Tuesday, June 15, 2010

ಬಾಗಲಕೋಟೆ ಪ್ರವಾಸ

ನಾವೆಲ್ಲರೂ ಸೇರಿ ಇತ್ತೀಚಿಗೆ ಸ್ನೇಹಿತರ ಮದುವೆಗಳ ಪ್ರಯುಕ್ತ ಬಾಗಲಕೋಟೆಗೆ ಹೋಗಿದ್ದೆವು. ಹಾಗೆ ಹತ್ತಿರವಿರುವ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಬನಶಂಕರಿ, ಮಹಾಕೂಟ, ಪಟ್ಟದಕಲ್ಲು, ಐಹೊಳೆಗೆ ಸಹ ಹೋಗಿಬಂದೆವು. ನಿಜಕ್ಕೂ ಎಂತಹ ಅದ್ಭುತ ಸ್ಥಳಗಳು. ಜೀವನದಲ್ಲಿ ಒಮ್ಮೆಯಾದರು ನೋಡಲೇಬೇಕು.

ಬಾದಾಮಿ:
ವಾತಾಪಿ (ಇಂದಿನ ಬಾದಾಮಿ) ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯ ವಂಶವು ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ. ವಾಸ್ತುಶಿಲ್ಪ ಮತ್ತು ಕಲೆಗೆ ಚಾಲುಕ್ಯ ಸಾಮ್ರಾಜ್ಯದ ಕೊಡುಗೆ ಅಪಾರ.



ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು. ಗುಡ್ಡದ ಕಲ್ಲು ಬಾದಾಮಿ ಪದಾರ್ಥದ ಬಣ್ಣವನ್ನು ಹೋಲುವುದರಿಂದ ಈ ಸ್ಥಳಕ್ಕೆ ಬಾದಾಮಿ ಎಂದು ಹೆಸರು ಬಂತು ಎಂದು ಕೆಲವು ಮೂಲಗಳ ಪ್ರಕಾರ ಹೇಳಲಾಗಿದೆ. ಚಾಲುಕ್ಯರು ಮೂಲತ ವೈಷ್ಣವರು, ನಂತರ ಅವರು ಶೈವಧರ್ಮಕ್ಕೆ ಮತಾಂತರಗೊಂಡರು.


ಹರಿಹರರ ಚಿತ್ರದ ಹಾಗೆ ಪಕ್ಕದಲ್ಲಿನ ಈ ಚಿತ್ರದಲ್ಲಿ ಅವರ ಆನೆ-ನಂದಿ ವಾಹನಗಳನ್ನು ಕೂಡ ಹೊಂದಿಸಿ ಈ ಚಿತ್ರವನ್ನು ಕೆತ್ತಿದ್ದಾರೆ. ವಿಷ್ಣುವಿನ ವಾಹನ ಗರುಡ ಪಕ್ಷಿ, ಆದರೆ ಅದಕ್ಕೂ ಮುಂಚೆ ವಿಷ್ಣುವಿನ ವಾಹನ ಆನೆಯಾಗಿತ್ತಂತೆ.


ಈ ಚಿತ್ರದಲ್ಲಿ ಶಿವನ ವಾಹನವಾದ ನಂದಿಯ ಮೇಲೆ ಶಿವಪಾರ್ವತಿ ಕುಳಿತುಕೊಂಡಿದ್ದಾರೆ. ಪಾರ್ವತಿ ಈ ಚಿತ್ರದಲ್ಲಿ ಇಂದಿನ ಕಾಲದ ಹುಡುಗೀರು ತಮ್ಮ ಬಾಯ್ ಫ್ರೆಂಡ್ ಗಾಡಿ ಓಡಿಸುವಾಗ ಹಿಂದೆ ಕುಳಿತುಕೊಳ್ಳುವ ಶೈಲಿಯಲ್ಲಿ ಕುಳಿತುಕೊಂಡಿರುವುದು ವಿಶೇಷ.

ಪಟ್ಟದಕಲ್ಲು:


ಐಹೊಳೆ:

ನಮ್ಮ ದೇಶದ ಲೋಕಸಭೆಯ ಕಟ್ಟಡವು ಐಹೊಳೆಯಲ್ಲಿನ ಈ ದುರ್ಗಾ ದೇವಾಲಯವನ್ನು ಹೋಲುತ್ತದೆ.


ಚಾಲುಕ್ಯರ ಲಾಂಛನ. ಈ ಲಾಂಛನದಲ್ಲಿ ವರಾಹವನ್ನು ಕಾಣಬಹುದು. ವರಾಹ ಅವತಾರ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದೆನಿಸಿದೆ. ಅವರ ನಾಣ್ಯದಲ್ಲಿ ವರಾಹ ಇದ್ದುದರಿಂದ, ಅವರು ನಾಣ್ಯವನ್ನು ವರಾಹ ಎನ್ನುತ್ತಿದ್ದರು. ನೀವು ಕೂಡ ಕೇಳಿರಬಹುದು. ಉದಾಹರಣೆಗೆ: ರಾಜನು ನೂರು ವರಹಗಳನ್ನು ಕಾಣಿಕೆಯಾಗಿ ಕೊಟ್ಟನು.

ಹೆಚ್ಚಿನ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ
ಚಾಲುಕ್ಯ Chalukya dynasty ಬಾದಾಮಿ ಪಟ್ಟದಕಲ್ಲು ಐಹೊಳೆ
Share/Save/Bookmark

22 comments:

  1. ಶಿವಪ್ರಕಾಶ್ ಅವರೇ,
    ಲೇಖನ ಮತ್ತು ಚಿತ್ರಗಳು ಮಾಹಿತಿಪೂರ್ಣವಾಗಿವೆ. ಎಲ್ಲರಿಗೂ ಇಂತಹ ಐತಿಹಾಸಿಕ ಸ್ಥಳಗಳನ್ನು ನೋಡಲು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ.
    ಆದರೆ ನೀವು ಹಾಕಿರುವ ಫೋಟೋಗಳ ಮೂಲಕ, ನಾವು ಸಹ ಸ್ವತಃ ಆ ಸ್ಥಳಗಳಿಗೆ ಭೇಟಿ ನೀಡಿದಂತೆ ಅನಿಸಿದೆ. ಧನ್ಯವಾದಗಳು.

    ReplyDelete
  2. ತುಂಬ ಚೆನ್ನಾಗಿದೆ ಶಿವು. ಒಳ್ಳೆಯ ಪ್ರವಾಸದ ಚಿತ್ರಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ನಿಮಗೆ.

    ReplyDelete
  3. ಶಿವೂ,,
    ಚಿತ್ರ ಬರಹ,,, ತುಂಬಾ ಚೆನ್ನಾಗಿ ಇದೆ... ಪ್ರವಾಸದ ಬಗ್ಗೆ ಹಾಗು ಸ್ಥಳ ಗಳ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದಿರ.... ಬಿಡುವು ಸಿಕ್ಕಾಗ ನಾನು ಹೋಗಿ ಬರುವೆ.....

    ReplyDelete
  4. ಇವುಗಳನ್ನೆಲ್ಲ ನೋಡಿದಾಗ ನಮ್ಮ ನಾಡಿನ ಬಗ್ಗೆ ತುಂಬ ಹೆಮ್ಮೆಯಾಗುತ್ತದೆ . ಒಳ್ಳೆಯ ಮಾಹಿತಿ ಹಾಗೂ ಚಿತ್ರಗಳು .

    ReplyDelete
  5. ಸುಂದರ ಚಿತ್ರಗಳು... ಎಂ.ಎ.ದಲ್ಲಿ ಶಾಸನಶಾಸ್ತ್ರದ ಕುರಿತು ಪಠ್ಯವೊಂದಿತ್ತು. ಆವಾಗ ಇದೆಲ್ಲವುಗಳ ಬಗ್ಗೆ ಓದಿದ್ದೆ. ಮತ್ತೆ ಈಗ ನೆನಪು ಬಂತು ನೆನಪಿನ ಪುಟಗಳ ಮೂಲಕ :)

    ReplyDelete
  6. ನಾವು ಆ ಸ್ಥಳ ನೋಡುವ ಮೊದಲು ತಾವೇ ಎಲ್ಲಾ ಊರಿಗು ಕರೆದುಕೊಂಡು ಹೋಗಿರುವುದಕ್ಕೆ ಧನ್ಯವಾದಗಳು......ಚಿತ್ರಗಳು ಮಾತ್ರ ತುಂಬಾನೇ ಇಷ್ಟವಾಯಿತು. ಮುಂದಿನ ಪ್ರವಾಸ ಯಾವ ಕಡೆ....?

    ReplyDelete
  7. ಈ ಐತಿಹಾಸಿಕ ಸ್ಥಳಗಳ ನಡುವೆ ಬೆಳೆದ ನನಗೆ ಬಾಲ್ಯ ಕಣ್ಣಿಗೆ ಕಟ್ಟಿದ ಹಾಗಾಯಿತು. ಗಜೇ೦ದ್ರಗಡ ಕೋಟೆ, ಕಾಲಕಾಲೇಶ್ವರ, ಅಭಿನವ ತಿರುಪತಿ(ಹನಮಸಾಗರ), ಕಪಿಲೆಪ್ಪ (ಜಲಪಾತ), ಚ೦ದಾಲಿ೦ಗ, ಬನಶ೦ಕರಿ, ಬಾದಾಮಿ, ಪಟ್ಟದಕಲ್ಲು, ಶಿವಯೋಗಮ೦ದಿರ, ಮಹಾಕೂಟ, ಐಹೊಳೆ, ಕೂಡಲಸ೦ಗಮ, ಆಲಮಟ್ಟಿ,ಬಿಜಾಪೂರ ೨-೩ ದಿನದಲ್ಲಿ ಸುತ್ತಬಹುದಾದ ಪ್ರೇಕ್ಷಣೀಯ ಸ್ಥಳಗಳು. ಗಜೆ೦ದ್ರಗಡದಿ೦ದ ಪ್ರಾರ೦ಭಿಸಿ ಬಿಜಾಪುರದ ವರೆಗಿನ ಈ ಸ್ಥಳಗಳು ಪ್ರವಾಸಿಗರಿಗೆ ಖುಷಿ ಕೊಡುವದರಲ್ಲಿ ಸ೦ದೇಹವಿಲ್ಲ!
    ಬನಶ೦ಕರಿ ಜಾತ್ರೆ ಬಹು ಅದ್ದೂರಿಯ ಕರ್ನಾಟಕದ ಜಾತ್ರೆಗಳಲ್ಲಿ ಸುಮಾರು-ಹತ್ತು ಹದಿನೈದು ದಿನವಿರುತ್ತೆ.
    ಚೆ೦ದದ ಮಾಹಿತಿ.

    ReplyDelete
  8. ಶಿವು,
    ಚಿತ್ರಗಳು ಹಾಗೂ ಬರಹ ಎರಡು ಸೊಗಸಾಗಿವೆ....

    ReplyDelete
  9. ಒಳ್ಳೆಯ ಚಿತ್ರಗಳೊಂದಿಗೆ ಉತ್ತಮ ಮಾಹಿತಿ ನೀಡಿದ್ದೀರಾ. ಐತಿಹಾಸಿಕ ಸ್ಥಳಗಳ ಪ್ರವಾಸ ನಿಜಕ್ಕೂ ಒಂದು ಸುಂದರ ಅನುಭವ....
    ಅಂತಹ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  10. ಸರ್
    ತುಂಬಾ ಸುಂದರ ಫೋಟೋಗಳು
    ಒಳ್ಳೆಯ ವಿವರಣೆ

    ReplyDelete
  11. Shivu, Nice article...
    Your sentence are very proper and detailed..

    snaps are excellent !!!!

    now i feel im a good photographer!!!

    ~Nataraj

    ReplyDelete
  12. lekhana mattu chitragalu tumba chennagide :)

    ReplyDelete
  13. ಶಿವಪ್ರಕಾಶ,
    ಐಹೊಳೆ,ಪಟ್ಟದಕಲ್ಲು ಹಾಗು ಬಾದಾಮಿಯ ಸುಂದರವಾದ ಚಿತ್ರಗಳನ್ನು ನೀಡಿದ್ದೀರಿ. ಧನ್ಯವಾದಗಳು.

    ReplyDelete
  14. ಸುಂದರವಾದ ಫೋಟೋಗಳು..

    ReplyDelete
  15. ಶಿವ ಪ್ರಕಾಶ್
    ಸುಂದರ ಚಿತ್ರ ಮತ್ತು ಅದರ ಬಗ್ಗೆ ಮಾಹಿತಿ ಚೆನ್ನಾಗಿ ತಿಳಿಸಿದ್ದೀರಿ..

    ReplyDelete
  16. ಶಿವಣ್ಣ.. ಫೋಟೋಗಳೊಂದಿಗೆ ಒಳ್ಳೆಯ ಮಾಹಿತಿ... ಸೂಪರ್

    ReplyDelete
  17. ಶಿವಪ್ರಕಾಶ್,

    ಭಾಗಲಕೋಟೆ, ಐಹೊಳೆ, ಪಟ್ಟದ ಕಲ್ಲು ಫೋಟೊಗಳು ಸೂಪರ್ ಅದರೊಂದಿಗೆ ಪ್ರವಾಸದ ಮಾಹಿತಿಯೂ ಚೆನ್ನಾಗಿದೆ.

    ReplyDelete
  18. shivoo,
    chennaagide photogaLu... vivaraNe kooda chennaagide........ mundina baraha kaayuttiddene nimma nenapina puTagalige........

    ReplyDelete
  19. ಶಿವು - ನಿಮ್ಮ ಬರಹ ಹಾಗು ಚಿತ್ರಗಳು ಚೆನ್ನಾಗಿವೆ. ಬಾದಾಮಿಯಲ್ಲಿರುವ ಬನಶಂಕರಿ ದೆವಾಲಯಕ್ಕೆ ಹೊಗಿರುತ್ತೀರೆಂದು ಭಾವಿಸಿದ್ದೇನೆ... ಅದು ಒಂದು ಬಹಳ ಶಕ್ತಿಯುತವಾದ ಸ್ಥಳವೆಂದು ಹೇಳುತ್ತಾರೆ.. ಬೆಂಗಳೂರಿನಲ್ಲಿರುವ ಬನಶಂಕರಿ ದೆವಾಲಯದ ಮೂಲ ಬಾದಾಮಿಯ ಬನಶಂಕರಿ ಅಂತ ಹೇಳುತ್ತಾರೆ.. ನಾನು ಈ ಸ್ಥಳಗಳಿಗೆ ಇದೇ ಜನವರಿ ತಿಂಗಳಿನಲ್ಲಿ ಭೇಟಿ ನೀಡಿದ್ದೆ.. ಕೂಡಲಸ್ಂಗಮಕ್ಕೂ ಭೇಟಿ ನೀಡಿದ್ದಿರಾ?...

    ನನ್ನ ನೆನಪುಗಳನು ಮತ್ತೆ ಹಸಿರಾಗಿಸಿದ್ದಕ್ಕಾಗಿ ಧನ್ಯವಾದಗಳು...

    ReplyDelete