಾನ ಕೊಟ್ಟ..
ಸ್ಟ್ರಾಂಗ್ ಇದ್ದ ಹುಡುಗ ವೀಕಾಗಿ ಹೋದ..

ತುಂಬಾನೇ ಪ್ರೀತಿಸ್ತಾಳೆ..
ಹಿಂದಿರುಗಿಸಾಲಗದಸ್ಟು ಪ್ರೀತಿಯ ನೀಡಿ...
ಸಾಲಗಾರನೆನ್ನುವ ಪಟ್ಟವ ಕಟ್ತಾಳೆ..

ಬಡ್ಡಿನೇ ಕಟ್ಟಕಾಗದಿರೋ ಪ್ರೇಮಿ ನಾನು...
ಇನ್ನೂ ಯಾವಾಗ ತೀರಿಸಲಿ ಅವಳ ಅಸಲು ಗಂಟನ್ನು...

ಹ್ಯಾಗ ತೀರಿಸಲಿ ಈ ಸಾಲಾನ..
ಕೇಳಿದೆ ಏನ್ ಪರಿಹಾರ ಅಂತ ಗೆಳೆಯರನ್ನ,

ಒಬ್ಬ ಹೇಳಿದ 'ಸಾಲ ಜಾಸ್ತಿ ಆದರೆ ಆಗ್ಲಿ ಬಿಡು, ದೇವರವ್ನೆ ಹೃದಯ ಮಾರಿಬಿಡು.'
ಇನ್ನೊಬ್ಬ ಹೇಳಿದ 'ಯಾರಿಗೆಳೋಣ ನಂದು ಸೇಮು ಪ್ರಾಬ್ಲೆಮ್ಮು...'
ಕೊನೆಗೆ 'ಲೈಫು ಇಸ್ಟೇನೆ' ಅನ್ನೋಂಗಾಯ್ತು..

ಒಮ್ಮೊಮ್ಮೆ ಅನ್ಸುತ್ತೆ 'ತಗಲಾಕ್ಕೊಂಡೆ ನಾನು ತಗಲಾಕ್ಕೊಂಡೆ'..
ಮತ್ತೊಮ್ಮೆ ಅನ್ಸುತ್ತೆ 'Love makes life Beautiful'..

ಮೆಸೇಜ್ ಮಾಡೋಕೆ ಟೈಮಿಲ್ಲ...
ಹಾಗಂತ ಮಾಡದೆ ಇರೋಕಾಗೋಲ್ಲ..

ಪಾಪ ಬೇಗ ಮಲ್ಗೊಂಗಿಲ್ಲ...
ಲೇಟ್ ಆಗಿ ಅಂತು ಏಳೋಂಗಿಲ್ಲ..

ಲೇಟ್ ಆಯ್ತು ಇನ್ನೂ ಡಿಸ್ಟರ್ಬ್ ಮಾಡೋಲ್ಲ ಮಲಗು ಅಂತಾಳೆ,
ಮಲಗಿದರೆ ಮತ್ತೆ ಕನಸಲ್ ಬಂದು ಡಿಸ್ಟರ್ಬ್ ಮಾಡ್ತಾಳೆ...
ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಗೀಚೋ ಸಾಲುಗಳಿಗೆ ಸ್ಫೂರ್ತಿ ಆಗ್ತಾಳೆ..

ಇವಳು 'ನನ್ನವಳು' ಎನ್ನುವ ಮಧುರ ಭಾವನೆ ಒಂದೆಡೆ...
ಹೊಸ ಜವಾಬ್ದಾರಿ ಎನ್ನುವ ಎಚ್ಚರಿಕೆಯ ಗಂಟೆ ಇನ್ನೊಂದೆಡೆ...

ದೊಡ್ಡದಾಯ್ತು ಅನ್ಸುತ್ತೆ ಈ ಪದ್ಯ...
ಎದುರಿಗೆ ಸಿಗಿ, ಒಪ್ಪಿಸ್ತೀನಿ ಪೂರ್ತಿ ಗದ್ಯ...

ಪ್ರೀತಿಯಿಂದ..
ಶಿವಪ್ರಕಾಶ್

Share/Save/Bookmark

Tuesday, August 23, 2011

ಕಣ್ಣಿಂದ ಮನಸಿಗೆ ಮುಕ್ತಿ

ಮನವಿದು ನೊಂದು,
ಕಣ್ಣು ವದ್ದೆಯಾಗಿದೆ
ಆದರೂ ಕಣ್ಣೀರು ಹೊಮ್ಮುತ್ತಿಲ್ಲ.

ಕಣ್ಣೀರು ಹೊಮ್ಮಿಸಿ,
ಮಾನವ ತಣಿಸಲು,
ಕಣ್ಣು ಮನಸು ಮಾಡುತ್ತಿಲ್ಲ.

ಕಣ್ಣು ಮನಸು ಮಾಡಿ,
ಕಣ್ಣೀರು ಹೊಮ್ಮಿಸುವವರೆಗೂ,
ಈ ಮನಕೆ ಮುಕ್ತಿಯಿಲ್ಲ..

ಕಣ್ಣೀರು ತಡೆಹಿಡಿದ ಕಣ್ಣು,
ಮುಕ್ತಿ ಪಡೆಯದ ಮನಸು,
ಸದಾ ಕಾಡುವುದು ಒಗಟಿನಂತೆ.

Share/Save/Bookmark

Sunday, August 21, 2011

ಜನನ - ಮರಣ

ಹೀಗೆ ಜೀವನದಲ್ಲಿ ಒಮ್ಮೆ ಎದುರಾದಳು ಯಮುನಾ,

ಹುಚ್ಚನಾಗಿ ಗೀಚಿದೆ ಅವಳ ಮೇಲೊಂದು ಕವನ,

ಕವನ ಮೆಚ್ಚಿ ಕೊಟ್ಟಳು ಅವಳ ಮನ,

ಆಯಿತು ನಮ್ಮಿಬ್ಬರ ಪ್ರೀತಿಯ ಜನನ.

ನನ್ನತನವೆಂಬುವುದರ ಮರಣ.
Share/Save/Bookmark

Sunday, July 24, 2011

ನನ್ನ ಹೃದಯ



ಎಂದೋ ಬೀಗ ಜಡಿದ ಗೇಟಿನ
ಮುಂದಿರುವ ಅಂಚೆ ಪೆಟ್ಟಿಗೆ
ಈ ನನ್ನ ಹೃದಯ.

ಬಂದು ಬೀಳುತಿವೆ
ಅದೆಸ್ಟೋ ಲೆಕ್ಕವಿಲ್ಲದಷ್ಟು ಪತ್ರಗಳು
ಓದುವವರಿಲ್ಲ, ಉತ್ತರಿಸುವವರಿಲ್ಲ.

ಪತ್ರಗಳಿಗಾಗಿ ಕಾದು,
ಅನುಭವಿಸುತ್ತಿದ್ದ ವೇದನೆ
ಈ ಅಂಚೆ ಪೆಟ್ಟಿಗೆಗಸ್ಟೇ ಗೊತ್ತು.

ಕಾಯುವಿಕೆಯು ಬೇಸರವ ಮೂಡಿಸಲು,
ಹಿಂದೆ ಮುಂದೆ ನೋಡದೆ,
ಬೀಗ ಜಡಿದು,
ಕೀ ಬೀಸಾಡಿಬಿಟ್ಟೆ.

ಇಂದು ಅದೆಷ್ಟು ಹುಡುಕಾಡಿದರೂ ಸಿಗುತ್ತಿಲ್ಲ.
ಗೇಟಿನ ಕೀ ಅಲ್ಲ.
ನನ್ನ ಹೃದಯ.

ಅಂಚೆ ಪೆಟ್ಟಿಗೆಯ ಮಾಲೀಕ,
ಶಿವಪ್ರಕಾಶ್

Image Courtesy: Sam [AllOfUsAreLost]


Share/Save/Bookmark

Thursday, July 14, 2011

ವೈರಾಗಿ... ನಾನಲ್ಲ..



ಜನ ಜಾತ್ರೆಯ ನಡುವೆ
ಕಳೆದುಹೊಗಬೇಕೆನಿಸುವುದು..
ಎಲ್ಲವನೊಮ್ಮೆ ದೂರಕೆ ತಳ್ಳಿ
ದೂರವಾಗಬೇಕೆನಿಸುವುದು..

ಮಾತುಗಾರರ ನಡುವೆ,
ಮೌನವಾಗಿರಬೇಕೆನಿಸುವುದು..
ಮಾತಲ್ಲದ ಮಾತಲ್ಲಿ
ಮಾತು ಹೇಳಬೇಕೆನಿಸುವುದು...

ಹರಿವ ನೀರನೊಮ್ಮೆ
ನಿಲಿಸಿ ಕೇಳಬೇಕೆನಿಸುವುದು
ನಿಂತ ನೀರನ್ನೊಮ್ಮೆ
ಕದಡಿ ಕೇಳಬೇಕೆನಿಸುವುದು..

ಈ ಜೀವನಕೆ
ಅರ್ಥವೇ ಇಲ್ಲವೆನಿಸುವುದು..
ಅರ್ಥ ಹುಡುಕುತಿರುವವರ
ಕಂಡು ಮರುಕ ಹುಟ್ಟುತಿಹುದು..

ಒಮ್ಮೊಮ್ಮೆ ಎಲ್ಲವು
ಬೇಕೆನಿಸುವುದು..
ಬೇಕೆನಿಸುವುದೆಲ್ಲಾ
ಬರಿ ಮಾಯೆ ಎಂದು ಮನ ಎಚ್ಚೆರಿಸುತಿಹುದು...

ಇಂತಿ,
ವೈರಾಗಿ... ನಾನಲ್ಲ..
ಶಿವಪ್ರಕಾಶ್
--

ಕೊನೆಯದಾಗಿ. ಡಿವಿಜಿ ಯವರ ಈ ಸಾಲು ನಿಮಗಾಗಿ...
"ವ್ಯರ್ಥವೀ ಜೀವನದ ಬಡಿದಾಟವೆನ್ನದಿರು | ಅರ್ಥವಹುದದು ನಿನಗೆ ಪೂರ್ಣದರ್ಶನದಿಂ"

Share/Save/Bookmark

Tuesday, July 5, 2011

KRS Backwater

ನಾವು ಸ್ನೇಹಿತರೆಲ್ಲ ಸೇರಿ ಮೊನ್ನೆ ಭಾನುವಾರ ಕೆ.ಅರ್.ಎಸ್ ಬ್ಯಾಕ್-ವಾಟರ್ ಗೆ ಹೋಗಿದ್ದೆವು. ಇಲ್ಲಿ ಕೆ.ಅರ್.ಎಸ್ ಡ್ಯಾಮ್ ನಲ್ಲಿ ಮುಳುಗಡೆಯಾಗಿದ್ದ ಹನ್ನೆರಡನೆ ಶತಮಾನದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನವನ್ನು ಎರಡು ವರ್ಷಗಳಿಂದ ಸ್ಥಳಾಂತರಿಸಲಾಗುತ್ತಿದೆ. ಈ ಸ್ಥಳ ತುಂಬ ಸುಂದರವಾಗಿದೆ.

ಅಲ್ಲಿ ಸೆರೆಹಿಡಿದ ಸುಂದರ ಚಿತ್ರಗಳು...


























ಇನ್ನೂ ನಮ್ಮೆಲ್ಲರ ತುಂಟಾಟವನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ. ಇದು ಆಲ್ಬಮ್ Folder ಗೆ ಕೊಂಡೊಯ್ಯುವುದು...

Addadiddi Part-2



ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ..
http://dasaramysore.in/backwater.php


Share/Save/Bookmark

Monday, June 13, 2011

ಅಗಲಿದ ಗೆಳೆಯನಿಗೆ...

ಗೆಳೆಯನಾಗಿ,
ಸಹೋದ್ಯೋಗಿಯಾಗಿ,
ಗುರುವಾಗಿ,
ಜೊತೆಗಿದ್ದು,
ಇದ್ದಕ್ಕಿದ್ದಂತೆ
ನೀನಿಲ್ಲ
ಎಂದು
ಒಪ್ಪಿಕೊಳ್ಳಲಾಗುತ್ತಿಲ್ಲ.

ನಿನ್ನೆಯವರೆಗೆ
ನಿ ಇರುವೆ ಎನ್ನುವ
ನಂಬಿಕೆಯಿಂದ
ನಾ ತುಂಬ ಧೈರ್ಯದಿಂದಿದ್ದೆ,
ಹೇಳದೆ ಕೇಳದೆ ನೀ ಇಂದು ದೂರವಾಗಿ ಹೋಗಿರುವೆ
ಬಾ ಎಂದರೂ
ಮರಳಿ ಬಾರದ ಲೋಕಕ್ಕೆ...

ಆ ದೇವರು ನಿನ್ನ ಆತ್ಮಕ್ಕೆ ಶಾಂತಿ ಕೊಡಲಿ.
ನಿಮ್ಮ ಕುಟುಂಬಕ್ಕೆ ಆ ದುಃಖ ಭರಿಸೊ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.
Share/Save/Bookmark

Thursday, June 2, 2011

ಕದ್ದ ಸಾಲುಗಳು - ೧

ತಕರಾರು ಹೇಳಿಕೊಳ್ಳಬೇಕು ಎಂಬ ಆಳವಾದ ಅನಿಸಿಕೆ ಇದೆಯಲ್ಲ ?
ಅದೇ ಮನುಷ್ಯನಿಗೆ "ಭಾಷೆ" ಕಲಿಯುವಂತೆ ಮಾಡಿದ್ದು...!!!

-- ಎಲ್ಲೋ ಓದಿ, ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ ಸಾಲು.
===

ಜಗದೇಕವೀರನಂತೆ ಅವಳಿಗಾಗಿ ಬೆಂಡೋಲೆ ಆಯುವಾಗ
ಬಜೆಟ್ಟಿನ ಆಚೆಗಿನದನ್ನೇ ತೋರಿಸಿ ಹೀಯಾಳಿಸುವವನಂತೆ ಸೇಲ್ಸ್-ಮನ್ ನೀಚ ನಗೆಯಲ್ಲಿ ನಿಟ್ಟಿಸುವಾಗ
ಅವನ ಮೂಕ ಸಂಕಟ ಅರಿತವಳಂತೆ
'ಛೆ... ಚೆನ್ನಾಗಿಲ್ಲ ಇದು, ಇಷ್ಟು ದುಬಾರಿ ಕೊಳ್ಳೋಕೆ ತಲೆ ಕೆಟ್ಟಿದೆಯೆ ? ' -- ಎಂದು ಸೆಕೆಂಡಿನಲ್ಲಿ ಶಾಪ ವಿಮೋಚನೆ ಮಾಡಿ ಅವಳು ಅಂಗಡಿಯಿಂದ ಅವನನ್ನು ಹೊರಗೆಳೆದು ತಂದಿದ್ದು...

-- ತೂಫಾನ್ ಮೇಲ್
===

ಪಾದರಸ ಬಳಿದ ಕನ್ನಡಿ ಕಂಡುಹಿಡಿದ ವಿಜ್ಞಾನಿ ಸ್ತ್ರೀಲೋಕಕ್ಕೆ ಮಾಡಿರುವಸ್ಟು ಅಪಕಾರ ಬೇರೆ ಯಾರೂ ಮಾಡಿಲ್ಲ.

-- ಪಂಜರದ ಗಿಣಿ
===

"ನಾನು ಗಂಡಾಗಿ ಹುಟ್ಟಿಲ್ಲವೆಂದು ಸಂತೋಷಪಡುತ್ತೇನೆ.. ಹಾಗೆ ಹುಟ್ಟಿದರೆ ಹೆಣ್ಣನ್ನು ಮದುವೆಯಾಗಬೇಕಾದ ದುರ್ಭರ ಪ್ರಸಂಗ ಒದಗುತ್ತಿತ್ತು."
-- ಮ್ಯಾದಾಂ. ದಿ. ಸ್ಟೇಲ್ [Madame de Stael ]

-- ಪಂಜರದ ಗಿಣಿ
===
Share/Save/Bookmark

Sunday, May 22, 2011

ಸೌಂಡ್ ಪಾರ್ಟಿ

ಸೌಂಡ್ ಪಾರ್ಟಿ ಮಾವ ಸಿಗಲಿ ಎಂದು
ದೇವರಿಗೆ ಪ್ರಾರ್ಥಿಸಿದೆ.
ನನ್ನ ಪ್ರಾರ್ಥನೆಗೆ ಒಲಿದ ದೇವರು,
ಸೌಂಡ್ ಪಾರ್ಟಿ ಮಾವನನ್ನು ಕೊಟ್ಟು,
ಜೊತೆಗೆ ಬೋನಸ್ ಆಗಿ,
ಡಬಲ್ ಸೌಂಡ್ ಪಾರ್ಟಿಯಂತ ಹೆಂಡತಿಯನ್ನು ಕೊಟ್ಟ...
Share/Save/Bookmark

Friday, May 20, 2011

ಹೊನ್ನು-ಹೆಣ್ಣು-ಮಣ್ಣು

ಹೊನ್ನ ಗಳಿಸಿದೆ
ಹೆಣ್ಣು ಸಿಕ್ಕಳು
ನಾ ಮಣ್ಣಾದೆ.

Share/Save/Bookmark

Thursday, May 5, 2011

ಗುರಿ ಮರೆತ ಅಲೆಮಾರಿಯಾಗದಿರಿ

ಸುಗಮವಾಗಿದೆಯೆಂದು ದಾರಿ,
ಮರೆತು ನಡೆಯದಿರು ಜೀವನದ ಗುರಿ,
ನಿನಗರಿವಿಲ್ಲದೆ ಬೀಳುವೆ ಕಂದಕಕ್ಕೆ ಜಾರಿ
ಪ್ರಜ್ಞೆ ಬರುವುದರೊಳಗಾಗಿ,
ಹೋಗಬಹುದು ಪರಿಸ್ಥಿತಿ ಕೈಮೀರಿ...

ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ಇಂದಿಗೆ, ಚಿಂತೆ ಏತಕೆ...? ಎಂದು ಜೀವನವನ್ನು ತುಂಬ ಸುಲಭವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಕಠಿಣ ಪರಿಸ್ಥಿತಿ ಎದುರಾದಗ ತಲೆ ಮೇಲೆ ಕೈಇಟ್ಟುಕೊಂಡು, ಕೈಚಲ್ಲಿ ಕೂಡುತ್ತೇವೆ. ಈ ಸಮಸ್ಯೆ ನಮ್ಮಲ್ಲಿ ಅನೇಕರಿಗೆ ಇದೆ. ಹಾಗೆಂದು ಜೀವನವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳಿ ಎಂದು ನಾ ಹೇಳುತ್ತಿಲ್ಲ. ಈಗ ಸಂತೋಷವಾಗಿದ್ದೇನೆ ಎಂದು ಗುರಿ ಮರೆತು ನಡೆಯಬೇಡಿ, ಏಕೆಂದರೆ ಜೀವನದಲ್ಲಿ, ಯಾವುದು ಕೂಡ ಹೇಳಿ ಕೇಳಿ ಬರುವುದಿಲ್ಲ. ನಿನ್ನೆಯಂತೆ ನಾಳೆ ಇರುವುದಿಲ್ಲ. ಸುಂದರವಾದ ನಾಳೆಗಳಿಗಾಗಿ ಇಂದು ನಾವು ಶ್ರಮ ಪಡಲೇಬೇಕು ಎನ್ನುವುದು ನನ್ನ ಅನಿಸಿಕೆ.

ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು... ಎನ್ನುವ ಕುವೆಂಪುರವರ ಸಾಲುಗಳು ಎಸ್ಟು ಸತ್ಯ ಅಲ್ಲವೇ..? Success is a journey not a Destination.

ಗೆಲ್ಲಲೇಬೇಕೆಂಬ ಕೆಚ್ಚೆದೆ ನಿಮ್ಮಲ್ಲಿ ಇರಲಿ. ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ!!

--
ಗುರಿ ಮರೆತ ಅಲೆಮಾರಿಯಾಗದಿರಿ ಎನ್ನುವ ಆಶಯ ಹಾಗು ಶುಭಾಶಯಗಳೊಂದಿಗೆ,
ಶಿವಪ್ರಕಾಶ್
Share/Save/Bookmark

Wednesday, April 20, 2011

ಕಾಲ ಬದಲಾಗುತಿರುವುದನು ಕಂಡೆ...



ಕಡಲ ತೀರದಿ ಕೂತು,
ಕಾಲ ಬದಲಾಗುತಿರುವುದನು ಕಂಡೆ...

ಕುಡಿದ ಅಮಲಿನಲಿ,
ಸೀಸೆಯನ್ನು ಧರೆಗೆ ಜೋರಾಗಿ ಅಪ್ಪಳಿಸಿ,
ಪುಡಿ ಪುಡಿ ಮಾಡಿ,
ವ್ಯಾಘ್ರನಂತೆ ವರ್ತಿಸಿ ಹೋದ,
ಯುವಕನ ಜಾಗದಲ್ಲಿ,
ಮುದ್ದಾದ ಪುಟಾಣಿ ಮಗುವೊಂದು,
ಅಂಬೆಗಾಲಿಡುತ ಜಾಗ ತಲುಪುತಿರಲು,
ಓಡೋಡಿ ಬಂದ ಯಾರೋ ಇನ್ನೊಬ್ಬ ಯುವಕ,
ಮಗುವನ್ನು ಎತ್ತಿ, ತಂದೆಯ ಮಡಿಲಿಗೆ ತಲುಪಿಸಿ,
ಮರಳಲ್ಲಿ ಮರುಳ ಹರಡಿದ,
ಪುಡಿಪುಡಿಯಾದ ಸೀಸೆ ಚೂರುಗಳನೆತ್ತಿ,
ಕಸದ ತೊಟ್ಟಿಗೆ ತಲುಪಿಸುತಿರುವುದನು ನೋಡುತಿರುವ,
ಮುದ್ದು ಮಗುವಿನ ಕಣ್ಣಿನಲಿ...
ಕಾಲ ಬದಲಾಗುತಿರುವುದನು ಕಂಡೆ...

==



ಉದ್ಯಾನವನದಿ ಕೂತು,
ಕಾಲ ಬದಲಾಗುತಿರುವುದನು ಕಂಡೆ...

ಕಾಮದ ಅಮಲಿನಲಿ,
(ಅಮರ)ಪ್ರೇಮಿಗಳಿಬ್ಬರು,
ಉದ್ಯಾನವನದಲಿ,
ಯಾರಿಗೂ ಲೆಕ್ಕಿಸದೆ,
ಹುಚ್ಚರಂತೆ ವರ್ತಿಸುತಿರಲು,
ಅಲ್ಲೇ ಇದ್ದ ಪುಟ್ಟ ಮಗುವಿನ,
ಮುಖದಿ ಮೂಡಿದ
ಭಾವನೆಗಳಲ್ಲಿ
ಕಾಲ ಬದಲಾಗುತಿರುವುದನು ಕಂಡೆ...

==



ಗಣಕಯಂತ್ರದ ಮುಂದೆಯೂ ಕೂತು,
ಕಾಲ ಬದಲಾಗುತಿರುವುದನು ಕಂಡೆ...

ವಿದೇಶದಿ ವಿದ್ಯಾಭ್ಯಾಸಕ್ಕೆಂದು,
ಸಾಲ ಸೋಲ ಮಾಡಿ ಕಳಿಸಿದ,
ಮಗನ ಫೇಸ್-ಬುಕ್ ಖಾತೆಯ
ಅಪ್ಡೇಟ್ ಗಳಲಿ,
ಸೀಸೆಯ ಹಿಡಿದು,
ಬಾಲೆಯ ಜೊತೆಗೆ ಬಿಗಿದಪ್ಪಿಗೊಂಡು,
'F*** U' ಎನ್ನುವ ಸನ್ನೆಯ ಚಿತ್ರಗಳ,
ನೋಡಿದ ತಂದೆಯು
ಮನದಾಳದ ನೋವಿನಲಿ,
ಕಾಲ ಬದಲಾಗುತಿರುವುದನು ಕಂಡೆ...

==


ಕೂತು ಕೂತು ಸಾಕಾಗಿ,
ಅಲೆಮಾರಿಯಂತೆ ತಿರುಗುತಿರುವಾಗಲು,
ಕಾಲ ಬದಲಾಗುತಿರುವುದನು ಕಂಡೆ...

ಕಾಲ ಬದಲಾಗುತಿರುವುದನು ಕಾಣುತ,
ಅತ್ತಲೂ ಹೋಗದ,
ಇತ್ತಲೂ ಬರಲಾರದ,
ನನ್ನಂತಹ ಯುವಕರ,
ಸ್ಥಬ್ಧ ಮುಖದ ಹಿಂದಿರುವ ,
ಸಾವಿರಾರು ಪ್ರಶ್ನೆಗಳಲಿ
ಕಾಲ ಬದಲಾಗುತಿರುವುದನು ಕಂಡೆ...!!!

(ಚಿತ್ರ ಕೃಪೆ: ಅನಿಲ್ ಬೆಡಗಿ ಹಾಗು ದಿಗ್ವಾಸ್ ಹೆಗಡೆ)

Share/Save/Bookmark

Wednesday, April 6, 2011

ವಿಶ್ವ-ಕಪ್ ಗೆದ್ದ ಸಂಭ್ರಮದ ರಾತ್ರಿ

(ಫೋಟೋ ಕೃಪೆ: ಅ೦ತರ್ಜಾಲ)
ನಾನು ರಾತ್ರಿ ಊರಿಗೆ ಹೊರಡಬೇಕಿತ್ತು. ಆದರೆ ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವ-ಕಪ್ ಫೈನಲ್ ಪಂದ್ಯ ವೀಕ್ಷಿಸುತ್ತ ಕೂತಿದ್ದೆ. ರಾತ್ರಿ ಎಸ್ಟೇ ಹೊತ್ತಾದರೂ ಸರಿಯೇ, ಪಂದ್ಯವನ್ನು ಮುಗಿಸಿಯೇ ಹೋಗಬೇಕು ಎಂದುಕೊಂಡು ಸ್ನೇಹಿತರೊಡನೆ ಪಂದ್ಯ ವೀಕ್ಷಿಸುತ್ತಾ, ಭಾರತ ತಂಡ ವಿಕೆಟ್ ಕಬಳಿಸಿದಾಗ, ಭಾರತ ತಂಡದ ಆಟಗಾರರು ಹೊಡೆಯುವ ಪ್ರತಿಯೊಂದು ಫೋರ್, ಸಿಕ್ಸ್ ಗಳಿಗೆಲ್ಲ ಕುಣಿದು, ಕುಪ್ಪಳಿಸುತ್ತ ಸಂಭ್ರಮಿಸುತ್ತ ಕೂತುಬಿಟ್ಟೆ.

ಪಂದ್ಯ ಮುಗಿದು ವಿಶ್ವ-ಕಪ್ (ಅಸಲಿಯೋ, ನಕಲಿಯೋ) ಪಡೆದ ಸಂಭ್ರಮದಲ್ಲಿ ಊರಿಗೆ ಹೋಗಲು ಹೊರಟುನಿಂತೆ. ಮನೆ ಬಿಟ್ಟಾಗ ಮಧ್ಯರಾತ್ರಿ ಹನ್ನೆರಡು ಗಂಟೆ. ಪ್ರತಿಯೊಂದು ಮನೆ ಮನೆಗಳ ಮುಂದೆ ಗಂಡಸರು, ಹೆಂಗಸರು, ಚಿಕ್ಕಮಕ್ಕಳು ಎಲ್ಲರೂ ಸೇರಿ ಪಟಾಕಿ ಹಚ್ಚುವ ಸಂಭ್ರಮವ ಕಂಡೆ. ರಸ್ತೆಗಳಲ್ಲಿ ಕುಣಿದು ಕುಪ್ಪಳಿಸುವವರ ಕಂಡೆ. ಭಾವುಟ ಹಿಡಿದುಕೊಂಡು ದ್ವಿಚಕ್ರ ವಾಹನಗಳಲ್ಲಿ, ಕಾರುಗಳಲ್ಲಿ ಸುತ್ತುವ ಜನರ ಕಂಡೆ. ಎಲ್ಲರಲ್ಲಿಯೂ ಸಂಭ್ರಮವೋ, ಸಂಭ್ರಮ... ಅದೊಂದು ಅದ್ಭುತ ರಾತ್ರಿ. ನನ್ನಿಂದ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದನ್ನು ನೋಡಿ, ಸಂಭ್ರಮಿಸಿದ ನನ್ನ ಕಣ್ಣುಗಳಿಗೆ ಮಾತ್ರ ಹೇಳಲು ಸಾಧ್ಯ.

ರಸ್ತೆಯಲ್ಲಿ ಕಂಡ ಆಟೋ ಒಂದಕ್ಕೆ ಕೈ ಮಾಡಿ ಕೇಳಿದೆ... "ಮೆಜಸ್ಟಿಕ್...?"
"ಹಾ ಬನ್ನಿ ಹತ್ತಿ ಸರ್..." ಎಂದ ಆಟೋದವ.
ಮಧ್ಯಾರಾತ್ರಿ ಹತ್ತುತ್ತಿರುವುದರಿಂದ, ಆಟೋದವರು ಕಡಿಮೆ ಎಂದರೂ ೧೫೦ ರೂಪಾಯಿ ಕೇಳುವರೆಂದು ಹಿಂದೆ ಅನುಭವವಾಗಿತ್ತು.
ಆಟೋ ಹತ್ತಿ..."ಎಷ್ಟು ಕೊಡಬೇಕು...??" ಎಂದೆ.
ಆಟೋದವನು... "ಸರ್, ಇವತ್ತು ನಾವು ವಿಶ್ವ-ಕಪ್ ಗೆದ್ದಿದೀವಿ. ನೀವು ಎಲ್ಲಿಗೆ ಬೇಕಾದ್ರೂ ಕರೆದುಕೊಂಡು ಹೋಗಿ... ನಿಮ್ಮೂರಿಗೆ ಬೇಕಾದ್ರು ಸರಿಯೇ... ಫ್ರೀ ಆಗಿ ಬರ್ತೀನಿ... ದುಡ್ಡು ಮಾತ್ರ ಕೊಡಬೇಡಿ.." ಅಂದ.
ಕೇಳಿ ಆಶ್ಚರ್ಯವಾಯಿತು.
ಹಾಗೆ ಮೆಜೆಸ್ಟಿಕ್ ತಲುಪುವವವರೆಗೂ ಆಟೋದವನೊಂದಿಗೆ ಫೈನಲ್ ಪಂದ್ಯದ ವಿಮರ್ಶೆ ಮಾಡುತ್ತಾ 'ಧೋನಿ ಹಂಗಾಡಿದ, ಗಂಭೀರ್ ಹಿಂಗಾಡಿದ... ಹಾಗೆ ಹೀಗೆ..." ಎನ್ನುವ ಸಂಭಾಷಣೆ ನಡೆಯುತ್ತಿರುವಾಗ ಮಜೆಸ್ಟಿಕ್ ಬಂದೇಬಿಟ್ಟಿತು.

ಆಟೋದಿಂದ ಇಳಿಯುವಾಗ ನಾನು ಎಸ್ಟೇ ದುಡ್ಡು ಕೊಡಲು ಪ್ರಯತ್ನಿಸಿದರೂ ಆಟೋದವನು ತೆಗೆದುಕೊಳ್ಳಲಿಲ್ಲ. "ಇಲ್ಲ ಸರ್.. ವಿಶ್ವ-ಕಪ್ ಗೆದ್ದ ಈ ಸಂತೋಷಕ್ಕೆ, ಇವತ್ತು ರಾತ್ರಿಯೆಲ್ಲ ಫ್ರೀ ಯಾಗಿ ಆಟೋ ಹೊಡಿತೀನಿ.." ಎನ್ನುತ್ತಾ ಸಂಭ್ರಮದಿಂದ ಆಟೋ ಸ್ಟಾರ್ಟ್ ಮಾಡಿ ಹೊರಟ...

ವಿಶ್ವ-ಕಪ್ ಗೆದ್ದು, ಕ್ರಿಕೆಟ್ ಪ್ರೇಮಿಗಳಿಗೆ ಇಂತಹ ಅದ್ಭುತ ಖುಷಿಯನ್ನು ತಂದುಕೊಟ್ಟ ಭಾರತ ತಂಡಕ್ಕೆ ನನ್ನ ಅಭಿನಂದನೆಗಳು.
Share/Save/Bookmark

Thursday, March 24, 2011

Dont Disturb Me..!! I am reading News Paper

From ಮೂಕಸ್ಮಿತ

Photo Courtesy: Shilpa Banad
Share/Save/Bookmark

Monday, March 21, 2011

A bridge and a walking path - 2


Share/Save/Bookmark

A bridge and a walking path


Share/Save/Bookmark

Thursday, March 10, 2011

ಸುಖ ದಾಂಪತ್ಯದ ಗುಟ್ಟು?


ಮದುವೆ ಎನ್ನುವ
ವಿಸ್ಮಯ-ವಿಚಿತ್ರಗಳ ಲೋಕಕ್ಕೆ
ಕಾಲಿರಿಸುವ ಮುನ್ನ
ಸುಖ ದಾಂಪತ್ಯದ ಗುಟ್ಟೇನಿರಬಹುದು..?
ಎಂದು ಹುಡುಕ ಹೊರಟೆ.

ಮದುವೆಯಾಗಿ
ಸಂತೋಷದಿಂದಿದ್ದ
ನನ್ನಣ್ಣನ ಕೇಳಿದೆ
"ಅಣ್ಣ, ಏನಣ್ಣಾ,
ನಿಮ್ಮ ಈ ಸುಖ ದಾಂಪತ್ಯದ ಗುಟ್ಟು?"

ಅದಕ್ಕೆ ನಮ್ಮಣ್ಣ ಹೇಳಿದ
"ತಮ್ಮನೇ ಕೇಳು,
ಸುಖ ದಾಂಪತ್ಯದ ಗುಟ್ಟು,
ಬಿಟ್ಟು ಕೊಡಬೇಡ ನಿನ್ನ ಜುಟ್ಟು"

ಜುಟ್ಟು ಬಿಟ್ಟುಕೊಡದಿರುವುದು
ಹೇಗೆಂದು ?
ಯೋಚಿಸಿ ಯೋಚಿಸಿ
ಕೊನೆಗೆ
ಕತ್ತರಿಸಿಯೇ ಬಿಟ್ಟೆ,
ಮದುವೆಯ ಮುಂಚೆ
ಈ ನನ್ನ
ಜುಟ್ಟು....


--
ಶಿವಪ್ರಕಾಶ್

Share/Save/Bookmark

Tuesday, March 8, 2011

ಮೂಕಸ್ಮಿತ - ೧

From ಮೂಕಸ್ಮಿತ

Share/Save/Bookmark

Monday, March 7, 2011

ಹೊಸ ಹೆಜ್ಜೆ

rom ಮೂಕಸ್ಮಿತ

ಚಿತ್ರ ಕೃಪೆ: ನನ್ನ ಸಹೋದರಿ.

Share/Save/Bookmark

Tuesday, March 1, 2011

ಸ್ಪಸ್ಟ - ಅಸ್ಪಸ್ಟ


ನಿಮ್ಮೆಲ್ಲರ ಇಷ್ಟವೇ
ನನ್ನಿಸ್ಟ
ಎನ್ನುತ್ತಿದ್ದ
ಹುಡುಗನಿಗೆ
ಅವರಿಸ್ಟಕ್ಕೂ
ಇವನಿಸ್ಟಕ್ಕೂ
ಇರುವ
ವ್ಯತ್ಯಾಸಗಳ ಕಂಡು
ದಂಗಾಗಿಹೋಗಿದ್ದಾನೆ.

ಅವರಿಸ್ಟ ಪಡುತ್ತಿರುವುದು
ಹೊಳೆಯುವ ಬಣ್ಣ
ಇವನಿಸ್ಟ ಪಟ್ಟಿದ್ದು
ಸೆಳೆಯುವ ಕಣ್ಣಾ

ಅವರು ನೋಡುತ್ತಿರುವುದು
ಕೈಯಲ್ಲಿರುವುದೆ ಬಳೆ
ಇವ ನೋಡುತ್ತಿರುವುದು
ಮುಖದಲ್ಲಿರುವುದೆ ಕಳೆ

ಹೀಗೆ
ಅವರಿಸ್ಟಕ್ಕೂ
ಇವನಿಸ್ಟಕ್ಕೂ
ಇರುವ ವ್ಯತ್ಯಾಸಗಳ ಪಟ್ಟಿ
ಸ್ಪಸ್ಟವಾಗಿದ್ದರೂ
ಇವನ ಮನಸಿಗೆ
ಎಲ್ಲವೂ
ಅಸ್ಪಸ್ಟ


--
ಸ್ಪಸ್ಟ - ಅಸ್ಪಸ್ಟಗಳ ನಡುವೆ,
ಶಿವಪ್ರಕಾಶ್

Share/Save/Bookmark

Monday, February 21, 2011

ಸಿಡಿದೇಳು

ಮದುವೆಯ ಚಕಾರ
ಎತ್ತಿದರೆ
ಸಾಕು
ಸಿಡಿದೇಳುತ್ತಿದ್ದ
ಮಗನನ್ನು
ಕಂಡು
ಸುಮ್ಮನಾಗಿಬಿಟ್ಟರು
ಪೋಷಕರು.

ಆದರೆ
ಅದೇ ಮಗನೀಗ,
ಪುನಃ
ಪೋಷಕರ ಮೇಲೆ
ಸಿಡಿದೆದ್ದಿದ್ದಾನೆ,
ಮದುವೆಯ ಚಕಾರ
ಎತ್ತದೆ
ಇರುವುದನ್ನು
ಕಂಡು...!!!!

--
ಶಿವಪ್ರಕಾಶ್

Share/Save/Bookmark

Wednesday, February 16, 2011

ಅಂದು - ಇಂದು

ಮೊದಮೊದಲು
ಹುಡುಗಿಯನ್ನು ನೋಡಲು
ಹೋಗುತ್ತಿದ್ದ ಹುಡುಗ
ಹಿಂಜರಿಕೆಯಿಂದಲೇ
ಹಿರಿಯರೆದುರು
ಹುಡುಗಿಯನ್ನು
ತಲೆಯೆತ್ತಿ
ನೋಡಲು
ಪಡುತ್ತಿದ್ದ
ಕಷ್ಟ
ಅಸ್ಟಿಸ್ಟಲ್ಲ...

ಈಗಲೂ
ಹುಡುಗಿಯನ್ನು ನೋಡಲು
ಹೋಗುತ್ತಿದ್ದಾನೆ,
ವ್ಯತ್ಯಾಸ ಇಸ್ಟೇ,
ಹುಡುಗಿಯನ್ನು
ನೋಡಲು
ಎತ್ತಿದ
ತಲೆಯನ್ನು
ಇಳಿಸುತ್ತಲೇ
ಇಲ್ಲ.....!!!!


--
ಶಿವಪ್ರಕಾಶ್

Share/Save/Bookmark

Wednesday, February 9, 2011

Miss You Dear


ನನ್ನ ಹೆಂಡ್ತೀನ ಇವತ್ತು ನನ್ನೂರಿಗೆ ಕಳಿಸ್ತಾ ಇದೀನಿ...
ಕಳಿಸಲು ಮನಸಿಲ್ಲ..
ಆದ್ರೆ ಹೊಸ ಹೆಂಡ್ತಿಗೋಸ್ಕರ ನಾನು ಈ ತ್ಯಾಗ ಮಾಡಲೇಬೇಕು.
ಮನಸಿಲ್ಲದ ಮನಸಿನಿಂದ ಮನಸುಮಾಡಿ ಕಳಿಸ್ತಾ ಇದೀನಿ.
ಹತ್ತು ವರ್ಷದ ಈ ದಾಂಪತ್ಯದಲ್ಲಿ ಎಂದೂ ಕೂಡ ನೀ ನನ್ನ ಮನಸು ನೋಯಿಸಿಲ್ಲ.
ಬಹುಶ ನಾನು ಕೂಡ ನಿನ್ನನ್ನು ಅಸ್ಟೆ ಪ್ರೀತಿಯೊಂದ ನೋಡ್ಕೊಂಡಿದೀನಿ ಅನ್ಕೋತೀನಿ.
ನನಗರಿವಿಲ್ಲದೆ ನಿನಗೆ ಎಂದಾದರೂ ನೋವು ಮಾಡಿದ್ರೆ, ದಯವಿಟ್ಟು ಕ್ಷಮಿಸಿ ಬಿಡು.
ನೀನು ಎಲ್ಲೇ ಇರು, ಹೇಗೆ ಇರು, ನೀನು ನನ್ನವಳೇ.
ಬೇಜಾರ್ ಆಗಬೇಡ ಕಣೆ, ಅದೆಸ್ಟೆ ಕೆಲಸ ಕಾರ್ಯ ಇದ್ರು,
ತಿಂಗಳಿಗೊಮ್ಮೆ ಬಂದು ನಿನ್ನ ನೋಡ್ಕೊಂಡು ಹೋಗ್ತೀನಿ...
ಅಲ್ಲಿ ಎಲ್ಲರೂ ನಿನ್ನನ್ನ ಚನ್ನಾಗಿ ನೋಡ್ಕೋತಾರೆ.
ಅವರು ಚನ್ನಾಗಿ ನೋಡಿಕೊಳ್ಳದೆ ಇದ್ರೆ, ದಯವಿಟ್ಟು ಬೇಜಾರ್ ಮಾಡ್ಕೋಬೇಡ.
ನನಗೋಸ್ಕರ ಸಹಿಸಿಕೋ. ಪ್ಲೀಸ್...
ಅದ್ಯಾಕೋ ಗೊತ್ತಿಲ್ಲ. ನಿನ್ನ ಕಳುಹಿಸುತ್ತಿರುವ ಈ ಘಳಿಗೆಯಲ್ಲಿ, ನನಗರಿವಿಲ್ಲದೆ ನನ್ನ ಕಣ್ಣಲ್ಲಿ ಹನಿಯೊಂದು ಮೂಡಿದೆ.

I Miss You

Share/Save/Bookmark

Sunday, January 2, 2011

ಸಣ್ಣ ಕಥೆಗಳು

ತನ್ನ ಮದುವೆಯ ಕರೆಯೋಲೆ ಬೇರೆಯವರ ಮದುವೆಯ ಕರೆಯೋಲೆಗಿಂತಲೂ ವಿಭಿನ್ನವಾಗಿರಲೆಂದು, ಕಷ್ಟದಿ ಇಷ್ಟ ಪಟ್ಟು ಸುಂದರ ಸಾಲುಗಳಿಂದ ಪೋಣಿಸಿ.... ಅದಕ್ಕೊಂದು ಸುಂದರ ಕವಿತಾ ರೂಪವನ್ನೂ ಕೊಟ್ಟು..... ಪದೇ ಪದೇ ಅದೇ ಸಾಲುಗಳ ಮೆಲುಕು ಹಾಕುತ್ತ ಬಾಯಿಪಾಠ ಮಾಡಿದ್ದ. ಆದರೆ ಇವನ ಸ್ನೇಹಿತನ ಮದುವೆಯ ಕರೆಯೋಲೆಯ ಪತ್ರಿಕೆಗಾಗಿ ಸಾಲುಗಳನ್ನು ಬರೆದುಕೊಡು ಎಂದಾಗ.... ಹೊಸ ಸಾಲುಗಳ ಬರೆಯಲೋಗಿ ತನ್ನದೇ ಮದುವೆಯ ಕರೆಯೋಲೆಗೆಂದು ಬರೆದಿದ್ದ ಸಾಲುಗಳನ್ನು ಬರೆದುಬಿಟ್ಟಿದ್ದ ಕಾರಣ ಆ ಸಾಲುಗಳು ಅವನಲ್ಲೇ ಗುನುಗುತ್ತಲಿದ್ದವು........... ಕರೆಯೋಲೆಯ ಸಾಲುಗಳನ್ನ ದಾನ ಮಾಡಿ ಕೊನೆಗೆ ಅವನ ಮದುವೆಯ ಕರೆಯೋಲೆ ಪತ್ರಕ್ಕೆ ಸಾಲುಗಳೇ ಹುಟ್ಟದಾಗಿದೆ.
==

ಅವನು ಸರಿ ರಾತ್ರಿ ೧೨ ಗಂಟೆಗೆ ಮಲಗಿದ್ದ ಅಪ್ಪ ಅಮ್ಮನನ್ನು ಪ್ರೀತಿಯಿಂದ ಎಬ್ಬಿಸಿ ಅವರೊಟ್ಟಿಗೆ ಕೇಕ್ ಕತ್ತರಿಸಿ ಹೊಸ ವರ್ಷದ ಆಚರಣೆಯಲ್ಲಿ ವಿಜೃಂಭಿಸುತ್ತಿದ್ದ....... ಆದರೆ ಈಗ ಸಂಭ್ರಮಿಸುವ ಮನೆ ಮೌನವಿಸಿ ನಿದ್ರಿಸುತಿದೆ.... ಆದರವನು ಹೆಂಡತಿಯೊಡನೆ ಅವಳ ಅಪ್ಪ ಅಮ್ಮನೊಟ್ಟಿಗೆ ಸರಿ ರಾತ್ರಿಯಲಿ ಕೇಕ್ ಕತ್ತರಿಸಿ ಸಂತಸದಿ ಹೊಸ ವರ್ಷವನ್ನು ಬರಮಾಡಿಕೊಂಡನು.... ಇತ್ತ ಮೌನವಿಸಿದ ಮನೆಯಲ್ಲಿ ಜನ್ಮದಾತರಿಗೆ ಅನಾಥ ಪ್ರಜ್ಞ್ನೆ ಕಾಡುತಿದೆ
==

ಹೊಸ ವರ್ಷದ ಶುಭಾಗಮನಕ್ಕೆ ಪ್ರತಿ ವರ್ಷ ಅಪ್ಪ ಅಮ್ಮ ಮಗನಿಗೆ ಮೊದಲ ಕರೆ ಮಾಡುವಂತೆ, ಈ ವರ್ಷವೂ ಕರೆ ಮಾಡಿದ್ದಾರೆ. ಆದರೆ ಎರಡು ತಾಸುಗಳಾದರೂ ಎಂಗೇಜ್ ಸದ್ದೇ ಕಿವಿಗೆ ಅಪ್ಪಳಿಸುತ್ತಿದೆ....
ಕಾರಣ ಅವನೀಗ ಎಂಗೇಜ್......

==

ನಿಮ್ಮಿಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು..

ಪ್ರೀತಿಯಿಂದ,
ಶಿವಪ್ರಕಾಶ್
Share/Save/Bookmark