Tuesday, November 20, 2012

ಸ್ವಲ್ಪ ಸಮಯ ಕೊಡು

ಇಂದು
ನಾ ನಿನಗೆ...
ಪ್ರೇಮ ಪತ್ರ
ಬರೆಯ ಬೇಕು....
ಬರೆಯಲೇ ಬೇಕು...
ಎಂದು ಹಠ ಮಾಡಿ...
ಅದೆಸ್ಟೋ ಏಕಾಗ್ರತೆಯಿಂದ...
ಕುಳಿತೆ...


ಪೆನ್ನಿಂದ...
ಒಂದು ಹನಿ ಇಂಕು...
ಒಂದೇ ಒಂದು ಹನಿ ಇಂಕು...
ಜಾರಲು ಬಿಡದೆ...
ತಂಗಾಳಿಯಂತೆ,
ಕಣ್ಮುಂದೆ ಬಂದು...
ಕರೆದೊಯ್ಯುವೆಯಲ್ಲ...


ಸಮಯ ಕೊಡು...
ನಿನಗಾಗಿ
ನನ್ನ ಮನದಲ್ಲಿ
ಪ್ರೀತಿಯ ಪದಗಳಿಂದ
ಕಟ್ಟಿದ
ಮುತ್ತಿನ ಹಾರ
ತೊಡಿಸಲು...
ಸ್ವಲ್ಪ ಸಮಯ ಕೊಡು...


--
ಇಂತಿ ನಿನ್ನ ಪ್ರೀತಿಯ,
ಶಿವಪ್ರಕಾಶ್

Share/Save/Bookmark

Tuesday, October 16, 2012

ಬದಲಾಗಿರುವುದಾದರು ಏನು...?

ನನ್ನವರಲ್ಲ
ಎಂದುಕೊಂಡವರು...
ನನ್ನವರಾಗುವುರು...!!!

ನನ್ನವರು
ಎಂದುಕೊಂಡವರು...
ನನ್ನವರಾಗದಿರುವುದು....!!!

ನಾ ಬದಲಾಗಿಲ್ಲ...
ಅಂದು ಹೇಗಿದ್ದೇನೋ..
ಇಂದು ಹಾಗೆಯೇ ಇರುವೆ...

ನೀವು...?
ನೀವೂ ಬದಲಾಗಿಲ್ಲ...
ಅಂದು ಹೇಗಿದ್ದಿರೋ ...
ಇಂದು ಹಾಗೆಯೇ ಇರುವಿರಿ...

ಪ್ರಪಂಚ ...?
ಅದು ಕೂಡ ಬದಲಾಗಿಲ್ಲ...
ಅಂದು ಹೇಗಿತ್ತೋ...
ಇಂದು ಹಾಗೆಯೇ ಇದೆ...

ಆದರೆ,
ಬದಲಾಗಿರುವುದಾದರು ಏನು...?
ಹೌದು... ಬದಲಾಗಿರುವುದು....
ದೃಷ್ಠಿ...!!!
ನೀವು ನನ್ನ ನೋಡುವ
ದೃಷ್ಠಿ...!!!


ಪ್ರೀತಿಯಿಂದ,
ಶಿವಪ್ರಕಾಶ್  

Share/Save/Bookmark

Monday, September 24, 2012

ಅನಿಲೋತ್ಪಾದಕರು

ಸಿಕ್ಕಾಪಟ್ಟೆ ಛಳಿಯ ನಡುವೆ,
ಫ್ಯಾನ್ ಆನ್ ಮಾಡಿ,
ಹೊರನಡೆಯುವವರು ...

ಫೋನ್ ಬಾರದಿದ್ದರೂ,
ಫೋನ್ ಹಿಡಿದು 'ಹಲೋ.....!!!' ಎನುತಾ,
ಹೊರನಡೆಯುವವರು ...

ಏನು ತಿಳಿಯದ ಅಮಾಯಕರಂತೆ,
ಮುಗ್ದ ಮುಖವ ತೋರುತ,
ಹೊರನಡೆಯುವವರು ...

ಹೊರನಡೆವರು ಇವರು ಹೊರನಡೆವರು...
ಸದ್ದಿಲ್ಲದೇ ಬಾಂಬ್ ಹಾಕುವ,
ಅನಿಲೋತ್ಪಾದಕರಿವರು...


 

Share/Save/Bookmark

Saturday, August 25, 2012

ಕತ್ತರಿ

ಚಲನಚಿತ್ರಗಳಿಗೆ 
ಕತ್ತರಿ ಹಾಕಲು
ಸೆನ್ಸಾರ್ ಮಂಡಳಿ 
ಇದೆ..
ಆದರೆ, 
ನನ್ನ ಬ್ಲಾಗ್ ಲೇಖನಗಳಿಗೆ 
ಕತ್ತರಿ ಹಾಕಲು 
ಯಾವ ಸೆನ್ಸಾರ್ ಮಂಡಳಿಯೂ
ಇಲ್ಲ
ಎಂದು ಕುಶಿಯಿಂದ ಬೀಗುತ್ತಿದ್ದ 
ಹುಡುಗನಿಗೆ 
ಈಗ ಮದುವೆಯಾಗಿದೆ...

ಸೂಚನೆ:- ಮೇಲಿನ ಸಾಲುಗಳು ಸೆನ್ಸಾರ್ ಮಂಡಳಿಯಿಂದ ಅಂಗಿಕೃತ ಪಡೆದಿದೆ.

ಪ್ರೀತಿಯಿಂದ,
ಶಿವಪ್ರಕಾಶ್ Share/Save/Bookmark

Thursday, July 5, 2012

Movie Ticket @ Rs 1.25

Entrance Door of one old theater in MG Road, Bangalore.
Look at the ticket price.. just Rs 1.25


Share/Save/Bookmark

Wednesday, June 27, 2012

ಪುಸ್ತಕದ ಮನೆ


ಪುಸ್ತಕದ ಮನೆ
 ಮನುಷ್ಯನಲ್ಲಿ ಧೃಡವಾದ ಆತ್ಮವಿಶ್ವಾಸವಿದ್ದರೆ ಅಸಾಧ್ಯವೆಂಬುದು ಯಾವುದೂ ಇಲ್ಲ. ನೆಪೋಲಿಯನ್ ಹೇಳುತ್ತಾನೆ "ಅಸಾಧ್ಯ ಎಂಬುದು ಮೂರ್ಖರ ಕೋಶದಲ್ಲಿ ಸಿಗುವ ಶಬ್ದ ಮಾತ್ರ" ಎಂದು. ಈ ಪ್ರಪಂಚದಲ್ಲಿ ಯಾವುದೂ ಕೂಡ ಅಸಾಧ್ಯವಲ್ಲ. ಸಾಧಿಸಬೇಕೆಂಬ ಛಲ ಇದ್ದರೆ ಸಾಕು ಮನುಷ್ಯ ಏನನ್ನು ಬೇಕಾದರೂ ಸಾಧಿಸುತ್ತಾನೆ. ಅದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ "ಅಂಕೇಗೌಡ್ರು" ಆಗಿದ್ದಾರೆ. ಇವರು ಮಾಡಿರುವ ಸಾಧನೆ ಶೈಕ್ಷಣಿಕ ಕ್ಷೇತ್ರದಲ್ಲಿಯೇ ಒಂದು ಕ್ರಾಂತಿ ಅಂತ ಹೇಳಿದರೆ ತಪ್ಪಾಗಲಾರದು. ಅಂಕೇಗೌಡ್ರು ಒಂದು ಬೃಹತ್ ಗ್ರಂಥಾಲಯವನ್ನು ತೆರೆದಿದ್ದಾರೆ ಅದು ಅವರ ಸ್ವಂತ ಖರ್ಚಿನಲ್ಲೇ..!!. ಇದು ಬಹುಶಃ ಕರ್ನಾಟಕದ ಅತಿದೊಡ್ಡ ಗ್ರಂಥಾಲಯವೇ ಇರಬಹುದು. ಈ ರೀತಿ ಗ್ರಂಥಾಲಯವನ್ನು ನನ್ನ ಕನಸಲ್ಲೂ ಕೂಡ ನಾನು ನೋಡಿರಲಿಲ್ಲ. "ದೇಶ ಸುತ್ತಿ ನೋಡು ಕೋಶ ಓದಿ ನೋಡು" ಎಂಬ ಗಾದೆಯನ್ನು ನೋಡಿದಾಗ ದೇಶವನ್ನು ಸುತ್ತುವುದೇ ಬೇಡ ಅಂಕೇಗೌಡ್ರು ಸಂಗ್ರಹಿಸಿದ ಪುಸ್ತಕ ಓದಿದರೆ ಸಾಕು, ಇಡೀ ಪ್ರಪಂಚವನ್ನೇ ಸುತ್ತಿದ ಅನುಭವ ನಮ್ಮದಾಗುತ್ತದೆ.
ಪುಸ್ತಕದ ಮನೆಯ ಒಳನೋಟ..

 ಥಾಮಸ್ ಜೆ. ವಿಲಾರ್ಡ್ ಅವರು ಹೇಳಿದ್ದಾರೆ "ಅಸಾಧ್ಯವೆಂದು ಭಾವಿಸಿದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸಾಧ್ಯವೆಂದು ಭಾವಿಸಿದರೆ ಯಾವುದೂ ಅಸಾಧ್ಯವಲ್ಲ. ರಚನಾತ್ಮಕವಾಗಿ ಯೋಚಿಸಿ, ಕಷ್ಟಪಟ್ಟು ದುಡಿದರೆ ಆಗ ಎಲ್ಲವೂ ಸಾಧ್ಯ" ಎಂಬ ಮಾತನ್ನು ಅಂಕೇಗೌಡ್ರು ಅಕ್ಷರಶಃ ಸಾಧಿಸಿಯೇ ತೋರಿಸಿದ್ದಾರೆ.
ಅಂಕೇಗೌಡ್ರು ಹಾಗು ಅವರ ಧರ್ಮಪತ್ನಿ ಜಯಲಕ್ಷ್ಮಿ
ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದಾಳೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಅಂಕೇಗೌಡ್ರು ಅವರ ಧರ್ಮಪತ್ನಿ ಜಯಲಕ್ಷ್ಮಿಯವರು.  ಒಂದು ಸಾರಿ ಕ್ಲಿಂಟನ್ ಹಾಗೂ ಅವನ ಹೆಂಡತಿ ಹಿಲೆರಿಕ್ಲಿಂಟನ್ ಕಾರಲ್ಲಿ ಹೋಗುತ್ತಿರುವಾಗ, ಆಕೆಯ ಮಾಜಿ ಪ್ರಿಯಕರ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದದ್ದನ್ನು ನೋಡಿ ಕ್ಲಿಂಟನ್ ಕಾರು ನಿಲ್ಲಿಸಿ ಹೇಳಿದ "ಸ್ವೀಟಿ, ನೀನೇನಾದರೂ ಗ್ಯಾರೇಜಿನಲ್ಲಿ ಇರೋನನ್ನು ಮದುವೆಯಾಗಿದ್ದರೆ ನೀನು ಗ್ಯಾರೇಜ್ ನಲ್ಲಿ ಕೆಲಸ ಮಾಡುವವನ ಹೆಂಡತಿ ಎಂದು ಅನಿಸಿಕೊಳ್ಳುತ್ತಿದೆ" ಎಂದಾಗ ಆಕೆ ಹೇಳುತ್ತಾಳೆ, "ಒಂದು ವೇಳೆ ನಾನು ಅವನನ್ನೇ ಮದುವೆಯಾಗಿದ್ದರೆ ನೀವಿರುವ ಜಾಗದಲ್ಲಿ ಅವನಿರುತ್ತಿದ್ದ" ಎಂದು ಹೇಳಿತ್ತಲಿದ್ದಂತೆ ಕ್ಲಿಂಟನ್ ತಲೆಬಾಗಿಸಿ ಕಾರಿನ ಚಾಲಕನಿಗೆ ಮುಂದೆ ಹೋಗುವಂತೆ ಹೇಳುತ್ತಾನೆ. ಯಾವುದೇ ಒಬ್ಬ ಯಶಸ್ವೀ ಪುರುಷನ ಹಿಂದೆ ’ಸ್ತ್ರೀ’  ಇರುತ್ತಾಳೆ. ಪತಿಯ ಸಾಧನೆಗೆ ಆಕೆಯ ತ್ಯಾಗ, ಆಸೆ, ಆಕಾಂಕ್ಷೆಗಳನ್ನು ಪತಿಯು ಏರುವ ಮೆಟ್ಟಿಲುಗಳಾಗಿ ಮಾಡಿ ಅವನನ್ನು ಒಬ್ಬ ಉತ್ತಮ ಸಾಧಕನನ್ನಾಗಿ ಮಾಡುವ ಗುರಿಯನ್ನು ಹೊಂದಿರುತ್ತಾಳೆ.


ಇಲ್ಲಿ ಅಂಕೇಗೌಡ್ರು ಅವರ ಪತ್ನಿಯನ್ನು ಸ್ಮರಿಸಲೇಬೇಕು. ಅಂಕೇಗೌಡ್ರು ಇಂದು ಏನೇ ಸಾಧಿಸಿದರೂ ಅದಕ್ಕೆ ಅವರ ಎಲ್ಲಾ ಸಾಧನೆಗೆ ಸ್ಪೂರ್ತಿಯೇ ಅವರ ಧರ್ಮಪತ್ನಿಯಾಗಿದ್ದಾರೆ. ಒಟ್ಟಲ್ಲಿ ಒಬ್ಬ ಕ್ರಿಯಾಶೀಲನಾಗಿರುವ ವ್ಯಕ್ತಿಗೆ ಯಾವುದೇ ಒಂದು ಗುರಿ ಸಾಧಿಸಬೇಕೆಂಬ ಛಲ ಇದ್ದಾಗ ಅದು ಕಷ್ಟ ಎನಿಸಲು ಸಾಧ್ಯವಾಗದು. ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ ಹಾಗೆ "ಪ್ರತಿಯೊಬ್ಬ ಮನುಷ್ಯನೂ ತಾನು ಜನ್ಮ ಪಡೆದಿರುವುದು ಒಂದು ಉತ್ತಮ ಕಾರ್ಯ ಸಾಧನೆಗೆ" ಎಂಬುದಕ್ಕೆ ಅಂಕೇಗೌಡ್ರು ಸಾಧನೆ ಮಾಡಿ ತೋರಿದ್ದಾರೆ. ಹಾಗೆಯೇ ಅವರ ಆಸೆಯ ಕನಸಿನ ಮಗುವಾದ ಆ ಗ್ರಂಥಾಲಯದ ಉನ್ನತೀಕರಣಕ್ಕೆ ನಾವು ನೀವು ಕೈಜೋಡಿಸೋಣ. ಈ ಪುಟ್ಟ ಮಗುವಾದ ಗ್ರಂಥಾಲಯವನ್ನು ಬೃಹತ್ ಗ್ರಂಥಾಲಯವನ್ನಾಗಿ ಮಾಡೋಣ. ಇದು ಪ್ರಪಂಚದ ದೊಡ್ಡ ಗ್ರಂಥಾಲಯವಾಗಿ ಹೆಸರು ಪಡೆಯಲಿ ಅಂಕೇಗೌಡ್ರು ಹೆಸರು ಚಿರಸ್ಮರಣೀಯವಾಗಿರಲಿ ಎಂದು ಹಾರೈಸೋಣ.
ಸ್ನೇಹಿತರು @ ಬ್ಲಾಗ್ ಲೋಕ
(ಚಿತ್ರ ಕೃಪೆ: ಗಿರೀಶ್.ಎಸ್ )

ಇಂತಹ ಜ್ಞಾನ ಭಂಡಾರವನ್ನು ಪರಿಚಯಿಸಿದ ಬಾಲಣ್ಣ, ಪ್ರಕಾಶಣ್ಣ ಹಾಗು ಬ್ಲಾಗ್ ಲೋಕದ ಮಿತ್ರರಿಗೆ ನನ್ನದೊಂದು ಪ್ರೀತಿಪೂರ್ವಕ ಧನ್ಯವಾದಗಳು... 

 -ಶಿವುನಂದು.

Share/Save/Bookmark

Friday, May 18, 2012

Quotes - 2


I have made this letter longer, because I have not had the time to make it shorter.
-- Blaise Pascal
============

Fortune favors the prepared mind.
-- Louis Pasteur
============

Sleep is the best meditation.
-- Dalai Lama
============

Ability is nothing without opportunity.
-- Napoleon Bonaparte
============

Cowards die many times before their actual deaths.
-- Julius Caesar
============

A man can't ride your back unless it's bent.
-- Martin Luther King, Jr.
============

A man who won't die for something is not fit to live.
-- Martin Luther King, Jr.
============

A right delayed is a right denied.
-- Martin Luther King, Jr.
============

Faith is taking the first step even when you don't see the whole staircase.
-- Martin Luther King, Jr.
============

The time is always right to do what is right.
-- Martin Luther King, Jr.
============

We may have all come on different ships, but we're in the same boat now.
-- Martin Luther King, Jr.
============


Share/Save/Bookmark

Thursday, April 26, 2012

ಮದುವೆ ಎಂದರೆ....

ಮದುವೆ ಎಂದರೆ
ಬರಿ ಮೂರು ಅಕ್ಷರಗಳ
ಪದ ಅಲ್ಲ....

ಹಳೆ ಹುಡುಗಿಯ ಮೇಲೆ ಬರೆದ
ಕವನಗಳೇನಾದರು ಹೆಂಡತಿಗೆ ಸಿಕ್ಕರೆ....
ಉಳಿಗಾಲವಿಲ್ಲ...

ಹಳೆಯ ಡೈರಿಗಳನ್ನೆಲ್ಲ ಹೊರಗೆ ತೆಗೆದು,
ಕವನಗಳಿರುವ ಪುಟಗಳನ್ನೆಲ್ಲಾ ಹರಿದುಹಾಕುವ ಕಷ್ಟ...
ಆ ದೇವರೇ ಬಲ್ಲ...!!!


ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್

Share/Save/Bookmark

Monday, January 9, 2012

ಯಾಕೆ ಲೇಟ್..?

ಮದುವೆಗೆ ಕೆಲವೇ ದಿನಗಳಸ್ಟೇ ಬಾಕಿ,
ಇನ್ನೂ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಆಗಿಲ್ಲ... !!!
ಮದುವೆಗೆ ಕೆಲವೇ ದಿನಗಳಸ್ಟೇ ಬಾಕಿ,
ಇನ್ನೂ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಆಗಿಲ್ಲ...
ಎನ್ನುವ ತಲೆಬಿಸಿಯ ಗುಂಗಿನಲ್ಲಿ,
ಚಹಾ ಶಾಪ್ ಗೆ ಹೋಗಿ ಟೀ ಆರ್ಡರ್ ಮಾಡಿದೆ..
ಬಹಳ ಸಮಯವಾದರೂ ಬರಲೇ ಇಲ್ಲ ಟೀ..
ಮತ್ತೊಮ್ಮೆ ತಲೆಬಿಸಿ ಮಾಡಿಕೊಂಡು,
ಚಹಾ ಅಂಗಡಿಯವನನ್ನು ದಬಾಯಿಸಿಯೇ ಬಿಟ್ಟೆ..
"ಯಾಕೆ ಲೇಟ್...ಇನ್ನೂ ಟೀ ಪ್ರಿಂಟ್ ಆಗಿಲ್ವ...?"

Share/Save/Bookmark

Monday, January 2, 2012

ಹೊಸ ವರ್ಷದ ಹಾರ್ದಿಕ ಶುಭಾಷಯಗಳು


ಜೇವನದಿ ಎದುರಾಗುವ,
ಹಾಸ್ಯ ಅನುಭವಗಳನ್ನು,
ನಿಮ್ಮಲ್ಲಿ ಹಂಚಿಕೊಂಡು,
ನಗಿಸುವ ಪ್ರಯತ್ನಕ್ಕೆ,
ಈ ಬ್ಲಾಗ್ ಲೋಕಕ್ಕೆ ಬಂದೆ.

ನೀವು ಕೂಡ ಪ್ರೀತಿಯಿಂದ ಸ್ವೀಕರಿಸಿ,
ನಿಮ್ಮವನು ಎನ್ನುವ ಧೈರ್ಯ ತುಂಬಿದಿರಿ.
ನಂತರ ನಿಮ್ಮಿಂದ ಸಿಕ್ಕ ಸ್ನೇಹ-ಸಲುಗೆಯಿಂದ,
ನೋವು-ನಲಿವುಗಳನ್ನೆಲ್ಲ,
ಮನಸಿಗೆ ದೊಚಿದ್ದನ್ನೆಲ್ಲ ಬರೆದೆ.
ಪ್ರೀತಿಯಿಂದ ಅಪ್ಪಿಕೊಂಡು,
ಮೆಚ್ಚುಗೆ- ಸಂತ್ವಾನದ,
ನಾಲ್ಕು ನುಡಿಗಳು ಬರೆದು,
ನನ್ನ ಕೈ ಹಿಡಿದು ನಡಿಸುತ್ತ ಬಂದಿದ್ದಿರಿ..
ನಿಮ್ಮ ಆರೈಕೆಯಲ್ಲಿ ಈ ಬ್ಲಾಗ್ ನಾಲ್ಕನೆ ವರ್ಷಕ್ಕೆ ಕಾಲಿರಿಸಿದೆ.
ನಿಮ್ಮೆಲ್ಲರ ಆತ್ಮೀಯ ಸಹಕಾರ ಹಾಗು ಬೆಂಬಲಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು

ಪ್ರತಿವರ್ಷದಂತೆಯೇ ಮತ್ತೆ ಬಂದಿರಬಹುದು,
ಹೊಸ ವರ್ಷ....
ಇಂದು ಕೂಡ ಅಂದಿನತೆಯೇ,
ಎನ್ನುವುದ ದೂರ ಮಾಡಿ...
ನೋವುಗಳಿಗೆಲ್ಲ ತಿಲಕವಿಟ್ಟು,
ಹೊಸ ಹುಮ್ಮಸಿನಿಂದ,
ನಕ್ಕು ನಗಿಸುವ ಪಣವ ತೊಟ್ಟು...
ಬರಮಾಡಿಕೊಳ್ಳೋಣ ಬನ್ನಿ...
ಹೊಸ ವರ್ಷ....
ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು..

ಇನ್ನೆರೆಡು ದಿನಗಳಲ್ಲಿ ಒಂದು ಸಿಹಿಸುದ್ದಿಯನ್ನು ಹಂಚಿಕೊಳ್ಳಲು ಮರಳಿ ಬರುವೆ.
ಅಲ್ಲಿಯವರೆಗೋ ಒಂದು ಸಣ್ಣ ಟಾಟ...

ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್

Share/Save/Bookmark