
ಎಂದೋ ಬೀಗ ಜಡಿದ ಗೇಟಿನ
ಮುಂದಿರುವ ಅಂಚೆ ಪೆಟ್ಟಿಗೆ
ಈ ನನ್ನ ಹೃದಯ.
ಬಂದು ಬೀಳುತಿವೆ
ಅದೆಸ್ಟೋ ಲೆಕ್ಕವಿಲ್ಲದಷ್ಟು ಪತ್ರಗಳು
ಓದುವವರಿಲ್ಲ, ಉತ್ತರಿಸುವವರಿಲ್ಲ.
ಪತ್ರಗಳಿಗಾಗಿ ಕಾದು,
ಅನುಭವಿಸುತ್ತಿದ್ದ ವೇದನೆ
ಈ ಅಂಚೆ ಪೆಟ್ಟಿಗೆಗಸ್ಟೇ ಗೊತ್ತು.
ಕಾಯುವಿಕೆಯು ಬೇಸರವ ಮೂಡಿಸಲು,
ಹಿಂದೆ ಮುಂದೆ ನೋಡದೆ,
ಬೀಗ ಜಡಿದು,
ಕೀ ಬೀಸಾಡಿಬಿಟ್ಟೆ.
ಇಂದು ಅದೆಷ್ಟು ಹುಡುಕಾಡಿದರೂ ಸಿಗುತ್ತಿಲ್ಲ.
ಗೇಟಿನ ಕೀ ಅಲ್ಲ.
ನನ್ನ ಹೃದಯ.
ಅಂಚೆ ಪೆಟ್ಟಿಗೆಯ ಮಾಲೀಕ,
ಶಿವಪ್ರಕಾಶ್
Image Courtesy: Sam [AllOfUsAreLost]