Monday, June 7, 2010

ಬಾ ಮಳೆಯೇ ಬಾ

ಬಿ.ಆರ್. ಲಕ್ಷ್ಮಣರಾವ್ ಅವರು ಬರೆದ "ಬಾ ಮಳೆಯೇ ಬಾ" ನಮ್ಮೆಲ್ಲರಿಗೂ ತುಂಬಾ ಇಷ್ಟವಾದ ಹಾಡು. ಸೋನುನಿಗಮ್ ಕೂಡ ಆ ಹಾಡನ್ನು ತುಂಬ ಸೊಗಸಾಗಿ ಹಾಡಿ, ನಮ್ಮ ಮನದಲ್ಲೇ ಉಳಿಯುವಂತೆ ಮಾಡಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳು.

ಅದೇನೋ ಗೊತ್ತಿಲ್ಲ. ಕೆಲವು ಹಾಡುಗಳು, ನನಗೆ ಬರುವ ಸನ್ನಿವೇಶಕ್ಕೆ ತಕ್ಕಂತೆ ನನ್ನ ಬಾಯಲ್ಲಿ ಬದಲಾಗುತ್ತಿರುತ್ತವೆ. ಹಾಗೆ ಈ ಹಾಡಿನ ಕೆಲವು ಸಾಲುಗಳು ಆಫೀಸ್-ಮನೆ ನಡುವೆ ನನ್ನ ಬಾಯಲ್ಲಿ ಬದಲಾದ ಬಗೆ ನೋಡಿ.

Manager: ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನಮ್ಮ Employees ಆಫೀಸಿಗೆ ಬರಲಾರದಂತೆ
ಅವರಿಲ್ಲಿ ಬಂದೊಡನೇ, ಬಿಡದೇ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, ಹಿಂತಿರುಗಿ ಹೋಗದಂತೆ, ಬಿಡದೇ ಬಿರುಸಾಗಿ ಸುರಿ

Employee: ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನಾನು ಆಫೀಸಿನಿಂದ ಮನೆಗೆ ಬರಲಾರದಂತೆ
ನಾ ಮನೆಗೆ ಬಂದೊಡನೇ, ಬಿಡದೇ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, (ನಾಳೆ ಆಫೀಸಿಗೆ) ಹಿಂತಿರುಗಿ ಹೋಗದಂತೆ, ಬಿಡದೇ ಬಿರುಸಾಗಿ ಸುರಿ

Employee ಹೆಂಡ್ತಿ: ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಕಾದಿಹೆನು ಮನೆಯಲ್ಲಿ, ಅವರಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು, ಮತ್ತೆ ನಾಳೆಯಾಗದಂತೆ.

ಇದಕ್ಕೆ ನಿಮ್ಮ ಕ್ಷಮೆಯಿರಲಿ....

ಇಂತಿ ನಿಮ್ಮ ಪ್ರೀತಿಯ
ಶಿವಪ್ರಕಾಶ್.

Share/Save/Bookmark

29 comments:

  1. ಸಕ್ಕತ್ತಾಗಿದೆ ಸರ್. ಮ್ಯಾನೇಜರ್, ಉದ್ಯೋಗಿಯ ಅನಿಸಿಕೆಗಳನ್ನು ಸರಿಯಾಗಿಯೇ ಅಣಕಿಸಿದ್ದೀರಿ

    ReplyDelete
  2. ಎನ್ ಗುರು,
    ಬಿ.ಆರ್. ಲಕ್ಷ್ಮಣರಾವ್ ಅವರು ಸಹ ಮೆಚ್ಚುವ ಹಾಗೆ ಬರೆದಿದ್ದೀಯ....
    ಸೂಪರ್...ವಾಸ್ತವಕ್ಕೆ ಹತ್ತಿರ...

    ReplyDelete
  3. ಹಹ್ಹ ಹ್ಹಾ ಹ್ಹಾ ಸರ್ ಸಕ್ಕತ್ತಾಗಿದೆ :)

    ReplyDelete
  4. :). ಬೇಗ ಮದ್ವೆ ಆಗಿ ಶಿವು. ಆಗ ಇನ್ನಷ್ಟು ಹಾಡುಗಳು ನಿಮ್ಮಿಂದ ಗ್ಯಾರಂಟಿ ಬರುತ್ತೆ. !

    ReplyDelete
  5. ಬಿ. ಆರ್. ಎಲ್ ಅವರ ಕವನಗಳಲ್ಲಿ ನನಗೆ ಈ ಹಾಡು ತುಂಬಾ ಇಷ್ಟವಾದದ್ದು.... ಏನೋ ಬಾರಿ ಬಾರಿ ಬದಲಾವಣೆಯಾಗಿದೆ.....ಹೊಸ ಕೆಲಸದ ಬಾಸ್ ಹೀಗೆನಾ ಹೇಳೋದು ಹಹಹ

    ReplyDelete
  6. what a variation!!

    ReplyDelete
  7. ಬಾ ಮಳೆಯೇ ಬಾ,
    ಶಿವಪ್ರಕಾಶ ಕವನ ಬರೆದು ಮುಗಿಸುವವರೆಗೂ ಸುರಿಯುತ್ತಿರು!

    ReplyDelete
  8. ಏನ್ಸಾರ್,
    BRL ಸರ್ ಅವರಿಗೆ ಚಾಲೆಂಜ್ ಮಾಡ್ತೀರೋ ಹಾಗಿದೆ....
    ಸೂಪರ್ರು ಬಾಸ್.........

    ReplyDelete
  9. ಶಿವು...

    ಎಲ್ಲವೂ ಚೆನ್ನಾಗಿದೆ..
    ಹೆಂಡತಿಯ "ಕಾಲವೇ.. ನಿಲ್ಲು" ಮಾತ್ರ ಸಿಂಪ್ಲಿ ಸೂಪರ್ !

    ReplyDelete
  10. ಬಾ ಮಳೆಯೇ ಬಾ..
    ಅಷ್ಟು ಬಿರುಸಾಗಿ ಬಾರದಿರು ..
    ನಮ್ಮ ಶಿವೂ ನಲ್ಲೆ ಹೆದರಿ ಓದದಂತೆ................!!!!
    ಕ್ಷಮಿಸಿ...ಶಿವೂ....
    ಅದ್ಬುತ...

    ReplyDelete
  11. Ha ha ha..! Tumba chennagide Shivu :-) Sihta aaythu.

    ReplyDelete
  12. ಹಾಡು ಚೆನ್ನಾಗಿದೆ ಶಿವೂ...

    ReplyDelete
  13. ನಕ್ಕು ನಕ್ಕು ಸಾಕಾಯ್ತು ಮಾರಾಯ್ರೆ
    &ಚಿತ್ರಾ ಸಂತೋಷ್

    ReplyDelete
  14. ಎಲ್ಲಿ ನಿಮ್ಮ ಮ್ಯಾನೇಜರ್ ನಂಬರ್ ಕೊಡಿ!.

    ಸೂಪರ್ ಕ್ರಿಯೇಟಿವ್ ಆಗಿ ಬರ್ದಿದ್ದಿರಿ. ಚೆನ್ನಾಗಿದೆ.

    ReplyDelete
  15. ಶಿವಪ್ರಕಾಶ್,

    ಎಂಥ ತಲೆ ನಿಮ್ಮದು. ಇಲ್ಲಿ ಮೂರು ಪ್ಯಾರಗಳನ್ನು ಎಷ್ಟು ಸೊಗಸಾಗಿ ಬದಲಾಯಿಸಿಕೊಂಡಿದ್ದೀರಿ..ಸೂಪರ್!

    ReplyDelete
  16. ಬಾ ಮಳೆಯೇ ಬಾ...

    ReplyDelete
  17. ಮಾತಾಡಂಗಿಲ್ಲ.

    ಸೂಪರ್.....

    ಎಲ್ಲರ ಹಾಡು ಇದು :)

    ReplyDelete
  18. ಶಿವು - ತುಂಬ ಚೆನ್ನಾಗಿದೆ.. ಹೆಂಡತಿಯು ಹೇಳುವ ಚರಣ ಸಕ್ಕತ್ತಾಗಿದೆ...

    ReplyDelete
  19. Thank You and that i have a dandy present: Where Do You Get The Money To Renovate A House residential renovation contractor

    ReplyDelete