ಕಡಲ ತೀರದಿ ಕೂತು,
ಕಾಲ ಬದಲಾಗುತಿರುವುದನು ಕಂಡೆ...
ಕುಡಿದ ಅಮಲಿನಲಿ,
ಸೀಸೆಯನ್ನು ಧರೆಗೆ ಜೋರಾಗಿ ಅಪ್ಪಳಿಸಿ,
ಪುಡಿ ಪುಡಿ ಮಾಡಿ,
ವ್ಯಾಘ್ರನಂತೆ ವರ್ತಿಸಿ ಹೋದ,
ಯುವಕನ ಜಾಗದಲ್ಲಿ,
ಮುದ್ದಾದ ಪುಟಾಣಿ ಮಗುವೊಂದು,
ಅಂಬೆಗಾಲಿಡುತ ಆ ಜಾಗ ತಲುಪುತಿರಲು,
ಓಡೋಡಿ ಬಂದ ಯಾರೋ ಇನ್ನೊಬ್ಬ ಯುವಕ,
ಮಗುವನ್ನು ಎತ್ತಿ, ತಂದೆಯ ಮಡಿಲಿಗೆ ತಲುಪಿಸಿ,
ಮರಳಲ್ಲಿ ಮರುಳ ಹರಡಿದ,
ಪುಡಿಪುಡಿಯಾದ ಸೀಸೆ ಚೂರುಗಳನೆತ್ತಿ,
ಕಸದ ತೊಟ್ಟಿಗೆ ತಲುಪಿಸುತಿರುವುದನು ನೋಡುತಿರುವ,
ಮುದ್ದು ಮಗುವಿನ ಕಣ್ಣಿನಲಿ...
ಕಾಲ ಬದಲಾಗುತಿರುವುದನು ಕಂಡೆ...
==
ಉದ್ಯಾನವನದಿ ಕೂತು,
ಕಾಲ ಬದಲಾಗುತಿರುವುದನು ಕಂಡೆ...
ಕಾಮದ ಅಮಲಿನಲಿ,
(ಅಮರ)ಪ್ರೇಮಿಗಳಿಬ್ಬರು,
ಉದ್ಯಾನವನದಲಿ,
ಯಾರಿಗೂ ಲೆಕ್ಕಿಸದೆ,
ಹುಚ್ಚರಂತೆ ವರ್ತಿಸುತಿರಲು,
ಅಲ್ಲೇ ಇದ್ದ ಪುಟ್ಟ ಮಗುವಿನ,
ಮುಖದಿ ಮೂಡಿದ
ಭಾವನೆಗಳಲ್ಲಿ
ಕಾಲ ಬದಲಾಗುತಿರುವುದನು ಕಂಡೆ...
==
ಗಣಕಯಂತ್ರದ ಮುಂದೆಯೂ ಕೂತು,
ಕಾಲ ಬದಲಾಗುತಿರುವುದನು ಕಂಡೆ...
ವಿದೇಶದಿ ವಿದ್ಯಾಭ್ಯಾಸಕ್ಕೆಂದು,
ಸಾಲ ಸೋಲ ಮಾಡಿ ಕಳಿಸಿದ,
ಮಗನ ಫೇಸ್-ಬುಕ್ ಖಾತೆಯ
ಅಪ್ಡೇಟ್ ಗಳಲಿ,
ಸೀಸೆಯ ಹಿಡಿದು,
ಬಾಲೆಯ ಜೊತೆಗೆ ಬಿಗಿದಪ್ಪಿಗೊಂಡು,
'F*** U' ಎನ್ನುವ ಸನ್ನೆಯ ಚಿತ್ರಗಳ,
ನೋಡಿದ ತಂದೆಯು
ಮನದಾಳದ ನೋವಿನಲಿ,
ಕಾಲ ಬದಲಾಗುತಿರುವುದನು ಕಂಡೆ...
==
ಕೂತು ಕೂತು ಸಾಕಾಗಿ,
ಅಲೆಮಾರಿಯಂತೆ ತಿರುಗುತಿರುವಾಗಲು,
ಕಾಲ ಬದಲಾಗುತಿರುವುದನು ಕಂಡೆ...
ಕಾಲ ಬದಲಾಗುತಿರುವುದನು ಕಾಣುತ,
ಅತ್ತಲೂ ಹೋಗದ,
ಇತ್ತಲೂ ಬರಲಾರದ,
ನನ್ನಂತಹ ಯುವಕರ,
ಸ್ಥಬ್ಧ ಮುಖದ ಹಿಂದಿರುವ ,
ಸಾವಿರಾರು ಪ್ರಶ್ನೆಗಳಲಿ
ಕಾಲ ಬದಲಾಗುತಿರುವುದನು ಕಂಡೆ...!!!
(ಚಿತ್ರ ಕೃಪೆ: ಅನಿಲ್ ಬೆಡಗಿ ಹಾಗು ದಿಗ್ವಾಸ್ ಹೆಗಡೆ)
ನಿಜ ಇವು ಕಾಲ ಬದಲಾಗುವುದರ ಸೂಚನೆ ಆದರೆ ಕಾಲವೇನು ಮಾಡುತ್ತೆ ಮನುಷ್ಯನ ವರ್ತನೆಗೆ... ಕಾಲ ಮೌನವಿಸಿದೆ ಮನುಷ್ಯನ ಬದಲಾವಣೆಗೆ.... ಹೊಸತನದ ಸಾಲುಗಳು ನಿಜಕ್ಕೂ ಚೆನ್ನಾಗಿವೆ... ಜೊತೆಗೆ ಬದಲಾವಣೆಯ ಹಾದಿಯಲ್ಲಿ ಅಪಾಯವನ್ನು ಸೂಚಿಸುವ ಪರಿಯೂ ಇದೆ... ಅಭಿನಂದನೆಗಳು ಹೀಗೆ ಹೊಸತನದ ಸಾಲುಗಳು ನಿನ್ನಿಂದ ಬರುತ್ತಲಿರಲಿ. ಅದಕ್ಕೆ ತಕ್ಕಂತ ಚಿತ್ರಗಳು ನೈಸ್...
ReplyDeleteನಿಮ್ಮ ಬ್ಲಾಗ್ follow ಮಾಡುತ
ReplyDeleteಕಾಲ ಬದಲಾಗುತಿರುವುದನು ಕಂಡೆ...
ಮನಸ್ಸಿಗೆ ಇಷ್ಟ ಆದದ್ದನ್ನು ಗಿಚೋಕೆ ಅಂತ
ಶುರುಮಾಡಿದ ಬ್ಲಾಗ್ ಲಿ,
ಮದುವೆ, ದಾಂಪತ್ಯದ ಕವನ ಬರಿತಿದ್ದವ...
ಜೀವನದ ಘಟ್ಟಗಳನ್ನ ಸೆರೆ ಹಿಡಿಯುವುದನ ಕಂಡೆ..
ಕಾಲ ಬದಲಾಗುತಿರುವುದನು ಕಂಡೆ ...
:-)
tumba chennagide....
ReplyDeleteಕವನದ ತಿರುಳಿಗೆ ಸರಿಹೋಗುವಂತಹ ಛಂದವನ್ನು ಬಳಸಿದ್ದು ನೋಡಿ ಖುಶಿಯಾಯಿತು. ಇದೀಗ ಒಳ್ಳೆಯ ಕವಿಯ ಲಕ್ಷಣ.
ReplyDeletenice
ReplyDeleteಏನೋ ದೋಸ್ತ.. ?
ReplyDeleteನೀ ಯಾವಾಗಿಂದ ಹೀಂಗ ಬದಲಾದಿ :)
ಮಸ್ತ್ ಮಸ್ತ್ ಸಾಲುಗಳು..
ವಿಚಾರಕ್ಕೆ ಹಚ್ಚುವ ಸಾಲುಗಳು..!
tumba chennagi moodide... nimma badalaaguttiruva saalugala .. badalaaguttiruva kaalagal.. badalaaguttiruva vichargala kavan...
ReplyDeleteSoopar doopar sir..!
ReplyDeleteಬದಲಾಗುತ್ತಿರುವ ಜಗತ್ತು
ReplyDeleteಆಧುನಿಕತೆಯ ನೆವದಲ್ಲಿ
ಮಾಡಬಾರದ್ದನ್ನೆಲ್ಲ ಮಾಡಿ
ಇತಿಮಿತಿಗಳು ಮರೆತು
ಎಲ್ಲವೂ ಅತಿ ಅನ್ನುವಂತಾಗಿ
ಭೂಮಾತೆಗೆ ಆಪತ್ತು ಎನ್ನುವ ಕಾಲ ಬಂದಿದೆ...ನಿಜ ಕಾಲ ಬದಲಾಗುತ್ತಿದೆ.
ಆದರೂ ಎಲ್ಲೋ ಸ್ವಲ್ಲ್ಪ ಮಾನವೀಯ ಮೌಲ್ಯಗಳೂ ಕಾಣುತ್ತಿವೆ.
ಚಂದದ ಕವನ ಶಿವು..:)
ಕವನ ವಾಸ್ತವ ಜಗತ್ತನ್ನು ಪ್ರತಿಬಿ೦ಬಿಸುತ್ತಿದೆ.ಚೆನ್ನಾಗಿ ಬರೆದಿದ್ದೀರಿ.
ReplyDeletegood..:)
ReplyDeletenamma tamma badalaagiddaane...
ReplyDeleteadakke ee kavana saakshi....
tumbaa chennaagide bro....
super.. super...
ellaa maatugaLu satya... adE nitya...
ಚೆಂದಿದೆ.
ReplyDeletechandhadha kavana shivu :)
ReplyDeleteಗುಡ್.
ReplyDeletehey sakhattaagide tammaa...seriously..good thought! keep it up!
ReplyDelete100 percent true and 100 percent sooooper....:P
ReplyDeleteliked it a lot.....
Oh! Superb lines Shivprakash.. ನಾನು ಪ್ರದೀಪ್.. ಪ್ರಕಾಶ್ ಹೆಗ್ಡೆಯವರ book release ನಲ್ಲಿ ಭೇಟಿ ಆಗಿದ್ವಲ್ಲ.. ನೆನಪಿದೆಯ? Following your blog.. :)
ReplyDeleteNice !
ReplyDeleteಶಿವೂ..ಸೂಪರ್..ಫೋಟೋದ ಜೊತೆಗೆ ಒಳ್ಳೆಯ ಲೈನ್ಸ...
ReplyDeleteನಿಮ್ಮವ,
ರಾಘು.
Good
ReplyDeleteseperb........:)
ReplyDeleteಶಿವಪ್ರಕಾಶರ ಕವನಗಳು
ReplyDeleteದಿನದಿಂದ ದಿನಕ್ಕೆ
ಬದಲಾಗುವದ ಕಂಡೆ ...
ಸುಂದರ ವಾಗಿದೆ