ನಾನು ನನ್ನ ಸ್ನೇಹಿತನ ಮದುವೆಗೆ ಹೈದರಾಬಾದಿಗೆ ಹೋಗಿದ್ದೆ, ಅಲ್ಲಿ ನನ್ನ ಹಳೆಯ ಸ್ನೇಹಿತರು ಬಂದಿದ್ದರು. ಮದುವೆ ಮುಗಿದ ನಂತರ ಹಳೆಯ ಸ್ನೇಹಿತರೆಲ್ಲ ಸೇರಿ ಹೈದರಾಬಾದ್ ನೋಡೋಣ ಎಂದು ಹೊರಟೆವು. ಅಲ್ಲೇ ಹತ್ತಿರದಲ್ಲಿದ್ದ ಬಸ್ಸ್ ಸ್ಟಾಪ್ ಗೆ ಹೋದೆವು. ಬಸ್ ಹತ್ತಿ ಸೆಕಿಂದ್ರಬಾದ್ ಗೆ ಟಿಕೆಟ್ ತೆಗೆದು ಕೊಂಡೆವು. ಬಸ್ಸ್ ನಲ್ಲಿ ಕುಳಿತುಕೊಳ್ಳಲು ಸೀಟು ನಮಗ್ಯಾರಿಗೂ ಸಿಗಲಿಲ್ಲ . ಅಂತು ಇಂತು ಎರಡು ಮೂರು ಸ್ಟಾಪ್ ಗಳ ನಂತರ ನನಗೆ ಸೀಟು ದೊರಕಿತು. ಪುನಃ ಎರಡು ಮೂರು ಸ್ಟಾಪ್ ಗಳ ನಂತರ ನನ್ನ ಪಕ್ಕದಲ್ಲಿದ್ದವರು ಏಳಲು ಆರಂಭಿಸಿದರು. ನಾನು ತಕ್ಷಣ ನನ್ನ ಸ್ನೇಹಿತರನ್ನು ಕರೆಯುತ್ತಾ ಆ ಸೀಟುಗಳನ್ನೂ ಹಿಡಿದುಗೊಂಡೆ. ನನ್ನ ಸ್ನೇಹಿತರು ಕುಳಿತುಕೊಳ್ಳಲು ಓಡಿ ಬಂದರು. ಅವರೂ ಏಳಿದ ತತ್ಕ್ಷಣ ಎಲ್ಲರು ಏಳಲು ಆರಂಭಿಸಿದರು. ನಾನಗೆ ಆಶ್ಚರ್ಯವಾಯಿತು. ನನಗಾಗ ತಿಳಿಯಿತು ಅದು ಲಾಸ್ಟ್ ಸ್ಟಾಪ್... :D
ಸುಮ್ಮನೆ ಎಲ್ಲರು ನಗುತ್ತಾ ಅಲ್ಲಿ ಇಳಿದೆವು.
********************************************************************************************
So... Nice finny Shivu sir
ReplyDeleteThank you Madam :)
Delete