ಜನ ಜಾತ್ರೆಯ ನಡುವೆ
ಕಳೆದುಹೊಗಬೇಕೆನಿಸುವುದು..
ಎಲ್ಲವನೊಮ್ಮೆ ದೂರಕೆ ತಳ್ಳಿ
ದೂರವಾಗಬೇಕೆನಿಸುವುದು..
ಮಾತುಗಾರರ ನಡುವೆ,
ಮೌನವಾಗಿರಬೇಕೆನಿಸುವುದು..
ಮಾತಲ್ಲದ ಮಾತಲ್ಲಿ
ಮಾತು ಹೇಳಬೇಕೆನಿಸುವುದು...
ಹರಿವ ನೀರನೊಮ್ಮೆ
ನಿಲಿಸಿ ಕೇಳಬೇಕೆನಿಸುವುದು
ನಿಂತ ನೀರನ್ನೊಮ್ಮೆ
ಕದಡಿ ಕೇಳಬೇಕೆನಿಸುವುದು..
ಈ ಜೀವನಕೆ
ಅರ್ಥವೇ ಇಲ್ಲವೆನಿಸುವುದು..
ಅರ್ಥ ಹುಡುಕುತಿರುವವರ
ಕಂಡು ಮರುಕ ಹುಟ್ಟುತಿಹುದು..
ಒಮ್ಮೊಮ್ಮೆ ಎಲ್ಲವು
ಬೇಕೆನಿಸುವುದು..
ಬೇಕೆನಿಸುವುದೆಲ್ಲಾ
ಬರಿ ಮಾಯೆ ಎಂದು ಮನ ಎಚ್ಚೆರಿಸುತಿಹುದು...
ಇಂತಿ,
ವೈರಾಗಿ... ನಾನಲ್ಲ..
ಶಿವಪ್ರಕಾಶ್
--
ಕೊನೆಯದಾಗಿ. ಡಿವಿಜಿ ಯವರ ಈ ಸಾಲು ನಿಮಗಾಗಿ...
"ವ್ಯರ್ಥವೀ ಜೀವನದ ಬಡಿದಾಟವೆನ್ನದಿರು | ಅರ್ಥವಹುದದು ನಿನಗೆ ಪೂರ್ಣದರ್ಶನದಿಂ"
he..he..
ReplyDeletebithaaki...bithaaki...
hahaha....eneno annisuttala...
ReplyDeletechennagide saalugaLu....
chennagide..
ReplyDeleteNice !!!
ReplyDeleteಏನೋ ಒಂತರ ಅನ್ನಿಸೋಕೆ ಶುರುವಾಗಿದೆಯಲ್ಲ ಬಿಡು ಹಹಹ... ಚೆನ್ನಾಗಿದೆ ಸಾಲುಗಳು
ReplyDeleteತರುಣ ವಯಸ್ಸಿನಲ್ಲಿ ಇಂತಹ ಕುದಿಕುದಿ ಸಹಜವಾದದ್ದೇ. ಕವನ ಚೆನ್ನಾಗಿದೆ.
ReplyDeletevairaagi naanalla antane vairaagyadatte hogtidiraa sir hahhaha
ReplyDeleteyavdakkoo swalpa hushaaraagiri
ಸೂಪರ್ ಸಾಲುಗಳು ... ಬಹಳ ಇಷ್ಟವಾಯ್ತು ಶಿವ ಪ್ರಕಾಶ್
ReplyDeleteಪರಸ್ಪರ ವೈರುಧ್ಯ ಭಾವಗಳನ್ನು, ತಾಕಲಾಟಗಳನ್ನು ಚೆನ್ನಾಗಿ ಕವನಿಸಿದ್ದೀರಿ. ಅಭಿನ೦ದನೆಗಳು.
ReplyDeleteನನಗ ನಿಮ್ಮ ವಯಸ್ಸಿನ್ಯಾಗ ಹಿಂಗ ಆಗಿತ್ತು ಮದುವಿ ಆದಮೇಲೆ ವಿರಾಗಿತನ ಬಂದ ಬರತದ
ReplyDeleteಕಾಳಜಿ ಮಾಡಬ್ಯಾಡ್ರಿ..
Anthu intu hosa ase bantu...
ReplyDeleteKeep rocking Shivu..
:P
Nimmava,
Raghu
Nice1............:)
ReplyDeleteಚೆನ್ನಾಗಿದೆ :)
ReplyDelete