ಬೇಸಿಗೆಗಾಲ ಆದುದರಿಂದ, ಮನೆಯಲ್ಲಿ ಮಲಗೋಕೆ ಬಹಳ ಕಷ್ಟ. ಹಾಗಾಗಿ ಮನೆಯ ಮೇಲೆ ಮಲಗೋದು ರೂಡಿ. ಬಯಲಾಟ ಅಂದ್ರೆ ಕೇಳಬೇಕೆ, ಜೋರಾಗಿ ಕೇಳಿಸುವ ಶಬ್ದ. ಅದು ಅಲ್ಲದೆ ಆ ಬಯಲಾಟ ನಡೀತಾ ಇದ್ದುದು ನನ್ನ ಚಿಕ್ಕಮ್ಮನ ಮನೆಯ ತುಂಬಾ ಹತ್ತಿರದಲ್ಲಿ. ಹಾಗಾಗಿ ಆ ಶಬ್ದಕ್ಕೆ ನಿದ್ದೆ ಬರುವುದು ದೊಡ್ಡ ವಿಷಯವೇ.
ನಮ್ಮ ಅಜ್ಜಿಯ ಮನೆಯ ಚಾಲಕ ಶಿವು ಕಾರಿನಲ್ಲಿ ಮಲುಗುತ್ತಿದ್ದುದನ್ನು ಕಂಡು, ಕಾರಿನಲ್ಲಿ ಏಕೆ ಮಲುಗುತಿ, ಮನೆಯ ಮೇಲೆ ಗಾಳಿ ಚನ್ನಾಗಿ ಬರುತ್ತೆ. ಅಲ್ಲೇ ಮಲಗು ಬಾ ಅಂದೇ. ಅವನು ಸರಿ ಅಂತ ನನ್ನ ಜೊತೆ ಬಂದು, ಮಹಡಿಯ ಮೇಲೆ ಮಲಗಿದ. ನಾನು ಸ್ವಲ್ಪ ಪ್ರಯಾಣ ಮಾಡಿ ದಣಿದಿದ್ದರಿಂದಲೋ ಏನೋ, ನನಗೆ ಬಯಲಾಟದ ಸ್ವಬ್ದ ಹೆಚ್ಚಾಗಿ ನಿದ್ದೆಗೆ ಅಡ್ಡಿಯಾಗಲಿಲ್ಲ. ಚನ್ನಾಗಿ ಕುಂಬಕರ್ಣ ನಿದ್ದೆ ಮಾಡಿದೆ.
ನಾನು ಬೆಳಿಗ್ಗೆ ಎದ್ದಾಗ ಸೂರ್ಯ ನನ್ನನ್ನು ಕುಕ್ಕಿ ಕುಕ್ಕಿ ನೋಡುತ್ತಿದ್ದ. ಬಹುಶ ನಾನು ಇನ್ನು ಮಲಗಿರುವುದನ್ನು ಕಂಡು ಅವನಿಗೆ ಹೊಟ್ಟೆಕಿಚ್ಚೋ ಏನೋ ?.
ಸರಿ ನಾನು ಎದ್ದಾಗ, ನನ್ನ ಕಣ್ಣ ಮುಂದೆ ಶಿವು ಬಂದು ಕೇಳಿದ, " ನಿಮಗೆ ರಾತ್ರಿ ನಿದ್ದೆ ಬಂತಾ ? "
ನಾನು ಚನ್ನಾಗಿ ಬಂತು ಕಣೋ, ಅದು ಸರಿ ಯಾಕೆ ಹಾಗೇ ಕೇಳಿದೆ ?
ಆಗ ಅವನು: " ರಾತ್ರಿ ಬಯಲಾಟದ ಶಬ್ದಕ್ಕೆ ಸರಿಯಾಗಿ ನಿದ್ದೆ ಬರಲಿಲ್ಲ, ಮದ್ಯ ಮದ್ಯ ಎಚ್ಚರವಾಗುತ್ತಿತ್ತು."
ನಾನು ಅಯ್ಯೋ ಪಾಪ ಅಂದೆ.
ಆಗ ಅವನು: ನಿಮಗೊಂದು ಮಜಾ ಗೊತ್ತೇ ?
ನಾನು: ಏನು ?
ಅವನು: "ರಾತ್ರಿ ಬಯಲಾಟ ನಡೆಯುವಾಗ, ನನಗೆ ಮದ್ಯ ಎಚ್ಚರವಾದಾಗ ಏನು ಕೂಗಿದರು ಗೊತ್ತೇ?, ದ್ರೋಪದಿಯ ಪಾತ್ರದಾರಿ ಎಲ್ಲೋ ಹೋಗಿರಬೇಕು ಅಂತ ಕಾಣಿಸುತ್ತೆ, ಅದಕ್ಕೆ ಅವಳನ್ನು ಪರದೆಯ ಹಿಂದೆ ಬರಹೇಳಲು ಮೈಕ್ ನಲ್ಲಿ ಕೊಗಿದ್ದು : ಅಮ್ಮ ದ್ರೋಪದಿ, ಯಾರ ಮನೆಯಲ್ಲಿ ಟೀ ಕುಡಿತಾ ಕೂತಿದಿಯಾ ? , ಬೇಗಾ ಬಾ, ಇಲ್ಲಿ ಕೌರವರು ವೇಟಿಂಗೂ (waiting) "
ಬಹುಶ ಕೌರವರು, ದ್ರೌಪದಿಯ ವಸ್ತ್ರಾಪಹರಣದ ದೃಶ್ಯಕ್ಕಾಗಿ ಕಾದಿದ್ದರೇನು ?....
ನಾನು ಅದನ್ನು ಕೇಳಿ ನಕ್ಕಿದ್ದೋ ನಕ್ಕಿದ್ದು...
ಹ್ಹಾ...ಹ್ಹಾ...!
ReplyDeleteಹ್ಹೋ...ಹ್ಹೋ...!
" ದ್ರೋಪದಿ ...!
ಸೀರೆ ಸೆಳಿಲಿಕ್ಕೆ ಕೌರವರು ವೇಟಿಂಗು...!!
ಮಸ್ತ್ ಇದೆ... ಶಿವಪ್ರಕಾಶ್...!
ದೊಡ್ಡದಾಗಿ ಗಹಗ್ಗಿಸಿ ನಕ್ಕಿದ್ದೇನೆ...!
ನಕ್ಕಿಸಿದ್ದಕ್ಕೆ ಅಭಿನಂದನೆಗಳು...
ಹ ಹ ಹ ,
ReplyDeleteಸೊಗಸಾಗಿದೆ ಹಳ್ಳಿ ನಾಟಕದ ವಿವರಣೆ. ಧನ್ಯವಾದಗಳು ನಗಿಸಿದ್ದಕ್ಕೆ
ದ್ರೌಪದಿಗೂ ಕೂಡ ಒಂದು ಚೇಂಜ್ ಬೇಕಾಗಿತ್ತೇನೋ, ಅದಕ್ಕೆ ಹಾಗೆ ಕಣ್ಮರೆಯಾದದ್ದು! ಹ.. ಹ್ಹ ...ಹಾ ...ಹ್ಹಾ !!!
ReplyDeleteVery funny!
ReplyDeleteಶಿವಪ್ರಕಾಶ ಬಯಲಾಟ ನೋಡುವುದು ಬಹುಷ್ಹ ನಮ್ಮ ಪೀಳಿಗೆಗೆ ಮುಗಿಯಿತೇನೋ
ReplyDeleteಇರಲಿ.ನೀವು ಹಳೆಯಕೆಲವು ನೆನಪು ಮಾಡಿಕೊಟ್ಟಿರುವಿರಿ. ಧನ್ಯವಾದಗಳು.
ಶಿವಪ್ರಕಾಶ್,
ReplyDeleteದ್ರೌಪಧಿ ಪ್ರಸಂಗ ಓದಿ ನಗು ಬಂತು....
ಬಹುಶಃ ಅಧುನಿಕ ದ್ರೌಪಧಿಗಳ ಕತೆಯೆಲ್ಲಾ ಹೀಗೆ ಅಲ್ಲವೇ...
ಶಿವಪ್ರಕಾಶ್,
ReplyDeleteತುಂಬಾ ಚೆನ್ನಾಗಿದೆ... ನಮ್ಮ ಊರಿನಲ್ಲು ನಾಟಕ ನಡೆಯುತ್ತ ಇತ್ತು ನಾವು ಹೋದಾಗಲೆಲ್ಲ ಹೀಗೆ ಏನಾದರೊಂದು ಪ್ರಸಂಗ ನಡೆಯುತ್ತಲಿತ್ತು ಎಲ್ಲವನ್ನು ನೆನಪು ಮಾಡಿದಿರಿ ಹ ಹ ಹ
ಈಗ ಯಾರು ಹೆಚ್ಚು ನಾಟಕ ಮಾಡೊಲ್ಲ ನೋಡೋರು ಇಲ್ಲ.
ಹ್ಹ ಹ್ಹ ಮಸ್ತ ಮಜವಾಗಿದೆ ....! ಇಂತಹ ದೃಶ್ಯ ವಾಣಿಗಳೂ ತುಂಬ ಚನ್ನಾಗಿರುತ್ತವೆ ನಾಟಕದ ಮಧ್ಯದಲ್ಲಿ .....
ReplyDeleteರೀ ಶಿವೂ
ದ್ರೋಪದಿನ ಕರೆದಿದ್ದು ಕೌರವರು ವೇಟಿಂಗ್ ಅಂತಲ್ಲ ,ಜನ ವೇಟಿಂಗ್ ಅಂತ ,
ಇಲ್ಲಾಂದರೆ ಜನ ನಮನ್ನ ವಸ್ತ್ರಾಭರಣ ಮಾಡಿಬಿಟ್ಟರು ಅಂತ .....!
ಈ ದೃಶ್ಯನೆ ಅಂತಹುದು ....!.
ನಾನು ಚಿಕ್ಕವನಿರುವಾಗ್ ಟಿ.ಎಸ . ನಾಗಾಭಾರಣ್ ರವ ಧಾರವಾಹಿ ನೋಡಿದ ನೆನಪಾಯಿತು ( ಧಾರವಾಹಿ ಹೆಸರು ಗೂತ್ತಿಲ್ಲ . ಆದರೆ ಹಳ್ಳಿಯವರಿಂದ ನಾಟಕ ಮಾಡಿಸುವುದು. ಟಿ.ಎಸ . ನಾಗಾಭಾರಣ್ ನವರು ನೀರ್ದೆಶಕರ ಪಾತ್ರ .
ಧಾರವಾಹಿ ತುಂಬ ಚೆನ್ನಾಗಿತು )
ಪ್ರಕಾಶ್ ಅವರೇ,
ReplyDeleteದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
=================
ಗುರುಮೂರ್ತಿ ಅವರೇ,
ದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
=================
SSK ಅವರೇ,
ಹೌದು ರೀ, ನನಗೂ ಕೂಡ ಅದೇ ಸಂಶಯ :D
ದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
=================
sunaath ಅವರೇ,
ದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
=================
umesh desai ಅವರೇ,
ಹಳ್ಳಿಯಕಡೆ ಬಯಲಾಟ ಆಡುವ ಸಂಪ್ರದಾಯ ಇನ್ನು ಇದೆ, ಆದರೆ ಪ್ರೋತ್ಸಾಹ ಕೊಡುವುವರು ಬಹಳ ಕಮ್ಮಿಯಾಗಿದ್ದಾರೆ.
ದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
=================
ಶಿವು ಅವರೇ,
ನೀವು ಹೇಳಿದ್ದು ಸರಿ, ಆಧುನಿಕ ಯುಗದಲ್ಲಿ ದ್ರೌಪದಿ ಇದ್ದಿದ್ದರೆ ಹೀಗೆ ಮಾಡುತ್ತಿದ್ದಳೆನೋ :)
ದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
=================
ಮನಸು ಅವರೇ,
ಹೌದು ರೀ, ನಾಟಕದ ಮಧ್ಯ ಮಧ್ಯ ನಡೆಯುವ ಅವಾಂತರಗಳು ತುಂಬಾ ಚನ್ನಾಗಿರ್ತವೆ..
ದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
=================
Basavaraja ಅವರೇ,
ಹೌದು ರೀ, ಸ್ವಲ್ಪ ಎಡವಟ್ಟು ಆಯ್ತು ಅಂದ್ರೆ, ಜನ ಹಿಡಿಯೋದೇ ನಾಟಕನ organize ಮಾಡಿದೋರನ್ನ..
ದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
ದ್ರೌಪದಿ ಪ್ರಸಂಗ ಓದಿ ನಗು ಬಂತು. 'ಶ್ರೀಕೃಷ್ಣಸಂಧಾನ' ನಾಟಕದಲ್ಲಿ ಇಂಥ ತಮಾಷೆಯ ದೃಶ್ಯಗಳು ಇವೆ.
ReplyDeleteDeepasmitha ಅವರೇ,
ReplyDeleteದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...
ಏನು ಸರ್ ದ್ರೌಪದಿಯಾ ಕತೆ ಹೇಳಿ ಹೊಟ್ಟೆ ಹುಣ್ಣು ಆಗೋಷ್ಟು ನಗಿಸಿಬಿಟ್ಟರಲ್ಲ....
ReplyDeleteಜ್ಞಾನಮೂರ್ತಿ ಅವರೇ,
ReplyDeleteದ್ರೌಪದಿಯ ಅವಾಂತರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...