Thursday, March 10, 2011

ಸುಖ ದಾಂಪತ್ಯದ ಗುಟ್ಟು?


ಮದುವೆ ಎನ್ನುವ
ವಿಸ್ಮಯ-ವಿಚಿತ್ರಗಳ ಲೋಕಕ್ಕೆ
ಕಾಲಿರಿಸುವ ಮುನ್ನ
ಸುಖ ದಾಂಪತ್ಯದ ಗುಟ್ಟೇನಿರಬಹುದು..?
ಎಂದು ಹುಡುಕ ಹೊರಟೆ.

ಮದುವೆಯಾಗಿ
ಸಂತೋಷದಿಂದಿದ್ದ
ನನ್ನಣ್ಣನ ಕೇಳಿದೆ
"ಅಣ್ಣ, ಏನಣ್ಣಾ,
ನಿಮ್ಮ ಈ ಸುಖ ದಾಂಪತ್ಯದ ಗುಟ್ಟು?"

ಅದಕ್ಕೆ ನಮ್ಮಣ್ಣ ಹೇಳಿದ
"ತಮ್ಮನೇ ಕೇಳು,
ಸುಖ ದಾಂಪತ್ಯದ ಗುಟ್ಟು,
ಬಿಟ್ಟು ಕೊಡಬೇಡ ನಿನ್ನ ಜುಟ್ಟು"

ಜುಟ್ಟು ಬಿಟ್ಟುಕೊಡದಿರುವುದು
ಹೇಗೆಂದು ?
ಯೋಚಿಸಿ ಯೋಚಿಸಿ
ಕೊನೆಗೆ
ಕತ್ತರಿಸಿಯೇ ಬಿಟ್ಟೆ,
ಮದುವೆಯ ಮುಂಚೆ
ಈ ನನ್ನ
ಜುಟ್ಟು....


--
ಶಿವಪ್ರಕಾಶ್

Share/Save/Bookmark

20 comments:

  1. Hah hah ha....nice lines.
    Husharu matte juttu biduva tappu madadiri :P

    ReplyDelete
  2. ಜುಟ್ಟು ಸಿಗದಿದ್ದರೆ, ಹೆಂಡತಿಯು ಕಿವಿಯನ್ನೇ ಹಿಡಿದಾಳು, ತಮ್ಮಾ!

    ReplyDelete
  3. ಛೇ! ಛೆ!! ಇದು ಅನ್ಯಾಯ :(

    ReplyDelete
  4. ayyo.... yeno guTTu heLkoDtira anta aaseinda oDide... niraashemaaDibitralla!

    ReplyDelete
  5. Shivu,

    Ha ha ha...adke alvaa amonne neevu Blr Kamath hotelnalli sikkaga nimma parichaya sigalilla nange, yaakendre naanu nimmannu adakkinta modalu Udda koodalugalalli nodidde....

    ReplyDelete
  6. ಶಿವು,
    ಗುಟ್ಟು ರಟ್ಟು ಮಾಡಿದ್ದಕ್ಕೆ ವಂದನೆಗಳು..........
    ನಮ್ಮಂತವರಿಗೆ ಒಳ್ಳೆ ಐಡಿಯಾ ಕೊಟ್ಟಿದ್ದೀರಾ!!!

    ReplyDelete
  7. ಶಿವು ನೈಸ ಬ್ಯಾಟಮನ್ ಪ್ಯಾಡು ಕಟ್ಟಿಕೊಂಡ ನಿಜ ಬಾಲ್ ಫೇಸ್ ಮಾಡೋದು ಯಾವಾಗ?

    ReplyDelete
  8. ಚೆನ್ನಾಗಿದೆ..

    ReplyDelete
  9. ಒಳ್ಳೆ ಕತೆ :-)

    ReplyDelete
  10. u didnt ask ur attige Shiv?? :P

    ReplyDelete
  11. ಜುಟ್ಟು ಇಲ್ಲದಿದ್ದರೂ ಬಿಡಲ್ಲಪ್ಪ....

    ReplyDelete
  12. chennagide..! btw, ee guTTu biTTu koTTa aNNanige nimma juTTu samarpisa bekittu ;)

    ReplyDelete