Wednesday, December 16, 2015

ಏನೂ ಅರ್ಥವಾಗಲಿಲ್ಲ... ಸುಮ್ಮನಾಗಿಬಿಟ್ಟೆ...

ದೂರದ ಚಿಕ್ಕದೊಂದು ಹಳ್ಳಿಯಲ್ಲಿ ಇಂಗ್ಲೀಷ್ ಮಾಸ್ತರ್ ಆದ ನಾನು, ಪ್ಯಾಟೆಯಲ್ಲಿ ಇರೋ ಮಗನ ಮನೆಗೆ ಬಂದೆ. ಹಾಗೆ ಒಂದೆರೆಡು ದಿನ ಮಗ, ಸೊಸೆ, ಕಾಲೇಜ್ ಓದುತ್ತಿದ್ದ ಮೊಮ್ಮಗನೊಂದಿಗೆ ಇದ್ದು ಹೋಗೋಣವೆಂದುಕೊಂಡೆ...

ಪ್ರತಿದಿನವೂ ಬೆಳಿಗ್ಗೆ ಗಡ್ಡ ತೆಗೆಯುವ ಅಭ್ಯಾಸ ನನ್ನದು.. ಊರಿಂದ ಬರುವಾಗ ಶೇವಿಂಗ್ ಸೆಟ್ ಜೊತೆಯಲ್ಲೇ ತಂದಿದ್ದೆ.. ಕನ್ನಡಿ ಇರಲಿಲ್ಲ. ಮೊಮ್ಮಗನ ಕರೆದು MIRROR ಕೇಳಿದೆ... ಬಂದು ನ್ಯೂಸ್ ಪೇಪರ್ ಕೊಟ್ಟ.. ತಲೆ ಕೆಡಸಿಕೊಂಡು ಪೇಪರ್ ಹೆಸರು ನೋಡಿದೆ.. "Bangalore Mirror" ಎಂದಿತ್ತು..
ಹೋಗ್ಲಿ ಬಿಡು... ಒಂದು ದಿನ ಶೇವಿಂಗ್ ಮಾಡಿಲ್ಲ ಅಂದ್ರೆ ಪ್ರಳಯ ಆಗೋಲ್ಲ ಅಂತ ಸುಮ್ಮನಾಗಿಬಿಟ್ಟೆ.





================================================



ಮೊದಲು ದಿನ ಪ್ಯಾಟೆಯನೊಮ್ಮೆ ಸುತ್ತಿ ಸಾಯಂಕಾಲ ಮನೆಗೆ ಬಂದೆ. ಸಂಜೆ ಹಿಂತಿರುಗಿದಾಗ ಸ್ವಲ್ಪ ಹಸಿವಾಗಿತ್ತು.. ಅಲ್ಲೇ ಟೇಬಲ್ ಮೇಲಿರೋ Black Berry ಹಣ್ಣು ನೋಡಿ, "Black Berry" ಕೊಡು ಎಂದು ಮೊಮ್ಮಗನ ಕೇಳಿದೆ.
ಮೊಮ್ಮಗ ಬಂದು "ತಾತ, ಮುಂಚೆ Black Berry ಇತ್ತು, ಅದನ್ನು ಮಾರಿ ಬಹಳ ದಿನ ಆಯ್ತು.. ಈಗ ನನ್ನ ಹತ್ತಿರ ಇರೋದು Apple" ಎಂದು ಮೊಬೈಲ್ ಕೈಗಿಟ್ಟ..
ಏನೂ ಅರ್ಥವಾಗಲಿಲ್ಲ... ಸುಮ್ಮನಾಗಿಬಿಟ್ಟೆ...

================================================


ಮೊಮ್ಮಗ ಕೈಯಲ್ಲಿ ಏನೋ ಹಿಡಿದುಕೊಂಡು ಒಂದೇ ಸಮನೆ ನೋಡ್ತಾ ಇದ್ದ...
"ಹೋಗಿ ಒದ್ಕೊಳ್ಳೊ" ಅಂದೆ...
"ಹ್ಞೂ ತಾತ, ಅದನ್ನೇ ಮಾಡ್ತಾ ಇರೋದು" ಅಂದ...
"ಏನೋ ಕಿಂಡಲ್ ಆ" ಅಂದೆ...
"ಹ್ಞೂ ತಾತ....  KINDLE" ಅಂದ.
ತಾತನಿಗೇ ಕಿಂಡಲ್ ಮಾಡೋ ಮೊಮ್ಮಗನ ಕಂಡು...
ಏನೂ ಅರ್ಥವಾಗಲಿಲ್ಲ... ಸುಮ್ಮನಾಗಿಬಿಟ್ಟೆ...

================================================


ವಯಸ್ಸಾದವರಿಗೆ ಒಂದಲ್ಲಾ ಒಂದು ರೋಗ ಇದ್ದೆ ಇರುತ್ತೆ. ನನ್ನದೊಂದು ರೋಗಕ್ಕೆ ಡಾಕ್ಟರ್, ರಾತ್ರಿ ಮಲಗುವ ಮುಂಚೆ, ಟ್ಯಾಬ್ಲೆಟ್ ತಿನ್ಬೇಕು ಅಂತ ಕೆಲವು ಟ್ಯಾಬ್ಲೆಟ್ ಕೊಟ್ಟಿದ್ರು..
ಟ್ಯಾಬ್ಲೆಟ್ ಅನ್ನು ಅಲ್ಲೇ ಹಾಲ್ ನಲ್ಲಿ, ಟೇಬಲ್ ಮೇಲೆ ಇಟ್ಟಿದ್ದೆ...
ಮೊಮ್ಮಗನ್ನ ಕರೆದು "ಅಲ್ಲೇ ಹಾಲ್ ನಲ್ಲಿ ಟ್ಯಾಬ್ಲೆಟ್ ಇದೆ ಕೊಡು" ಎಂದು ಕೇಳಿದೆ..
ತಂದು ಅದೇನೋ ಕೊಟ್ಟ... ಅದೇನು ಅಂತ ಅರ್ಥವಾಗಲಿಲ್ಲ... ಸುಮ್ಮನಾಗಿಬಿಟ್ಟೆ...














================================================

ಸಾಕಪ್ಪ ಈ ಪ್ಯಾಟೆ ಸಹವಾಸ.. ನಾಳೆನೇ ಊರಿಗೆ ಹೋಗಿಬಿಡೋಣ ಎಂದುಕೊಂಡು ಮೊಮ್ಮಗನ್ನ ಕರೆದು, ನಮ್ಮೂರಿಗೆ ಹತ್ತಿರ ಇದ್ದ ಒಂದು ಪ್ಯಾಟೆಯ ಊರಿನ ಹೆಸರು ಹೇಳಿ, "ನಾಳೆ ಬೆಳಿಗ್ಗೆ ಬಸ್ ಸ್ಟಾಂಡ್ ಗೆ ಹೋಗಿ, ನಾಳೆ ರಾತ್ರಿಯ ಬಸ್ಸಿಗೆ ಟಿಕೆಟ್ ಬುಕ್" ಮಾಡುವಂತೆ ಹೇಳಿದೆ... ಅದಕ್ಕೆ ಮೊಮ್ಮಗ "ಆಯ್ತು ತಾತ... ಆದರೆ, ಅಲ್ಲಿಗೆ ಯಾಕೆ ಹೋಗ್ಬೇಕು.. ?? ಈಗಲೇ ಇಲ್ಲೇ RedBus ನಲ್ಲಿ" ಮಾಡ್ತೀನಿ ಅಂದ..
ಅರ್ಥವಾಗಲಿಲ್ಲ... ರೆಡ್ ಬಸ್ಸೋ..  ವೈಟ್ ಬಸ್ಸೋ...  ಊರು ಮುಟ್ಟಿದರೆ ಸಾಕೆಂದುಕೊಂಡು ಸುಮ್ಮನಾಗಿಬಿಟ್ಟೆ... 













================================================


ಮಲಗುವ ಮುಂಚೆ "ಗುಡ್ ನೈಟ್ ಮೊಮ್ಮಗ" ಅಂದೆ.
"ಹಾಕ್ತೀನಿ ತಾತ" ಅಂದ..
ಅರ್ಥವಾಗಲಿಲ್ಲ... ಸುಮ್ಮನಾಗಿಬಿಟ್ಟೆ...




ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್ ಹೆಚ್. ಎಮ್.

Share/Save/Bookmark

12 comments:

  1. ತುಂಬಾ ತಮಾಶೆಯಾಗಿದೆ, ಶಿವಪ್ರಕಾಶರೆ.
    ‘ಸೊಳ್ಳೆಕಾಟ ಬಹಳಾ ಆಗಿದೆ, ಸ್ವಲ್ಪ ನೆಟ್ ಹಾಕಪ್ಪಾ’ ಅಂತ ನನ್ನ ಮೊಮ್ಮಗನಿಗೆ ಹೇಳಿದರೆ,‘Heavy traffic ಅಜ್ಜಾ, net ಸಿಗ್ತಾ ಇಲ್ಲ’ ಅಂತ ಹೇಳಿದ.
    ನನಗೂ ಏನೂ ಅರ್ಥ ಆಗಲಿಲ್ಲ; ಸುಮ್ಮನಾಗಿ ಬಿಟ್ಟೆ!
    ಭಾಳಾ ದಿನಗಳ ಬಳಿಕ ನಿಮ್ಮ ಜೊತೆಗೆ ಕೂತುಕೊಂಡು, ಬೇಜಾನ್ ನಗ್ತಾ ಇದ್ದೀನಿ!

    ReplyDelete
    Replies
    1. ಧನ್ಯವಾದಗಳು ಸರ್..

      ನನ್ನ ಲೇಖನಕ್ಕೆ ನಿಮ್ಮದೊಂದು ಸಹಿ ಬಿದ್ದರೇನೆ ನನಗೆ ಸಮಾಧಾನ. ನಿಮ್ಮ ಪ್ರತಿಕ್ರಿಯ ನನಗೆ ಬೂಸ್ಟ್ ಇದ್ದಂತೆ..ನಿಮ್ಮ ಸಹಿ ಬೀಳುವುದು ಸ್ವಲ್ಪ ದಡವಾದರು ನನಗೆ ಬೇಜಾರು.. ಥ್ಯಾಂಕು ಸೊ ಮಚ್..

      Delete
  2. ಹ್ಹ ಹ್ಹ... ಚೆನ್ನಾಗಿದೆ...

    ReplyDelete
  3. ತುಂಬಾ ಚೆನ್ನಾಗಿದೆ. ಎಂಡಿಂಗ್ ಸೂಪರ್ :-)

    ReplyDelete
  4. ತುಂಬಾ ಚೆನ್ನಾಗಿದೆ. ಎಂಡಿಂಗ್ ಸೂಪರ್ :-)

    ReplyDelete