Thursday, July 14, 2011

ವೈರಾಗಿ... ನಾನಲ್ಲ..



ಜನ ಜಾತ್ರೆಯ ನಡುವೆ
ಕಳೆದುಹೊಗಬೇಕೆನಿಸುವುದು..
ಎಲ್ಲವನೊಮ್ಮೆ ದೂರಕೆ ತಳ್ಳಿ
ದೂರವಾಗಬೇಕೆನಿಸುವುದು..

ಮಾತುಗಾರರ ನಡುವೆ,
ಮೌನವಾಗಿರಬೇಕೆನಿಸುವುದು..
ಮಾತಲ್ಲದ ಮಾತಲ್ಲಿ
ಮಾತು ಹೇಳಬೇಕೆನಿಸುವುದು...

ಹರಿವ ನೀರನೊಮ್ಮೆ
ನಿಲಿಸಿ ಕೇಳಬೇಕೆನಿಸುವುದು
ನಿಂತ ನೀರನ್ನೊಮ್ಮೆ
ಕದಡಿ ಕೇಳಬೇಕೆನಿಸುವುದು..

ಈ ಜೀವನಕೆ
ಅರ್ಥವೇ ಇಲ್ಲವೆನಿಸುವುದು..
ಅರ್ಥ ಹುಡುಕುತಿರುವವರ
ಕಂಡು ಮರುಕ ಹುಟ್ಟುತಿಹುದು..

ಒಮ್ಮೊಮ್ಮೆ ಎಲ್ಲವು
ಬೇಕೆನಿಸುವುದು..
ಬೇಕೆನಿಸುವುದೆಲ್ಲಾ
ಬರಿ ಮಾಯೆ ಎಂದು ಮನ ಎಚ್ಚೆರಿಸುತಿಹುದು...

ಇಂತಿ,
ವೈರಾಗಿ... ನಾನಲ್ಲ..
ಶಿವಪ್ರಕಾಶ್
--

ಕೊನೆಯದಾಗಿ. ಡಿವಿಜಿ ಯವರ ಈ ಸಾಲು ನಿಮಗಾಗಿ...
"ವ್ಯರ್ಥವೀ ಜೀವನದ ಬಡಿದಾಟವೆನ್ನದಿರು | ಅರ್ಥವಹುದದು ನಿನಗೆ ಪೂರ್ಣದರ್ಶನದಿಂ"

Share/Save/Bookmark

13 comments:

  1. hahaha....eneno annisuttala...
    chennagide saalugaLu....

    ReplyDelete
  2. ಏನೋ ಒಂತರ ಅನ್ನಿಸೋಕೆ ಶುರುವಾಗಿದೆಯಲ್ಲ ಬಿಡು ಹಹಹ... ಚೆನ್ನಾಗಿದೆ ಸಾಲುಗಳು

    ReplyDelete
  3. ತರುಣ ವಯಸ್ಸಿನಲ್ಲಿ ಇಂತಹ ಕುದಿಕುದಿ ಸಹಜವಾದದ್ದೇ. ಕವನ ಚೆನ್ನಾಗಿದೆ.

    ReplyDelete
  4. vairaagi naanalla antane vairaagyadatte hogtidiraa sir hahhaha

    yavdakkoo swalpa hushaaraagiri

    ReplyDelete
  5. ಸೂಪರ್ ಸಾಲುಗಳು ... ಬಹಳ ಇಷ್ಟವಾಯ್ತು ಶಿವ ಪ್ರಕಾಶ್

    ReplyDelete
  6. ಪರಸ್ಪರ ವೈರುಧ್ಯ ಭಾವಗಳನ್ನು, ತಾಕಲಾಟಗಳನ್ನು ಚೆನ್ನಾಗಿ ಕವನಿಸಿದ್ದೀರಿ. ಅಭಿನ೦ದನೆಗಳು.

    ReplyDelete
  7. ನನಗ ನಿಮ್ಮ ವಯಸ್ಸಿನ್ಯಾಗ ಹಿಂಗ ಆಗಿತ್ತು ಮದುವಿ ಆದಮೇಲೆ ವಿರಾಗಿತನ ಬಂದ ಬರತದ
    ಕಾಳಜಿ ಮಾಡಬ್ಯಾಡ್ರಿ..

    ReplyDelete
  8. Anthu intu hosa ase bantu...

    Keep rocking Shivu..

    :P

    Nimmava,
    Raghu

    ReplyDelete
  9. ಚೆನ್ನಾಗಿದೆ :)

    ReplyDelete