Tuesday, November 20, 2012

ಸ್ವಲ್ಪ ಸಮಯ ಕೊಡು

ಇಂದು
ನಾ ನಿನಗೆ...
ಪ್ರೇಮ ಪತ್ರ
ಬರೆಯ ಬೇಕು....
ಬರೆಯಲೇ ಬೇಕು...
ಎಂದು ಹಠ ಮಾಡಿ...
ಅದೆಸ್ಟೋ ಏಕಾಗ್ರತೆಯಿಂದ...
ಕುಳಿತೆ...


ಪೆನ್ನಿಂದ...
ಒಂದು ಹನಿ ಇಂಕು...
ಒಂದೇ ಒಂದು ಹನಿ ಇಂಕು...
ಜಾರಲು ಬಿಡದೆ...
ತಂಗಾಳಿಯಂತೆ,
ಕಣ್ಮುಂದೆ ಬಂದು...
ಕರೆದೊಯ್ಯುವೆಯಲ್ಲ...


ಸಮಯ ಕೊಡು...
ನಿನಗಾಗಿ
ನನ್ನ ಮನದಲ್ಲಿ
ಪ್ರೀತಿಯ ಪದಗಳಿಂದ
ಕಟ್ಟಿದ
ಮುತ್ತಿನ ಹಾರ
ತೊಡಿಸಲು...
ಸ್ವಲ್ಪ ಸಮಯ ಕೊಡು...


--
ಇಂತಿ ನಿನ್ನ ಪ್ರೀತಿಯ,
ಶಿವಪ್ರಕಾಶ್

Share/Save/Bookmark

13 comments:

  1. ಆಹಾ...ಶಿವಪ್ರಕಾಶ್,
    ಮುತ್ತಂಥಾ ಮಾತುಗಳಲ್ಲೇ ಮುತ್ತಿನ ಹಾರ ಕೊಡುತ್ತೀಯಾ... ನಂಬೋಕೆ ಆಗ್ತಿಲ್ಲ....

    ReplyDelete
  2. ಹಹಹ.. ಸಮಯ ಎಷ್ಟು ದಿನ ಬೇಕೋ ತಗೋಳಪ್ಪಾ.. ನಂದು ಗೆ ಹೇಳ್ತೀನಿ

    ReplyDelete
  3. ಪ್ರೇಮಸಂದೇಶವನ್ನು ಕಣ್ಣಿನಿಂದಲೇ ಕಳಿಸಿ ನೋಡಿರಿ!

    ReplyDelete
    Replies
    1. Workout ಆಗೋದು ಡೌಟ್ ಸರ್.. ;)
      Thank you..

      Delete