Monday, October 12, 2009

ಸಾಗುತ ದೂರ ದೂರ...



ಮೂರು ವರ್ಷಗಳ ಹಿಂದೆ ನಡೆದ ಘಟನೆ.
ನಾನು ಹಾಗು ನಟ ಇಬ್ಬರು ಸೇರಿ ಬೆಂಗಳೂರಿನಿಂದ ಬಳ್ಳಾರಿಗೆ ಹೋಗಬೇಕಾಗಿತ್ತು. ಬಳ್ಳಾರಿ ಹತ್ತಿರ ಇರುವ 'ಕುಡತಿನಿ' ನನ್ನ ಊರು. ಆದರೆ ನಾವು ಹೋಗುತ್ತಿದ್ದುದು ಬೇರೆ ಕೆಲಸದ ನಿಮಿತ್ತ. ಅಲ್ಲಿ ಸ್ವಲ್ಪ ಸುತ್ತುವ ಕೆಲಸಗಳಿದ್ದರಿಂದ, ತಿರುಗಾಡಲು ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋದರೆ ಒಳಿತು ಎಂದು ನಿರ್ಧರಿಸಿದೆವು. ೩೦೦ ಕಿಲೋಮೀಟರುಗಳ ಪ್ರಯಾಣವನ್ನು ಬೈಕಿನಲ್ಲೇ ಮಾಡಲು ಸಜ್ಜಾದೆವು. ಜೀವನದಲ್ಲಿ ಮೊದಲಬಾರಿಗೆ, ಬೈಕಿನಲ್ಲಿ ಇಷ್ಟು ದೂರದ ಪ್ರಯಾಣ ಮಾಡ್ತಾ ಇರೋದು. ಬೆಂಗಳೂರನ್ನು ಬೆಳಗಿನಜಾವ ಬಿಡುವ ಯೋಚನೆ ಮಾಡಿದ್ರು. ಕೆಲವು ಸಣ್ಣ ಪುಟ್ಟ ಕೆಲಸಗಳು ಇದ್ದುದರಿಂದ, ನಾವು ಬಿಡುವುದು ತಡವಾಯಿತು. ನಾವು ಬೆಂಗಳೂರು ಬಿಟ್ಟಾಗ ಮಧ್ಯಾನ ೪ ಗಂಟೆ. ಬೆಂಗಳೂರು ದಾಟುವುದರೊಳಗೆ ಒಂದು ಗಂಟೆ ಜಾರಿ ಹೋಯಿತು. ನಾವು ತುಮಕೂರು ಸೇರಿದಾಗ ಸಮಯ ಸಂಜೆ ೬ ಗಂಟೆ.

ಆಗಸದ ಸೂರ್ಯನಿಗೆ ಅವತ್ತು ಏನು ಕೆಲಸವಿತ್ತೇನೋ..?..
ಸ್ವಲ್ಪ ಬೇಗಾನೆ ಮರೆಯಾಗಲು ಶುರು ಮಾಡಿದ...
ಸರಿ, ತುಮಕೂರಿನಲ್ಲಿ ಒಂದು ಕಪ್ ಟೀ ಕುಡಿದು, ಸ್ವಲ್ಪ ವಿಶ್ರಾಂತಿ ಪಡೆದು ಮುಂದುವರೆದೆವು.
ಸೂರ್ಯ ಮರೆಯದಂತೆ, ಕತ್ತಲು ಕವಿಯಾಲರಂಬಿಸಿತು. ಬೈಕಿನ ಹೆಡ್ ಲೈಟ್ ಹೊತ್ತಿಸಿದೆವು. ಅದೇನು ತೊಂದರೆಯಾಗಿತ್ತೋ ಏನೋ ಹೆಡ್ ಲೈಟ್ ನಿಂದ ಬೆಳಕು ತುಂಬಾ ಕಡಿಮೆ ಬರುತ್ತಿತ್ತು..ಅದನ್ನು ಹಾಕುವುದು ಒಂದೇ. ಹಾಕದಿರುವುದು ಒಂದೇ. ಮುಂಚೆ ಎಲ್ಲ ಸರಿಯಾಗಿತ್ತು. ಇದ್ದಕ್ಕಿದ್ದ ಹಾಗೆ ಈ ಹೆಡ್ ಲೈಟ್ ಕೈಕೊಟ್ಟಿದೆ. ಕತ್ತಲದಂತೆ ಮುಂದೆ ಏನು ಕಾಣಿಸದಾಯ್ತು. ಹಾಗೆ ನಿಧಾನವಾಗಿ ರಸ್ತೆಯಲ್ಲಿ ಬಿಡಿಸಿದ ಬಿಳಿಪಟ್ಟಿಯ ಮೇಲೆ ನಾನೊಂದು ೫೦ ಕಿಲೋಮೀಟರು ನಡೆಸೋದು, ಅವನೊಂದು ೫೦ ಕಿಲೋಮೀಟರು ನಡೆಸೋದು.. ಹೀಗೆ "ಸಾಗುತ ದೂರ ದೂರ......, ಬಾ ಬಳ್ಳಾರಿ ಬೇಗ....."

ಬಳ್ಳಾರಿಗೆ ಇನ್ನು ೪೦ ಕಿಲೋಮೀಟರು ಬಾಕಿಯಿತ್ತು. ಆಗ ಸಮಯ ರಾತ್ರಿ ೧೨ ಗಂಟೆ. ಕೆಲವು ಪೊಲೀಸರು ರಸ್ತೆಯಲ್ಲಿ ಹೋಗಿಬರುತ್ತಿದ್ದ ವಾಹನಗಳ ವಿಚಾರಣೆ ನಡೆಸುತ್ತ ನಿಂತಿದ್ದರು. ಹಾಗೆ ನಮ್ಮ ಬೈಕನ್ನು ನಿಲ್ಲಿಸಿದರು. ಗಾಡಿಯ ಪುಸ್ತಕ ಹಾಗು ಗಾಡಿ ನಡೆಸುತ್ತಿದ್ದ ನನ್ನ ಲೈಸನ್ಸ್ ಕೇಳಿದ್ರು. ಕೊಟ್ವಿ. ಎಲ್ಲ ಸರಿಯಾಗಿ ಇತ್ತು..
"ಯಾಕೆ ಇಷ್ಟು ಹೊತ್ತಿನಲ್ಲಿ ಹೋಗ್ತಾ ಇದ್ದೀರಾ...?"
ನಾವು ಸಮಂಜಸವಾದ ಕಾರಣಗಳನ್ನು ಕೊಟ್ಟೆವು.
ಆಗ ಅವರು... "ಸರಿ, ಇಷ್ಟು ಹೊತ್ತಿನಲ್ಲಿ ಹೋಗೋದು ಸೂಕ್ತವಲ್ಲ, ಇದು ಹೈವೆ (ಹೆದ್ದಾರಿ).. ಬಹಳ ಹುಷಾರ್ ಆಗಿ ಹೋಗ್ಬೇಕು. ಮುಂದೆ ಸ್ವಲ್ಪ ಡೇಂಜರ್ ದಾರಿ ಇದೆ. ನಿಧಾನವಾಗಿ ನೋಡ್ಕೊಂಡು ಹೋಗಿ.." ಎಂದು ಸಲಹೆಯನಿತ್ತರು.
ನಾವು "ಸರಿ ಸರ್" ಎಂದು ಹೇಳಿ.. ನಮ್ಮ ಪಯಣ ಮುಂದುವರೆಸಿದೆವು.

ನಾನು ತುಂಬಾ ನಿಧಾನವಾಗಿ ಗಾಡಿ ನಡೆಸುತ್ತಿದ್ದೆ..
ಹಿಂದೆ ಕೂತಿದ್ದ ನಟ.... "ಲೋ, ಸ್ವಲ್ಪ ಜೋರಾಗಿ ನಡೆಸೋ...ಬೇಗ ಊರು ತಲುಪೋಣ"
ನಾನು : "ನಟ, ಮುಂದೆ ಏನು ಕಾಣಿಸ್ತಾ ಇಲ್ಲ... ಜೋರಾಗಿ ನಡೆಸೋದು ಕಷ್ಟ..."
ನಟ : "ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೇನೇ....., ಬಿಡು ನಾನೇ ನಡೆಸ್ತೀನಿ..."
ಸರಿ, ನೀನೆ ನಡೆಸು ಬಾ ಅಂತ ಹೇಳಿ ನಾನು ಹಿಂದಕ್ಕೆ ಕುಳಿತೆ.
ಈಗ ನಟ ಗಾಡಿ ನಡೆಸಲು ಶುರು ಮಾಡಿದ.
ಒಂದು ೨ ಕಿಲೋಮೀಟರು ಇದ್ದದ್ರಲ್ಲೇ ಜೋರಾಗಿ ಗಾಡಿ ಸಾಗ್ತಾ ಇತ್ತು...
ಏನಾಯ್ತೋ ಗೊತ್ತಿಲ್ಲ.. ಇಬ್ಬರು ಇದ್ದಕಿದ್ದ ಹಾಗೆ ಮದ್ಯರಸ್ತೆಯಲ್ಲಿ ಬಿದ್ದುಬಿಟ್ಟೆವು...
ಸುತ್ತ ಮುತ್ತ ಒಂದು ನರಪ್ರಾಣಿ ಸಹಿತ ಇಲ್ಲ. ಸುತ್ತಲು ಬರಿ ಕತ್ತಲು ಮಾತ್ರ ಕಾಣಿಸ್ತಿದೆ.
ಹೆದ್ದಾರಿಯ ರಸ್ತೆ ಮದ್ಯದಲ್ಲಿ ಇಬ್ಬರು ಅನಾಥರಾಗಿ ಬಿದ್ದಿದಿವಿ.
ನಟನಿಗೆ ಜಾಸ್ತಿ ಪೆಟ್ಟಾಗಿತ್ತು. ನನಗೂ ಸ್ವಲ್ಪ ಪೆಟ್ಟಾಗಿತ್ತು.
ನಾನು ಬೇಗನೆ ಎದ್ದು, ನಟನನ್ನು ಎಬ್ಬಿಸಿ, ಬೈಕನ್ನು ರಸ್ತೆಯ ಪಕ್ಕಕ್ಕೆ ತಂದು ನಿಲ್ಲಿಸಿದೆ.
ಸ್ವಲ್ಪ ಸಮಯ ನಟನಿಗೆ "ಏನಾಯ್ತು..?" ಎನ್ನುವ ಪ್ರಜ್ಞೆ ಸಹಿತ ಇರಲಿಲ್ಲ. ನಂತರ ನಿಧಾನವಾಗಿ ಚೇತರಿಸಿಕೊಂಡ.
ರಸ್ತೆಯ ಮೇಲೆ ದೊಡ್ಡ ಹುಲ್ಲಿನ ಬಣವೆ ಹಾಕಿದ್ದರು. ಆ ಹುಲ್ಲಿನ ರಾಶಿ ಅರ್ಧ ರಸ್ತೆಯನ್ನು ಆಕ್ರಮಿಸಿತ್ತು. ಆ ಹುಲ್ಲಿನ ರಾಶಿಯು ನಮ್ಮ ಬೈಕಿನ ಒಂದು ಭಾಗವನ್ನು ತಾಕಿದ್ದರಿಂದ ನಾವು ರಸ್ತೆಯಲ್ಲಿ ಬಿದ್ದದ್ದು ಎಂದು ತಿಳಿಯುತು.
ಈ ಅನಾಹುತದ ನಂತರ, ನಟ ಮತ್ತೆ ಬೈಕ್ ನಡೆಸುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಬಹಳ ಗಾಯಗಳಾಗಿದ್ದವು.
ನಾನೇ ಗಾಡಿ ನಡೆಸಲು ಶುರು ಮಾಡಿದೆ. ನಟ ಹಿಂದೆ ಕೂತಿದ್ದ.
ನಾನು ಈಗ ತುಂಬಾ ತುಂಬಾ ನಿಧಾನವಾಗಿ ಜಾಗುರತೆಯಿಂದ ಬೈಕ್ ನಡೆಸುತ್ತಿದ್ದೆ.
ಹಿಂದಿನಿಂದ ನಟ, ನನ್ನ ಬುಜವನ್ನು ಒತ್ತಿ ಹಿಡಿದು ಹೇಳಿದ... "ಲೋ......"
ನಾನು : "ಏನೋ..."
ನಟ : "ನಿಧಾನವಾಗಿ ನಡೆಸೋ..."
ನಾನು ತುಂಬಾ ತುಂಬಾ ನಿಧಾನವಾಗಿ ಬೈಕ್ ನಡೆಸುತ್ತಿದ್ದೆ. ನನ್ನ ಗಾಡಿ ಬಹುಶ ೫ ಕಿಲೋಮೀಟರು ವೇಗದಲ್ಲಿ ಹೋಗುತ್ತಿತ್ತು ಅನ್ಸುತ್ತೆ.
ನಾನು : "ಲೋ ನಟ, ನಾನು ತುಂಬಾ ನಿಧಾನವಾಗೆ ನಡಿಸ್ತಾ ಇದೀನಿ.. ಇದಕ್ಕಿಂತ ನಿಧಾನಾನ...?"
ನಟ : "ಲೋ, ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ, ಅಸ್ಟು ನಿಧಾನವಾಗಿ ಹೋಗು..ಸ್ವಲ್ಪ ನನ್ನ ಪರಿಸ್ಥಿತಿ ಅರ್ಥ ಮಾಡ್ಕೋ."
ನನಗೆ ಗಂಭೀರವಾದ ಪರಿಸ್ಥಿತಿಯಲ್ಲೂ ನಗು ಬಂತು... ಹತ್ತು ನಿಮಿಷದ ಮುಂಚೆ "ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೆ" ಎನ್ನುವವನು, ಈಗ "ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ ಅಸ್ಟು ನಿಧಾನವಾಗಿ ಹೋಗು" ಅಂತ ಇದಾನೆ...

ಅಂತು ಆಮೆ ವೇಗದಲ್ಲಿ ಬಳ್ಳಾರಿಯನ್ನು ಸೇರಿದೆವು.
ನನಗೆ ಅಂಗಾಲಿನ ಮೇಲೆ ಪೆಟ್ಟಾಗಿತ್ತು. ಆ ಪೆಟ್ಟನ್ನು ನನ್ನ ಪ್ಯಾಂಟ್ ಮುಚ್ಚಿಕೊಂಡಿತ್ತು.
ಆದರೆ ನಟನಿಗೆ, ಗಲ್ಲದ ಮೇಲಾಗಿರುವ ಪೆಟ್ಟನ್ನು ಹೇಗೆ ಮುಚ್ಚಿಕೊಳ್ಳುವುದು... ?.
ಪೋಷಕರು "ಬೈಕಿನಲ್ಲಿ ದೂರದ ಪ್ರಯಾಣ ಮಾಡಬೇಡಿ" ಎಂದು ಸಲಹೆ ಕೊಟ್ಟಿದ್ದರು, ನಾವು ಅವರನ್ನು ಸುಮ್ಮನಿರಿಸಿ ಬಂದಿದ್ದೇವೆ. ಈಗ ಅವರಿಗೆ ನಿಜ ಹೇಳಿದರೆ, ಮುಂದೆ ನಮ್ಮನ್ನು ಬೈಕ್ ಹತ್ತಲು ಬಿಡುವರೇ ?... ಹಾಗಾಗೆ ಒಂದು ಸುಂದರ ಸುಳ್ಳು ಹೇಳಲು ಸಿದ್ದವಾದೆವು...
ಕೇಳಿದವರಿಗೆಲ್ಲ... "ದಾರಿಯಲ್ಲಿ, ಒಂದು ಹೋಟೆಲ್ಲಿಗೆ ಹೋದೆವು. ಆ ಹೋಟೆಲ್ ಎರಡು ಮಹಡಿಯನ್ನು ಹೊಂದಿತ್ತು. ನಾವು ಮೇಲ್ಮಹಡಿಗೆ ಹೋಗಲು, ಮೆಟ್ಟಲು ಹತ್ತುತ್ತಿರುವಾಗ ನಟ ಜಾರಿ(ಸ್ಕಿಡ್ ಆಗಿ) ಬಿದ್ದ. ಅದಕ್ಕೆ ನಟನಿಗೆ ಪೆಟ್ಟಾಯ್ತು..." ಅಂತ ಹೇಳಿ ಪ್ರಕರಣವನ್ನು ಮುಚ್ಚಿಹಾಕಿದೆವು. ನಿಜ ಹೇಳಬೇಕೆಂದರೆ, ನಟನಿಗೆ ಗಾಯಗಳು ವಾಸಿಯಾಗಲು ಕೆಲವು ವಾರಗಳು ಹಿಡಿಯಿತು.

ನನಗೆ ಈ ಘಟನೆ ನೆನಪಾದಾಗಲೆಲ್ಲ ನಟ ಆಡಿದ ಮಾತುಗಳನ್ನು ನೆನೆದು ನಗ್ತಾ ಇರ್ತೀನಿ.
Share/Save/Bookmark

17 comments:

  1. ''ಸಾಗುತ ದೂರ ದೂರ......, ಬಾ ಬಳ್ಳಾರಿ ಬೇಗ....." ಸಾಲು ತುಂಬಾ ಇಸ್ತವಾಯ್ತು.... ನಿಮ್ಮ ಗೆಳೆಯ ನಟನಿಗೆ ಹೇಳಿ, ತುಂಬಾ ಸ್ಲೋ ಕೆಲವೊಂದರಲ್ಲಿ ಓಲ್ಲೆಯದು ಅಂತ....

    ReplyDelete
  2. ರಸ್ತೆಯಲ್ಲಿ ಹುಲ್ಲು ಹರಡಿ ಬಿಡಬಾರದು ಅನ್ನುವ common sense, civic sense ನಮ್ಮ ಜನರಲ್ಲಿ ಇಲ್ಲವಲ್ಲಾ, ಶಿವು!
    ನಿಮ್ಮ ಪ್ರತಿಯಂದು ಎಪಿಸೋಡೂ ರಂಜನೀಯವಾಗಿರುತ್ತದೆ, dangerous ಇದ್ದಾಗಲೂ ಸಹ.

    ReplyDelete
  3. ಶಿವು,
    ದೊಡ್ಡವರ ಮಾತನ್ನು ಆಗೆಲ್ಲಾ ತಳ್ಳಿ ಹಾಕೊ ಆಗಿಲ್ಲ....ಅದಕ್ಕೆ ಹೇಳೊದು ನಮ್ಮಂಥವರ ಮಾತನ್ನು ಕೇಳಬೇಕು ಅಂತ....ಹಹಾಹಹ್ಹ....ಬಿಸಿ ರಕ್ತ...ಪ್ರಾಯದ ವಯಸ್ಸು....
    ಬೈಕ್ ಸವಾರಿ ಮಜಾವಾಗಿರುತ್ತೆ...ಅದ್ರೆ ರಾತ್ರಿ ಪ್ರಯಾಣ ಬೇಡ....
    ಹುಡುಗಿ ಜೊತೆ ಬೈಕ್ ನಲ್ಲಿ ಹೋದದ್ದು ಯಾವಾಗ ಬರಿತ್ತೀಯಪ್ಪ...

    ReplyDelete
  4. tumba chennagittu nimma nirupane..:)

    ReplyDelete
  5. lo shivu dodavaru sumne eleiela avasra ve apaya antha 3 varsha aithu enu avange (nata) budhi bandela.

    ReplyDelete
  6. Sullu helodu nata na default guna kano... :-)bande south end alli idini anthane adre innu ITPL nalli irutane ...

    Nice ghatane .... be safe always ..

    Indra

    ReplyDelete
  7. ಶಿವೂ ಸರ್,
    ಕೆಲವೊಮ್ಮೆ ಇಂಥಹ ಅನಾಹುತಗಳೇ ಪಾಠ ಕಲಿಸುತ್ತೆ ಅಲ್ವ, ನಾನು ಒಂದೆರಡು ಸಲ ಬೇಡ ಅಂದ್ರು ಬೈಕ್ ತೆಗೆದುಕೊಂಡು ಹೋಗಿ ಬಿದ್ದಿದೀನಿ, ಈಗ ಅವರು ಹೇಳಬೇಕು ಅಂತಿಲ್ಲ, ನಾನೆ ಮುಟ್ಟೋಲ್ಲ ಹ ಹ ಹ
    ಚೆನ್ನಾಗಿದೆ ನಿಮ್ಮ ಬಳ್ಳಾರಿ ಕಥೆ

    ReplyDelete
  8. ಸವಾರಿ ಲೇಖನ ಸೊಗಸಾಗಿತ್ತು

    ReplyDelete
  9. hahaha super!!! nagu tadilikke agolla nanna nodi sum sumne nagtale andukotare, officenali nimma kate heli heli olle joker ee blogger anta hesarittiddare namma officenalli....hahaha

    ReplyDelete
  10. :-) Super swaamy.. (Nimma baravanige)

    ReplyDelete
  11. ಶಿವಪ್ರಕಾಶ್,

    ರಾತ್ರಿ ಬೈಕಿ ಸವಾರಿ ಕೇಳಲು ತುಂಬಾ ಚೆನ್ನಾಗಿದೆ. ಆದ್ರೆ ಮತ್ತೆ ಹೊಸ ಕತೆ ಬರೆಯಲು ರಾತ್ರಿ ಬೈಕ್ ಸವಾರಿ ಬೇಡ. ಬೇಕಿದ್ರೆ ಬಸ್ಸಿನಲ್ಲಿ ಹೋಗಿ ಬಂದು ಅದರ ತರಲೇ ತಾಪತ್ರಯಗಳನ್ನು ಬರೆಯಬಹುದು..

    ReplyDelete
  12. ದಿನಕರ ಅವರೇ,
    ಅವತ್ತಿನಿಂದ ನಮ್ಮ ನಟ ತುಂಬಾ ಜಾಗರೂಕತೆಯಿಂದ ಬೈಕ್ ನಡೆಸುತ್ತಾನೆ.
    ಲೇಖನ ಓದಿ ''ಸಾಗುತ ದೂರ ದೂರ......, ಬಾ ಬಳ್ಳಾರಿ ಬೇಗ....." ಸಾಲುಗಳನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    =========

    sunaath ಅವರೇ,
    ನಮ್ಮಲ್ಲಿ ಇನ್ನು ವಿಚಿತ್ರವಾದ ಜನಗಳಿದ್ದಾರೆ. ಬಿಟ್ಟರೆ ರಸ್ತೆಯಲ್ಲೇ ಮನೆ ಕಟ್ಟಿಕೊಂಡು ಸಂಸಾರ ಮಾಡ್ತಾರೆ.
    ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಯೇ ನಾನು ಬರೆಯಲು ಸ್ಪೂತಿ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =========

    ಮಹೇಶ್ ಅವರೇ,
    ಏನೋ ಚಿಕ್ಕ ಹುಡುಗರು ತಿಳಿಯದೆ ತಪ್ಪು ಮಾಡಿದಿವಿ, ಇನ್ನೊಂದ್ಸರಿ ಹಾಗೆ ಮಾಡೊಲ್ಲ, ಕ್ಷಮಿಸಿ ಬಿಡಿ. ಹ್ಹಾ ಹ್ಹಾ ಹ್ಹಾ ... :P
    ಹುಡುಗಿ ಜೊತೆ ಹೋದ ಅನುಭವವನ್ನು ಬರೆದಿದ್ದೇನೆ ಮುಂದಿನ ಪೋಸ್ಟ್ ನಲ್ಲಿ ಹಾಕುತ್ತೇನೆ..
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =========

    Snow White ಅವರೇ,
    ಲೇಖನ ಓದಿ, ನಿರೂಪಣೆ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =========

    Anonymous ( DME) ಅವರೇ,
    ಏನೋ ತಿಳಿದೇ ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿದಿವಿ ಬಿಟ್ಬಿಡೋ...
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =========

    ಹಾಯ್ ಇಂದ್ರ,
    ಲೋ, ನಟ ಬದಲಾಗಿದಾನೆ ಕಣೋ. ಅವನು ನಿಜ ಹೇಳಿದ್ರು, ಪಾಪ ನೀವೇ ನಂಬೋಲ್ಲ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =========

    ಗುರುಮೂರ್ತಿ ಅವರೇ,
    ಬಿದ್ದವನೇ ನಾಳೆ ಏಳೋದು ಅಲ್ವಾ...?
    ಬಿದ್ದರು, ಎದ್ದು ಎದ್ದು ಪ್ರಯತ್ನಿಸಬೇಕು... ಬಿಟ್ಟು ಬಿಡಬಾರದು ಅಲ್ವಾ... ?
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =========

    umesh desai ಅವರೇ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =========

    ಮನಸು ಅವರೇ,
    ನೀವು ನನ್ನ ಲೇಖನಗಳನ್ನು ಅಸ್ಟೊಂದು ನಂಬಿದರೆ, ನಾಳೆ ನಾನು ಅಂತಹ ಲೇಖನಗಳು ಬರೆಯಲಾಗದಿದ್ದರೆ ಬೈಯಬೇಡಿ... ಹ್ಹಾ ಹ್ಹಾ ಹ್ಹಾ..
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =========

    ರವಿಕಾಂತ ಗೋರೆ ಅವರೇ,
    ಲೇಖನ ಓದಿ, ನನ್ನ ಬರವಣಿಗೆ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =========

    shivu ಅವರೇ,
    ಮುಂದಿನ ಸಾರಿ ಬೈಕ್ನಲ್ಲಿ ಹೋದರೆ ತುಂಬಾ ಹುಷಾರ್ ಆಗಿ ಹೋಗ್ತಿವಿ ಬಿಡಿ. ನೀವು ಹೆದರಬೇಡಿ...
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  13. ತಮ್ಮ ಫಜೀತಿ ಪ್ರಸ೦ಗವನ್ನ ರೋಚಕವಾಗಿ ಹೇಳಿದ್ದಿರಾ! ಆದರೆ ಇನ್ನೊಮ್ಮೆ ಇ೦ಥಾ ಪ್ರಯತ್ನ ಮಾಡಬೇಡಿ.
    ನಿರೂಪಣೆ ಅದ್ಭುತ.

    ReplyDelete
  14. ಸೀತಾರಾಮ ಸರ್,
    ಇನ್ನೋದ್ಸರಿ ಹೋದರೂ ತುಂಬಾ ಜಗೃತೆಯಿಂದ ಹೋಗ್ತಿವಿ... :)
    ಲೇಖನ ಓದಿ, ನಿರೂಪಣೆ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  15. This comment has been removed by the author.

    ReplyDelete
  16. 'ಸಾಗುತ ದೂರ ದೂರ' ಟೈಟಲ್ ತುಂಬಾ ಚೆನ್ನಾಗಿದೆ. ಇವತ್ತು ಮನೆ ಹತ್ರ ಕ್ರಿಕೆಟ್ ಆಟ ಆಡ್ತ ಇರುವಾಗ ನಿಮ್ಮ ಲೈನ್ ನೆನಪಾಯಿತು.

    ReplyDelete
  17. Raghu ಅವರೇ,
    ನಿಮಗೆ ಟೈಟಲ್ ಒಂದೇ ಇಷ್ಟ ಆಯ್ತಾ... ?
    ನನ್ನ ಲೇಖನ ಇಷ್ಟ ಆಗ್ಲಿಲ್ವಾ... :(
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete