Tuesday, December 1, 2009

ಮಾತು ಮಾತಲ್ಲಿ

ನನ್ನ ಮೊಬೈಲ್'ಗೆ ಒಂದು ಕರೆ ಬಂತು. ಫೋನ್ ನಂಬರ್ ಗಮನಿಸಿದೆ. ಲ್ಯಾಂಡ್'ಲೈನ್ (Landline) ಫೋನಿನಿಂದ ಬಂದಿತ್ತು. ಕೊನೆಯ ಸಂಕೆಗಳು ೪೦೦೦ ಅಂತಿತ್ತು. ಇದು ನನಗೆ ಗೊತ್ತಿರುವ ಫೋನ್ ನಂಬರ್.
ನನ್ನ ಸ್ನೇಹಿತ ಶಿವಪ್ರಸಾದ್ ಬಿ. ಎಂ, ತನ್ನ ಆಫೀಸಿನಿಂದ ನನಗೆ ಆಗಾಗ ಕರೆ ಮಾಡುತ್ತಿದ್ದ ಫೋನ್ ನಂಬರ್.
ನಾವಿಬ್ಬರು ಒಬ್ಬರಿಗೊಬ್ಬರು ಫೋನ್ ಮಾಡಿದರೆ, ಮೊದಲು ಸ್ವಲ್ಪ ತರ್ಲೆ ಮಾತುಗಳನ್ನಾಡಿ ನಂತರ ಕರೆ ಮಾಡಿದ ವಿಷಯಕ್ಕೆ ಬರೋದು.
ಸರಿ ಫೋನ್ ಎತ್ತಿ, 'ಹಲೋ' ಎಂದೆ.
ಆ ಕಡೆಯಿಂದ ನನ್ನ ಸ್ನೇಹಿತ, ಮೊದಲೇ ನಾ ಹೇಳಿದ ರೀತಿಯಲ್ಲಿ ತರ್ಲೆ ಮಾಡುತ್ತಾ ಇಂಗ್ಲೀಷಿನಲ್ಲಿ ಮಾತಾಡಿದ.. ಆ ಸಂಭಾಷಣೆ ಇಂಗ್ಲಿಷಿನಲ್ಲೇ ನಡಿತು.....
ಅದನ್ನು ಇಲ್ಲಿ ಕನ್ನಡದಲ್ಲಿ ಬರಿತ ಇದೀನಿ. ನಮ್ಮ ಸಂಭಾಷಣೆ ಹೀಗಿತ್ತು ನೋಡಿ.
"ಹಲೋ , ನಾನು ಶಿವಪ್ರಕಾಶ್ ಎನ್ನುವವರ ಜೊತೆ ಮಾತಾಡಬಹುದೇ....?" ಎಂದ ನನ್ನ ಗೆಳೆಯ ಶಿವಪ್ರಸಾದ್.
ಆಗ ನಾನು ಹೇಳಿದೆ : "ಇಲ್ಲ, ಸಾಧ್ಯವಿಲ್ಲ. ನೀವು ಅವರ ಜೊತೆ ಮಾತನಾಡಲು ಆಗುವುದಿಲ್ಲ. ಅವರು ಸಾಮಾನ್ಯ ವ್ಯಕ್ತಿಯಲ್ಲ. ಅವರು ದೊಡ್ಡ ಬುಸ್ಸಿನೆಸ್ಸ್ ಮಗ್ನೆಟ್ (Business Magnet). ಅವರು ಈಗ ಬಿಲ್ ಗೇಟ್ಸ್ ಜೊತೆ ಮೀಟಿಂಗ್'ನಲ್ಲಿ ಇದಾರೆ. ಅವರ ಜೊತೆ ನೀವು ನೇರವಾಗಿ ಮಾತನಾಡಲು ಸಾಧ್ಯವಿಲ್ಲ. ನಾನು ಶಿವಪ್ರಕಾಶ್ ಅವರ ಸಹೋದರ. ಅವರು ಅಸ್ಟು ಸುಲಭವಾಗಿ ನಿಮಗೆ ಮಾತನಾಡಲು ಸಿಗುವುದಿಲ್ಲ. ಮೊದಲು ಅಪಾಯಿಂಟ್ಮೆಂಟ್ ತಗೋಳಿ. ನಂತರ ಸಂದರ್ಶಿಸಿ. ಏನಾದ್ರು ತುಂಬಾ ಮುಖ್ಯವಾದ ವಿಷಯ ಇದ್ರೆ ಹೇಳಿ. ಅವರಿಗೆ ಬಿಡುವು ಸಿಕ್ಕಾಗ ಹೇಳುತ್ತೇನೆ..' ಎಂದು ಅವನಿಗೆ ಮಾತಾಡಲು ಬಿಡದೆ ಒಂದೈದು ನಿಮಿಷ ಹೀಗೆ ಚನ್ನಾಗಿ ದಬಾಯಿಸಿದೆ.
ಅ ಕಡೆಯಿಂದ ನನ್ನ ಗೆಳೆಯ... "ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ ಸರ್, ಅವರ ಜೊತೆ ಸ್ವಲ್ಪ ಮಾತನಾಡಬೇಕಿತ್ತು. ಅವರು ತಮ್ಮ Resume ಅನ್ನು Job Portal ನಲ್ಲಿಹಾಕಿದ್ದಾರೆ. ಅದಕ್ಕೆ ಹೊಂದುವ ಕೆಲಸ ನಮ್ಮ ಕಂಪನಿಯಲ್ಲಿ ಇತ್ತು. ಅದಕ್ಕೆ ಕರೆ ಮಾಡಿದಿವಿ ಸರ್...."
ಈ ಸಾರಿ ಮಾತಾಡಿದಾಗ ಅವನ ಧ್ವನಿಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಯಾಕೋ ಸಂದೇಹ ಬಂತು. ಮತ್ತೊಮ್ಮೆ ಕರೆಬಂದ ಸಂಕೆಯನ್ನು ಗಮನಿಸಿದೆ.
ಅಯ್ಯೋ... ಇವನು ನನ್ನ ಗೆಳೆಯನಲ್ಲ. ಅವನು ಫೋನ್ ಮಾಡಲು ಉಪಯೋಗಿಸುತ್ತಿದ್ದ ಫೋನ್ ನಂಬರಿಗೂ, ಇದಕ್ಕೂ ಸ್ವಲ್ಪವೇ ಸ್ವಲ್ಪ ವ್ಯತ್ಯಾಸವಿತ್ತು. ಬೇರೆ ಯಾರೋ ವ್ಯಕ್ತಿಗೆ, ಸುಮ್ಮನೆ ಸಿಕ್ಕಾಪಟ್ಟೆ ತಲೆ ತಿಂದು ಬಿಟ್ಟಿದ್ದೇನೆ. ಅಪರಿಚಿತ ವ್ಯಕ್ತಿಯೊಡನೆ ನಾನಾಡಿದ ಮಾತುಗಳನ್ನು ನೆನೆದು ನಗು ಬಂತು.
ಮಾಡಿದ ತಪ್ಪಿಗೆ, ಕ್ಷಮೆ ಕೇಳಿ ಫೋನ್ ಇಟ್ಟೆ.

ಗೆಳೆಯರೇ ಹಾಗು ಗೆಳತಿಯರೇ (ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ.... ಸ್ವಲ್ಪ ಜಾಸ್ತಿ ಆಯ್ತು ಅಲ್ವಾ...?),
ನಾನು ಬ್ಲಾಗ್ ಲೋಕಕ್ಕೆ ಕಾಲಿಟ್ಟು(ಕೈಯಿಟ್ಟು), ಒಂದು ವರ್ಷವಾಗುತ್ತ ಬಂತು.
ನೀವು ನನ್ನನ್ನು ಹಾಗು ನನ್ನ ಲೇಖನಗಳನ್ನು ಪ್ರೋತ್ಸಾಹಿಸುತ್ತಾ ಬಂದಿದಿರಿ.
ನಿಮ್ಮ ಸಹಕಾರ ಹೀಗೆ ಇರವುದೆಂದು ಆಶಿಸುತ್ತೇನೆ.

ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್
Share/Save/Bookmark

26 comments:

  1. ತಮ್ಮ ಫ಼ಜೀತಿ ಪ್ರಸ೦ಗ ಓದಿ ನಕ್ಕಿದ್ದೇ ನಕ್ಕಿದ್ದು ಶಿವಪ್ರಕಾಶರವರೇ. ಚೆನ್ನಾಗಿದೆ ತಮ್ಮ ಅನುಭವ. ತಮ್ಮ ಬ್ಲೊಗ್-ಪ್ರಪ೦ಚದ ಪಾದಾರ್ಪಣೆಯ ಮೊದಲ ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗಳು. ತಮ್ಮ ಹಾಸ್ಯಭರಿತ ಲೇಖನಗಳು ಸದಾ ನಮ್ಮನ್ನು ರ೦ಜಿಸುತ್ತಿರಲಿ.

    ReplyDelete
  2. ಹಹಹ ಚೆನ್ನಾಗಿದೆ... ಹೋಗಿ ಹೋಗಿ ಕೆಲಸದ ಬಗ್ಗೆ ಕೇಳೋರಿಗೆ ಹೀಗೆನಾ ಮಾಡೋದು ಹುಷಾರು ಮತ್ತೆ ಒಳ್ಳೆ ಕೆಲಸ ಸಿಗುವಾಗ ಎಡವಟ್ಟು ಮಾಡಿಕೊಂಡು ಬಿಟ್ಟೀರಾ ಹಹಹ...
    ಶುಭಹಾರೈಕೆಗಳು...ನಿಮ್ಮ ಬ್ಲಾಗ್ ಪ್ರಪಂಚಕ್ಕೆ ಒಂದು ವರ್ಷದ ಹುಟ್ಟುಹಬ್ಬ ನಮಗೆಲ್ಲಾ ಪಾರ್ಟಿ ಕೊಡಬೇಕು ಎಂದು, ಯಾವಾಗ ಯಾವ ಸ್ಥಳ ಎಲ್ಲದ ಪಟ್ಟಿ ಮುಂದಿನ ಲೇಖನದಲ್ಲಿ ಬರಲಿ.. ಕಾಯುತ್ತಲಿರುತ್ತೇವೆ...

    ReplyDelete
  3. ಹ್ಹ... ಹ್ಹ....ಹ....ಒಮ್ಮೊಮ್ಮೆ ಹೀಗೆ ಯಡವಟ್ಟಾಗಿ ಬಿಡುತ್ತೆ. ಚೆನ್ನಾಗಿದೆ ಬರಹ.. ನಿಮ್ಮ ಬ್ಲಾಗ್ ಆನಿವರ್ಸರಿಗೆ ಶುಭ ಹಾರೈಕೆಗಳು.

    ReplyDelete
  4. ಹಹಹ ಚೆನ್ನಾಗಿದೆ, ನಿಮ್ಮ ಬ್ಲಾಗ್ ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗಳು

    ReplyDelete
  5. ಶಿವಪ್ರಕಾಶ್,
    ನನ್ನ ಫ್ರೆಂಡ್ ಒಬ್ಬನು ಫೋನ್ ಮಾಡಿದರೆ, ಯಾವಾಗಲೂ ನನ್ನ ಮಾತು ಸಹಸ್ರ ನಾಮಾರ್ಚನೆಯಿಂದಲೇ ಶುರು ಆಗುತ್ತಿತ್ತು.... ನಾನು ಅವನಿಗೆ ಫೋನ ಮಾಡಿದರೆ ಅವನದೂ ಅದೇ ಕ್ರೀಯೆ..... ಒಮ್ಮೆ ಅವನ ನಂಬರ್ ನಿಂದ ಫೋನ್ ಬಂತು...... ನಾನು ಎಂದಿನಂತೆ.......... ಅರ್ಚನೆ ಶುರು ಮಾಡಿದೆ........ ಸುಮಾರು ದಿನಗಳ ನಂತರ ಫೋನ್ ಮಾಡಿದ್ದ..... ಬಾಕಿ ಇತ್ತಲ್ಲಾ....... ಎಲ್ಲಾನೂ ಹೊರ ಹಾಕ್ತಾ ಇದ್ದೆ....... ಸುಮಾರು ಹತ್ತು ನಿಮಿಷದಿಂದ ಬೈಯ್ತಾ ಇದ್ದೇನೆ... ಆ ಕಡೆಯಿಂದ ಪ್ರತಿಕ್ರೀಯೆ ಇರಲಿಲ್ಲ.... ಡೌಟ್ ಆಯ್ತು...... ''ಹೆಲೋ,'' ಎಂದೇ...... ಆ ಕಡೆಯಿಂದ ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಮಾತಾಡ್ತಾ ಇದ್ದರು...... ನಾನು ' ನಾನೇ ಮಾತಾಡ್ತಾ ಇದ್ದರೂ' ನಾನಲ್ಲ ರೊಂಗ್ ನಂಬರ್ ಅಂತ ಹೇಳಿ ಇಟ್ಟುಬಿಟ್ಟೆ..... ಮ್ಯಾನೇಜರ್, ಅವರ ಮೊಬೈಲ್ ಕೆಟ್ಟಿದೆ ಅಂತ ನನ್ನ ಫ್ರೆಂಡ್ ಮೊಬೈಲ್ನಿಂದ ಕಾಲ್ ಮಾಡಿದ್ದರು....

    ReplyDelete
  6. ಹ...ಹ..ಚೆನ್ನಾಗಿದೆ...
    ಹೀಗೆ ನಮ್ಮನ್ನು ನಗಿಸುತ್ತಿರಿ. ವಾರ್ಷಿಕೋತ್ಸವದ ಶುಭಾಶಯಗಳು.

    ReplyDelete
  7. ಶಿವಪ್ರಕಾಶ,
    ಈಗ ನಿಮಗೆ ಒಂದು ವರ್ಷ ತುಂಬಿತಾ?
    Congratulations.
    ಒಂದು ವರ್ಷದಲ್ಲಿ ಜೊತೆಜೊತೆಯಾಗಿ ನಕ್ಕಿದ್ದೇವೆ, ನಲಿದಿದ್ದೇವೆ. ಅದಕ್ಕಾಗಿ ಧನ್ಯವಾದಗಳು.

    ReplyDelete
  8. ಹ್ಹ ಹ್ಹ, ನಾನೂ ಒಂದೆರಡು ಸಲ ಹೀಗೇ ಮಾಡಿ ಫಜೀತಿ ಪಟ್ಟಿದ್ದೀನಿ...
    ಬ್ಲಾಗ್ ವಾರ್ಶಿಕೋತ್ಸವಕ್ಕೆ ಶುಭಾಶಯಗಳು

    ReplyDelete
  9. ondu varsha puraisiddakke dhanyawadagalu Shivanna... heege bareyutithiri.. nammannu nagisutiri....
    Shubhavagali...

    ReplyDelete
  10. ಶಿವಪ್ರಕಾಶ್,

    ನಿಮ್ಮ ಪೋನ್ ಹುಡುಗಾಟದಂತೆ ನಾನು ಮಾಡಿ ಬೈಸಿಕೊಳ್ಳುತ್ತೇನೆ...
    ಮತ್ತೆ ನಿಮ್ಮ ಬ್ಲಾಗಿಗೆ ಆಗಲೇ ಒಂದು ವರ್ಷವಾಯಿತಾ? ಚಿನಕುರುಳಿಯಂತೆ ಚುಟುಕಾಗಿ ಬರೆದು ಆಗಾಗ ನಗಿಸುತ್ತಿದ್ದ ನಿಮ್ಮ ಬ್ಲಾಗು ಹೀಗೆ ಮುಂದುವರಿಯಲಿ..ನಿಮ್ಮ ಬ್ಲಾಗ್ ವಾರ್ಷಿಕೋತ್ಸವಕ್ಕೆ ಅಭಿನಂದನೆಗಳು.

    ReplyDelete
  11. ಶಿವಪ್ರಕಾಶ್,
    ಒಳ್ಳೊಳ್ಳೆಯ ತಲೆ ತಿನ್ನೋ ಐಡಿಯಾಗಳು ತುಂಬಾ ಇವೆ ನಿಮ್ಮ ಹತ್ರ... ಬರಹ ತುಂಬಾ ಚೆನ್ನಾಗಿದೆ.... ನೀವು ಬರಿತಾ ಇರಿ ನಮ್ಮ ಪ್ರೋಸ್ಸಹ ಇದ್ದೆ ಇದೆ..
    ನಿಮ್ಮವ,
    ರಾಘು.

    ReplyDelete
  12. ಶಿವಪ್ರಕಾಶ್ ವರ್ಷ ತುಂಬಿದ್ದಕ್ಕೆ ಅಭಿನಂದನೆಗಳು ಪಾರ್ಟಿ ಎಲ್ರಿ

    ReplyDelete
  13. ಶಿವಪ್ರಕಾಶ್,
    ಹಹಹ... ತುಂಬಾ ಮಜಾ ಇದೆ ನಿಮ್ಮ ಅನುಭವಗಳು... ಇನ್ನು ಮುಂದೆ ಕರೆ ಬಂದಾಗ ಸ್ವಲ್ಪ ಜಾಗರೂಕರಾಗಿರಿ... ನಿಮ್ಮ ಬ್ಲಾಗ್ ೧ ವರ್ಷ ದಾಟಿದ್ದಕ್ಕೆ ಅಭಿನಂದನೆಗಳು.... ಹೀಗೆ ಬರೆಯುತ್ತಿರಿ...

    ReplyDelete
  14. ಹ್ಹ ಹ್ಹ ಹ್ಹ ಚೆನ್ನಾಗಿದೆ ಸರ್ ನಿಮ್ಮ ಫಜೀತಿ ..ನಾನು ಹೀಗೆ ಕೆಲವೊಮ್ಮೆ ತೊಂದರೆ ಪಟ್ಟಿದ್ದೇನೆ ಹಾಗು ನಕ್ಕಿದೆನ್ನೇ ಕೂಡ :) :)
    ನಿಮ್ಮ ಬ್ಲಾಗ್ ನ ವಾರ್ಷಿಕೋತ್ಸವಕ್ಕೆ ಅಭಿನಂದನೆಗಳು :) :)

    ReplyDelete
  15. ಹ ಹ ಹ ....ನಾನು ಒಂದೊಂದು ಸಾರಿ ಹೀಗೆ ಮಾಡಿದ್ದೆ...
    ನೆನಪಿಸಿದಕ್ಕೆ ಧನ್ಯವಾದಗಳು...
    all the best for second year..:)

    ReplyDelete
  16. ಓಹ್ ಶಿವಪ್ರಕಾಶ್.. ಇದೊಳ್ಳೇ ಫಜೀತಿ ಆಗಿತ್ತಲ್ಲ.. ಅದಕ್ಕೆ ಹೇಳೋದು....dont jump to conclusion ಅಂತ!

    ಹೀಗೆ ಚೆನ್ನಾಗಿ ಬರೀತಾ ಇರಿ ಅಂತ ಹಾರೈಸ್ತೀನಿ ನಿಮ್ಮ ಬ್ಲೋಗ್ ಗೆ ವರ್ಷ ತುಂಬಿದ ಸಮಯದಲ್ಲಿ!

    ReplyDelete
  17. ನಿಮ್ಮ ಬರಹಗಳು ಚೆನ್ನಾಗಿರುತ್ತವೆ. ಒ೦ದು ವರುಷ ಪೂರೈಸಿದ್ದು ಗೊತ್ತಾಗಲೇ ಇಲ್ಲವಲ್ಲ. ಮುಂದುವರಿಯಲಿ ನಿಮ್ಮ ನೆನಪಿನ ಪುಟಗಳ ಜಾತ್ರೆ, ಶುಭವಾಗಲಿ.

    ReplyDelete
  18. ಶಿವಪ್ರಕಾಶ್ ಅವರೇ,
    ನಗಿಸ್ತಾ ನಗಿಸ್ತಾ ಒಂದು ವರ್ಷ ಕಳೆದೆ ಬಿಟ್ರಿ. ಹೀಗೆ ಇನ್ಮುಂದೇನೂ ನಾನ್ ಸ್ಟಾಪ್ ನಗಿಸ್ತಾ ಇರಿ....... ಆಯಿತಾ?!
    ಅಭಿನಂದನೆಗಳು.!

    ReplyDelete
  19. hi shivapraksh i read ur article it was really nice , idhe tahra ne nagu hage aithu nim lekahna nodi a hudga nenapadha ..............

    ReplyDelete
  20. ಸೀತಾರಾಮ. ಕೆ. ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ಮನಸು ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ನೀವೇ ಹೇಳಿ... ಪಾರ್ಟಿ ಯಾವಾಗ, ಎಲ್ಲಿ ಅಂತ...
    ಭರ್ಜರಿ ಪಾರ್ಟಿ ಮಾಡೋಣ... :P
    ===============

    ಚುಕ್ಕಿಚಿತ್ತಾರ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    Nisha ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ದಿನಕರ ಮೊಗೇರ ಅವರೇ,
    ಹ್ಹಾ ಹ್ಹಾ ಹ್ಹಾ... ನೀವು ಮ್ಯಾನೇಜರ್ ಗೆ ಸಹಸ್ರ ನಾಮಾರ್ಚನೆ ಮಾಡಿಬಿಟ್ಟಿರೆ...
    ಪಾಪ... ಆ ಮ್ಯಾನೇಜರ್...
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ===============

    ಸುಧೀಂದ್ರ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ಸುನಾಥ್ ಅವರೇ,
    ದಿನಗಳು ಅದೆಸ್ಟು ಬೇಗ ಹೋಗಿಬಿಡುತ್ತವೆ ಅಲ್ವಾ... ನಿಮ್ಮ ಜೊತೆ ಕಳೆದೆ ದಿನಗಳು ಬೇಗ ಬೇಗನೆ ಸರಿದುಹೋಗಿಬಿಟ್ಟವು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ರಾಜ್,
    Thanks for the comment kano...
    ===============

    ಆನಂದ ಅವರೇ,
    ನೀವು ಹೀಗೆ ಪಸೀತಿ ಪಟ್ಟಿದ್ದಿರಾ..? ಹಾಗಾದರೆ ಅದನ್ನು ಒಮ್ಮೆ ನಿಮ್ಮ ಬ್ಲಾಗಿನಲ್ಲಿ ಬರೆಯಿರಿ. ನಾವು ಓದಿ, ಆನಂದಿಸೋಣ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ಸಂತೋಷ್ ಚಿದಂಬರ್ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  21. ನವೀನ್ ಅವರೇ,
    ನಿಮ್ಮ ಬೆಂಬಲ ಹೀಗೆ ಇರಲಿ.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ಶಿವು ಅವರೇ
    ನಿಮ್ಮ ಬೆಂಬಲ ಹೀಗೆ ಇರಲಿ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ರಘು ಅವರೇ,
    ನಿಮ್ಮ ಬೆಂಬಲ ಹೀಗೆ ಇರಲಿ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ದಿಲೀಪ್ ಹೆಗಡೆ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ===============

    umesh desai ಅವರೇ,
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ನೀವೇ ಹೇಳಿ... ಪಾರ್ಟಿ ಯಾವಾಗ, ಎಲ್ಲಿ ಅಂತ...
    ಭರ್ಜರಿ ಪಾರ್ಟಿ ಮಾಡೋಣ... :P
    ===============

    ಬಾಲು ಅವರೇ,
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ರವಿಕಾಂತ ಗೋರೆ ಅವರೇ,
    ಇನ್ಮೇಲೆ ಫುಲ್ ಹುಷಾರಾಗಿ ಇರ್ತೀನಿ ರೀ... ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ಸುಮ ಅವರೇ,
    ನೀವು ಕೂಡ ಇಂತಹ ಪಜೀತಿ ಪಟ್ಟಿದ್ದಿರಾ... ನಿಮ್ಮ ಅನುಭವಗಳನ್ನು ಬರೀರಿ ರೀ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    Divya Hegde ಅವರೇ,
    ನಿಮಗೂ ಕೂಡ ಇಂತಹ ಅನುಭವಗಳಗಿದವೆಯೇ...?... ಹಾಗಾದರೆ ನಮ್ಮ ಜೊತೆ ನಿಮ್ಮ ಬ್ಲಾಗಿನಲ್ಲಿ ಹಂಚಿಕೊಳ್ಳಿ..
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ಸುಮನ ಅವರೇ,
    ಒಂದೊಂದು ಸಾರಿ ಫುಲ್ zoom ನಲ್ಲಿ ಇದ್ದಾಗ, ಈ ಥರ ಆಗಿಬಿಡುತ್ತೆ. ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    PARAANJAPE K.N. ಅವರೇ,
    ನಿಜ ಸರ್. ತುಂಬಾ ಬೇಗನೆ ದಿನಗಳು ಕಳೆದು ಹೋಗಿ ಬಿಟ್ಟವು.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    SSK ಅವರೇ,
    ನಿಮ್ಮ ಬೆಂಬಲಕ್ಕೆ ನಾನು ಚಿರ ಋಣಿ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ವಾರ್ಷಿಕೋತ್ಸವಕ್ಕೆ ಶುಭ ಹಾರೈಕೆಗೆ ನನ್ನ ಅನಂತ ಅನಂತ ಧನ್ಯವಾದಗಳು...
    ===============

    ರೂಪ ಅವರೇ,
    ನಿಮಗೂ ಈ ತರಹದ ಅನುಭವಗಳಿದವೆಯೇ..?.. ಹಾಗಾದರೆ, ನಮ್ಮೊಂದಿಗೆ ಹಂಚಿಕೊಳ್ಳಿ...
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete