Thursday, December 9, 2010

ನೆನಪುಗಳು ಸುಟ್ಟು ಬೂದಿಯಾಗುವುದನ್ನು ಕಂಡೆ

ನಾನವಾಗ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ಆ ವಯಸ್ಸಿನಲ್ಲಿ ನನಗೆ ಓದುವುದು, ಬರೆಯುವುದೆಂದರೆ ತುಂಬ ಇಷ್ಟದ ಸಂಗತಿ. ಒಮ್ಮೆ ನನ್ನ ಹಾಗು ನನ್ನ ಸುತ್ತಮುತ್ತ ನಡೆಯುತ್ತಲಿದ್ದ ಹಾಸ್ಯ ಹಾಗು ರಸಮಯ ಕ್ಷಣಗಳನ್ನು ನನ್ನ ದಿನಚರಿಯಲ್ಲಿ ಬರೆದಿಡಬೇಕೆನಿಸಿತು. ಮುಂದೊಮ್ಮೆ ನಾನು ದೊಡ್ಡ ವ್ಯಕ್ತಿಯಾದಾಗ ಎಲ್ಲರಿಗೂ, ನಾನು ಹೇಗಿದ್ದೆ..? ಎಂದು ಹೇಳಿಕೊಳ್ಳಬೇಕು, ಅದಕ್ಕಾಗಿ ದಿನಚರಿಯಲ್ಲಿ ಸುಂದರವಾದ ಕ್ಷಣಗಳನ್ನು ಬರೆದಿಡಬೇಕೆನಿಸಿತು. ನಾನು ಹಾಸ್ಟೆಲ್ಲಿನಲ್ಲಿ ಇದ್ದುದರಿಂದ ಬರೆಯಲು ಇಂತಹ ತುಂಬ ಸನ್ನಿವೇಶಗಳು ಸಿಗುತ್ತಿದ್ದವು. ಅಂದಿನಿಂದ ನನಗೆ ಎದುರಾದ ಹಾಸ್ಯ ಹಾಗು ರಸಮಯ ಕ್ಷಣಗಳನ್ನು ಬರೆದಿಟ್ಟುಕೊಳ್ಳತೊಡಗಿದೆ.

ನಾಲ್ಕು ತಿಂಗಳುಗಳ ನಂತರ ನಾನು ಬರೆದಿಡುತ್ತಿದ್ದ ದಿನಚರಿಯ ಪುಟಗಳ ಸಂಖೆ ೩೫೦ ದಾಟಿತ್ತು. ಅದನ್ನು ನೋಡಿದಾಗಲೆಲ್ಲ ಏನೋ ಒಂದು ರೀತಿಯ ಹೆಮ್ಮೆಯಾಗುತ್ತಿತ್ತು. ನಾನೊಬ್ಬ ದೊಡ್ಡ ವ್ಯಕ್ತಿಯ ಹಾಗೆ ಬೀಗುತ್ತಿದ್ದೆ. ನಾನು ಈ ನನ್ನ ದಿನಚರಿ ಪುಸ್ತಕವನ್ನು ಯಾರ ಕೈಗೂ ಸಿಗದಂತೆ ಕಾಪಾಡಿಕೊಂಡು ಬಂದಿದ್ದೆ. ಆದರೆ, ಒಂದುದಿನ ನನ್ನ ರೂಮ್-ಮೆಟ್ ಅದನ್ನು ಕೈಗೆತ್ತಿಕೊಂಡುಬಿಟ್ಟಿದ್ದ. ಅವನು ಓದುವ ಮುಂಚೆಯೇ ಅವನಿಂದ ಕಿತ್ತುಕೊಂಡು ಓಡಿದೆ. ಅವನು ಇನ್ನೂ ಇಬ್ಬರು ಸ್ನೇಹಿತರನ್ನು ಕಟ್ಟಿಕೊಂಡು ನನ್ನ ಹಿಂದೆಯೇ ಓಡೋಡಿ ಬಂದ. ಅವರಿಗೆ ಆ ಪುಸ್ತಕವನ್ನು ಕೊಟ್ಟುಬಿಡಬಹುದಾಗಿತ್ತು ಆದರೆ, ಅದರಲ್ಲಿ, ನನಗೆ ಏಳನೇ ಕ್ಲಾಸಿನಲ್ಲೇ ಹುಟ್ಟಿದ ಒಂದು ಪ್ರೇಮಕಥೆ ಇತ್ತು. ಅದನ್ನು ಯಾರಿಗೂ ತೋರಿಸಲು ನಾನು ಸುತರಾಂ ಸಿದ್ದವಿರಲಿಲ್ಲ. ನಾನು ಓಡುತ್ತಾ ಓಡುತ್ತಾ ಹಾಸ್ಟೆಲ್ಲಿನ ಅಡುಗೆ ಕೊಣೆಯ ಒಳ ಹೊಕ್ಕು ಗ್ಯಾಸ್-ಸ್ಟವ್ ನ ಪಕ್ಕ ಬಂದು ನಿಂತಿದ್ದೆ. ಗ್ಯಾಸ್-ಸ್ಟವ್ ನ ಉರಿಯನ್ನು ಹತ್ತಿಸಿದೆ. ಅವರು ಇನ್ನೇನು ನನ್ನ ಕೈಯಿಂದ ಕಿತ್ತುಕೊಳ್ಳುತ್ತಾರೆ ಎಂದು ಗೊತ್ತಾಗಿ, ನನ್ನ ದಿನಚರಿಯನ್ನು ಉರಿಯುತ್ತಿದ್ದ ಗ್ಯಾಸ್ ಸ್ಟವ್ ನ ಬೆಂಕಿಗೆ ಆಹುತಿ ಮಾಡಿಬಿಟ್ಟೆ...
ನನ್ನ ಕಣ್ಣ ಮುಂದೆಯೇ, ನನ್ನ ನೆನಪುಗಳು ಸುಟ್ಟು ಬೂದಿಯಾಗುವುದನ್ನು ಕಂಡೆ..... ಅದಾದ ಒಂದು ವಾರದ ವರೆಗೆ ನನಗೆ ತುಂಬ ಬೇಜಾರ್ ಆಗಿತ್ತು.

ಮೇಲಿನ ಘಟನೆ ನನ್ನದಲ್ಲ. ನನ್ನ ಸಹೋದ್ಯೋಗಿಯು ಕಾಫಿ Break ನಲ್ಲಿ ನನ್ನ ಜೊತೆ ಹಂಚಿಕೊಂಡ, ಅವನ ಬಾಲ್ಯದ ನೆನಪು..

ಗೆಳೆಯರೇ,
ನಾನು ಈ ಬ್ಲಾಗ್ ಲೋಕದ ಪಯಣದಲ್ಲಿ ಎರಡು ವರ್ಷಗಳನ್ನು ಕಳೆದು, ಮೂರನೇ ವರ್ಷಕ್ಕೆ ಕಾಲಿಟ್ಟಿದ್ದೇನೆ.
ನಿಮ್ಮೆಲ್ಲರ ಆತ್ಮೀಯ ಸಹಕಾರ ಹಾಗು ಬೆಂಬಲಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು

ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್
Share/Save/Bookmark

21 comments:

 1. shivaprakash,
  naanu nimmade kathe endukonDe....

  nimma murane varshada payaNakke subhaashaya....

  blog namagellaa oLLoLLe friends nna koTTide...

  ReplyDelete
 2. @ ಶಿವು..
  ಅದರಲ್ಲಿ, ನನಗೆ ಏಳನೇ ಕ್ಲಾಸಿನಲ್ಲೇ ಹುಟ್ಟಿದ ಒಂದು ಪ್ರೇಮಕಥೆ ಇತ್ತು...

  ಓಹ್ಹೋ.. ಯಾರ್ಲಾ ಮಗಾ ಅದು?

  -ಯಳವತ್ತಿ

  ReplyDelete
 3. ಶಿವಪ್ರಕಾಶ್;ಎರಡನೇ ಹುಟ್ಟುಹಬ್ಬದ ಶುಭಾಶಯಗಳು.

  ReplyDelete
 4. ಹೌದು, ಈ ಡೈರಿ ಬರೆಯೋದ್ಕಿಂತ ಅದನ್ನ ಕಾಪಾಡಿಕೊಳ್ಳೋದೇ ಸ್ವಲ್ಪ ತಲೆಬಿಸಿ.

  ಎರಡು ವರ್ಷ ಕಳೆದಿದ್ದಕ್ಕೆ , ಮುಂದಿನ ವರ್ಷಗಳಿಗೆ, ಎಲ್ಲಾದಕ್ಕೂ ಶುಭಾಶಯಗಳು. ಹೀಗೆ ಬ್ಲಾಗಿಸ್ತಾ ಇರಿ...

  ReplyDelete
 5. ಸ್ನೇಹಿತನ ಕಥೆ ಅಂತ ಹೇಳಿ.... ಎಲ್ಲರ ಕಿವಿಗೆ ಹೂ ಇಡ್ತೀಯಾ... ಹಹಹ.... ಕಥೆಯಾರದಾದರೇನು... ನೆನಪು ಅಳಿಸಿಹೋದರೇನು ಎಂದಾದರೊಂದು ದಿನ ಮರೆತು ಹೋದ ನೆನಪು ಮರುಕಳಿಸುವಂತೆ ಸಮಯ ಸಂದರ್ಭಗಳು ಅನುವು ಮಾಡಿಕೊಡುತ್ತವೆ...
  ನಿನಗಲ್ಲ ನಿನ್ನ ಬ್ಲಾಗಿಗೆ ಹುಟ್ಟು ಹಬ್ಬದ ಶುಭಾಶಯಗಳು. ಮರೆತ ನೆನಪುಗಳು ನೆನಪಿಗೆ ಬಂದು ಬ್ಲಾಗಿನಲ್ಲಿ ಲೇಖನಗಳಾಗಿ ಮೂಡಿಬರಲಿ... ಸದಾ ನಗೆಯ ಹೊನಲಿನಲ್ಲಿರಲಿ....

  ReplyDelete
 6. This comment has been removed by the author.

  ReplyDelete
 7. ಹುಟ್ಟುಹಬ್ಬದ ಶುಭಾಶಯಗಳು.

  ReplyDelete
 8. ನಾನೂ ಕೂಡ ಇದು ನಿಮ್ಮದೇ ಕಥೆ ಅಂದುಕೊಂಡಿದ್ದೆ. ಮೂರನೆ ವರ್ಷಕ್ಕೆ ಕಾಲಿಟ್ಟಿದ್ದಕ್ಕೆ ಅಭಿನಂದನೆಗಳು

  ReplyDelete
 9. ಅಭಿನಂದನೆಗಳು. ಬ್ಲಾಗ್ ಬರಹ ಮುಂದುವರಿಯಲಿ.

  ಬರೆದ ಡೈರಿಯನ್ನು ಕಾಪಾಡಿಕೊಂಡು ಹೋಗುವುದರ ಕಷ್ಟ ಬಲ್ಲೆ... :)

  ReplyDelete
 10. ಅಭಿನಂದನೆಗಳು ಶಿವು....

  ReplyDelete
 11. Shivu ,

  congrats on 3rd completion of this blog . Keep writing , your writing is so fresh .

  ReplyDelete
 12. ನೆನಪಿನ ಪುಟಗಳು ಇನ್ನಷ್ಟು ಮೂಡಲಿ... ಅಭಿನಂದನೆಗಳು ಶಿವು :)

  ReplyDelete
 13. nimma blog na 3rd ANNIVERSARY ge shubhaashayagalu shivu...Heege munduvareyali nimma blogaayana....:)

  ReplyDelete
 14. ಶಿವೂ ,
  ನಿನ್ನ ಕತೆ ಅಲ್ವ??
  ನಿನ್ನ ಬ್ಲಾಗಿಗೆ ಹುಟ್ಟು ಹಬ್ಬದ ಶುಭಾಶಯಗಳು.

  ReplyDelete
 15. so touching.. bejarayitu!!..

  Nimma blogina huttu habbada shubhashayagalu:)

  ReplyDelete
 16. ಶಿವಪ್ರಕಾಶ್,
  ಅಭಿನಂದನೆಗಳು. ನಿಮ್ಮ ನೆನಪಿನ ಪುಟಗಳು ಮಾಸದಿರಲಿ..

  ReplyDelete
 17. shivaprakash ravare shubhashayagalu mattu abhinandanegalu.

  ReplyDelete
 18. ಶಿವೂ..

  ಬಿಳಿಕಾಗದದಲ್ಲಿ ಬರೆದದ್ದು ಬೂದಿಯಾಗಿರ ಬಹುದು...ಅ
  ಆದರೆ...
  ನೆನಪಿನ ಪುಟಗಳಲ್ಲಿ..
  ಹಸಿರಾಗಿರುತ್ತದೆ..
  ಮತ್ತೆ ಮತ್ತೆ..
  ಮಧುರ ಧ್ವನಿಯಾಗಿ..
  ಕಾಡುತ್ತಿರುತ್ತವೆ..
  ನಿಮ್ಮ
  ಒಂಟಿತನದಲ್ಲಿ..
  ಜೊತೆಯಾಗಿ..
  ಹಾಡುತ್ತಿರುತ್ತವೆ..ಆ ನೆನಪುಗಳು ಕಾಡುತ್ತಿರುತ್ತವೆ..

  ನಿಮ್ಮ ಬ್ಲಾಗಿಗೆ ಹುಟ್ಟು ಹಬ್ಬದ ಶುಭಾಶಯಗಳು.. !!

  ಇನ್ನಷ್ಟು ನೆನಪುಗಳು ಹಾಡಾಗಿ ಬರುತ್ತಿರಲಿ..

  ("ಸುಗುಣಾ" ಅಭಿಪ್ರಾಯಕ್ಕೆ ನನ್ನ ಸಹ ಮತವಿದೆ)

  ಜೈ ಹೋ... !!

  ReplyDelete
 19. ಶುಭಾಶಯಗಳು
  -ಚಿತ್ರಾ

  ReplyDelete