Wednesday, May 20, 2009

ಆಟೋಗ್ರಾಫ್

ಏಳೆಂಟು ವರ್ಷಗಳ ಹಿಂದಿನ ಘಟನೆ. ಒಂದು ಪ್ರಖ್ಯಾತ ಖಾಸಗಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವಿತ್ತು. ಸಮಾರಂಭ ವೀಕ್ಷಿಸಲು ಬಹಳ ಜನರನ್ನು ಅವ್ಹಾನಿಸಿದ್ದರು.
ಹಾಗಾಗಿ ನಮಗೂ, ನಮ್ಮ ಅಕ್ಕ ಪಕ್ಕದ ಮನೆಯವರಿಗೂ ಆಮಂತ್ರಣ ಸಿಕ್ಕಿತ್ತು.
ಕಾರ್ಯಕ್ರಮಕ್ಕೆ ತೆಲುಗಿನ ಕಿರುತೆರೆ ನಿರೂಪಕಿ ಉದಯಭಾನು ಅವರು ಮುಖ್ಯ ಅಥಿತಿಯಾಗಿ ಬರುತ್ತಿರುವುದಾಗಿ ಪ್ರಕಟಿಸಿದ್ದರು.
ನಮ್ಮೂರು ಕಡೆ ಕನ್ನಡ ಹಾಗು ತೆಲುಗು ಎರಡು ಭಾಷೆಯ ಕಿರುತೆರೆಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಹಾಗಾಗಿ ಉದಯಭಾನು ನಮ್ಮ ಕಡೆ ಚಿರಪರಿಚಿತ.
ನಾನು, ನನ್ನ ತಮ್ಮ, ಪಕ್ಕದ ಮನೆಯ ನನ್ನ ತಮ್ಮನ ಸ್ನೇಹಿತ ಮಲ್ಲಿ (ಮಲ್ಲಿಕಾರ್ಜುನ) ಹಾಗು ಇನ್ನು ಕೆಲವು ಸ್ನೇಹಿತರು ಸೇರಿ ಕಾರ್ಯಕ್ರಮ ವೀಕ್ಷಿಸಲು ಹೊರೆಟೆವು. ಹೆಚ್ಚು ಕಮ್ಮಿ ನಾವು ಹೋಗಿದ್ದು ಉದಯಭಾನು ನೋಡಲು ಅನ್ಕೊಳ್ಳಿ. :P
ಕಾರ್ಯಕ್ರಮ ಶುರು ಆಯ್ತು. ಉದಯಭಾನು ಕೂಡ ಬಂದಿದ್ರು.
ಶಾಲೆಯ ಮಕ್ಕಳ ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆದವು. ಎಲ್ಲ ಚನ್ನಾಗಿ ನಡೆಯಿತು.
ಎಲ್ಲ ಕಾರ್ಯಕ್ರಮಗಳು ಮುಗಿದ ಬಳಿಕ ಉದಯಭಾನು ವಾಪಸ್ ಹೊರಡಲು ತಮ್ಮ ಕಾರಿನತ್ತ ಹೋಗುತ್ತಿದ್ದರು. ಆಟೋಗ್ರಾಫ್ ಪಡೆಯಲು ಅವಳ ಹಿಂದೆ ಜನರು ಓಡಿದರು. ಅಸ್ಟರಲ್ಲಿ ನಮ್ಮ ಮಲ್ಲಿ, ತಾನು ಕೂಡ ಆಟೋಗ್ರಾಫ್ ತಗೊಂಡು ಬರ್ತೀನಿ ಅಂದ. ಅವನ ಹತ್ರ ಪೆನ್ನು ಮಾತ್ರ ಇತ್ತು. ಪೇಪರ್ ಇರ್ಲಿಲ್ಲ. ನನ್ ಹತ್ರ ಚಿಕ್ಕ ಟೆಲಿಫೋನ್ ಡೈರಿ ಇತ್ತು. ಸರಿ ಅದನ್ನೇ ತೆಗೆದುಕೊಂಡು ಓಡಿದ.
ಸ್ವಲ್ಪ ಸಮಯದ ಬಳಿಕ ಹಿಂತಿರಿಗಿದ. ನಮಗೆಲ್ಲ ಅವಳ ಆಟೋಗ್ರಾಫ್ ತೋರಿಸಿದ. "With Love, Udayabhanu" ಅಂತ ಇತ್ತು.
ಅಸ್ಟು ಜನರಿದ್ದರೂ, ಅವರ ಮಧ್ಯ ತೂರಿ ಆಟೋಗ್ರಾಫ್ ತಗೊಂಡು ಬಂದೆಯಲ್ಲ, ಶಹಬಾಶ್ ಎಂದು ಹೊಗಳಿದೆವು. ಅವನು ಕೂಡ ಹರ್ಷದಿಂದ ಬೀಗಿದ.
ಎಲ್ಲ ಮುಗಿಸಿಕೊಂಡು ಮನೆಗೆ ಹೋದೆವು.
ಮರುದಿನ ಬೆಳಿಗ್ಗೆ ನಾನು ಒಬ್ಬನೇ ಇದ್ದಾಗ ಮಲ್ಲಿ ನಮ್ಮ ಮನೆಗೆ ಬಂದು ಮಾತಾಡಿಸುತ್ತ ನಿಮಗೊಂದು ಹೇಳ್ಬೇಕು ಅಂದ.
ಏನೋ ? ಅಂದೆ.
ಆಗ ಅವನು : "ನಿನ್ನೆ ಆಟೋಗ್ರಾಫ್ ತಗೊಳೋಕೆ ಓಡಿ ಹೋದ್ನಾ ?,
ನಾನು ಹೋಗುವುದರೊಳಗಾಗಿ ಉದಯಭಾನು ಹೋಗಿಬಿಟ್ಟಿದ್ರು.
ಆಟೋಗ್ರಾಫ್ ಇಲ್ಲದೆ ಹಿಂತಿರುಗಿದರೆ ನೀವೆಲ್ಲ ಅಪಹಾಸ್ಯ ಮಾಡ್ತೀರಿ ಅಂತ,
ನಾನೆ "With Love, Udayabhanu" ಅಂತ ಬರೆದುಕೊಂಡು ಬಂದೆ."
Share/Save/Bookmark

30 comments:

 1. ಆಹಾ..ಆಹಾ...ಹ..

  ನಿಮ್ಮ ಮಲ್ಲಿ ಪಕ್ಕಾ ಇದ್ದಾನೆ....

  ReplyDelete
 2. ಏನ ಶ್ಯಾಣ್ಯಾ ಇದ್ದಾನ್ರೀ ಈ ಮಲ್ಲಿ!

  ReplyDelete
 3. ಸ್ವಾಮಿ ನನ್ನ ಹೆಸರಿನ ನಿಮ್ಮ ಸ್ನೇಹಿತ ಹಸ್ತಾಕ್ಷರ ಹಾಕಿ ಆ ಕ್ಷಣದಲ್ಲಿ ನಿಮಗೆ ಸಮಾಧಾನ ಕೊಟ್ಟಿರಬೇಕು. ಆದರೂ ಆ ಐಡಿಯಾಗೆ ಮೆಚ್ಚಬೇಕು. ನಿಮ್ಮ ಮಲ್ಲಿಗೆ ಈ ಮಲ್ಲಿಯ ಪರವಾಗಿ ಬೆನ್ನು ತಟ್ಟಿಬಿಡಿ!

  ReplyDelete
 4. ಶಿವಪ್ರಕಾಶ್ ಅವರೇ, ಉದಯಬಾನು ಅವರು ಟೀವಿಯ ಮೂಲಕ ನನಗೂ ಚಿರಪರಿಚಿತ! ಅವರ ನಿರೂಪಣೆ ಚೆನ್ನಾಗಿ ಇರುತ್ತದೆ, ಇವರೊಂದಿಗೆ ಕಾಮಿಡಿ ಆರ್ಟಿಸ್ಟ್ ವೇಣುಮಾಧವ್ ಕೂಡ ಇದ್ದರಂತೂ ಇನ್ನು ಮಸ್ತ್ ಮಜಾ!! ಮೊದಲು ಫೋಟೋ ನೋಡಿದಾಗ ಯಾವುದೋ ಪರಿಚಿತ ಮುಖ ಅಲ್ಲವಾ ಅಂತ ಅನ್ನಿಸಿತು, ಹೆಸರು ಓದಿದ ಮೇಲೆ ಗೊತ್ತಾಯಿತು!!!
  ಅಂದಹಾಗೆ ಚೆನ್ನಾಗಿದೆ ನಿಮ್ಮ ತಮ್ಮನ ಸ್ನೇಹಿತನ ಕಿತಾಪತಿ ಬುದ್ಧಿ. ಮತ್ತೆ ನೀವೆಲ್ಲಾ ಹೇಗೆ ನಂಬಿದ್ರಿ, ನಿಮಗ್ಯಾರಿಗೂ ಗೊತ್ತಾಗಲಿಲ್ವಾ? ಹ ಹ ಹ್ಹ ಹ್ಹಾ .......!

  ReplyDelete
 5. ಈ ಉದಯಭಾನು ಬಗ್ಗೆ ಗೊತ್ತಿಲ್ಲ ಆದ್ರ ನಿಮ್ಮ ಮಲ್ಲಿ ಶಾಣ್ಯಾ ಇದ್ದಾನ

  ReplyDelete
 6. ಹಹಹ..ಪಾಪ ಮಲ್ಲಿ..! ಮಲ್ಲಿಯ ಮಂಡೆ ಚೆನ್ನಾಗಿದೆ ಮಾರಾಯ್ರೆ.
  -ಧರಿತ್ರಿ

  ReplyDelete
 7. ನಿಮ್ಮ ಸ್ನೇಹಿತರಾದ ಮಲ್ಲಿಯವರ ಟೈಮ್ ಸೆನ್ಸ್ ಮೆಚ್ಚಲೇಬೇಕು. ಜೊತೆಗೆ ಮಾರನೆಯ ದಿನಬವೇ ಬಂದು ತಮ್ಮ ಪ್ರಮಾಣಿಕತೆಯನ್ನು ಮೆರೆದಿದ್ದನ್ನೂ ನಾವು ಅಭಿನಂದಿಸಲೇಬೇಕು. ಬರಹ ಸರಳವಾಗಿ ಓದಿಸಿಕೊಂಡು ಇಷ್ಟವಾಯಿತು

  ReplyDelete
 8. ಓಹ್!!!! ಸೂಪರ್!! ನಗು ನಮಗೆ ತಡೆಯೊಕ್ಕೆ ಆಗೊಲ್ಲ ನಿಮ್ಮಲ್ಲಿ ಬಹಳ ಹಾಸ್ಯಮಯ ಘಟನೆಗಳು ಇವೆ....

  ReplyDelete
 9. ಗೆಳೆಯ ಮಲ್ಲಿ ಭಾರಿ ಅದಾನ್ರೀ...
  ಅವರ ಪೊಟೊ ತೋರಿಸ್ರಿ ಮತ್ತ.

  -ಚಂದಿನ

  ReplyDelete
 10. ಹಹ್ಹ ತು೦ಬಾ ಚೆನ್ನಾಗಿದೆ. ತಮಾಷೆ ಪ್ರಸಂಗ

  ReplyDelete
 11. ಹ್ಹ ಹ್ಹಾ! ಜೋರ್ ಇದಾನೆ ನಿಮ್ ಮಲ್ಲಿ :)

  ReplyDelete
 12. sooooper... nenapina puTagaLu bahaLa raMgaagive...

  ReplyDelete
 13. ಚೆನ್ನಾಗಿದೆ ಬರಹ... ಓದಿ ಖುಷಿಯಾಯಿತು :-)

  ReplyDelete
 14. ಜ್ಞಾನಮೂರ್ತಿ ಅವರೇ,
  ಆಟೋಗ್ರಾಫ್ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  ಉಮೇಶ ಅವರೇ,
  ಆಟೋಗ್ರಾಫ್ ಮೆಚ್ಚಿಕೊಂಡು ನಕ್ಕು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  shivu ಅವರೇ,
  ಹೌದು ರೀ, ನಮ್ಮ ಮಲ್ಲಿ ಪಕ್ಕಾ Intelligent.
  ಆಟೋಗ್ರಾಫ್ ಮೆಚ್ಚಿಕೊಂಡು ನಕ್ಕು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  sunaath ಅವರೇ,
  ನಮ್ಮ ಮಲ್ಲಿ ಬುದ್ದಿವಂತಿಕೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  ಮಲ್ಲಿಕಾರ್ಜುನ.ಡಿ.ಜಿ. ಅವರೇ,
  ನಿಮ್ಮ ಆಟೋಗ್ರಾಫ್ ಲೇಖನಗಳನ್ನೂ ನೋಡಿದಾಗ ನಮ್ಮ ಮಲ್ಲಿಯ ಈ ಘಟನೆ ನೆನಪಾಯ್ತು.
  ಹಾಗಾಗಿ ನಿಮಗೂ ಕೂಡ ಧನ್ಯವಾದಗಳು. :)
  ತಪ್ಪದೆ ನಿಮ್ಮ ಪರವಾಗಿ ಜೋರಾಗಿ ಬೆನ್ನು ತಟ್ಟಿ ಬಿಡುತ್ತೇನೆ. :P
  ನಮ್ಮ ಮಲ್ಲಿ ಬುದ್ದಿವಂತಿಕೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  SSK ಅವರೇ,
  ಹೌದು ನೀವು ಹೇಳಿದ್ದು ನಿಜ, ವೇಣುಮಾಧವ್ ಹಾಗು ಉದಯಭಾನು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ತುಂಬಾ ಹಾಸ್ಯಮಯವಾಗಿರುತ್ತಿತ್ತು. ವೇಣುಮಾಧವ್ ತುಂಬಾ ಪ್ರತಿಭಾವಂತ ಹಾಸ್ಯನಟ. ನನಗೆ ಅವರು ಮಾಡುವ ಹಾಸ್ಯ ದೃಶ್ಯಗಳು ತುಂಬಾ ಇಷ್ಟ.
  ಆಟೋಗ್ರಾಫ್ ಅವಳದಲ್ಲ ಎಂದು ನಂಬುವುದಾದರೂ ಹೇಗೆ ಹೇಳಿ.. ? ತುಂಬಾ ಸ್ಟೈಲಿಶ್ ಆಗಿ ಬರಕೊಂಡು ಬಂದಿದ್ದ.
  ಅದಕ್ಕೆ ನಂಬಿ ಬಿಟ್ವಿ...
  ನಮ್ಮ ಮಲ್ಲಿ ಬುದ್ದಿವಂತಿಕೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  ರವಿಕಾಂತ ಗೋರೆ ಅವರೇ,
  ಆಟೋಗ್ರಾಫ್ ಮೆಚ್ಚಿಕೊಂಡು ನಕ್ಕು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  umesh desai ಅವರೇ,
  ನಮ್ಮ ಮಲ್ಲಿ ಬುದ್ದಿವಂತಿಕೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  ಧರಿತ್ರಿ ಅವರೇ.
  ಪಾಪ ಅವನಲ್ಲ, ನಾವು.
  ಅವನ ಹಸ್ತಾಕ್ಷರವನ್ನು ನಂಬಿಬಿಟ್ಟೆವು.
  ಆಟೋಗ್ರಾಫ್ ಮೆಚ್ಚಿಕೊಂಡು ನಕ್ಕು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  Dr. B.R. Satynarayana ಅವರೇ,
  ಹೌದು ರೀ, ನೀವು ಹೇಳಿದ್ದು ನಿಜ. ಅವನ ಪ್ರಮಾಣಿಕತೆಯನ್ನು ಮೆಚ್ಚಲೇಬೇಕು.
  ನಮ್ಮ ಮಲ್ಲಿ ಬುದ್ದಿವಂತಿಕೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 15. ಮನಸು ಅವರೇ,
  ನನ್ನಲ್ಲಿ ಬಹಳ ಹಾಸ್ಯ ಘಟನೆಗಳಿವೆ.
  ಒಂದೊಂದು ಹಾಸ್ಯ ಘಟನೆಗಳನ್ನು ಬರೆದು ನನ್ನ ಹಾಗು ನಿಮ್ಮೆಲ್ಲರ ಮನಸ್ಸಿಗೆ ಸಂತೋಷ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ.
  ನಿಮ್ಮೆಲ್ಲರ ಪ್ರತಿಕ್ರಿಯೆಯೇ ನನ್ನ ಇ ಬರವಣಿಗೆಗೆ ಸ್ಫೂರ್ತಿ.
  ಆಟೋಗ್ರಾಫ್ ಮೆಚ್ಚಿಕೊಂಡು ನಕ್ಕು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  ಚಂದಿನ ಅವರೇ,
  ಅವನ ಫೋಟೋ ಸಧ್ಯಕ್ಕೆ ನನ್ನ ಹತ್ರ ಇಲ್ಲ. ಅವನ ಫೋಟೋ ಸಿಕ್ಕಾಗ ತಪ್ಪದೆ ಬ್ಲಾಗಿಸುತ್ತೇನೆ.
  ನಮ್ಮ ಮಲ್ಲಿ ಬುದ್ದಿವಂತಿಕೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  PARAANJAPE K.N. ಅವರೇ,
  ಆಟೋಗ್ರಾಫ್ ಮೆಚ್ಚಿಕೊಂಡು ನಕ್ಕು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  Greeshma ಅವರೇ,
  ನಮ್ಮ ಮಲ್ಲಿ ಬುದ್ದಿವಂತಿಕೆಯನ್ನು ಮೆಚ್ಚಿ, ನಕ್ಕು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  Prabhuraj Moogi ಅವರೇ,
  ನನ್ನ ನೆನಪಿನ ಪುಟಗಳನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  ಸುಧೀಂದ್ರ ಅವರೇ,
  ಆಟೋಗ್ರಾಫ್ ಮೆಚ್ಚಿಕೊಂಡು ನಕ್ಕು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ============

  ದಿವ್ಯಾ ಮಲ್ಯ ಅವರೇ,
  ಬರಹವನ್ನು ಮೆಚ್ಚಿ ಕುಶಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು..

  ReplyDelete
 16. ಪ್ರಕಾಶ್ ಅವರು ತಾಂತ್ರಿಕ ದೋಷದಿಂತ mail ಮಾಡಿದ್ದರು.
  ಅವರು ಪ್ರತಿಕ್ರಿಯೆ :
  "ಶಿವಪ್ರಕಾಶ...

  ನಿಮ್ಮ ಗೆಳೆಯ ಇಷ್ಟವಾಗಿದ್ದಾನೆ....
  ನನ್ನ ಜೀವದ ಗೆಳೆಯ "ನಾಗು " ತರಹದ ಮನುಷ್ಯ ಅಂತ ಅನಿಸುತ್ತದೆ...
  ಅವನ ಐದಿಯಾಕ್ಕೆ ಹಾಗು ನಿಮ್ಮ ಶೈಲಿಗೆ
  ನನ್ನ ಅಭಿನಂದನೆಗಳು...

  ಬ್ಲಾಗಿನಲ್ಲಿ ಪ್ರತಿಕ್ರಿಯೆ ಕೊಡಲು ಆಗುತ್ತಿಲ್ಲ....
  ತಾಂತ್ರಿಕ ದೋಷ...

  ಪ್ರಕಾಶಣ್ಣ....

  ಇಟ್ಟಿಗೆ ಸಿಮೆಂಟು......"

  ReplyDelete
 17. ಪ್ರಕಾಶ್ ಅವರೇ,
  ತಾಂತ್ರಿಕ ದೋಷವಿದ್ದರೂ Mail ಮುಖಾಂತರ ಪ್ರತಿಕ್ರಿಯೆ ಕಳಿಸಿದ್ದಕ್ಕೆ ಧನ್ಯವಾದಗಳು.
  ನಮ್ಮ ಮಲ್ಲಿ ಕೆಲವು ದಿನಗಳು ಮಾತ್ರ ನಮ್ಮ ಊರಿನಲ್ಲಿ ಇದ್ದ.
  ನಮ್ಮ ಮನೆಯ ಪಕ್ಕದಲ್ಲಿದ್ದ ಅವರ ಸಂಬಂಧಿಗಳ ಮನೆಗೆ ಕೆಲವು ದಿನಗಳ ಬೇಸಿಗೆ ರಜಕ್ಕೆ ಬಂದಿದ್ದ. ನಮಗೆಲ್ಲ ತುಂಬಾ ಪರಿಚಯವಾಗಿದ್ದ.
  ನಮ್ಮ ಮಲ್ಲಿ ಬುದ್ದಿವಂತಿಕೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 18. ಸಮಯಕ್ಕೆ ತಕ್ಕುದಾದ ಬುದ್ದಿವಂತಿಕೆ ಅಮದ್ರೆ ಇದೇ ಕಣ್ರಿ....

  www.shivagadag.blogspot.com

  ReplyDelete
 19. ಶಿವಶಂಕರ ಅವರೇ,
  ನಮ್ಮ ಮಲ್ಲಿ ಬುದ್ದಿವಂತಿಕೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 20. ಹೊ! ನಕ್ಕು ನಕ್ಕು ಸಾಕಾಯಿತು :) :)

  ReplyDelete
 21. ಅಂತರ್ವಾಣಿ ಅವರೇ,
  ನಕ್ಕರೆ ಅದೇ ಸ್ವರ್ಗ... ನೀವು ನಕ್ಕರೆ ನನಗೆ ಅದೇ ಸಂತೋಷ...
  ನಿಮ್ಮನ್ನು ನಗಿಸಿದ ಭಾಗ್ಯಕ್ಕೆ ನಾನು ಧನ್ಯ...
  ಆಟೋಗ್ರಾಫ್ ಮೆಚ್ಚಿಕೊಂಡು ನಕ್ಕು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 22. Anonymous ಅವರೇ,
  ಆಟೋಗ್ರಾಫ್ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 23. Suuuuuuuuuuuuuuuper ..

  ReplyDelete