Monday, December 28, 2009

ಸೊನ್ನೆ


(ಚಿತ್ರ ಕೃಪೆ: ಅಂತರ್ಜಾಲ)

ಎಂದಿನಂತೆ ಬೆಳಿಗ್ಗೆ ಬೇಗನೆ ಎದ್ದು (ನಿಜ ಹೇಳ್ತಾ ಇದೀನಿ ರೀ) ಕಾಲೇಜ್'ಗೆ ಹೋದೆ. ಕಾಲೇಜ್'ನ ಆವರಣದ ಒಳಗೆ, ಕ್ಲಾಸ್ ಗೆ ಹೋಗುವ ದಾರಿಯಲ್ಲಿ Placement ಆಫೀಸಿನ ಮುಂದೆ ಕಾಲೇಜ್'ನ ಹುಡುಗರು ದೊಡ್ಡದಾದ ಒಂದು ಸಾಲಿನಲ್ಲಿ ನಿಂತಿದ್ದರು. ನನ್ನ ಕೆಲವು ಮಿತ್ರರು ಕೂಡ ಅದೇ ಸಾಲಿನಲ್ಲಿ ನಿಂತಿದ್ದರು. ಅಲ್ಲೇ ಹಾಕಿದ್ದ ಬ್ಯಾನೆರ್ ನೋಡಿದೆ. "ಉಚಿತ ಕಣ್ಣಿನ ಪರೀಕ್ಷೆ" ಎಂದಿತ್ತು. ನನ್ನ ಮಿತ್ರರು ನನ್ನನ್ನು ಕರೆದು "ಸಾಲಿನಲ್ಲಿ ನಿಂತ್ಕೋ" ಎಂದರು. ನಾನು ಸಾಲಿನಲ್ಲಿ ನಿಂತೆ.
ಒಬ್ಬೊಬ್ಬರು ಕಣ್ಣು ಪರೀಕ್ಷೆ ಮಾಡುತ್ತಿದ್ದ ಕೋಣೆಯ ಒಳಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಹೊರ ಬರುತ್ತಿದ್ದರು. ಹೀಗೆ ಹೊರಬಂದ ನನ್ನ ಸ್ನೇಹಿತರು, ಕೈಯಲ್ಲಿ ಹಿಡಿದ ಒಂದು ಚೀಟಿಯನ್ನು ತೋರಿಸಿ "ಮಗ, ನನಗೆ ೦.೨೫ ಇದೆ", "ಮಗ, ನನಗೆ ೪.೫ ಇದೆ"... ಎಂದು ಒಬ್ಬೊಬ್ಬರು ಒಂದೊಂದು ಅಂಕಿ ಹೇಳುತ್ತಿದ್ದರು. ಅದು ಅವರಿಗೆ ಇರುವ ದೃಷ್ಟಿ ದೋಷದ ಅಂಕಿ. ತಪಾಸಣೆ ಮಾಡಿದ ವೈದ್ಯರು, ಅವರಿಗೆ ಕನ್ನಡಕ ಧರಿಸಲೋ, ಅಥವಾ ಇರುವ ಕನ್ನಡಕವನ್ನು ಬದಲಿಸಲೋ ಹೇಳಿರುವುದಾಗಿ ಹೇಳಿಕೊಂಡರು.
ನನಗೂ ಕನ್ನಡಕ ಧರಿಸಲು ಹೇಳಬಹುದು ಎಂದುಕೊಂಡು ಸಾಲಿನಲ್ಲಿ ನಿಂತೆ.
ನನ್ನ ಸರದಿ ಬಂತು. ಕೋಣೆಯ ಒಳ ಹೋದೆ.
ಅಲ್ಲೊಂದು ಕಣ್ಣಿನ ಪರೀಕ್ಷೆಯ ಉಪಕರಣವನ್ನು ಇಟ್ಟಿದ್ದರು.
ಅದರ ಒಂದು ತುದಿಯಲ್ಲಿ ಅವರು ಕೂತು, ಇನ್ನೊಂದು ತುದಿಯಲ್ಲಿ ನನ್ನನ್ನು ಕೂರಲು ಹೇಳಿದರು. (ಮೇಲಿನ ಚಿತ್ರದಲ್ಲಿ ಇರುವ ಹಾಗೆ).
ಆ ಉಪಕರಣದ ಒಂದು ತುದಿಯಲ್ಲಿ ಕಣ್ಣಿಟ್ಟು ನೋಡಲು ಹೇಳಿದರು. ಇನ್ನೊಂದು ತುದಿಯಲ್ಲಿ ಅವರು ನೋಡುತ್ತಿದ್ದರು.
ಅವರು ನೋಡುತ್ತಾ... "ಸರಿಯಾಗಿ ಕಣ್ಣಿಟ್ಟು ನೋಡ್ತಾ ಇದ್ದೀರಾ...?" ಎಂದು ಕೇಳಿದರು.
"ಹಾ ಸರ್, ನೋಡ್ತಾ ಇದೀನಿ" ಎಂದು ಹೇಳಿದೆ.
ಎರೆಡು ಮೂರು ಬಾರಿ ಹೀಗೆ ಕೇಳಿದರು.
"ನಾನು ನೋಡುತ್ತಲೇ ಇದ್ದೇನೆ" ಎಂದು ಹೇಳಿದೆ.
ಒಂದು ನಿಮಿಷ ಇನ್ನೊಂದು ತುದಿಯಿಂದ ನನ್ನ ಕಣ್ಣನ್ನು ನೋಡಿ, ಪರೀಕ್ಷಿಸಿದರು.
ನಂತರ... ಒಂದು ಚೀಟಿಯಲ್ಲಿ ಏನೋ ಅಂಕಿ ಬರೆದು ನನ್ನ ಕೈಯಿಗೆ ಇಟ್ಟರು.
ನಾನು "ಸರ್, ಕನ್ನಡಕ ಏನಾದ್ರು ಬೇಕಾಗುತ್ತ...?" ಎಂದೆ.
"ಏನು ಬೇಕಿಲ್ಲ ಹೋಗಿ" ಎಂದರು.
"ಎಸ್ಟಿದೆ ಸರ್..." ಎಂದೆ.
"ಎಷ್ಟು ಇಲ್ಲ ಹೋಗಿ" ಎಂದರು.
ಆ ಚೀಟಿಯನ್ನೊಮ್ಮೆ ತೆರೆದು ನೋಡಿದೆ. ಅದರಲ್ಲಿ ಒಂದು ದೊಡ್ಡ "೦" (ಸೊನ್ನೆ) ಬರೆದಿದ್ದರು. ಸ್ವಲ್ಪ ನಿರಾಸೆಯಲ್ಲೇ ಆ ಚೀಟಿಯನ್ನು ಜೇಬಿನಲ್ಲಿಟ್ಟುಕೊಂಡು ಹೊರಬಂದೆ.
ಹೊರಗಡೆ ನಿಂತಿದ್ದ ಸ್ನೇಹಿತರೆಲ್ಲ ನನ್ನ ಕರೆದು... "ಎಸ್ಟಿದೆ ಮಗ...?" ಎಂದರು.
ತಾಪಸನೆ ಮಾಡಿದ ವೈದ್ಯರು ಕೊಟ್ಟ ಆ ಚೀಟಿಯನ್ನು ಅವರ ಕೈಗಿಟ್ಟೆ.
ಅದನ್ನು ನೋಡುತ್ತಾ.... "ಮಗ.. ನೀನು ಇಂಜಿನಿಯರಿಂಗ್'ನಲ್ಲಿ ಏನಾದ್ರು ಓದಿದಿಯೋ, ಇಲ್ವೋ.?... ಎಲ್ಲ ಸೆಮಿಸ್ಟರ್ ಓದಿ ಪಾಸಗಿದಿಯೋ ಅಥವಾ ಕಾಪಿ ಹೊಡೆದು ಪಾಸ್ ಆಗಿದಿಯಾ...?" ಎಂದು ಕೀಟಲೆ ಮಾಡಿದರು.

ನಿಮ್ಮೆಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
Share/Save/Bookmark

23 comments:

  1. ಶಿವಪ್ರಕಾಶ್,

    ನನಗೂ ನಿಮ್ಮ ಹಾಗೆ ಕಾಲೇಜು ಸಮಯದಲ್ಲಿ ಕನ್ನಡಕ ಹಾಕಿಕೊಳ್ಳಬೇಕೆನಿಸುತ್ತು.
    ಈಗ ನಾನು ತುಂಬಾ ಓದುವುದು ಮತ್ತು ಬರೆಯುವುದು ನೋಡಿ ನಿನಗ್ಯಾಕೆ ಇನ್ನು ಕನ್ನಡಕ ಬಂದಿಲ್ಲ ಅಂತ ಕೇಳಿದ್ದುಂಟು. ಆದ್ರೆ ಖಂಡಿತ ಕನ್ನಡಕದ ಆಸೆಯಿಲ್ಲ.
    ನಿಮ್ಮ ಲೇಖನ ಓದಿ ನನಗೆ ನನ್ನ ನೆನಪು ಮರುಕಳಿಸಿತು.

    ReplyDelete
  2. ಪುಣ್ಯವಂತ ನೀನು ಶಿವು....
    ನನಗೆ ಕನ್ನಡಕ ಇಲ್ಲ ಅಂದ್ರೆ ಎನೊ ಕಳೆದು ಕೊಂಡಂತೆ ಆಗಿದೆ ಈಗ....
    ಚೆಂದದ ನಿರೂಪಣೆ....

    ReplyDelete
  3. ನಿಮ್ಮ ಕಣ್ಣಲ್ಲಿ ಪವರ್ರೇ ಇಲ್ವಾ ಶಿವು ಮಹರಾಜ್ ಹಾಗಾದ್ರೇ ?!! all the best. ದೇವ್ರು ಓಳ್ಳೆ ನೋಟ(ಟು!) ಕೊಟ್ಟಿದಾನೆ ನಿಮ್ಗೆ .

    ReplyDelete
  4. ನಾನು ಇಂಜನಿಯರಿಂಗಲ್ಲಿ ಅದೇನು ಓದಿದ್ನೋ ನೆನಪಿಲ್ಲ, ಆದರೆ ನೋಡಿದೋರನ್ನೆಲ್ಲಾ ನೆನಪಿಸೋಕೆ ಕನ್ನಡಕ ಇದೆ. ( ಅವರನ್ನೆಲ್ಲಾ ವಾರೆಗಣ್ಣಲ್ಲಿ ನೋಡಿದ್ದಕ್ಕೇ ಬಂದಿದ್ದು ) :)

    ReplyDelete
  5. hmmm....ನೀವು ತುಂಬಾ ಲಕ್ಕಿ ಕಣ್ರೀ '೦' ಪಾಯಿಂಟ್ ಇದೇ ಅಂದ್ರೆ...
    ನಾನು PU ಓದಬೇಕಾದರೆ spects ಹಾಕೊಳ್ತಿದ್ದೆ...ಸ್ವಲ್ಪ ತಲೆ ನೋವು ಮತ್ತೆ ಪಾಯಿಂಟ್ ಇತ್ತು...
    ಅವಗೆಲ್ಲ ನಾನು ಯಾವಾಗಲು ಹಾಕೋದಾಗಿಬಿಟ್ಟರೆ ಏನಪ್ಪಾ ಮಾಡೋದು ಅನ್ಕೋತಿದ್ದೆ...
    ಸದ್ಯ....ಈಗ ಹಾಗಿಲ್ಲ..ಪಾಯಿಂಟ್ ತಾನಾಗೆ ಕಡಿಮೆ ಆಗೋಯ್ತು...:):)

    ReplyDelete
  6. ಅಕ್ಕಯ್ಯನಿಗಿದೆ ಕನ್ನಡಕ,ತಮ್ಮನಿಗ್ಯಾಕಿಲ್ಲ ಹಹಹಹ... ನಾನು ೯ನೇ ತರಗತಿನಲ್ಲಿರುವಾಗಲೇ ಕನ್ನಡಕ ಬಂತು ಹಹಹ... ಇನ್ನೊಂದು ವಿಷಯ ಗೊತ್ತ ನಾನು ಆಗ ಕನ್ನಡಕ ಹಾಕಿರೋರೆಲ್ಲ ತುಂಬಾ ಬುದ್ದಿವಂತರೆಂದು ಕೊಳ್ಳುತ್ತಲಿದ್ದೆ ನನಗೆ ಕನ್ನಡಕ ಬಂದಾಗ ಖುಷಿಯಾಗಿತ್ತು ಹಹಹಹ... ಈ ವಿಷಯ ಯಾರಿಗುಹೇಳುವುದು ಬೇಡ pls ಹಹಹ ಓಕೆನಾ....ನೀವು ಏನು ಕಮ್ಮಿ ಒಂದು ಕೂಲಿಂಗ್ ಗ್ಲಾಸ್ ತೊಟ್ಟು ನನಗೂ Zeerrrooo power ಅದಕ್ಕೆ ಈ ಕನ್ನಡಕ ಕೊಟ್ಟಿದ್ದಾರೆ ಎನ್ನಬೇಕಿತ್ತು. hahah

    ReplyDelete
  7. ಶಿವಪ್ರಕಾಶ್,
    ನಾನು ಹತ್ತನೆಯ ಕ್ಲಾಸ್ ನಲ್ಲಿ ಇದ್ದಾಗ ಇಷ್ಟಪಟ್ಟು ಕನ್ನಡಕ ಧರಿಸಲು ಶುರು ಮಾಡಿದ್ದು.... ನೆನಪಾಯಿತು...... ಧನ್ಯವಾದಗಳು......

    ReplyDelete
  8. ಹಾ ಹಾ ! ಇಂಜಿನಿಯರಿಂಗ್ ಓದಿದ್ದೀರೋ ಇಲ್ವೋ - ನಿಮ್ಮ ಗೆಳೆಯರ ಡೌಟ್ ಸರಿಯಾಗಿದೆ ;)

    ReplyDelete
  9. ನಿಜಕ್ಕೂ ನೀವು ಲಕ್ಕಿ ರೀ..ಕನ್ನಡಕ ಬೇಕಿಲ್ಲ ಎಂದರೆ ಯಾಕ್ರೀ ಚಿಂತೆ..ಮಜಾ ಮಾಡಿ .. :)

    ReplyDelete
  10. ಆಂ ಹಾ! Sharp-eye ತುಂಟಾ!

    ReplyDelete
  11. ನಿರೂಪಣೆ ತುಂಬಾ ಚೆನ್ನಾಗಿದೆ.

    ಇದನ್ನು ಓದಿದ ತಕ್ಷಣ ನಿಮ್ಮ profile photo ನೋಡಿದಾಗ, ಆಗ ತಾನೇ ಈ ಘಟನೆಯಿಂದ ನೊಂದು, ಶೋಕದಿಂದ ಕರಿ ಕನ್ನಡಕವನ್ನೇರಿಸಿ ಶೊನ್ಯದತ್ತ ( ಅಥವಾ ಸೊನ್ನೆಯಾಕಾರದ ಸೂರ್ರ್ಯನತ್ತ ) ಮೋರೆಮಾಡಿ ಲೋಕವನ್ನು ಶಪಿಸುತ್ತಿರುವಂತಿದೆ, ಎಂಬ ವೂಹೆ ಮೂಡಿಸಿತು.

    ಎರಡು ಸೊನ್ನೆ ಒಂದು ಸೊನ್ನೆ(೨೦೧೦) ಎಲ್ಲರಿಗೂ ಸಂತೋಷ ಮತ್ತು ಉತ್ಸಾಹ ತರಲಿ.

    ReplyDelete
  12. ಸೊನ್ನೆಯ ವಿಶೇಷ ನೋಡಿ...ಕೆಲವು ಕಡೆ ಸೊನ್ನೆಗೆ ಮಹತ್ವನೆ ಇರಲ್ಲ.. ಕೆಲವು ಕಡೆ ಸೊನ್ನೆಗಿರುವ ಮಹತ್ವ ಬೇರೆ ಯಾವ ಅ೦ಕೆಗೂ ಇಲ್ಲ.
    ಚೆನ್ನಾಗಿದೆ ಬರಹ...
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

    ReplyDelete
  13. ಸೊನ್ನೆಯಾದರೆನು .... ಶಿವಾ...

    ReplyDelete
  14. ಶಿವಪ್ರಕಾಶ್ ಅವರೇ,
    ಹ್ಹ ಹ್ಹ ಹ್ಹ... ನಿಮಗೆ ಕನ್ನಡಕ ಮೇಲೆ ಏನಾದ್ರು ವ್ಯಾಮೋಹ ಇತ್ತ..? ಹ್ಹ ಹ್ಹ ಹ್ಹ... ಹೊಸ ವರ್ಷದ ಶುಭಾಶಯಗಳು...
    ನಿಮ್ಮವ,
    ರಾಘು.

    ReplyDelete
  15. ಕನ್ನಡಕದ ಕಥೆ ಚೆನ್ನಾಗಿದೆ ಶಿವ ಪ್ರಕಾಶ್... ಹೀಗೆ ಸೊನ್ನೆಯೇ ಮುಂದುವರೆಯಲಿ ಎಂಬ ಹಾರೈಕೆ ನನ್ನದು!

    ReplyDelete
  16. ಖುಷಿ ಪಡಿ ಸೊನ್ನೆ ಸಿಕ್ಕಿದ್ದಕ್ಕೆ....ಮು೦ದೆಯೂ ಸೊನ್ನೆಯೇ ಸಿಗಲಿ...

    ಓದುವ ಸಮಯದಲ್ಲಿ ನನಗೂ ಕನ್ನಡಕ ಬ೦ದಿದ್ದರೆ ಚೆನ್ನಾಗಿತ್ತು ಅ೦ತ ಅನಿಸಿದ್ದು೦ಟು :)

    ReplyDelete
  17. @ Shrinidhi Hande,
    Thank you :)
    =======

    ಶಿವು ಅವರೇ,
    ನಿಮ್ಮ ನೆನಪುಗಳನ್ನು ನೆನಪು ಮಾಡಿದ್ದಕ್ಕೆ ನಾನು ಧನ್ಯ..
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =======

    ಮಹೇಶ್ ಅವರೇ,
    ನೀವು ಕೂಡ ಪುಣ್ಯವಂತರೆ.... ನಿಮಗೆ ನಾಲ್ಕು ಕಣ್ಣುಗಳಿವೆ... ನಮಗೆ ಬರಿ ಎರೆಡು... ಹ್ಹಾ ಹ್ಹಾ ಹ್ಹಾ..
    ನಿರೂಪಣೆ ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....
    =======

    @ Sandeep Kamath,
    Thank you :)
    =======

    Subrahmanya Bhat ಅವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    ಆನಂದ ಅವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    ದಿವ್ಯ ಹೆಗಡೆ ಅವರೇ,
    ನೀವು ಕೂಡ ಲಕ್ಕಿನೆ... ಈಗ ನಿಮಗೂ ಕನ್ನಡಕ ಇಲ್ವಲ್ಲ..
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    ಮನಸು ಅವರೇ,
    ಹ್ಹಾ ಹ್ಹಾ ಹ್ಹಾ.. ಯಾರಿಗೂ ಹೇಳಬೇಡ ಅಂತ ಹೇಳಿ ಪುಬ್ಲಿಕ್ ನಲ್ಲಿ ಕಾಮೆಂಟ್ ಹಾಕಿದೀಯ ಅಲ್ಲ ಅಕ್ಕಯ್ಯ... :)
    ನಿಮ್ಮ ಸಲಹೆಯಂತೆ ಕೂಲಿಂಗ್ ಗ್ಲಾಸ್ ಹಾಕ್ತೀನಿ ಬಿಡು ಅಕ್ಕಯ್ಯ.. ಸುಮ್ನೆ ಪೋಸ್ ಕೊಡೋಕೆ... :)
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    ರವಿಕಾಂತ ಗೋರೆ ಅವರೇ,
    ಧನ್ಯವಾದಗಳು.
    =======

    ಗುರುಮೂರ್ತಿ ಅವರೇ,
    ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    =======

    ದಿನಕರ ಮೊಗೇರ ಅವರೇ,
    ನಿಮ್ಮ ನೆನಪುಗಳನ್ನು ನೆನಪು ಮಾಡಿದ್ದಕ್ಕೆ ನಾನು ಧನ್ಯ..
    ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  18. ದಿವ್ಯಾ ಮಲ್ಯ ಅವರೇ,
    ಹ್ಹಾ ಹ್ಹಾ ಹ್ಹಾ... ಹಾಗೆಲ್ಲ ನನ್ನ ಮೇಲೆ ಡೌಟ್ ಪಡಬೇಡಿ.. ಕಸ್ಟಪಟ್ಟು ಇಂಜಿನಿಯರಿಂಗ್ ಪಾಸ್ ಮಾಡಿದಿನಿ... :P
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    ಸುಮ ಅವರೇ,
    ನಾನು ಇಂಜಿನಿಯರಿಂಗ್ ಓದಿದಿನೋ ಇಲ್ವೋ ಅಂತ ಡೌಟ್ ಪಡ್ತಾ ಇದಾರೆ ಅಲ್ವಾ... ಅದೇ ಚಿಂತೆ.. ಹ್ಹಾ ಹ್ಹಾ ಹ್ಹಾ..
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    ಸುನಾಥ್ ಅವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    Anonymous ಅವರೇ,
    ನಿಮ್ಮ ಪ್ರತಿಕ್ರಿಯೆ ಮಸ್ತ್ ಆಗಿ ಇದೆ... ಹ್ಹಾ ಹ್ಹಾ ಹ್ಹಾ...
    ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    ಸೀತಾರಾಮ. ಕೆ. ಅವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    manamukta ಅವರೇ,
    ನಿಜ ರೀ. ಕೆಲವು ಕಡೆ ಸೊನ್ನೆಗೆ ಮಹತ್ವನೆ ಇರಲ್ಲ.. ಕೆಲವು ಕಡೆ ಸೊನ್ನೆಗಿರುವ ಮಹತ್ವ ಬೇರೆ ಯಾವ ಅ೦ಕೆಗೂ ಇಲ್ಲ.
    ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    ಚುಕ್ಕಿಚಿತ್ತಾರ ಅವರೇ,
    ಎಷ್ಟು ದೊಡ್ಡ ಅಂಕಿ ಬರುತ್ತೋ ಅಸ್ಟು ಬುದ್ದಿವಂತರು ಅಂತ ಅರ್ಥ ಇದೆಯಂತೆ.. ಅದಕ್ಕೆ ಚಿಂತೆಯಾಗಿದೆ.. ಹ್ಹಾ ಹ್ಹಾ ಹ್ಹಾ...
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    Raghu ಅವರೇ,
    ಹೌದು ರೀ... ಕನ್ನಡಕದ ಮೇಲೆ ಸ್ವಲ್ಪ ವ್ಯಾಮೋಹ ಇತ್ತು...
    ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    Sumana ಅವರೇ,
    ನಿಮ್ಮ ಹಾರೈಕೆಗೆ ನಾನು ಚಿರಋಣಿ..
    ಪ್ರತಿಕ್ರಿಯೆಗೆ ಧನ್ಯವಾದಗಳು.
    =======

    ಸುಧೇಶ್ ಶೆಟ್ಟಿ ಅವರೇ,
    ನಿಮಗೂ ಹಾಗೆ ಅನ್ನಿಸಿತ್ತಾ....
    ನಿಮ್ಮ ಹಾರೈಕೆಗೆ ನಾನು ಚಿರಋಣಿ..
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete