Thursday, November 12, 2009

ಕುಲನಾಮ (Surname)

ಅಂದು ರಮೇಶ್, ಇಟಲಿಯಲ್ಲಿರುವ ರಾಬರ್ಟೊ ಎನ್ನುವ ವ್ಯಕ್ತಿಯೊಡನೆ ಚಾಟ್ (text - chat) ಮಾಡುತ್ತಿದ್ದ.
ನಾನು, ರಮೇಶ್, ಸತೀಶ್, ರಾಬರ್ಟೊ ಹಾಗು ಇನ್ನೂ ಹತ್ತಾರು ಜನ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡೋದು.
ಹೀಗೆ ಚಾಟ್ ಮಾಡುತ್ತಿರುವಾಗ ರಾಬರ್ಟೊ, ರಮೇಶನಿಗೆ ... 'ನಾನು ನಿನ್ನ ಒಂದು ವಯ್ಯುಕ್ತಿಕ ವಿಷಯ ಕೇಳಬಹುದೇ...?' ಎಂದ..
'ಹಾ, ಕೇಳು ರಾಬರ್ಟೊ... ಅದರಲ್ಲೇನಿದೆ...' ಎಂದ ರಮೇಶ್.
'ಸತೀಶ್... ನಿನ್ನ ಸಹೋದರನೆ.... ?' .
ಸತೀಶ್ ನಮ್ಮ ಸಹದ್ಯೋಗಿ, ಸಹೋದರನಲ್ಲ. ಆದರೆ ನಮ್ಮ ರಮೇಶನಿಗೆ, ರಾಬರ್ಟೊ ಹಾಗೆ ಯಾಕೆ ಕೇಳಿದ ಎಂದು ಅರ್ಥವಾಗಲಿಲ್ಲ. ಅವನಿಗೆ ಈ ಥರ ಆಲೋಚನೆ ಯಾಕೆ ಬಂದಿರಬಹುದು..? ಎಂದು ಆಲೋಚಿಸಿದ. ತಿಳಿಯಲಿಲ್ಲ. ಯಾಕಿರಬಹುದು ಎಂದು ಆಲೋಚಿಸುತ್ತಲೇ, ಒಂದು ಸಂದೇಶ ಕಳಿಸಿದ...
'ಯಾಕೆ ರಾಬರ್ಟೊ, ಆ ತರಹದ ಆಲೋಚನೆ ಬಂತು...?'
'ಇಲ್ಲ, ಇಬ್ಬರ Surname (ಕುಲನಾಮ) ಒಂದೇ ಇದೇ ಅಲ್ವಾ... ಅದೇ "ಕುಮಾರ್"...ಅಂತ.. "ರಮೇಶ್ ಕುಮಾರ್", "ಸತೀಶ್ ಕುಮಾರ್" ಅದಕ್ಕೆ ಹಾಗೆ ಕೇಳಿದೆ ' ಅಂದ.
ನಮ್ಮ ರಮೇಶ್, ಇದನ್ನು ಹೇಗೆ ವಿವರಿಸಿ ಹೇಳಬೇಕು ಎಂದು ಆಲೋಚಿಸುತ್ತ ನನ್ನ ಕೇಳಿದ.
ನಾನು ಇವರಿಬ್ಬರ ಸಂದೇಶಗಳನ್ನು ಓದಿದೆ. ಸ್ವಲ್ಪ ಆಲೋಚಿಸಿ ಅವರಿಗೆ ಹೀಗೆ ಸಂದೇಶ ಕಳಿಸಿದೆ...
'..."ಕುಮಾರ್" ಎನ್ನುವುದು ಕುಲನಾಮವಲ್ಲ...
ಕುಮಾರ ಎಂದರೆ ನಿಮ್ಮ ಭಾಷೆಯಲ್ಲಿ Son (ಮಗ) ಎಂದು ಅರ್ಥ..
ಇನ್ನೂ ರಮೇಶ್, ಸತೀಶ್ ಎನ್ನುವ ಹೆಸರುಗಳು, ದೇವರ ಹೆಸರುಗಳು..
ನಾವೆಲ್ಲರೂ ದೇವರ ಮಕ್ಕಳಿದ್ದಂತೆ ಅಲ್ಲವೇ...
ಹಾಗಾಗೆ ದೇವರ ಹೆಸರಿನ ಪಕ್ಕ "ಕುಮಾರ್" ಎಂದು ಸೇರಿಸಿ ಹೆಸರಿಡುತ್ತಾರೆ...
ನಿಮ್ಮಲ್ಲಿ ... ಜಾನ್ಸನ್(Johnson), ಪೀಟರ್ಸನ್ (Peterson) ಹೇಗೋ ಹಾಗೆ...' ಎಂದು ಕಳಿಸಿದೆ...
ಆಗ ರಾಬರ್ಟೊ...'ಒಹ್... ಹಾಗಾ...' ಎಂದು ಅವರ ಕೆಲವು ಹೆಸರುಗಳ ಉದಾಹರಣೆಗಳನ್ನು ಕೊಟ್ಟ.
ನಾನು, ರಮೇಶ ಒಳಗೊಳಗೇ ನಕ್ಕೆವು.
Share/Save/Bookmark

19 comments:

  1. ಶಿವು,
    ಉತ್ತರ ಭಾರತೀಯ ಪತ್ರಿಕೆಗಳು ಕಮಲಹಾಸನ್ ಅಂದರೆ ಕಮಾಲ ಹಸನ್ ಎನ್ನುವ ಮುಸ್ಲಿಮ್ ಎಂದು ತಿಳಿದು ಬರೆಯುತ್ತಿದ್ದರು, ನೋಡಿ!

    ReplyDelete
  2. ನಮ್ಮ ಆಫೀಸ್ ನಲ್ಲಿ ಸುಮಾರು ಜನ S ನಿಂದ ಶುರು ಆಗೋ ಹೆಸರು, ಶ್ವೇತ, ಸುಷ್ಮಾ.... ಹಾಗಾಗಿ ದುಬೈ ನ ನಂ ಕಲೀಗ್ ಶಾಸ್ತ್ರಿ ಕೂಡ ಹುಡುಗಿ ಅಂತ ತೀರ್ಮಾನಿಸಿದ್ದಳು.

    ನೀವು ಚೆನ್ನಾಗಿ ಉದಾಹರಣೆ ಕೊಟ್ಟಿದ್ದೀರ.

    ReplyDelete
  3. ಶಿವಪ್ರಕಾಶ್,
    ಇಂಥವೆಲ್ಲಾ ಪ್ರಸಂಗ ನಮ್ಮೊತ್ತಿಗೂ ನಡೆದಿರತ್ತೆ, ಆದ್ರೆ ನೀವು ಅದನ್ನ ಹೇಳೋ ರೀತಿ ಮಾತ್ರ ಸುಪರ್ಬ್.....

    ReplyDelete
  4. ತುಂಬಾ ಚೆನ್ನಾಗಿದೆ ನಿಮ್ಮ ಉತ್ತರ,
    ಅವರಿಗೆ ಅರ್ಥ ಮಾಡಿಸುವುದು ಕಷ್ಟವೇ?

    ReplyDelete
  5. ಹ್ಹ ಹ್ಹ ಹ್ಹ ಹ್ಹ ಹ್ಹ... ಕೇಳಿದ ಪ್ರಶ್ನೆಗೆ ಒಳ್ಳೆ ಟೈಮಿಂಗ್ answer.. :)
    Raaghu...

    ReplyDelete
  6. ಶಿವಪ್ರಕಾಶ್,

    ಕುಮಾರ್ ಅನ್ನುವುದು ಸರ್‍ನೇಮ? ಅಂತ ಆತ ಕೇಳಿದ್ದು ಓದಿದಾಗ ತುಂಬಾ ನಗು ಬಂತು. ನಿಮ್ಮ ಉತ್ತರವೂ ತುಂಬಾ ಚೆನ್ನಾಗಿತ್ತು.

    ReplyDelete
  7. ಶಿವು,
    ತುಂಬಾ ಚೆನ್ನಾಗಿದೆ...

    ReplyDelete
  8. hahaha super nimma uttara chennagide

    ReplyDelete
  9. ನಿಮ್ಮ ಉತ್ತರ ಸೂಪರ್ಬ್. ಆದರೂ ವಿದೇಶೀಯರ ಕುತೂಹಲದ ಸ್ವಭಾವವನ್ನು ನಾವು ನಿಜಕ್ಕೂ ಮೆಚ್ಚಲೇಬೇಕು. ಗಂಭೀರವಾಗಿ ಯೋಚಿಸಿದರೆ, ಹೌದು, ಈ ಹೆಸರುಗಳೆಲ್ಲ ಹೇಗೆ ಹುಟ್ಟಿಕೊಂಡವು ಎಂದು ಆಶ್ಚರ್ಯವಾಗುತ್ತದೆ.

    ReplyDelete
  10. Saada Dose thindang ide..
    i expect 'Masala dose' from you!!

    Anyway, olle baravanige..

    ReplyDelete
  11. November 22, 2009 9:13 AM
    -Nataraj

    ReplyDelete
  12. sunaath ಅವರೇ,
    ನೀವು ಹೇಳಿದ್ದು ನಿಜ. ಜನರ ಬಾಯಲ್ಲಿ ಆಡುವಾಗ ಒಂದು ಮೂಲ ಹೆಸರು ಅಳಿಸಿ ಹೋಗಿಬಿಡುತ್ತೆ... ಅದು ಏನೋ ಆಗಿ, ಏನೋ ಅರ್ಥ ಕೊಟ್ಟುಬಿಡುತ್ತೆ.
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    ಬಾಲು ಅವರೇ,
    ಲೇಖನ ಓದಿ, ನಾ ಕೊಟ್ಟ ಉದಾಹರಣೆಯನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    ದಿನಕರ ಮೊಗೇರ ಅವರೇ
    ನನ್ನ ಬರೆವಣಿಗೆಯ ಶೈಲಿಯನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು
    ============

    ಗುರುಮೂರ್ತಿ ಅವರೇ,
    ಅವರಿಗೆ ಅರ್ಥಮಾಡಿಸುವುದು ಕಷ್ಟವೇನಲ್ಲ... :)
    ಲೇಖನ ಓದಿ, ನಾ ಕೊಟ್ಟ ಉದಾಹರಣೆಯನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    ಸಂತೋಷ್ ಚಿದಂಬರ್ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    Snow White ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    SSK ಅವರೇ,
    ಲೇಖನ ಓದಿ, ನಾ ಕೊಟ್ಟ ಉದಾಹರಣೆಯನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    Raghu ಅವರೇ,
    ಅದೇನೋ ಗೊತ್ತಿಲ್ಲ ರಘು... ಆ ಸಮಯಕ್ಕೆ ಸರಿಯಾಗಿ ಹೊಳಿತು.. ಅದಕ್ಕೆ ಹಾಗೆ ಹೇಳಿದೆ...
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    Divya Hegde ಅವರೇ,
    ಲೇಖನ ಓದಿ, ನಾ ಕೊಟ್ಟ ಉದಾಹರಣೆಯನ್ನು ಹಾಗು ಲೇಖನವನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    shivu ಅವರೇ,
    ನಿಜ ಸರ್.. ನನಗೂ ಕೂಡ ಅವತ್ತು ನಗು ಬಂತು..
    ಲೇಖನ ಓದಿ, ನಾ ಕೊಟ್ಟ ಉದಾಹರಣೆಯನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    ಮಹೇಶ್ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    ಮನಸು ಅವರೇ,
    ಲೇಖನ ಓದಿ, ನಾ ಕೊಟ್ಟ ಉದಾಹರಣೆಯನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    Deepasmitha ಅವರೇ,
    ನಿಜಕ್ಕೂ ಅವರ ಈ ಕುತೂಹಲದ ಸ್ವಭಾವವನ್ನು ಮೆಚ್ಚಲೇಬೇಕು.. ಏನೇ ಸಂದೇಹವಿರಲಿ ಬಗೆಹರಿಸಿಕೊಂಡುಬಿಡುತ್ತಾರೆ.
    ಲೇಖನ ಓದಿ, ನಾ ಕೊಟ್ಟ ಉದಾಹರಣೆಯನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    ಸುಧೀಂದ್ರ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ============

    ನಟರಾಜ್,
    ನಿನಗೆ ಯಾವ ತರಹದ ಲೇಖನಗಳು ಇಷ್ಟ ಕಣೋ... ??
    ಅಂತು.. ಬ್ಲಾಗಿಗೆ ಬಂದು ನಿನ್ನ ಅಭಿಪ್ರಾಯ ತಿಳಿಸಿದ್ದಕ್ಕೆ ಥ್ಯಾಂಕ್ಸ್ ಕಣೋ...

    ReplyDelete
  13. sunaath ಅವರೇ,

  14. Divya Hegde ಅವರೇ,