ಇದುವರೆಗೆ ಎಂದೂ ಕರೆಯದ ಪ್ರಾಂಶುಪಾಲರು ಇಂದೇಕೆ ಕರಿತಾ ಇದಾರೆ ಎನ್ನುವ ಆಶ್ಚರ್ಯವಾಯ್ತು. ನಾವು ಮೂವರು ಪ್ರಾಂಶುಪಾಲರ ಕಚೇರಿಗೆ ಹೋಗಿ. ಬಾಗಿಲ ಹತ್ರ ನಿಂತು... 'ಸರ್' ಎಂದೆವು.
ಪ್ರಾಂಶುಪಾಲರು 'Come in' ಅಂದ್ರು.
ನಾವು ಒಳಗಡೆ ಹೋಗಿ, ಅವರ ಎದುರಲ್ಲಿ ನಿಂತೆವು.
ಅವರು ಮಾತು ಶುರು ಮಾಡುತ್ತಾ 'ನಿಮ್ಮಿಂದ ಕಾಲೇಜ್'ಗೆ ಮೂರು ಸಾವಿರ ನಸ್ಟ ಆಗಿದೆ. ಅದನ್ನು ನೀವೇ ಭರಿಸಬೇಕು. ಆ ಫೈನ್ ಕಟ್ಟಿ ಅಂತ ಹೇಳೋದಕ್ಕೆ ಕರೆದೆ' ಎಂದರು
ನಮಗೆ ಭಯ ಆಯ್ತು. ನಾವು ಯಾವುದೇ ತಪ್ಪು ಮಾಡಿಲ್ಲ. ಭಯದಲ್ಲೇ...'ನಾವು ಏನು ಮಾಡಿದ್ವಿ ಸರ್...?' ಎಂದೆವು.
ಪ್ರಾಂಶುಪಾಲರು ಗತ್ತಿನಿಂದಲೇ 'ಏನ್ ಮಾಡಿದ್ವಿ ಅಂತ ಕೇಳ್ತೀರಾ... ನಿಮಗೆ ಗೊತ್ತಿಲ್ವೆ...?... ನಿಮ್ಮಿಂದ ಹತ್ತು ಕುರ್ಚಿಗಳು ಹಾಳಗಿದವೇ. ಅದರಿಂದ ಕಾಲೇಜ್'ಗೆ ಮೂರು ಸಾವಿರ ನಸ್ಟ ಆಗಿದೆ...' ಎಂದರು.
'ನಾವು ಯಾವುದೇ ಕುರ್ಚಿಯನ್ನು ಹಾಳುಮಾಡಿಲ್ಲ ಸರ್' ಎಂದೆವು.
'ನೀವೇ ಮಾಡಿದ್ದು.. ಮೊನ್ನೆ ನೀವು ಮಾಡಿದ ಡ್ಯಾನ್ಸ್ ನಿಂದ ಹುಡುಗರೆಲ್ಲ ಕುಣಿದಾಡಿ, ಕುರ್ಚಿಗಳನ್ನೆಲ್ಲಾ ಹಾಳುಮಾಡಿದ್ದಾರೆ. ಆದಕಾರಣ ಇದರ ನಷ್ಟಕ್ಕೆ ನೀವೇ ಜವಾಬ್ದಾರರು..' ಎಂದು ಹೇಳಿ ನಕ್ಕರು.
ಅವರ ಮಾತಿಗೆ ನಾವು ಒಳಗೊಳಗೇ ನಕ್ಕೆವು.
ನಂತರ ಪ್ರಾಂಶುಪಾಲರು ನಮ್ಮನ್ನು ಅಭಿನಂದಿಸಿ ಕಳಿಸಿದರು.
ಅಂದಹಾಗೆ, ಪ್ರಾಂಶುಪಾಲರು ಆದ ಮಾತ್ರಕ್ಕೆ ಜೋಕ್ ಮಾಡಬಾರದು ಅಂತ ರೂಲ್ಸ್ ಏನಾದ್ರು ಇದೆಯಾ... :P ?
ಈ ಲೇಖನ, ನೈಜ ಘಟನೆಯನ್ನು ಆಧರಿಸಿ ಬರೆಯಲಾಗಿದೆ. :D
ಹಹಾಹ....
ReplyDeleteಜೋರಾಗೆ ಡ್ಯಾನ್ಸ್ ಮಾಡ್ತೀರ ಅಂತ ಆಯ್ತು....
ವಿಡಿಯೊ ಕ್ಲಿಪಿಂಗ್ ಇದ್ರೆ ಹಾಕು ಗುರುವೆ ನೋಡೋಣ.....
ಸದ್ಯ ಸ್ಟೇಜ್ ಎನೂ ಆಗಲಿಲ್ಲವಲ್ಲ.....
ಚೆನ್ನಾಗಿದೆ ಶಿವು.....
ಒಳ್ಳೇ sportive principal!
ReplyDeleteಹೆಂಗಳೆಯರ ಕುಣಿತಕ್ಕೆ ಚೇರುಗಳು ದಿಕ್ಕಾಪಾಲು ಹಹ್ಹಹ ತುಂಬಾ ಚೆನ್ನಾಗಿದೆ... ಪ್ರಿನ್ಸಿಪಾಲ್ ಆದರೇನು ಜೋಕ್ ಮಾಡಬಹುದು ಎಲ್ಲರನ್ನು ನಗಿಸಬಹುದು..
ReplyDeleteಡಾನ್ಸ್ ವೀಡಿಯೊ ಇದ್ರೆ ನಮಗೂ ತೋರಿಸಿ ಸರ್,
ReplyDeleteನಾವು ನೋಡ್ತಿವಿ
This comment has been removed by the author.
ReplyDeleteಶಿವು...
ReplyDeleteನಾನು ನಿಮಗೆ "ಹೀರೋ" ಅಂದಿದ್ದು ಸರಿಯಾಗಿದೆ...
ಅದರ ವಿಡಿಯೋ ಕಳಿಸಿ ಮಾರಾಯರೆ...
ಆರ್ಕೂಟ್ ಅಲ್ಲಿ ಹಾಕಿ...
ನನಗೂ ಕಾಲೇಜಿನ ದಿನಗಳು ಮತ್ತೆ ನೆನಪಾದವು...
ಚಂದದ ಬರಕ್ಕೆ ಅಭಿನಂದನೆಗಳು...
ಶಿವಪ್ರಕಾಶ್ ,
ReplyDeleteಕಾಲೇಜ್ ಅಂದ ಮೇಲೆ ಎಲ್ಲಾ ಚಟುವಟಿಗೆಗಳು ಇದ್ರೆ ಅದೊಂತರ ಖುಷಿ... ನಿಮ್ಮ ಸ್ನೇಹನ ಡಾನ್ಸ್ ಗೆ ಪ್ರಿನ್ಸಿಪಾಲ್ ಕೂಡ ಒಂದೆರಡು ಹೆಜ್ಜೆ ಹಾಕಿರಬೇಕಲ್ವ.... ಹ್ಹ ಹ್ಹ ಹ್ಹ ..
ನಿಮ್ಮವ,
ರಾಘು.
ಜನ ಹೀಗೂ ಡ್ಯಾನ್ಸ್ ಮಾಡ್ತಾರಾ... ಮುಂದಿನ ಸಲ ಕಾರ್ಯಕ್ರಮಕ್ಕೆ ನನ್ನೂ ಕರೀರಿ... :)
ReplyDeleteಹಹಹ... ಆ ಹುಡುಗರನ್ನ ಸ್ಟೇಜ್ ಗೆ ಕರೆದಿದ್ರೆ ನಷ್ಟದ ಮೊತ್ತ ಇನ್ನೂ ಹೆಚ್ಚಾಗ್ತಾ ಇತ್ತು ಅನ್ನಿ.. ಅವರು ಚೇರ್ ಮೇಲೆ ಇದ್ದದ್ದೇ ಒಳ್ಳೆಯದಾಯ್ತು...
ReplyDeleteಹಹಹ... ನಿಮ್ಮ ಭರ್ಜರಿ ಡಾನ್ಸ್ ಗೆ ಮುರಿದ ಸ್ಟೇಜಿನ ನಷ್ಟ ಯಾರ್ರಿ ತುಂಬ್ತಾರೆ?? :-)
ReplyDeleteಶಿವಪ್ರಕಾಶ್,
ReplyDeleteನಿಮ್ಮ ಪ್ರಾಂಶುಪಾಲರ ಹಾಸ್ಯ ಪ್ರವೃತ್ತಿ ಇಷ್ಟವಾಯಿತು.
ಹ್ಹ ಹ್ಹ ಹ್ಹ ..ಚೆನ್ನಾಗಿತ್ತು ಸರ್ ...:) ಪ್ರಾಂಶುಪಾಲರ ಹಾಸ್ಯ ಪ್ರವೃತ್ತಿ ಇಷ್ಟವಾಯಿತು :)
ReplyDeleteಸುಮಾ
:):):):)ishte nanna pratikriye:)
ReplyDeleteHi super stories!!!!
ReplyDeleteshare the dance clip please
ReplyDeleteಶಿವಪ್ರಕಾಶ್, ಮೊದಲಿಗೆ ನೀವು ಕ್ಷಮಿಸಬೇಕು, ನೀವು ನನ್ನ ಬ್ಲಾಗ್ (ಇತ್ತೀಚಿಂದು) ಪೋಸ್ಟ್ ಗೆ ಪ್ರತಿಕ್ರಿಯೆ ಹಾಕಿದ್ದಿರಿ...ಆ ಬ್ಲಾಗ್ ನನ್ನ computer ನ ಒಳತೊಂದರೆಗಳ ಕಾರಣ..ಹಳೆಯ ಬ್ಲಾಗ್ ನಂತೆ ಪೋಸ್ಟ್ ಆಗಿತ್ತು..ಅದನ್ನ ತೆಗೆಯಬೇಕಾಯಿತು...ಮತ್ತೆ ಪೋಸ್ಟ್ ಮಾಡಿದೆ..ಈಗ ಸರಿಯಿದೆ..ನಿಮ್ಮ ಪ್ರತಿಕ್ರಿಯೆ ಮತ್ತೆ ಹಾಕಿ ಪ್ಲೀಸ್...
ReplyDeleteನಿಮ್ಮ princi ಬಹಳ ಸ್ನೇಹೀ ಹೃದಯ ಉಳ್ಳವರು ಅನ್ನೋದು ಇದರಿಂದ ತಿಳಿಯುತ್ತೆ...ಯಾಕಿಲ್ಲ ಎಷ್ಟೋ ಪ್ರಿನ್ಸಿ ಗಳು ಬಹಳ ಲೈವ್ಲಿ ಇರ್ತಾರೆ...
ಮಹೇಶ್ ಅವರೇ,
ReplyDeleteಡಾನ್ಸ್ ಮಾಡಿದ್ದು ನಾನಲ್ಲ.
ಈ ಘಟನೆ ನನಗೆ ಹೇಳಿದ್ದು, ನನ್ನ ತಂಗಿ. ಇದು ಅವಳಿಗೆ ಆದ ಅನುಭವ.
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ಸುನಾಥ್ ಅವರೇ,
ನಿಜ ಸರ್. ಆ ಪ್ರಾಂಶುಪಾಲರ Sportive ಮೆಚ್ಚಲೇಬೇಕು..
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ಮನಸು ಅವರೇ,
ನಿಜ ರೀ. ಹುಡುಗೀರಾ ಡಾನ್ಸ್ ನೋಡಿ ಹುಡುಗರು ಫುಲ್ ಜಿಗಿದಾಡಿ ಬಿಟ್ಟಿದ್ದಾರೆ..
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ಗುರುಮೂರ್ತಿ ಅವರೇ,
ಡಾನ್ಸ್ ವೀಡಿಯೊ ಇರಬಹುದು.
ವಿಚಾರಿಸಿ ನೋಡುತ್ತೇನೆ. ಒಂದುವೇಳೆ ಸಿಕ್ಕರೆ ತಪ್ಪದೆ ವೆಬ್ ನಲ್ಲಿ ಹಾಕಿ, ಲಿಂಕ್ ಕೊಡ್ತೀನಿ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ಪ್ರಕಾಶ್ ಅವರೇ,
ಡಾನ್ಸ್ ಮಾಡಿದ್ದು ನಾನಲ್ಲ.
ಡಾನ್ಸ್ ಮಾಡಿದ್ದು ನನ್ನ ತಂಗಿ.
ಡಾನ್ಸ್ ವೀಡಿಯೊ ಇರಬಹುದು.
ವಿಚಾರಿಸಿ ನೋಡುತ್ತೇನೆ. ಒಂದುವೇಳೆ ಸಿಕ್ಕರೆ ತಪ್ಪದೆ ವೆಬ್ ನಲ್ಲಿ ಹಾಕಿ, ಲಿಂಕ್ ಕೊಡ್ತೀನಿ.
ನಿಮ್ಮ ಕಾಲೇಜಿನ ದಿನಗಳು ಈ ಲೇಖನದಿದ್ದ ನೆನಪಾಗಿದ್ದಾರೆ, ನಾನು ಧನ್ಯ.
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ರಘು ಅವರೇ,
ಪ್ರಾಂಶುಪಾಲರು ಕೂಡ ಒಂದೆರೆಡು ಸ್ಟೆಪ್ ಹಾಕಿದ್ದರೂ ಹಾಕಿರಬಹುದು.. :)
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ಆನಂದ ಅವರೇ,
ಮುಂದಿನ ಸಲ ನಿಮ್ಮನ್ನು ಕಾರ್ಯಕ್ರಮಕ್ಕೆ ಕರಿಬೇಕಾ...? ಯಾಕ್ರೀ ನೀವು ಕೂಡ ಇನ್ನೊಂದು ಕುರ್ಚಿ ಮುರಿಬೇಕಾ.? ಹ್ಹಾ ಹ್ಹಾ ಹ್ಹಾ.
ಆತರಹ ಏನಾದರು ಇದ್ರೆ, ಕರಿತಿನಿ ಬಿಡ್ರಿ.. :)
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ದಿಲೀಪ್ ಹೆಗಡೆ ಅವರೇ,
ನಿಜ ರೀ. ಅವರು ಸ್ಟೇಜ್ ಮೇಲೆ ಬಂದಿದ್ರೆ, ಇನ್ನೇನು ಮುರಿತ ಇದ್ರೋ... :P
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ರವಿಕಾಂತ ಗೋರೆ ಅವರೇ,
ಮುರಿದು ಹಾಕಿದ ಹುಡುಗರೇ ತುಂಬ್ತಾರೆ ಬಿಡಿ.. ಹ್ಹಾ ಹ್ಹಾ ಹ್ಹಾ...
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಶಿವು ಅವರೇ,
ReplyDeleteಎಲ್ಲ ಪ್ರಾಂಶುಪಾಲರು ಹೀಗೆ ಇದ್ದರೆ ಎಷ್ಟು ಚನ್ನ ಅಲ್ವಾ ?
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ಸುಮ ಅವರೇ,
ನಿಜ ಸುಮ. ಎಲ್ಲ ಕಾಲೇಜಿನಲ್ಲಿ ಪ್ರಾಂಶುಪಾಲರು ಹೀಗೆ ಇದ್ದರೆ ಎಷ್ಟು ಚನ್ನ ಅಲ್ವಾ ?
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ಗೌತಮ್ ಹೆಗಡೆ ಅವರೇ,
ಇಸ್ಟೇ ನನ್ನ ಪ್ರತಿಕ್ರಿಯೆ ಅಂತ ಹೇಳಿ, ಸಿಕ್ಕಾಪಟ್ಟೆ ಸ್ಮೈಲ್ಸ್ ಕೊಟ್ಟಿದ್ದಿರಾ... ಹ್ಹಾ ಹ್ಹಾ ಹ್ಹಾ...
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ಶಿವಪ್ರಸಾದ್,
ನನ್ನ ಲೇಖನಗಳನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಕಣೋ...
=========
ಸೀತಾರಾಮ. ಕೆ. ಅವರೇ,
ಡಾನ್ಸ್ ವೀಡಿಯೊ ಇರಬಹುದು.
ವಿಚಾರಿಸಿ ನೋಡುತ್ತೇನೆ. ಒಂದುವೇಳೆ ಸಿಕ್ಕರೆ ತಪ್ಪದೆ ವೆಬ್ ನಲ್ಲಿ ಹಾಕಿ, ಲಿಂಕ್ ಕೊಡ್ತೀನಿ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
=========
ಆಜಾದ್ ಅವರೇ,
ಸರ್. ಕ್ಷಮಿಸಿ ಎನ್ನುವ ದೊಡ್ದಮಾತೆಲ್ಲ ಹೇಳಬೇಡಿ. :)
ಎಲ್ಲ ಕಾಲೇಜಿನಲ್ಲಿ ಪ್ರಾಂಶುಪಾಲರು ಹೀಗೆ ಇದ್ದರೆ ಎಷ್ಟು ಚನ್ನ ಅಲ್ವಾ ?
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.