Wednesday, July 21, 2010

ಒಮ್ಮೊಮ್ಮೆ ಹೀಗೂ ಆಗುವುದು...!!!


Mobile And Tv Remote.jpg

ನೈಜ ಘಟನೆಯನ್ನು ಆಧಾರಿಸಿ ಈ ಲೇಖನವನ್ನು ಬರೆಯಲಾಗಿದೆ....!!!!

ಒಂದ್ಸಾರಿ ಯಾವುದೋ ವಿಷಯದ ಬಗ್ಗೆ ಮಾತಾಡೋಕೆ ಸ್ನೇಹ ತನ್ನ ಗೆಳತಿ ನಿಹಾರಿಕ ಮೊಬೈಲ್ ಗೆ ಕರೆ ಮಾಡಿದಳು. ಆದರೆ ನಿಹಾರಿಕ ಕರೆಯನ್ನು ಸ್ವೀಕರಿಸಲಿಲ್ಲ. ಪದೇ ಪದೇ ಪ್ರಯತ್ನಿಸಿದರೂ ಅವಳು ಕರೆಯನ್ನು ಸ್ವೀಕರಿಸಲಿಲ್ಲ. ಏನು ಮಾಡಬೇಕೆಂದು ತೋಚಲಿಲ್ಲ. ಕೊನೆಗೆ ಅವಳಿಗೆ ಒಂದು ಈ-ಮೇಲ್ ಕಳುಹಿಸಿದಳು. ಸ್ವಲ್ಪ ಸಮಯದ ನಂತರ ಒಂದು ಲ್ಯಾಂಡ್ ಲೈನ್ ನಂಬರಿನಿಂದ ಸ್ನೇಹಳಿಗೆ ಕರೆ ಬಂತು. ಫೋನ್ ಎತ್ತಿ "ಹಲೋ" ಎಂದಳು.
ಆ ಕಡೆಯಿಂದ ಮಾತನಾಡಿದ ಧ್ವನಿ ನಿಹಾರಿಕಳದು ಎಂದು ತಿಳಿಯಿತು.
"ಅಲ್ವೇ ಆವಾಗಿನಿಂದ ನಿನ್ನ ಮೊಬೈಲ್ ಗೆ ಕರೆ ಮಾಡುತ್ತಿದ್ದೇನೆ... ಫೋನ್ ಯಾಕೆ ಎತ್ತಲಿಲ್ಲ.."
ನಿಹಾರಿಕ: "ಸಾರೀ ಕಣೆ.. ಮೊಬೈಲ್ ಮನೇಲಿ ಮರೆತು ಬಂದುಬಿಟ್ಟಿದ್ದೇನೆ... "
ಸ್ನೇಹ: "ಒಹ್ ಹಾಗ.. ನಾನು ಹೆದರಿಬಿಟ್ಟಿದ್ದೆ.. ಅದು ಹ್ಯಾಗೆ ಮೊಬೈಲ್ ಮನೇಲಿ ಮರೆತುಬಂದೆ...??"
ನಿಹಾರಿಕ: "ಬೆಳಿಗ್ಗೆ ಆಫೀಸಿಗೆ ಲೇಟ್ ಆಗ್ತಾ ಇತ್ತು.. ಮೊಬೈಲ್ ಅನ್ಕೊಂಡು TV Remote ನ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಕೊಂಡು ಬಂದೆ."
ನಗು ಬಂದರೂ ತಡೆದುಕೊಂಡು "ಅಲ್ವೇ TV Remote ಗು, ಮೊಬೈಲ್ ಗೆ ವ್ಯತ್ಯಾಸ ಗೊತ್ತಗೊಲ್ವ..????"
ನಿಹಾರಿಕ: "ಅವಸರದಲ್ಲಿ ಗೊತ್ತಾಗ್ಲಿಲ್ಲ ಕಣೆ........ :( "
"ಒಳ್ಳೆ ಕೆಲಸ ಮಾಡಿದಿಯ ಬಿಡು... ಹ್ಹ ಹ್ಹ ಹ್ಹ..."
ನಿಹಾರಿಕ: "ನಗಬೇಡವೆ............... ಇನ್ನೊಂದು ವಿಷಯ....."
"ಏನು...?"
ನಿಹಾರಿಕ: "For your kind information, ಇದು ಮೊದಲನೇ ಬಾರಿಗೆ ಅಲ್ಲ ಈ ತರಹ ಆಗ್ತಾ ಇರೋದು.. ಇದೇ ತರ ಬಹಳ ಸಾರಿ ಆಗಿದೆ...ಹ್ಹ ಹ್ಹ ಹ್ಹ... "
"ಅಯ್ಯೋ ನಿನ್ನ......"
ನಿಹಾರಿಕ: "ಒಂದ್ಸಾರಿ ಏನಾಯ್ತು ಗೊತ್ತ...??"
"ಏನಾಯ್ತು...?"
ನಿಹಾರಿಕ: "ಒಂದ್ಸಾರಿ.. ಮೊಬೈಲ್ ಮತ್ತೆ TV Remote ಎರಡನ್ನು ವ್ಯಾನಿಟಿ ಬಾಗ್ನಲ್ಲಿ ನನಗೆ ಗೊತ್ತಾಗದೆ ಹಾಕಿಕೊಂಡು ಬಿಟ್ಟಿದ್ದೆ.. BMTC ಬಸ್ನಲ್ಲಿ ಹೋಗೋವಾಗ, ಫೋನ್ ಬಂತು... ಸಡನ್ ಆಗಿ ವ್ಯಾನಿಟಿ ಬ್ಯಾಗ್ನಿಂದ ಮೊಬೈಲ್ ತಗೆದುಕೊಳ್ಳುವುದರ ಬದಲು TV Remote ತೆಗೆದುಬಿಟ್ಟೆ. ಅಲ್ಲೇ ನಿಂತಿದ್ದ ಕಂಡಕ್ಟರ್ ಅವಕ್ಕಾಗಿ ನೋಡ್ತಾ ಇದ್ದ... ಹ್ಹ ಹ್ಹ ಹ್ಹ"


Share/Save/Bookmark

26 comments:

  1. ಈಗ ನನಗೆ ಅನಿಸುತ್ತಿರುವದೂ ಅದೇ: ಹ್ಹ ಹ್ಹ ಹ್ಹಾ!!

    ReplyDelete
  2. ಈಗಂತೂ ಪ್ರತಿ ಮನೆಯಲ್ಲಿ ಹತ್ತಾರು ಮೊಬೈಲು ಗಳು, ಪ್ರತಿ ಉಪಕರನಕ್ಕು ಒಂದೊಂದು ರಿಮೋಟು ... Full confusion

    ReplyDelete
  3. ಹ್ಹ ಹ್ಹ ಹ್ಹಾ............
    ಒಳ್ಳೆ ಕೆಲಸ ಬಿಡಿ, ಒಂದು ದಿನದ ಮಟ್ಟಿಗಾದರೂ ಮೊಬೈಲ್ ಕಿರಿಕಿರಿ ತಪ್ಪಿತಲ್ಲಾ......
    ಚೆನ್ನಾಗಿದೆ.

    ReplyDelete
  4. sooper ... intadde ghatane nanna hindina ondu company ya branch manager ge aagittu...

    ReplyDelete
  5. ಶಿವಪ್ರಕಾಶ್,

    ಸೂಪರ್...ಸಕ್ಕತ್ ನಗುಬಂತು...ಈ ರೀತಿಯಾದರೂ ಮೊಬೈಲ್ ಅವಾಂತರ ತಪ್ಪಿತ್ತಲ್ಲ...

    ReplyDelete
  6. ಶಿವಪ್ರಕಾಶ್...

    ಸಕತ್..
    ಹ್ಹಾ..ಹ್ಹಾ.. !!
    ನಗು ತಡೆದುಕೊಳ್ಳಿಕ್ಕೆ ಆಗ್ತ ಇಲ್ಲಾ... !!

    ಹ್ಹಾ..ಹ್ಹಾ..

    ReplyDelete
  7. ಹಹ್ಹ ಹಹ್ಹ.... ಚೆನ್ನಾಗಿದೆ ಶಿವು ಅವರೆ.... :)

    ReplyDelete
  8. ಮನೆ ತುಂಬಾ ರಿಮೋಟುಗಳೇ ಈಗ. ಅದಕ್ಕಾಗಿ all-in-one ರಿಮೋಟುಗಳೂ ಬಂದಿವೆ

    ReplyDelete
  9. he he he..sadhya TV alli bittiddaralla..
    nimmava,
    Raaghu

    ReplyDelete
  10. super tammayyaaaa..... naavu nee ee article kaLisida dinadindlu nagta iddeevi.... heegu aagutte..!!!!

    ReplyDelete
  11. ಸಕತ್ experience ಕಣ್ರಿ

    ReplyDelete
  12. niharika maneli remote elli anta hudukadirabeku.....

    ReplyDelete
  13. hhaa hhaa...MARALA MALLIGE yalli idannu odi, nagu tadeyalu aagiralilla....hhaa hhaa... tumbaa chennaagide nihaarikaa paristiti...

    ReplyDelete
  14. ಹ ಹ್ಹ ಹ್ಹಾ ..... ನಾನೇ ದೊಡ್ಡ ಮರೆಗುಳಿ ಅಂದುಕೊಂಡಿದ್ದೆ ಆದರೆ ನನಗಿಂತಾ ದೊಡ್ಡ ಬಹು ದೊಡ್ಡ
    ಮರೆಗುಳಿಗಳು ಇದ್ದಾರೆಂದಾಯಿತು!!

    ನಾನು ಈ ತರಾ ಎಲ್ಲಾ ಅವಾಂತರ ಮಾಡುವುದಿಲ್ಲ ಎಲ್ಲಾ ಕೆಲಸವನ್ನು ಸರಿಯಾಗೇ ಮಾಡಿರುತ್ತೇನೆ,
    ಆದರೆ ಆ ಕೆಲಸ ಮಾಡಿದ ಮೇಲೆ ಸರಿಯಾಗಿ ಮಾಡಿದೆನಾ ಅಂತ ಒಂದು ಸಣ್ಣ ಅನುಮಾನ ಹುಟ್ಟುತ್ತದೆ.
    ಅದೇ ಈ ಮರೆಗುಳಿತನ!!
    ಒಳ್ಳೆ ಹಾಸ್ಯಾಸ್ಪದ ಲೇಖನ, ಧನ್ಯವಾದಗಳು.

    ReplyDelete