ಇಂತಹ Lab Exam ಗಳಲ್ಲಿ ಕೆಲವರು ಅದೃಷ್ಟವಂತರು ಹಾಗೆ ಕೆಲವರು ದುರದೃಷ್ಟವಂತರು. ಯಾಕೆಂದರೆ ಕೆಲವರಿಗೆ Exam ನಲ್ಲಿ ಸುಲಭದ ಪ್ರೊಗ್ರಮ್ಸ್ ಬಂದರೆ, ಕೆಲವರಿಗೆ ಕಷ್ಟದ ಪ್ರೊಗ್ರಮ್ಸ್ ಬರಬಹುದು.
ಒಂದೊಂದು ಪ್ರೊಗ್ರಾಮ್ ಗೆ ಒಂದೊಂದು ನಂಬರ್ ಹಾಕಿಟ್ಟುಕೊಂಡಿರುತ್ತಾರೆ. ನಮ್ಮ ಪರೀಕ್ಷೆಗೆ ಎಷ್ಟು ಪ್ರೊಗ್ರಮ್ಸ್ ಇರುತ್ತಾವೆಯೋ ಅಸ್ಟು ಚೀಟಿಗಳನ್ನು ಮಾಡಿ, ಒಂದೊಂದು ಚೀಟಿಯಲ್ಲಿ ಒಂದೊಂದು ನಂಬರ್ ಬರೆದು, ಅವುಗಳನ್ನು ಮಡಚಿ ಇಟ್ಟಿರುತ್ತಾರೆ. ನಾವು ಆ ಎಲ್ಲ ಚೀಟಿಗಳನ್ನು ಒಮ್ಮೆ shuffle ಮಾಡಿ, ಅದರಲ್ಲಿ ಒಂದು ಚೀಟಿಯನ್ನು ಎತ್ತಿಕೊಂಡು, ಅದರಲ್ಲಿ ಬರೆದಿರುವ ನಂಬರ್ ಹೇಳಬೇಕು. ಆ ನಂಬರ್ ಮೇಲೆ ಯಾವ ಪ್ರೊಗ್ರಾಮ್ ಬಂದಿರುತ್ತೋ, ಆ ಪ್ರೊಗ್ರಾಮ್ ಮಾಡಲು ಹೇಳುತ್ತಾರೆ. ಸಾಮಾನ್ಯವಾಗಿ ಚಿಕ್ಕ ನಂಬರ್ ಬಂದಿದ್ದರೆ ಸುಲಭದ ಪ್ರೊಗ್ರಾಮ್, ದೊಡ್ಡ ನಂಬರ್ ಬಂದಿದ್ದರೆ ಕಷ್ಟದ ಪ್ರೊಗ್ರಾಮ್ ಬಂದಿರುತ್ತೆ. ಅಂದು ನನ್ನ ಅದೃಷ್ಟ ಚನ್ನಾಗಿತ್ತು ಅನ್ಸುತ್ತೆ, ನಾನು ಆರಿಸಿ ಎತ್ತಿದ ಚೀಟಿಯಲ್ಲಿ ಚಿಕ್ಕ ನಂಬರ್ ಬಂದಿತ್ತು. ಹಾಗಾಗಿ ಸುಲಭದ ಪ್ರೊಗ್ರಾಮ್ ಬಂದಕಾರಣ ಬೇಗನೆ ಪರೀಕ್ಷೆಯನ್ನು ಮುಗಿಸಿಕೊಂಡು ಹೊರಬಂದಿದ್ದೆ.
ಹೀಗೆ ಟೀ ಸ್ಟಾಲ್ ಮುಂದಿರುವ ಕಟ್ಟೆಯ ಮೇಲೆ ಸ್ನೇಹಿತರಿಗಾಗಿ ಕಾಯುತ್ತ ಕೂತಿದ್ದಾಗ ಪರೀಕ್ಷೆ ಮುಗಿಸಿಕೊಂಡು ತರುಣ್ ಬಂದ.
ಅವನು ಬಂದೊಡನೆ ನಾನು ಟೀ ಶಾಪ್ ನವನಿಗೆ "೨ ಟೀ" ಎಂದು ಕೂಗಿ ಹೇಳಿದೆ. ಟೀ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ನಮಗೆ ಟೀ ತಂದುಕೊಟ್ಟ.
ಟೀ ಕುಡಿಯುತ್ತ, ತರುಣ್ ಗೆ ಕೇಳಿದೆ... "Exam ಹೇಗಾಯ್ತೋ... ?, ಯಾವ್ ನಂಬರ್ ಬಂದಿತ್ತು...?"
ತರುಣ್ : "Exam ಚನ್ನಾಗಯ್ತು. ೧೫ ನೇ ನಂಬರ್ ಬಂದಿತ್ತು.."
"ಲೋ, ೧೫ ನೇ ನಂಬರ್ ಪ್ರೊಗ್ರಾಮ್ ತುಂಬಾ ಕಷ್ಟ ಅಲ್ವಾ... ಹ್ಯಾಗೋ ಮಾಡಿದೆ..."
ತರುಣ್ : " ನನಗೆ ಬಂದಿದ್ದು ೧೫ ನೇದು, ಆದರೆ ನಾನು ಮಾಡಿದ್ದು ೪ ನೇದು..."
ನಾನು "ಅದು ಹ್ಯಾಗೋ....?"
ತರುಣ್ ವಿವರಿಸುತ್ತ ಹೋದ...
"ನಾನು ಚೀಟಿ ಎತ್ತಿದಾಗ ಅದರಲ್ಲಿ ೧೫ ಎಂದಿತ್ತು.
೧೫ ನೇ ಪ್ರೊಗ್ರಾಮ್ ಕಷ್ಟ ಅಂತ ಗೊತ್ತಿತ್ತು ಅಲ್ವಾ....
ಅದಕ್ಕೆ ನಾನು ೪ ಎಂದು ಸುಳ್ಳು ಹೇಳಿ, ಚೀಟಿಯನ್ನು ಮಡಚಿ, ಚೀಟಿಗಳಲ್ಲಿ ಹಾಕಿಬಿಟ್ಟೆ.. ಹಾಗಾಗಿ ಅವರು ೪ ನೇ ನಂಬರಿನ ಪ್ರೊಗ್ರಾಮ್ ಮಾಡೋಕೆ ಹೇಳಿದ್ರು."
ಕೆಲವೊಮ್ಮೆ ಕಷ್ಟ ಬಂದಾಗ ಹೆದರಿಕೊಳ್ಳದೆ ಈ ರೀತಿಯ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳಬೇಕಾಗುತ್ತದೆ !!!! ಹ್ಹ ಹ್ಹ ಹ್ಹ...
hha.. hha..hha..
ReplyDeleteChey... Nangu E Idea Helta idre, 15th ge 4 anta heli bega hora barta idde...
ReplyDelete4 1/2 page 86 pgming, ajji taata yellaru neenpagidru :(
ತರುಣ್ ಕಿಲಾಡಿತನ ಮೆಚ್ಚಬೇಕು....
ReplyDeleteಬುದ್ದಿವಂತಿಕೆ ಬಹಳ ಉಪಯೋಗ....
ಸಕತ್ತಾಗಿದೆರೆ ತರುಣನ ಐಡಿಯಾ!!!
ReplyDeleteತರುಣ ಆಗಿನ್ನು ತರುಣನಾಗಿದ್ದನಲ್ಲ ಅದಕ್ಕೆ ತಲೆ ಚೆನ್ನಾಗಿ ಓಡಿದೆ ಹಹಹ........ ನಮಗೆ ಈ ತರ ಲ್ಯಾಬ್ examನಲ್ಲಿ ಐಡಿಯಾ ಹೇಳಿಕೊಡೋರು ಸಿಗಲೇ ಇಲ್ಲ.
ReplyDeleteಈಗ ಅಮೆರಿಕಾದಲ್ಲಿ ಎಂ.ಎಸ್.ಮಾಡುತ್ತಿರುವ ನನ್ನ ಮಗ ಕೂಡ ಇದೆ ಐಡಿಯಾ ಮಾಡಿ ಹತ್ತನೇ ತರಗತಿಯಲ್ಲಿರುವಾಗ ತಾಲ್ಲೂಕು ಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಿಟ್ಟಿಸಿದ್ದ.ಚೀಟಿ ಬರೆದವರು ಬಾಗಿಲಲ್ಲೇ ನಿಂತು ಇವನನ್ನು ನೋಡಿ ನಕ್ಕು,ಬೆನ್ನಿಗಿಂದು ಕೊಟ್ಟು 'ಒಳ್ಳೇ ಕಿಲಾಡಿ ಕಣಯ್ಯಾ'ಎಂದಿದ್ದರಂತೆ!ಹಳೆಯ ಘಟನೆಯೊಂದನ್ನು ನೆನಪಿಸಿದ ನಿಮಗೂ ನಿಮ್ಮ ಸ್ನೇಹಿತ ತರುಣ್ ಗೂ ಧನ್ಯವಾದಗಳು.
ReplyDeleteಹ್ಹ ಹ್ಹ ಒಳ್ಳೆ ಐಡಿಯಾ ನೋಡಿ..ತುಂಬಾ ಚೀಟಿಗಳ ನಡುವೆ ನಿಮ್ಮದ್ಯಾವುದು ಅಂತ ಹುಡುಕೋದು ಕಷ್ಟ..:)
ReplyDeleteನಿಮ್ಮವ,
ರಾಘು.
ಹಹಹ
ReplyDeleteಸಕತ್ತಾಗಿದೆ ಉಪಾಯ
ಛೇ!
ReplyDeleteಹ್ಹ ಹ್ಹ ಹ್ಹಾ............
ReplyDeleteಚನ್ನಾಗಿ ತಲೆ ಓಡಿಸಿದ್ದಾರೆ ನಿಮ್ಮ ಸ್ನೇಹಿತರು............!
ಎಂಥಾ ತಲೆ ನಿಮ್ಮ ಫ್ರೆಂಡ್ ದು ......... :)
ReplyDeleteಪರ್ಯಯಾ ಮಾರ್ಗ ಹುಡುಕಿದ ಕಾನ್ಸೆಪ್ಟ್ ಚೆನ್ನಾಗಿದೆ........
haa haa :-)
ReplyDeletehahaha :) olle idea sir nimma friend avaradu :)
ReplyDeleteWhat an idea sirji!! :)
ReplyDelete