ಸಾಯಂಕಾಲದ ಸಮಯ ಕ್ಯಾಂಪಸ್ ಮುಂದೆ ಇದ್ದ ಕ್ಯಾಂಟೀನ್'ನಲ್ಲಿ ನಾನು, ನಟ, ರಘು ಮೂವರು ಟೀ ಕುಡಿತಾ ಇದ್ವಿ. ಅಲ್ಲಿಗೆ ನಮ್ ಕ್ಲಾಸ್ಮೆಟ್ ಸುಂದರ್(ನಾವ್ ಪ್ರೀತಿಯಿಂದ ಸುಂದ್ರಿ ಅಂತೀವಿ) ಬಂದ.
ನಾವೆಲ್ಲರೂ ಹಾಯ್ ಸುಂದ್ರಿ ಅಂದ್ವಿ...
ಅವನು "Yo Man... Hi..."ಎಂದ.
ನಾನು "ಹೇಗ್ ನಡೀತಿದೆ Studies ಸುಂದ್ರಿ?" ಎಂದು ಕೇಳಿದೆ.
ಅವನು "Yo Man... It's going good. How about Yours?" ಎಂದ.
ಹೀಗೆ ನಾವು ಕನ್ನಡದಲ್ಲಿ ಮಾತಾಡುತ್ತಿದ್ದರೆ ಅವನು ಇಂಗ್ಲೀಷಿನಲ್ಲೇ ಮಾತನಾಡುತ್ತ ಹೋದ.
ಅಂದಿನವರೆಗೂ ಅಚ್ಚ ಕನ್ನಡದಲ್ಲಿ ಸ್ಪಷ್ಟವಾಗಿ ಮಾತಾಡುತ್ತಿದ್ದ ನಮ್ ಸುಂದ್ರಿ, ಇದ್ದಕ್ಕಿದ್ದಂತೆ ಎಲ್ಲರ ಜೊತೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದುದು ಕಂಡು ನಮಗೆ ಆಶ್ಚರ್ಯವಾಯಿತು.
ಕುತೂಹಲ ತಡೆಯಲಾಗದೆ ನಟ "ಅಲ್ವೋ ಸುಂದ್ರಿ, ಯಾಕೇ ನಾವು ಏನು ಕೇಳಿದ್ರು ಇಂಗ್ಲೀಷ್'ನಲ್ಲೆ ಉತ್ತರಿಸುತ್ತಿದ್ದೀಯ?" ಎಂದ.
ಅದಕ್ಕೆ ಸುಂದ್ರಿ "You know man. Last Week, I have joined spoken English class. Our tutor suggested us to speak in English. We all should speak in English. You know, If we practice from now, by final year, we will speak fluently. It will help in our campus placement interviews." ಎಂದ.
ನಾವು ಕೂಡ ಕನ್ನಡ ಮಾಧ್ಯಮದಿಂದ ಬಂದವರಾಗಿದ್ದೆವು. ಕನ್ನಡ ಮಾಧ್ಯಮದಿಂದ ಬಂದ ನಮಗೆ ಇಂಗ್ಲೀಷ್ ನಲ್ಲಿ ಮಾತನಾಡುವುದು ತುಂಬ ಕಷ್ಟದ ವಿಷಯವಾಗಿತ್ತು. ಕ್ಲಾಸ್ನಲ್ಲಿ Lecture ಕೇಳುವ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಅದನ್ನು ಉತ್ತರಿಸುವಾಗ ಎಲ್ಲಿ ಇಂಗ್ಲೀಷ್ ಪದಗಳು ನೆನಪಿಗೆ ಬಾರದೆ(ವ್ಯಾಕರಣ ಕೇಳಲೇ ಬೇಡಿ) ಅವಮಾನವಾಗಿ ಬಿಡಬಹುದೋ ಎನ್ನುವ ಹೆದರಿಕೆಯಿಂದ ಉತ್ತರಿಸಲು ಹಿಂಜರಿಯುತ್ತಿದ್ದೆವು.
ಒಂದೇ ದೋಣಿಯಲ್ಲಿ ಸಾಗುತ್ತಿದ್ದ ನಮಗೆ, ಸುಂದ್ರಿ ಹೇಳಿದ ಮಾತುಗಳು ವೇದವಾಖ್ಯದಂತೆ ಕೇಳಿಸಿತು. ಅಂದು ಅಲ್ಲೇ ನಾವೆಲ್ಲರು ಸುಂದ್ರಿ ಸೇರಿದ Spoken English ಕ್ಲಾಸ್ ಗೆ ಸೇರಬೇಕೆಂದು ಒಮ್ಮತದಿಂದ ನಿರ್ಧರಿಸಿದೆವು. ಹಾಗೆ ಸೇರಿಕೊಂಡೆವು ಕೂಡ.
ಹೀಗೆ ನಮ್ಮ Spoken English ಪ್ರಯಾಣ ಶುರುವಾಯಿತು...
ನಾವೆಲ್ಲರೂ ಸೇರಿ ಇಂಗ್ಲೀಷ್ ಕ್ಲಾಸ್ಸಿಗೆ ಹೋಗಿ ಬರುತ್ತಿದ್ದೆವು.
ಒಂದು ವಾರ ಹೀಗೆ, ಜೊತೆ ಜೊತೆಯಲಿ ಹೋಗಿ ಬರುವುದು ನಡೀತು.
ಒಂದು ವಾರ ಕಳೆದ ಬಳಿಕ, ನಟ ಕ್ಲಾಸ್ಸಿಗೆ ಬರುವುದನ್ನು ನಿಲ್ಲಿಸಿದ.
ಎರಡನೇ ವಾರಕ್ಕೆ ರಘು ನಿಲ್ಲಿಸಿದ.
ನಟ ಹಾಗು ರಘು ಇಬ್ಬರಿಗೂ ಆಗಲೇ ಕ್ಲಾಸ್ ಬೋರ್ ಆಗಿ ಹೋಗಿತ್ತು. ಅವರು ಮಾಡುತ್ತಿದ್ದ ಪಾಠವು ಅಷ್ಟಕ್ಕಷ್ಟೇ ಇತ್ತು...
ಆದರೂ ನಾನು ಮತ್ತು ಸುಂದ್ರಿ ಧೃತಿಗೆಡತೆ ಹೋಗುತ್ತಿದ್ದೆವು.
ಇನ್ನೊಂದು ವಾರ ಕಳೆಯುವಷ್ಟರಲ್ಲಿ ನಮ್ ಸುಂದ್ರಿನೂ ಬರೋದು ನಿಲ್ಲಿಸಿದ....!!!!
ನಾನು ಒಬ್ಬಂಟಿಯಾದೆ...!!!
ಒಬ್ಬನೇ ಹೋಗುವುದು ಬೇಸರದ ವಿಷಯವಾಗಿತ್ತು. ಅದಕ್ಕೆ "ಲೋ ಸುಂದ್ರಿ, ಬಾರೋ, ಯಾಕೋ ಬರೋದು ನಿಲ್ಲಿಸ್ತೀಯಾ? " ಎಂದು ಕೇಳಿದೆ...
ಅದಕ್ಕೆ ಇಂಗ್ಲೀಷಿನಲ್ಲೇ ಮಾತನಾಡುವುದನ್ನು ರೂಢಿಸಿಕೊಂಡಿದ್ದ ನಮ್ ಸುಂದ್ರಿ ಇದ್ದಕ್ಕಿದ್ದಂತೆ (ಸು)ಸಂಸ್ಕೃತ ಭಾಷೆಯಲ್ಲಿ "ಹೊಗ್ ಮಗ,
ಆ ನನ್ ಮಕ್ಳು ಮಾಡೋದು ಅಸ್ಟ್ರಲ್ಲೇ ಇದೆ.
ಏನೂ ಹೇಳಿಕೊಡೋದಿಲ್ಲ.
ಬರಿ 'ಮಾತಾಡಿ, ಮಾತಾಡಿ' ಅದೇ ಬರುತ್ತೆ ಅಂತಾರೆ.
ಬರಿ ನಾವ್ ನಾವ್ ಮಾತಾಡೋಕೆ ಅಲ್ಲಿಗೆ ಯಾಕ್ ಬರ್ಬೇಕು.
ಏನಾದ್ರು ಹೇಳ್ ಕೊಡ್ಬೇಕು ತಾನೇ ?"(ಇಲ್ಲಿ ಸುಸಂಸ್ಕೃತ ಪದಗಳಿಗೆ ಕತ್ತರಿ ಹಾಕಲಾಗಿದೆ) ಎಂದು ಪ್ರಶ್ನಿಸಿದ.
"ಅಲ್ಲೋ, ದುಡ್ಡು ಕಟ್ಟಿದ್ದಕ್ಕಾದ್ರೂ ಬಾರೋ..." ಎಂದೆ.
ಅದಕ್ಕೆ ಸುಂದ್ರಿ "ಫುಲ್ ದುಡ್ಡು ಕಟ್ಟಿಲ್ಲ ಮಗಾ, ಅಡ್ವಾನ್ಸ್ ಮಾತ್ರ ಕಟ್ಟಿದ್ದೆ." ಎಂದ.
ಸುಂದ್ರಿ, ನಟ ರಘು ಅಡ್ವಾನ್ಸ್ ಮಾತ್ರ ಕಟ್ಟಿ ಸೇರಿದ್ರು.
ನಾನೊಬ್ನೆ ಬುದ್ದಿವಂತ...!!!, ಸುಂದ್ರಿಯ ವೇದವಾಖ್ಯಗಳ ಅತಿಯಾದ ಪ್ರೇರಣೆಯಿಂದ ಪೂರ್ತಿ ಹಣ ಕಟ್ಟಿದ್ದು...!!!
ನೀತಿ ಪಾಠ(ಸುಂದ್ರಿಯಿಂದ ಕಲಿತಿದ್ದು): ಅತಿಯಾದ ಪ್ರೇರಣೆ ಒಳ್ಳೆಯದಲ್ಲ.
ಪ್ರೀತಿಯಿಂದ,
ಶಿವಪ್ರಕಾಶ್
Yo man, ಹೊಳೆ ದಾಟಿದ ಮೇಲೇನೆ ಅಂಬಿಗನಿಗೆ ಕ್ಯಾಶ್ ಕೊಡಬೇಕು. ನಡುನೀರಿನಲ್ಲಿ ದೋಣಿ ಮುಳುಗಿದರೆ, ಅಷ್ಟು ಮನಿ ವೇಸ್ಟ ಅಲ್ವಾ?
ReplyDeleteTrue Sir...It's a lesson for me.... :) :)
DeleteThank You :)
ಇನ್ಮುಂದೆ ಪೂರ್ತಿ ಹುಷಾರು ಅನ್ನಿ..
ReplyDeleteಹೌದು... ಹುಷಾರ್ ಆಗಿರ್ಲೆಬೇಕು... :)
Deleteಧನ್ಯವಾದಗಳು
This comment has been removed by the author.
ReplyDelete