Thursday, August 5, 2010

ಹೀಗೊಂದು ಪರೀಕ್ಷೆ...!!!

ಸೆಮಿಸ್ಟರ್ ನ ಕೊನೆ Lab Exam. ಅದು Project Demo ಕೊಡುವ Lab Exam. ಪ್ರಾಜೆಕ್ಟಿನಲ್ಲಿ ನಾನು, ನಟ, ರಘು ಹಾಗು ಸಂಗಮೇಶ್ ಇದ್ವಿ. ನಾವೆಲ್ಲರೂ ಸೇರಿ ಒಂದು PPT (Power Point Presentation) ರೆಡಿ ಮಾಡಿದೆವು. ಅದನ್ನು ತುಂಬ ಸುಂದರವಾಗಿಯೂ ಸಿದ್ದಗೊಳಿಸಿದೆವು.
ಪರಿವೀಕ್ಷಕರು (Examiner) ನಮ್ಮ ಹತ್ತಿರ ಬರುವುದರೊಳಗಾಗಿ ನಾವು PPT ಓಪನ್ ಮಾಡಿ ಇಟ್ಟುಕೊಂಡಿದ್ದೆವು. ಅವರು ಬಂದವೊಡನೆ ನಾವೆಲ್ಲರೂ "Good Morning Sir" ಹೇಳಿ, Project Demo ಕೊಡಲು ಮುಂದಾದವು.
ಮೊದಲು ನನ್ನ ಸರಧಿ. ನಾವೆಲ್ಲರೂ ಮುಂಚೆಯೇ PPT ಯ ಪುಟಗಳನ್ನು ಸರಿಯಾಗಿ ಹಂಚಿಕೊಂಡಿದ್ದೆವು.
ನಾನು ಮುಂದೆ ಬಂದು PPT ಯ ಮೊದಲ ಪುಟವನ್ನು ತೋರಿಸುತ್ತ... ಪ್ರಾಜೆಕ್ಟ್ ಬಗ್ಗೆ ಹೇಳೋಳು ಶುರು ಮಾಡಿದೆ.
ಮಾನಿಟರ್ ಪರದೆಯ ಮೇಲೆ ಕಾಣಿಸುತ್ತಿದ್ದ PPT ಯ ಮೊದಲನೇ ಪುಟವನ್ನು ಪರಿವೀಕ್ಷಕರು ನೋಡುತ್ತಾ, SKIP ಎಂದರು.
ನಾನು ಮೊದಲ ಪುಟದ ಮಾಹಿತಿಯನ್ನು ವಿವರಿಸುವುದನ್ನು ನಿಲ್ಲಿಸಿ, ಎರಡನೇ ಪುಟಕ್ಕೆ ತಿರುಗಿಸಿ, ಎರಡನೇ ಪುಟದಲ್ಲಿ ಬರೆದ ವಿಷಯವನ್ನು ವಿವರಿಸುವುದಕ್ಕೆ ಹೋದೆ.
ಪರಿವೀಕ್ಷಕರು ಪುನಃ SKIP ಎಂದರು.
ನಾನು ಮೂರನೇ ಪುಟಕ್ಕೆ ತಿರುಗಿಸಿ, ವಿವರಿಸಲು ಅಣುವಾದೆ.
ಅವರು ಪುನಃ SKIP ಎಂದರು.
ನಾಲ್ಕನೇ ಪುಟಕ್ಕೆ ತಿರುಗಿಸಿದೆ.
ಪುನಃ SKIP ಎಂದರು.
ಐದನೇ ಪುಟಕ್ಕೆ ತಿರುಗಿಸಿದೆ.
ಪುನಃ SKIP ಎಂದರು.
ಆರನೇ ಪುಟಕ್ಕೆ ತಿರುಗಿಸಿದೆ.
ಪುನಃ SKIP ಎಂದರು.
ನಾನು ಹೇಳುವುದನ್ನು ಬಿಟ್ಟು ಹಿಂದಕ್ಕೆ ಸರಿದು ನಿಂತೆ. ನಾನು ಅಲ್ಲಿಯವರೆಗೂ ಏನನ್ನು ಹೇಳಿರಲಿಲ್ಲ, ಏಕೆಂದರೆ ಹೇಳುವುದಕ್ಕೆ ಮುಂಚೆಯೇ ಅವರು PPT ಯ ಪುಟದ ಮೇಲೆ ಕಣ್ಣಾಡಿಸಿ SKIP ಎನ್ನುತ್ತಿದ್ದರು.
ನಾನು ಹಿಂದೆ ಸರಿದಿದ್ದನ್ನು ನೋಡಿದ ಪರಿವೀಕ್ಷಕರು "ಯಾಕೆ ಹಿಂದಕ್ಕೆ ಹೋದಿರಿ" ಎಂದರು.
ನಾನು "ಸಾರ್, ನಮ್ಮ PPT ನಲ್ಲಿ 24 ಪುಟಗಳಿವೆ. ನಾವೆಲ್ಲರೂ PPT ಯನ್ನು ವಿವರಿಸಲು ತಲಾ ಆರು ಪುಟಗಳಂತೆ ಆರಿಸಿಕೊಂಡಿದ್ದೇವೆ. ಮೊದಲ ಆರು ಪುಟಗಳನ್ನು ನಾನು ವಿವರಿಸಿ. ನಂತರದ ಆರು ಪುಟಗಳು ರಘು, ಅದನಂತರದ ಆರು ಪುಟಗಳು ನಟರಾಜ, ನಂತರ ಸಂಗಮೇಶ್ ವಿವರಿಸೋಣವೆಂದು ನಿಶ್ಚಯಿಸಿಕೊಂಡಿದ್ದೇವೆ. ನನ್ನ ಆರು ಪುಟಗಳು ಮುಗಿಯಿತಲ್ಲ...? ಅದಕ್ಕೆ ಹಿಂದೆ ಸರಿದೆ." ಎಂದೆ.
ನನ್ನ ಈ ವಿವರಣೆಯನ್ನು ಕೇಳಿದ ಪರಿವೀಕ್ಷಕರು ಒಮ್ಮೆ ಮುಗುಳ್ನಕ್ಕು, ಸರಿಯಪ್ಪಾ ಎಂದು ಹೇಳಿ. ನಂತರ ವಿವರಿಸಿದ ನಟ, ರಘು, ಹಾಗು ಸಂಗಮೇಶನ Project Demo ದ ವಿವರಣೆಯನ್ನು ಕೇಳಿದರು.
ನಿಜ ಹೇಳಬೇಕೆಂದರೆ ಅವರು ಕೇಳಿದ್ದು, ಸಂಗಮೇಶ್ ವಿವರಿಸಿದ ಆ ಕೊನೆಯ ಆರು ಪುಟಗಳು ಅಸ್ಟೆ.
Share/Save/Bookmark

16 comments:

  1. ನೆನಪುಗಳ ಮಾತು ಮಧುರ .......

    ReplyDelete
  2. :-). ತುಂಬ ನಗಿಸುತ್ತೀರಪ್ಪಾ ನೀವು !

    ReplyDelete
  3. ನಿಜ. ಪರೀಕ್ಷೆ, project seminar ಇಂಥವಕ್ಕೆ ಬರುವವರು ಕಾಟಾಚಾರಕ್ಕೆ ಬಂದವರಂತೆ ಬರುತ್ತಾರೆ. ಕಾಲೇಜ್‍ನವರು ಕೊಡುವ ಚಹ, ಕಾಫಿ, ತಿಂಡಿ, ಭತ್ಯೆ ಮುಗಿಸಿ ಆರಾಮಾಗಿ ಹೊರಡುತ್ತಾರೆ

    ReplyDelete
  4. ನೀ ತಪ್ಪಿಸಿಕೊಂಡಿಲ್ಲ ಬಿಡು ..... ಆಮೇಲೆ ಅವರು ಹೆಚ್ಚು ಪ್ರಶ್ನೆ ಕೇಳಿ ನೀನು ತಬ್ಬಿಬ್ಬಾಗಿ ಉತ್ತರ ಕೊಡದಿದ್ದರೆ ಕಷ್ಟ ಆಗುತ್ತಿತ್ತು... ಹಹಹ ನೀನು ಅವತ್ತು ಉತ್ತರ ಕೊಡದಿದ್ದಕ್ಕೆ ಈಗ BUZZನಲ್ಲಿ ಸಿಕ್ಕಾಪಟ್ಟೆ ಪ್ರಶ್ನೆಗಳಿಗೆ ಉತ್ತರಿಸೋ ಹಾಗೆ ಹಾಗಿರೋದು......

    ReplyDelete
  5. This comment has been removed by the author.

    ReplyDelete
  6. ಸಧ್ಯ,
    ಒಳ್ಳೆಯ ಅಂಕಗಳು ಸಿಕ್ಕವಾ ಇಲ್ವಾ?
    nice one....

    ReplyDelete
  7. ಶಿವೂ...

    ಅಂಕಗಳು ಸರಿಯಾಗಿ ಹಾಕಿರ ಬೇಕಲ್ಲ !!

    ನಿಮ್ಮ ಬ್ಲಾಗ್ ಇತ್ತೀಚೆಗೆ ನಗೆಯ ಬುಗ್ಗೆಯಾಗಿದೆ.. !!

    ಹ್ಹಾ..ಹ್ಹಾ..ಹ್ಹಾ.. !!

    ReplyDelete