Wednesday, June 17, 2015

ಲೋ.. Party ಕೇಳ್ರಾಲೊ..

ಮೈಸೂರಿನ ಕಾಲೇಜ್ನಲ್ಲಿ ಓದುತ್ತಿದ್ದಾಗ, ಒಂದು ಬಾಡಿಗೆ ರೂಮ್ ಮಾಡಿಕೊಂಡು ನಾವು ನಾಲ್ಕು ಜನ ಸ್ನೇಹಿತರು(ನಾನು, ನಟ, ರಘು, ಸಂಗು) ಒಟ್ಟಿಗೆ ತಂಗಿದ್ದೆವು. ಹೀಗೆ ಒಂದು ಸೆಮಿಸ್ಟರ್ ಪರೀಕ್ಷೆಯ ಮುಂಚೆ ಕೆಲವು ದಿನಗಳ ರಜೆ ಇತ್ತು. ಪರೀಕ್ಷೆ ಹತ್ತಿರ ಬಂತೆಂದರೆ ನಮಗೆ ಎಲ್ಲಿಲ್ಲದ ಶ್ರದ್ದೆ ಬಂದುಬಿಡುತ್ತದೆ. ಹೀಗೆ ಶ್ರದ್ದೆಯಿಂದ(ಸಂದೇಹ ಬೇಡ.. :P !!!) ನಾವೆಲ್ಲಾ ಓದುತ್ತಿದ್ದಾಗ ನಮ್ಮ Classmate ಗೆಳೆಯ ಪ್ರೀತಮ್ ರೂಮ್ಗೆ ಬಂದ.
ಒಮ್ಮೆ ಎಲ್ಲರೂ ಅವನಿಗೆ ಹಾಯ್ ಹೇಳಿ ಮತ್ತೆ ನಮ್ಮ ಪುಸ್ತಕಗಳನ್ನು ಹಿಡಿದು ಕುಳಿತೆವು.
ಅವನು ನಮ್ಮನ್ನು ನೋಡಿ "ಲೋ, ಏನ್ರೋ ಹಿಂಗ್ ಓದ್ತಾ ಇದೀರಾ... ನನ್ಮಕ್ಳ...... ಫ್ರೆಂಡ್ ಬಂದಿದಾನೆ.... ಒಂದೆರಡು ನಿಮಿಷವಾದ್ರು ಮಾತಾಡಿಸಬೇಕು ಅಂತ ಗೊತ್ತಗೊಲ್ವ... ?" ಎಂದ.
ಅದಕ್ಕೆ "ನೀನು ಬಿಡಪ್ಪ... already ಪುಸ್ತಕಾನ ಎರಡು ರೌಂಡ್ ತಿರುಗಿಸಿ ಹಾಕಿರ್ತೀಯ.. ಅದಕ್ಕೆ ಆರಾಮ್ ಆಗಿ ಇದೀಯ.. ನಾವು ನೋಡು ಇಲ್ಲಿ ಬಟ್ಟೆ ಹರ್ಕೊಂಡು ಈಗ ಓದ್ತಾ ಇದೀವಿ.. " ಎಂದ ನಟ.
ಅದಕ್ಕೆ ಪ್ರೀತಮ್ "ಅಲ್ಲ ಮಗ, ಹೊಸ ಬಟ್ಟೆ ಹಾಕೊಂಡು ಬಂದಿದೀನಿ... ನೋಡಿ ಚನ್ನಾಗಿದೆ ಅಂತ ಅದರೂ ಹೇಳ್ಬಾರ್ದ.. " ಎಂದ.
ಅದಕ್ಕೆ ನಾವು "Dress ಚನ್ನಾಗಿದೆ ಮಗ.. ಸೂಪರ್.. " ಅಂದ್ವಿ..
ನಾವು ನಾಲ್ಕು ಜನ ಮತ್ತೆ ಪುಸ್ತಕ ಹಿಡಿದು ಕುಳುತ್ವಿ..
ಎರಡು ನಿಮಿಷ ಸುಮ್ಮನಿದ್ದು "ಮಗ... " ಅಂತ ಪ್ರೀತಮ್ ರಾಗ ಎಳೆದ..
"ಏನೋ ಪ್ರೀತಮ್ ನಿನ್ ಗೋಳು... ಎಕ್ಷಾಮ್ ಕಣೋ.. ಓದೋಕೆ ಬಿಡೋ.. " ಎಂದ ನಟ..
"ಲೋ.. ಮಕ್ಳ.. ಇವತ್ತು ನನ್ನ ಬರ್ತ್ ಡೇ ಕಣೋ.. " ಎಂದ ಪ್ರೀತಮ್..
ನಾವು ನಾಲ್ಕು ಜನ ಒಬ್ಬೊಬ್ಬರಾಗಿ "ಹ್ಯಾಪಿ ಬರ್ತ್ ಡೇ ಮಗ" ಅಂತ Wish ಹೇಳಿ ಮತ್ತೆ ಪುಸ್ತಕ ಹಿಡಿದೆವು.
ಮತ್ತೆ ಒಂದೆರಡು ನಿಮಿಷ ನೋಡಿ, ಮತ್ತೆ "ಮಗ... " ಅಂತ ರಾಗ ಎಳೆದ ಪ್ರೀತಮ್..
"ಮತ್ತೇನೋ.. " ಎಂದ ಸಂಗು..
ಅದಕ್ಕೆ ಕೋಪದಿಂದ ಪ್ರೀತಮ್ ರಾಗ ಎಳಿತಾ.. "ಲೋ ಮಕ್ಳ... ನನ್ ಬರ್ತ್ ಡೇ ದು... Party ಕೇಳ್ರಾಲೊ.. " ಅಂದ... :) :)




ನಮ್ಮ ಪ್ರೀತಮ್ ನಂತೆ ಯಾರ್ಯಾರಿಗೆ Exam Time ನಲ್ಲಿ "ಹ್ಯಾಪಿ ಬರ್ತ್ ಡೇ" ಮಿಸ್ ಆಗಿದೆಯೋ ಅವರೆಲ್ಲರಿಗೂ "ಹ್ಯಾಪಿ ಬರ್ತ್ ಡೇ.. ".
ಅಂದಹಾಗೆ.. ನಿಮ್ಮ Party ಯಾವಾಗ.. ?


ಪ್ರೀತಿಯಿಂದ,
ಶಿವಪ್ರಕಾಶ್ ಎಚ್. ಎಮ್

Share/Save/Bookmark

Thursday, June 11, 2015

ಬೆಳ್ಳಗಿರುವುದೆಲ್ಲ ಹಾಲಲ್ಲ..

ಸಿಹಿಯಾಗಿರುವುದೆಲ್ಲ,
ಅಮೃತವಲ್ಲ... 
ಕಹಿಯಾಗಿರುವುದೆಲ್ಲ,
ವಿಷವಲ್ಲ... 

ಕಹಿಯಲ್ಲೂ ಸಿಹಿ ಇರಬಹುದು.. 
ಸಿಹಿಯಲ್ಲೂ ಕಹಿ ಇರಬಹುದು... 
ನೋವಲ್ಲಿ ನಲಿವಿದ್ದಂತೆ... 
ನಲಿವಲ್ಲಿ ನೋವಿದ್ದಂತೆ.... 

ದಾರಿಯೊಂದು ಕವಲೊಡೆದು 
ಎರಡಾಗಬಹುದು,
ಯಾರಿಗೆ ಗೊತ್ತೇ.... ? ಅದೇ ಕವಲೊಡೆದ ದಾರಿ,
ಮುಂದೆ ಒಂದಗಲೂಬಹುದು.. 

ಮೋಡದಿಂದ ಸುರಿದ ಮಳೆ ನೀರೆಲ್ಲಾ,
ಭೂಮಿ ಸೇರದು... 
ಭೂಮಿ ಸೇರಿದ ಮಳೆ ನೀರೆಲ್ಲಾ
ಮತ್ತೆ ಮೋಡ ಸೇರದಿರಬಹುದು.. 

ಉಸಿರು ನಿಂತಾಗ,
ದೇಹ ಸತ್ತಿರಬಹುದು... 
ದೇಹ ಸತ್ತಿದ್ದಾರೂ, 
ಆತ್ಮ ಬದುಕಿರಲೂಬಹುದು... 

ಶಾಂತಿದೂತನಲ್ಲೊಬ್ಬ,
ಕ್ರಾಂತಿಕಾರಿ ಇರಬಹದು,
ಕ್ರಾಂತಿಕಾರಿಯಲ್ಲೊಬ್ಬ,
ಶಾಂತಿದೂತನಿರಬಹುದು... 

ಅಹಿಂಸವಾದಿಗಳೆಲ್ಲ,
ಸಸ್ಯಹಾರಿಗಳಲ್ಲ...    
ಹಿಂಸವಾದಿಗಳೆಲ್ಲ,
ಮಾಂಸಹಾರಿಗಳಲ್ಲ... 

** ಹೀಗೆ ಹಿಟ್ಲರ್ ಬಗ್ಗೆ ಯೋಚಿಸುತ್ತಿದ್ದಾಗ ಮೂಡಿದ ಸಾಲುಗಳಿವು..  
** ಹಿಟ್ಲರ್ ಒಬ್ಬ ಸಸ್ಯಾಹಾರಿ ಎಂದು ಕೆಲವರು ಹೇಳುತ್ತಾರೆ.. ಕೆಲವರು ಈ ವಾದವನ್ನು ಸುಳ್ಳು ಎಂದೂ ಹೇಳುತ್ತಾರೆ..
** ಒಬ್ಬ ವ್ಯಕ್ತಿ, ಸನ್ನಿವೇಶ, ಪರಿಸರ, ದೃಶ್ಯ ನೋಡಿ ತಾಳೆ ಹಾಕಿ ಹೇಳುವುದು ಯಾವಾಗಲು ಸತ್ಯವಾಗಿರುವುದಿಲ್ಲ ಎನ್ನುವ ಆಲೋಚನೆಯಿಂದ ಬರೆದ ಸಾಲುಗಳಿವು.. 
** ಸ್ಫೂರ್ತಿ (ಗೆಳೆಯ ಸತೀಶ್  ಅರ್ ಬೆಂಗಳೂರು ಕಳಿಸಿದ ಮೆಸೇಜ್) :
Can u judge who is the better person out of these 3 ?

Mr A - He had friendship with bad politicians, consults astrologers, two wives, chain smoker, drinks eight to 10 times a day.

Mr B - He was kicked out of office twice, sleeps till noon, used opium in college & drinks whiskey every evening.

Mr C - He is a decorated war hero,a vegetarian, doesn't smoke , doesn't drink and never cheated on his wife.

You would want Mr.C rite.


But..
Mr. A was Franklin Roosevelt!

Mr. B was Winston Churchill!!

Mr C Was ADOLF HITLER!!!

Strange but true..
Its risky to judge anyone by his habits !
Character is a complex phenomenon.

So every person in ur life is important ,don't judge them ,accept them.
 

ಇಂತಿ,
ಶಿವಪ್ರಕಾಶ್,





Share/Save/Bookmark

Thursday, June 4, 2015

ಅರವತ್ತಕ್ಕೆ ಅರುವು-ಮರುವು

ಅರವತ್ತಕ್ಕೆ ಅರುವು-ಮರುವು,
ಆದರೆ, ನಮಗಿನ್ನೂ ಕೇವಲ ಮೂವತ್ತು... !!!

ಒಂದು ಕೈಯಲ್ಲಿ ಮೊಬೈಲು,
ಇನ್ನೊಂದು ಕೈಯಲ್ಲಿ ಕಾಫಿ ಕಪ್,
ಯಾವುದು ಬಾಯಿಗೋ, ಯಾವುದು ಕಿವಿಗೋ,
ಅರಿಯದ ಹೊತ್ತು....
ನಮಗಿನ್ನೂ ಕೇವಲ ಮೂವತ್ತು... !!!

ಲಿಫ್ಟಿನ ಮುಂದೆ ಆಕ್ಸೆಸ್ ಕಾರ್ಡ್ ಹಿಡಿದು ನಿಲ್ಲುವ,
ವಾಶ್ ಬೆಸಿನ್ನಿನಲಿ ಸೂಸು ಮಾಡುವ,
ಇಂದು ನಾ ನಡೆದಿದ್ದೆಸ್ಟು..?? ಎಂದು App ಲಿ ನೋಡುವ...
ನಮಗಿನ್ನೂ, ಕೇವಲ ಮೂವತ್ತು... !!!

ರಸ್ತೆ ಮಧ್ಯದಿ ನಿಂತು, ನಾನೆತ್ತ ಹೋಗುತಿರುವೆನೆಂದು ಯೋಚಿಸುವ,
ನ್ಯೂಸ್ ಪೇಪರ್ ಕೈಯಲಿ ಹಿಡಿದು, ಜೂಮ್ ಮಾಡ ಹೊರಟಿರುವ,
ಪ್ರಜ್ಞೆ ಇಲ್ಲದ ಹೊತ್ತು... 
ನಮಗಿನ್ನೂ, ಕೇವಲ ಮೂವತ್ತು... !!!

ಹ್ಯಾಂಗ್-ಔಟ್ ಅನ್ನೂ ಕಂಪ್ಯೂಟರ್ನಲ್ಲೆ ಮಾಡಿ, 
ಟು ಪ್ಲಸ್ ತ್ರೀ ಗೂ ಮೊಬೈಲ್ನ ಕ್ಯಾಲ್ಸಿ ತೆಗೆವ,
ಇದ್ದಲ್ಲೇ ಎಲ್ಲ ಬೇಕೆನುವ...
ನಮಗಿನ್ನೂ, ಕೇವಲ ಮೂವತ್ತು... !!!

ಅರವತ್ತಕ್ಕೆ ಅರುವು-ಮರುವು,
ಆದರೆ, ನಮಗಿನ್ನೂ ಕೇವಲ ಮೂವತ್ತು... !!!

Share/Save/Bookmark