Wednesday, April 20, 2011

ಕಾಲ ಬದಲಾಗುತಿರುವುದನು ಕಂಡೆ...



ಕಡಲ ತೀರದಿ ಕೂತು,
ಕಾಲ ಬದಲಾಗುತಿರುವುದನು ಕಂಡೆ...

ಕುಡಿದ ಅಮಲಿನಲಿ,
ಸೀಸೆಯನ್ನು ಧರೆಗೆ ಜೋರಾಗಿ ಅಪ್ಪಳಿಸಿ,
ಪುಡಿ ಪುಡಿ ಮಾಡಿ,
ವ್ಯಾಘ್ರನಂತೆ ವರ್ತಿಸಿ ಹೋದ,
ಯುವಕನ ಜಾಗದಲ್ಲಿ,
ಮುದ್ದಾದ ಪುಟಾಣಿ ಮಗುವೊಂದು,
ಅಂಬೆಗಾಲಿಡುತ ಜಾಗ ತಲುಪುತಿರಲು,
ಓಡೋಡಿ ಬಂದ ಯಾರೋ ಇನ್ನೊಬ್ಬ ಯುವಕ,
ಮಗುವನ್ನು ಎತ್ತಿ, ತಂದೆಯ ಮಡಿಲಿಗೆ ತಲುಪಿಸಿ,
ಮರಳಲ್ಲಿ ಮರುಳ ಹರಡಿದ,
ಪುಡಿಪುಡಿಯಾದ ಸೀಸೆ ಚೂರುಗಳನೆತ್ತಿ,
ಕಸದ ತೊಟ್ಟಿಗೆ ತಲುಪಿಸುತಿರುವುದನು ನೋಡುತಿರುವ,
ಮುದ್ದು ಮಗುವಿನ ಕಣ್ಣಿನಲಿ...
ಕಾಲ ಬದಲಾಗುತಿರುವುದನು ಕಂಡೆ...

==



ಉದ್ಯಾನವನದಿ ಕೂತು,
ಕಾಲ ಬದಲಾಗುತಿರುವುದನು ಕಂಡೆ...

ಕಾಮದ ಅಮಲಿನಲಿ,
(ಅಮರ)ಪ್ರೇಮಿಗಳಿಬ್ಬರು,
ಉದ್ಯಾನವನದಲಿ,
ಯಾರಿಗೂ ಲೆಕ್ಕಿಸದೆ,
ಹುಚ್ಚರಂತೆ ವರ್ತಿಸುತಿರಲು,
ಅಲ್ಲೇ ಇದ್ದ ಪುಟ್ಟ ಮಗುವಿನ,
ಮುಖದಿ ಮೂಡಿದ
ಭಾವನೆಗಳಲ್ಲಿ
ಕಾಲ ಬದಲಾಗುತಿರುವುದನು ಕಂಡೆ...

==



ಗಣಕಯಂತ್ರದ ಮುಂದೆಯೂ ಕೂತು,
ಕಾಲ ಬದಲಾಗುತಿರುವುದನು ಕಂಡೆ...

ವಿದೇಶದಿ ವಿದ್ಯಾಭ್ಯಾಸಕ್ಕೆಂದು,
ಸಾಲ ಸೋಲ ಮಾಡಿ ಕಳಿಸಿದ,
ಮಗನ ಫೇಸ್-ಬುಕ್ ಖಾತೆಯ
ಅಪ್ಡೇಟ್ ಗಳಲಿ,
ಸೀಸೆಯ ಹಿಡಿದು,
ಬಾಲೆಯ ಜೊತೆಗೆ ಬಿಗಿದಪ್ಪಿಗೊಂಡು,
'F*** U' ಎನ್ನುವ ಸನ್ನೆಯ ಚಿತ್ರಗಳ,
ನೋಡಿದ ತಂದೆಯು
ಮನದಾಳದ ನೋವಿನಲಿ,
ಕಾಲ ಬದಲಾಗುತಿರುವುದನು ಕಂಡೆ...

==


ಕೂತು ಕೂತು ಸಾಕಾಗಿ,
ಅಲೆಮಾರಿಯಂತೆ ತಿರುಗುತಿರುವಾಗಲು,
ಕಾಲ ಬದಲಾಗುತಿರುವುದನು ಕಂಡೆ...

ಕಾಲ ಬದಲಾಗುತಿರುವುದನು ಕಾಣುತ,
ಅತ್ತಲೂ ಹೋಗದ,
ಇತ್ತಲೂ ಬರಲಾರದ,
ನನ್ನಂತಹ ಯುವಕರ,
ಸ್ಥಬ್ಧ ಮುಖದ ಹಿಂದಿರುವ ,
ಸಾವಿರಾರು ಪ್ರಶ್ನೆಗಳಲಿ
ಕಾಲ ಬದಲಾಗುತಿರುವುದನು ಕಂಡೆ...!!!

(ಚಿತ್ರ ಕೃಪೆ: ಅನಿಲ್ ಬೆಡಗಿ ಹಾಗು ದಿಗ್ವಾಸ್ ಹೆಗಡೆ)

Share/Save/Bookmark

23 comments:

  1. ನಿಜ ಇವು ಕಾಲ ಬದಲಾಗುವುದರ ಸೂಚನೆ ಆದರೆ ಕಾಲವೇನು ಮಾಡುತ್ತೆ ಮನುಷ್ಯನ ವರ್ತನೆಗೆ... ಕಾಲ ಮೌನವಿಸಿದೆ ಮನುಷ್ಯನ ಬದಲಾವಣೆಗೆ.... ಹೊಸತನದ ಸಾಲುಗಳು ನಿಜಕ್ಕೂ ಚೆನ್ನಾಗಿವೆ... ಜೊತೆಗೆ ಬದಲಾವಣೆಯ ಹಾದಿಯಲ್ಲಿ ಅಪಾಯವನ್ನು ಸೂಚಿಸುವ ಪರಿಯೂ ಇದೆ... ಅಭಿನಂದನೆಗಳು ಹೀಗೆ ಹೊಸತನದ ಸಾಲುಗಳು ನಿನ್ನಿಂದ ಬರುತ್ತಲಿರಲಿ. ಅದಕ್ಕೆ ತಕ್ಕಂತ ಚಿತ್ರಗಳು ನೈಸ್...

    ReplyDelete
  2. ನಿಮ್ಮ ಬ್ಲಾಗ್ follow ಮಾಡುತ
    ಕಾಲ ಬದಲಾಗುತಿರುವುದನು ಕಂಡೆ...

    ಮನಸ್ಸಿಗೆ ಇಷ್ಟ ಆದದ್ದನ್ನು ಗಿಚೋಕೆ ಅಂತ
    ಶುರುಮಾಡಿದ ಬ್ಲಾಗ್ ಲಿ,
    ಮದುವೆ, ದಾಂಪತ್ಯದ ಕವನ ಬರಿತಿದ್ದವ...
    ಜೀವನದ ಘಟ್ಟಗಳನ್ನ ಸೆರೆ ಹಿಡಿಯುವುದನ ಕಂಡೆ..
    ಕಾಲ ಬದಲಾಗುತಿರುವುದನು ಕಂಡೆ ...

    :-)

    ReplyDelete
  3. ಕವನದ ತಿರುಳಿಗೆ ಸರಿಹೋಗುವಂತಹ ಛಂದವನ್ನು ಬಳಸಿದ್ದು ನೋಡಿ ಖುಶಿಯಾಯಿತು. ಇದೀಗ ಒಳ್ಳೆಯ ಕವಿಯ ಲಕ್ಷಣ.

    ReplyDelete
  4. ಏನೋ ದೋಸ್ತ.. ?
    ನೀ ಯಾವಾಗಿಂದ ಹೀಂಗ ಬದಲಾದಿ :)

    ಮಸ್ತ್ ಮಸ್ತ್ ಸಾಲುಗಳು..
    ವಿಚಾರಕ್ಕೆ ಹಚ್ಚುವ ಸಾಲುಗಳು..!

    ReplyDelete
  5. tumba chennagi moodide... nimma badalaaguttiruva saalugala .. badalaaguttiruva kaalagal.. badalaaguttiruva vichargala kavan...

    ReplyDelete
  6. ಬದಲಾಗುತ್ತಿರುವ ಜಗತ್ತು
    ಆಧುನಿಕತೆಯ ನೆವದಲ್ಲಿ
    ಮಾಡಬಾರದ್ದನ್ನೆಲ್ಲ ಮಾಡಿ
    ಇತಿಮಿತಿಗಳು ಮರೆತು
    ಎಲ್ಲವೂ ಅತಿ ಅನ್ನುವಂತಾಗಿ
    ಭೂಮಾತೆಗೆ ಆಪತ್ತು ಎನ್ನುವ ಕಾಲ ಬಂದಿದೆ...ನಿಜ ಕಾಲ ಬದಲಾಗುತ್ತಿದೆ.
    ಆದರೂ ಎಲ್ಲೋ ಸ್ವಲ್ಲ್ಪ ಮಾನವೀಯ ಮೌಲ್ಯಗಳೂ ಕಾಣುತ್ತಿವೆ.
    ಚಂದದ ಕವನ ಶಿವು..:)

    ReplyDelete
  7. ಕವನ ವಾಸ್ತವ ಜಗತ್ತನ್ನು ಪ್ರತಿಬಿ೦ಬಿಸುತ್ತಿದೆ.ಚೆನ್ನಾಗಿ ಬರೆದಿದ್ದೀರಿ.

    ReplyDelete
  8. namma tamma badalaagiddaane...
    adakke ee kavana saakshi....

    tumbaa chennaagide bro....

    super.. super...

    ellaa maatugaLu satya... adE nitya...

    ReplyDelete
  9. hey sakhattaagide tammaa...seriously..good thought! keep it up!

    ReplyDelete
  10. 100 percent true and 100 percent sooooper....:P
    liked it a lot.....

    ReplyDelete
  11. Oh! Superb lines Shivprakash.. ನಾನು ಪ್ರದೀಪ್.. ಪ್ರಕಾಶ್ ಹೆಗ್ಡೆಯವರ book release ನಲ್ಲಿ ಭೇಟಿ ಆಗಿದ್ವಲ್ಲ.. ನೆನಪಿದೆಯ? Following your blog.. :)

    ReplyDelete
  12. ಶಿವೂ..ಸೂಪರ್..ಫೋಟೋದ ಜೊತೆಗೆ ಒಳ್ಳೆಯ ಲೈನ್ಸ...

    ನಿಮ್ಮವ,
    ರಾಘು.

    ReplyDelete
  13. ಶಿವಪ್ರಕಾಶರ ಕವನಗಳು
    ದಿನದಿಂದ ದಿನಕ್ಕೆ
    ಬದಲಾಗುವದ ಕಂಡೆ ...
    ಸುಂದರ ವಾಗಿದೆ

    ReplyDelete