Tuesday, May 26, 2009

ನಾಚಿಕೆ

೪ ತಿಂಗಳ ಹಿಂದೆ ನನ್ನ ಸ್ನೇಹಿತ ಸಂಗು(ಸಂಗಮೇಶ್) ಅವನ ಜೊತೆಗೂಡಿ ಅವರ ಸಂಬಂಧಿಕರ ಮನೆಗೆ ಹೋಗಿದ್ವಿ.
ನನ್ನನ್ನು ಹಾಲ್'ನಲ್ಲಿದ್ದ ಸೋಫಾದ ಮೇಲೆ ಕುಳ್ಳಿರಿಸಿ ಒಳಗಡೆ ಹೋದ.
ಅವರು ಬಾಗಲಕೋಟೆ ಕಡೆಯವರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು.
ಸ್ವಲ್ಪ ಸಮಯದ ಬಳಿಕ ಒಳಗಡೆಯಿಂದ ಅವರ ಮನೆಯವರು ದೊಡ್ಡ ಗ್ಲಾಸಿನಲ್ಲಿ ಏನೋ ಹಿಡಿದು ತಂದು ನನಗೆ ಕೊಡುವುದಕ್ಕೆ ಮುಂದಾದರು.
ನಾನು ಮೊದೆಲೇ ನಾಚಿಕೆ ಸ್ವಭಾವದವನು.
ಬೇಡ ಬೇಡ ಎಂದು ನಾಚಿಕೆಯಿಂದಲೇ ಸ್ವಲ್ಪ ದೂರ ಸರಿಯುತ್ತ ಕೈಯನ್ನು ಅಡ್ಡ ಹಿಡಿದೆ.
ಅವರು ಸ್ವಲ್ಪ ಆಲೋಚಿಸುತ್ತ ನಿಂತು, ನೀವು ಗ್ಲಾಸಿನಲ್ಲಿ ಏನಿದೆ ಎಂದುಕೊಂಡಿರಿ ಅಂದ್ರು...
ನಾನು ಗ್ಲಾಸಿನಲ್ಲಿ ಏನಿದೆ ಎಂದು ಇಣಿಕಿ ನೋಡಿದೆ.
ಅದ್ರಲ್ಲಿ ಇದ್ದದ್ದು ನೀರು.
ನಾಚಿಕೆಯಿಂದ ತಲೆ ತಗ್ಗಿಸಿದೆ.
ಮನೆಗೆ ಬಂದವರಿಗೆ ಮೊದಲು ಕುಡಿಯಲು ನೀರು ಕೊಡುವುದು ಸಂಪ್ರದಾಯ.
ಏನ್ ಮಾಡೋದು, ನನಗೆ ಗೊತ್ತಿರ್ಲಿಲ್ಲ.
ಅಂತು ಅವತ್ತು, ನಾನು ಅವರ ಮನೆಯಲ್ಲಿ ಊಟ ಮಾಡುವವರೆಗೂ ಬಿಡಲಿಲ್ಲ.

ಇನ್ನೊಂದು ನನ್ನ ಚಿಕ್ಕ ಉಪದೇಶ:
ಮೊನ್ನೆ ನನ್ನ ಇನ್ನೊಬ್ಬ ಸ್ನೇಹಿತ ರಘು ಹಾಗು ಅವರ ತಮ್ಮ ಮಹೇಶ ಅವರ ಮನೆಗೆ ಊಟಕ್ಕೆ ಬಲವಂತವಾಗಿ ಕರೆದರು.
ನಾನು ಆಯ್ತು ಅಂದೇ.
ಹಾಗೆ ಅವರಿಗೆ ಒಂದು ಆದೇಶವನ್ನಿತ್ತೆ.
"ಲೋ, ನಾನು ಸ್ವಲ್ಪ ನಾಚಿಕೆ ಸ್ವಭಾವದವನು.
ನಾನು ನಿಮ್ಮ ಮನೆಯವರು ಊಟ ಬಡಿಸುತ್ತಿರುವಾಗ "ಸಾಕು ಸಾಕು" ಅಂತ ಇರ್ತೀನಿ.
ನೀವು "ಹಾಕಿಸ್ಕೊಳೋ ಹಾಕಿಸ್ಕೊಳೋ" ಅಂತ ಬಲವಂತ ಮಾಡಿ ಊಟ ಬಡಿಸಬೇಕು ಓಕೆನಾ ... ?" ಅಂದೇ.

ನೀವು ಕೂಡ ಅಸ್ಟೆ, ನಾನು ನಿಮ್ಮ ಮನೆಗೆ ಊಟಕ್ಕೆ ಬಂದರೆ "ಹಾಕಿಸ್ಕೊಳೋ, ಹಾಕಿಸ್ಕೊಳೋ" ಅಂತ ಬಲವಂತ ಮಾಡಿ ಬಡಿಸಬೇಕು.. ಓಕೆ ನಾ ? :P ಹ್ಹಾ ಹ್ಹಾ ಹ್ಹಾ.... :D
Share/Save/Bookmark

27 comments:

  1. ಓಕೆ ಸಾರ್ ಓಕೆ!

    ReplyDelete
  2. ಶಿವಪ್ರಕಾಶ್,
    ನಿಮ್ಮ ಎಲ್ಲಾ ಕಥೆಗಳನ್ನು ನನ್ನ ಮಗನಿಗೆ ವರದಿ ಒಪ್ಪಿಸಿದ್ದೀನಿ, ಆ ಬೈಕ್ ಕಥೆಗೆ ನಗುನೋ ನಗು, ಹಾಗೆ ನಿಮ್ಮ ಆಟೋಗ್ರಾಫ್ ಬಗ್ಗೆ ಹೇಳಿದಾಗ ನನ್ನ ಮಗ ಕೇಳಿದ ಅವರು ಯಾರೋ ಬರೆದುಕೊಟ್ಟರು ಎಂದು ಇವರು ನಂಬುವುದಾ..ಅಕ್ಷರ ಯಾರದು ಎಂದು ತಿಳಿಯಲಿಲ್ಲವಾ ಎಂದು ನಗುತ್ತಿದ್ದ.. ಈಗ ನಿಮ್ಮ ಬ್ಲಾಗ್ ಓದುತ್ತ ಇದ್ದ ಹಾಗೆ ನಿಮ್ಮ ಹೆಸರನ್ನು ಕೂಡಿಸಿಕೊಂಡು ಓದಿ ಓಹ್!! ನೀ ಹೇಳುತ್ತಿದ್ದವರು ಏನೋ ಕಥೆ ಬರೆದಿದ್ದಾರೆ ಎಂದಾಗ ಇದನ್ನೇಲ್ಲ ಓದಿ ಹೇಳಿದೆ.... ಅವನು ನಿಮ್ಮನ್ನ ನಮ್ಮ ಮನೆಗೆ ಬರಲೇಬೇಕು ಅದು ಕುವೈಟ್ಗೆ ಅಂತ ಹೇಳಮ್ಮ ಎಂದು ಒತ್ತಾಯಿಸಿದ್ದಾನೆ... ನೀವು ಬರಲೇಬೇಕು ಅವನೇ ನಿಮಗೆ ಬಲವಂತವಾಗಿ ಇನ್ನು ಹಾಕಿಸ್ಕೊಳೋ ಅನ್ನೋದಿಲ್ಲವಂತೆ, ಹಾಕಿಸಿಕೊಳ್ಳಿ ಎಂದು ಒತ್ತಾಯಿಸುತ್ತಾನಂತೆ ಹಾ ಹಾ ಹಾ....
    ನಿಜ ನಿಮ್ಮ ಕಥೆಯನ್ನು ನನ್ನ ಮಗ ತುಂಬಾ ಖುಷಿಪಟ್ಟ.
    ವಂದನೆಗಳು

    ReplyDelete
  3. ಶಿವಪ್ರಕಾಶ್ ಅವರೇ,
    ಚೆನ್ನಾಗಿದೆ ನಿಮ್ಮ ನಾಚುವ ಸ್ವಭಾವ! ಅಂದಹಾಗೆ ನೀವು ನಮ್ಮ ಮನೆಗೆ ಖಂಡಿತ ಊಟಕ್ಕೆ ಬರಬೇಕು ಆದರೆ no service, only self service !! ಯಾಕೆಂದರೆ ನಮಗೆ ಬಡಿಸಲು ನಾಚಿಕೆ ಆಗುತ್ತಪ್ಪ!!! ಹ್ಹ ಹ್ಹ ಹ್ಹ ಹ್ಹಾ ........!

    ReplyDelete
  4. ಶಿವಪ್ರಕಾಶ್,

    ಕೊನೆಯಲ್ಲಿ ನೀವು ಹೇಳಿದ ಉಪದೇಶ ಮಾತನ್ನು ನಾನು ಅನುಸರಿಸುತ್ತೀನಿ ಸಾರ್...

    ReplyDelete
  5. ಶಿವು....

    ಚೆನ್ನಾಗಿದೆ...
    ತುಂಬಾ ಸಂಕೋಚ ಒಳ್ಳೆಯದಲ್ಲ....

    ಹೋದ ಕಡೆ ಎಲ್ಲ ಒತ್ತಾಯ ಮಾಡೋದಿಲ್ಲ...
    ನನಗಂತೂ ಒತ್ತಾಯ ಮಾಡಕ್ಕೆ ಬರಲ್ಲ....

    ಆತ್ಮೀಯತೆಯಲ್ಲಿ ಸಂಕೋಚ ಏಕೆ...?

    ಲೇಖನ ಓದಿ ನಾವೆಲ್ಲ ನಕ್ಕು.., ನಕ್ಕು ಸುಸ್ತು.....

    ReplyDelete
  6. ನಾವು ಇದಕ್ಕೆ ಭಿಡೆ ಅಂತೇವಿ ಯಾಕ ಭಿಡೆ ಮಾಡ್ಕೊತಾರೋ ಗೊತ್ತಿಲ್ಲ ನನ್ನ ಜಾತಕದಾಗ ಆ ಶಬ್ದ ಇಲ್ಲ ನೋಡ್ರಿ...

    ReplyDelete
  7. ಗುರುಗಳೇ ನಮಸ್ಕಾರ!!!!!... ನಾನೂ ಸ್ವಲ್ಪ ನಿಮ್ಥರಾನೆ .... ಆದರೂ ಪರವಾಗಿಲ್ಲ ಬನ್ನಿ... ಸ್ವಲ್ಪ ಸೋಲ್ಪಾನೆ ಬಡಿಸ್ತಾ ಇರ್ತೀನಿ.... :-)

    ReplyDelete
  8. ಅಯ್ಯೋ ಅಷ್ಟೊ೦ದು ನಾಚಿಗೆ-ಸ೦ಕೋಚ ತು೦ಬಾ ಕಷ್ಟ ಕಣ್ರೀ. ನನಗೆ ಜಾಸ್ತಿ ಉಪಚಾರ ಮಾಡೋದಕ್ಕೆ ಬರೋಲ್ಲ.

    ReplyDelete
  9. ನನಗಂತೂ ಸ್ವಲ್ಪೂ ನಾಚಿಕಿ ಆಗೋದಿಲ್ಲ. ನಾನೇ ನಿಮ್ಮ ಮನೆಗೆ ಊಟಕ್ಕೆ ಬಂದು ಬಿಡ್ತೀನಿ(ಸಕುಟುಂಬ, ಸಪರಿವಾರ).

    ReplyDelete
  10. ನಮ್ಮ ಕಡೆನೂ ನೀರು ಕೊಡೋ ಸಂಪ್ರದಾಯ ಇದೆ! ಏನು ಹುಡುಗ್ರೊಪ್ಪಾ..?! ಚೆನ್ನಾಗ್ ಬರೆದಿರಿ ಬಿಡಿ
    -ಧರಿತ್ರಿ

    ReplyDelete
  11. ಜ್ಯೋತಿ ಅವರೇ,
    ನನ್ನ ಆದೇಶಕ್ಕೆ ಓಕೆ ಎಂದಿದ್ದಕ್ಕೆ ಧನ್ಯವಾದಗಳು..
    ಹಾಗಾದ್ರೆ ಯಾವತ್ತು ಬರ್ಲಿ ನಿಮ್ಮ ಮನೆ ಊಟಕ್ಕೆ... ಹ್ಹಾ ಹ್ಹಾ ಹ್ಹಾ
    ===============

    ಮನಸು ಅವರೇ,
    ನಿಮ್ಮ ಮಗ ನನ್ನ ಕಥೆಗಳನ್ನು ಮೆಚ್ಚಿಕೊಂಡಿದ್ದಕ್ಕೆ ನನಗೆ ತುಂಬಾ ಕುಶಿಯಾಗಿದೆ..
    ನಿಮ್ಮ ಪ್ರತಿಕ್ರಿಯೆ ನನಗೆ ತುಂಬಾ ಸಂತೋಷ ಕೊಟ್ಟಿದೆ. ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.
    ನಿಮ್ಮ ಮಗ ನನಗೆ ಊಟ ಬಡಿಸ್ತಾನೆ ಅಂತ ಕೇಳಿ ತುಂಬಾ ಕುಶಿ ಆಯ್ತು.. ನಾನಂತೂ ನಾಚಿಕೆ ಬಿಟ್ಟು ಹಾಕಿಸಕೊಳ್ತಿನಿ.
    ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ==============

    SSK ಅವರೇ,
    ಅಯ್ಯೋ, ನೀವು ಬಡಿಸೋಕೆ ನಾಚಿಕೆ ಪಟ್ರೆ ನಾನು ತಿನ್ನೋದದ್ರು ಹೇಗೆ ?
    self service ಅಂದ್ರೆ ತುಂಬಾ easy ಆಯ್ತು. ನಿಮ್ಮ ಮನೆಗೆ ಊಟಕ್ಕೆ ನಿಸ್ಸಂಕೋಚವಾಗಿ ಬರಬಹುದು. :)
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    ಶಿವು ಅವರೇ,
    ನನ್ನ ಉಪದೇಶವನ್ನು ಪಾಲಿಸುತ್ತೆನೆಂದು ಆಶ್ವಾಸನೆ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹ್ಹಾ ಹ್ಹಾ ಹ್ಹಾ
    ===============

    ಪ್ರಕಾಶ್ ಅವರೇ,
    ನಿಮ್ಮ ಸಲಹೆಯಂತೆ ನಾಚಿಕೆಯನ್ನು ಬಿಡಲು ಪ್ರಯತ್ನಿಸುತ್ತೇನೆ. :)
    ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    umesh desai ಅವರೇ,
    ಹೌದು ರೀ, ಭಿಡೆ ಮಾಡೋದನ್ನು ಬಿಡ್ಬೇಕು..
    ನಿಮ್ಮ ಸಲಹೆಯಂತೆ ಬಿಡಲು ಪ್ರಯತ್ನಿಸುತ್ತೇನೆ... :)
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    ರವಿಕಾಂತ ಗೋರೆ ಅವರೇ,
    ಸ್ವಲ್ಪ ಸ್ವಲ್ಪ ಬೇಡ ರೀ, ಸ್ವಲ್ಪ ಜಾಸ್ತಿನೆ ಬಡಸಿ.
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    PARAANJAPE K.N. ಅವರೇ,
    ಒಹ್... ಹಾಗಾದ್ರೆ ನಾಚಿಕೊಳ್ಳೋದು ಬಿಟ್ಬಿಡ್ತಿನಿ.
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    sunaath ಅವರೇ,
    ಹೌದು ರೀ, ನಾಚಿಕೆ ಪಟ್ಕೊಬಾರ್ದು ಅಂತ ನನಗೆ ಅವತ್ತೇ ಗೊತ್ತಾಯ್ತ.
    ನಮ್ಮ ಮನೆಗೆ ಊಟಕ್ಕೆ ಬಂದ್ರೆ, ನಾನಂತೂ ನೀವು "ಸಾಕು" ಅಂದ್ರು ಬಿಡೋದಿಲ್ಲ. ಬಡಿಸ್ತಾನೆ ಇರ್ತೀನಿ..
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    ಧರಿತ್ರಿ ಅವರೇ,
    ಏನ್ ಮಾಡೋದು ರೀ, ನನಗೆ ಹೊರಗಡೆ ಪ್ರಪಂಚ ಅಸ್ಟೊಂದು ಕೊಟ್ಟಿಲ್ಲ. ಎಸ್ಟೆ ಆಗಲಿ ಅಮಾಯಕ ಅಲ್ವಾ :P
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  12. ಏನ್ ಗುರು, ಗ್ಲಾಸಲ್ಲಿ ವೋಡ್ಕಾ ತಂದು ಕೊಟ್ರೂ ಅಂದ್ಕೊಂಡ್ರಾ?.. ಹ್ಹೆ ಹ್ಹೆ ಹ್ಹೆ...

    ReplyDelete
  13. ಅಸ್ತೊಂದ್ ನಾಚಿಕೆ ಸ್ವಾಭಾವದವರ ಸರ್ ನೀವು.....
    ಚೆನ್ನಾಗಿ ಇದೆ ನಿಮ್ಮ ನಾಚಿಕೆ ಕಥೆ... ಹೌದು,, ಇದನ್ನ ಬರೆಯುವಾಗ ನಾಚಿಕೊಂಡ್ರೋ ಅಥವ ಇಲ್ವೋ?
    ಗುರು

    ReplyDelete
  14. swamy nimge oota madoke sankocha, nange badisoke sankocha.... :)

    actuallly nanu kooda nim tharane, yaraddaru manege hodre arda hotte thindu, baruvaga hotel nalli second innings mado jaayamaana nannadu.

    aadre swalpa aapthara manege hodaaga mathra, avara aduge mane ge kaali madade barolla.

    ella kadenu sikkapatte sankocha olledalla... hotel navarige labha aagutte...

    ReplyDelete
  15. ಉಮೇಶ ಅವರೇ,
    ಅಯ್ಯೋ ವೋಡ್ಕಾನಾ... ?... ಹಾಗಂದ್ರೆ ಏನು ... :P... ನಾನು ತುಂಬಾ ಅಮಾಯಕ ಕಣ್ರೀ :P
    ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    ಗುರು ಅವರೇ ,
    ಹೌದು ಕಣ್ರೀ, ನನಗೆ ಸ್ವಲ್ಪ ಸಂಕೋಚ ಜಾಸ್ತಿ..
    ಇದನ್ನು ಬರೆಯುವಾಗ ಸ್ವಲ್ಪ ನಾಚಿಕೊಂಡೆ... ಅಸ್ಟೆ :P
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    ಬಾಲು ಅವರೇ,
    ನಾನು ಕೂಡ ನಿಮ್ಮ ತರಹನೇ.
    ಪರಿಚಯದವರ ಮನೆಗೆ ಹೋದ್ರೆ, ಫುಲ್ ದರ್ಬಾರ್ ಮಾಡಿ, ಊಟ ಮಾಡ್ತೀನಿ :)
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  16. ವೀಣಾ ಅವರೇ,
    ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  17. ಶಿವ್,
    ಹೀಗೆ ಸಂಬೋಧಿಸಬಹುದೇ..?? ಏಕೆಂದರೆ ಶಿವು..already ಇದ್ದಾರಲ್ಲ...
    ಚಿಕ್ಕ-ಚಿಕ್ಕ ವಿಷಯಗಳನ್ನು ಚೊಕ್ಕವಗಿ ಬಿಡಿಸ್ತೀರಿ... ನೀವು ಚಿತ್ರಕಲೆ ಏನಾದ್ರೂ ಮಾಡ್ತೀರಾ..? ಹೇಗೆ?
    ಉಪಚಾರದ ಮಾತು ಬಂದಾಗ ಸ್ವಲ್ಪ reserved ಆಗಿ ಇರೋರಿಗೆ ಅಂತಹ ಕಡೆ loss ಆಗುತ್ತೆ ಅಲ್ವಾ..??

    ReplyDelete
  18. ನಗು ಮರೆಯಾಗುತ್ತಿರುವ ಈ ದಿನಗಳಲ್ಲಿ, ನಿಮ್ಮ ಬರಹ ನಗೆ ಟಾನಿಕ್!!!!!!!!!!

    ReplyDelete
  19. ಜಲನಯನ ಅವರೇ,
    ನೀವು ಹೇಗೆ ಕರೆದರು ನನಗೆ ಸಂತೋಷ.
    ನಾನು ಚಿತ್ರಕಲೆ, ಆತರ ಏನೂ ಮಾಡಿಲ್ಲ :( . ಮುಂದೆ ಜೀವನದಲ್ಲಿ ಸಾಧ್ಯವಾದರೆ ತಪ್ಪದೆ ಮಾಡುತ್ತೇನೆ. ನನಗೆ ಬಹಳ ವಿಷಯಗಳಲ್ಲಿ ಆಸಕ್ತಿ.

    ನೀವು ಹೇಳಿದ್ದು ನಿಜ. ಆದ್ರೆ ಕೆಲವರ ಮನೆಯಲ್ಲಿ ನಾಚಿಕೊಂಡಸ್ಟು, ಉಪಚಾರ ಮಾಡಿ ತುಂಬಾ ಅತ್ಮಿಯಾರಾಗಿ ಬಿಡ್ತಾರೆ.
    ಸಂಕೋಚ ಪಡುವುದನ್ನು ಆದಸ್ಟು ಬಿಡ್ತಾ ಇದೀನಿ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    ಚಂದಿನ ಅವರೇ,
    ತುಂಬಾ ಥ್ಯಾಂಕ್ಸ್ ರೀ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ===============

    ಬಾ.ರಾ. ಗೌರೀಶ್ ಕಪನಿ ಅವರೇ,
    ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  20. ಚೆನ್ನಾಗಿದೆ
    ನಾನು ಮೊದಲೆಲ್ಲಾ ತುಂಬಾ ಸಂಕೋಚದ ಪ್ರಾಣಿಯಂತೆ ಹೋದ ಕಡೆಯೆಲ್ಲಾ ಊಟಾ ಬಡಿಸುವಾಗ ಬೇಡ ಬೇಡ ಎಂದು ಕೈ ಅಡ್ಡ ತರುತ್ತಿದ್ದೆ. ನಂತರ ಒಂದು ಕಡೆ ತುಂಬಾ ಹಸಿದಿತ್ತು. ಮದುವೆ ಮನೆ ಬೇರೆ ಸಂಕೋಚಕ್ಕೆ ಒಂದು ಕೈ ಅನ್ನ ಬಡಿಸುವಾಗಲೆ ಬೇಡ ಎಂದು ಬಿಟ್ಟೆ ನಂತರ ಆಸಾಮಿಗಳು ನನಗೆ ಸರಿಯಾಗಿ ಬಡಿಸಲೇ ಇಲ್ಲ . ಅರೆ ಹೊಟ್ಟೆ ಅಂತ ಬೇರೆ ಹೇಳಬೇಕೆ?
    ಊಟ ತಿಂಡಿಗೆ ಸಂಕೋಚ ಸಲ್ಲದು ಇದು ನನ್ನ ಅನಿಸಿಕೆ

    ReplyDelete
  21. ರೂಪಾ ಅವರೇ,
    ನೀವು ಹೇಳಿದ್ದು ನಿಜ ರೀ. ಊಟ ಮಾಡೋಕೆ ಸಂಕೋಚ ಪಟ್ಕೊಬಾರ್ದು.
    ಸಂಕೋಚ ಪಟ್ರೆ ತುಂಬಾ loss ಆಗುತ್ತೆ. :).
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  22. nanna amma swalpa otthya jaasthi..adakke nanna cousin obru thappisikollakke avarige innondu swalpa bekaagiddagle 'saaku' annoru..ade aabhyasa aagi innondu manege hodaagalu helibittu 'arehotte' maadikondru...

    neevu haagella sankocha maadkondre (nammanege bandaaga)nimagoo 'arehottene' gati!!!

    ReplyDelete
  23. ಸುಮನ ಅವರೇ,
    ಹೌದು ರೀ, ಬೇರೆಯವರ ಮನೆಯಲ್ಲಿ ಊಟ ಮಾಡುವುದಕ್ಕೆ ನಾಚಿಕೊಂಡ್ರೆ ಅರ್ಧ ಹೊಟ್ಟೆ ಗ್ಯಾರೆಂಟಿ.
    ನಿಮ್ಮನೆಗೆ ಬಂದ್ರೆ ಊಟ ಮಾಡೋದಕ್ಕೆ ನಚ್ಕೊಳೋದಿಲ್ಲ ಬಿಡಿ... ಚನ್ನಾಗಿ ಹೊಟ್ಟೆ ತುಂಬಾ ಊಟ ಮಾಡಿ ಬರ್ತೀನಿ... ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  24. ಶಿವಪ್ರಕಾಶ್,
    ನಾನು ಊಟಕ್ಕೆ ಕೂರೊ ತನಕ ನಾಚಿಕೊಳ್ತೀನಿ... ಕೂತ ಮೇಲೆ ನಾಚಿಕೆ ಊರಾಚೆಗೆ....ಇನ್ನು ಸ್ವಲ್ಪ ಬೇಕು ಅಂದ್ರೆ ನಿಮಗೆ ಯಾವುದು ಬೇಕೊ ಅದು ತುಂಬ ಚೆನ್ನಾಗಿದೆ ಅಂತ ಹೊಗಳಿದ್ರೆ ಅವರು ಮತ್ತೆ ಬಡಿಸುತ್ತಾರೆ...ಇದೆ ನನ್ನ ತಂತ್ರ....
    ಚೆನ್ನಾಗಿ ಬರೆದಿದ್ದೀರಾ....

    ReplyDelete
  25. ಮಹೇಶ್ ಅವರೇ,
    ನಿಮ್ಮ ತಂತ್ರ ತುಂಬಾ ಚನ್ನಾಗಿದೆ..
    ಇನ್ಮೇಲೆ ನಾನು ನಿಮ್ಮ ತಂತ್ರವನ್ನೇ ಬಳಸುತ್ತೇನೆ.. :)
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete