Wednesday, October 19, 2011

ಏನು ಮಾಡೋದು.. ಇಂತ ಟೈಮಲ್ಲಿ..?

ಮೈಮರೆತು ಹೃದಯಾನ ಕೊಟ್ಟ..
ಸ್ಟ್ರಾಂಗ್ ಇದ್ದ ಹುಡುಗ ವೀಕಾಗಿ ಹೋದ..

ತುಂಬಾನೇ ಪ್ರೀತಿಸ್ತಾಳೆ..
ಹಿಂದಿರುಗಿಸಾಲಗದಸ್ಟು ಪ್ರೀತಿಯ ನೀಡಿ...
ಸಾಲಗಾರನೆನ್ನುವ ಪಟ್ಟವ ಕಟ್ತಾಳೆ..

ಬಡ್ಡಿನೇ ಕಟ್ಟಕಾಗದಿರೋ ಪ್ರೇಮಿ ನಾನು...
ಇನ್ನೂ ಯಾವಾಗ ತೀರಿಸಲಿ ಅವಳ ಅಸಲು ಗಂಟನ್ನು...

ಹ್ಯಾಗ ತೀರಿಸಲಿ ಈ ಸಾಲಾನ..
ಕೇಳಿದೆ ಏನ್ ಪರಿಹಾರ ಅಂತ ಗೆಳೆಯರನ್ನ,

ಒಬ್ಬ ಹೇಳಿದ 'ಸಾಲ ಜಾಸ್ತಿ ಆದರೆ ಆಗ್ಲಿ ಬಿಡು, ದೇವರವ್ನೆ ಹೃದಯ ಮಾರಿಬಿಡು.'
ಇನ್ನೊಬ್ಬ ಹೇಳಿದ 'ಯಾರಿಗೆಳೋಣ ನಂದು ಸೇಮು ಪ್ರಾಬ್ಲೆಮ್ಮು...'
ಕೊನೆಗೆ 'ಲೈಫು ಇಸ್ಟೇನೆ' ಅನ್ನೋಂಗಾಯ್ತು..

ಒಮ್ಮೊಮ್ಮೆ ಅನ್ಸುತ್ತೆ 'ತಗಲಾಕ್ಕೊಂಡೆ ನಾನು ತಗಲಾಕ್ಕೊಂಡೆ'..
ಮತ್ತೊಮ್ಮೆ ಅನ್ಸುತ್ತೆ 'Love makes life Beautiful'..

ಮೆಸೇಜ್ ಮಾಡೋಕೆ ಟೈಮಿಲ್ಲ...
ಹಾಗಂತ ಮಾಡದೆ ಇರೋಕಾಗೋಲ್ಲ..

ಪಾಪ ಬೇಗ ಮಲ್ಗೊಂಗಿಲ್ಲ...
ಲೇಟ್ ಆಗಿ ಅಂತು ಏಳೋಂಗಿಲ್ಲ..

ಲೇಟ್ ಆಯ್ತು ಇನ್ನೂ ಡಿಸ್ಟರ್ಬ್ ಮಾಡೋಲ್ಲ ಮಲಗು ಅಂತಾಳೆ,
ಮಲಗಿದರೆ ಮತ್ತೆ ಕನಸಲ್ ಬಂದು ಡಿಸ್ಟರ್ಬ್ ಮಾಡ್ತಾಳೆ...
ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಗೀಚೋ ಸಾಲುಗಳಿಗೆ ಸ್ಫೂರ್ತಿ ಆಗ್ತಾಳೆ..

ಇವಳು 'ನನ್ನವಳು' ಎನ್ನುವ ಮಧುರ ಭಾವನೆ ಒಂದೆಡೆ...
ಹೊಸ ಜವಾಬ್ದಾರಿ ಎನ್ನುವ ಎಚ್ಚರಿಕೆಯ ಗಂಟೆ ಇನ್ನೊಂದೆಡೆ...

ದೊಡ್ಡದಾಯ್ತು ಅನ್ಸುತ್ತೆ ಈ ಪದ್ಯ...
ಎದುರಿಗೆ ಸಿಗಿ, ಒಪ್ಪಿಸ್ತೀನಿ ಪೂರ್ತಿ ಗದ್ಯ...

ಪ್ರೀತಿಯಿಂದ..
ಶಿವಪ್ರಕಾಶ್

Share/Save/Bookmark

14 comments:

 1. ಇಂತ ಟೈಮ್ ಸರಿ ಹೋಗಬೇಕಾದರೆ ಒಳ್ಳೆ ಟೈಮ್ ಬರುತ್ತೆ ಬಿಡು ಹಹಾಹಹ.. ಒಳ್ಳೆದಾಗಲಿ

  ReplyDelete
 2. he he!! maja ide..:-) BTW.congrats!!(vishya gottille adru..;))..

  "ಲೇಟ್ ಆಯ್ತು ಇನ್ನೂ ಡಿಸ್ಟರ್ಬ್ ಮಾಡೋಲ್ಲ ಮಲಗು ಅಂತಾಳೆ,
  ಮಲಗಿದರೆ ಮತ್ತೆ ಕನಸಲ್ ಬಂದು ಡಿಸ್ಟರ್ಬ್ ಮಾಡ್ತಾಳೆ"..liked these lines

  ReplyDelete
 3. ಶಿವಪ್ರಕಾಶಾ...ಹತ್ಕತು ಬಿಡು ನಿಂಗೂ ಜ್ವರಾ...ಅಲ್ಕಲಾ ತಮ್ಮಾ...ಬಡ್ಡೆತ್ತದು ..ಈ ಪಿರೂತಿ ಗಿರೀತಿ ಅಂತ ಇಂದ್ಬಿಳ್ಬ್ಯಾಡ ಅಂತ ಬಡ್ಕಂಡೆ ಕ್ಕೇಳಿಯಾ ನನ್ ಮಾತಾ...ಈಗನ್ಬವ್ಸು....ನಮ್ಕೇಳ್ಭ್ಯಾಡ...

  ReplyDelete
 4. haha.....tagalaakondre ideya problemmu....!!

  ReplyDelete
 5. ತಗ್ಲ್ಹಾಕ್ಕೊಳ್ಳಿ ತಗ್ಲ್ಹಾಕ್ಕೊಳ್ಳಿ ಸ್ವಾಮೀ ...ಬೇಗಾ ....

  ReplyDelete
 6. ಶಿವ ಪ್ರಕಾಶ್;ನಿಮ್ಮ ತೊಳಲಾಟ ಅರ್ಥವಾಗುತ್ತೆ.ನಾವೂ ಅದೇ ರಸ್ತೇಲಿ ನಡೆದು ಬಂದವರು.ಪದ್ಯ ಸೊಗಸಾಗಿದೆ.ಆಲ್ ದಿ ಬೆಸ್ಟ್!

  ReplyDelete
 7. ಹ ಹ ಹ..ಚೆನ್ನಾಗಿದೆ ಶಿವು ನಿಮ್ಮ ಪದ್ಯ ಹಾಗೂ ಪರಿಸ್ಥಿತಿ. ಹಿತಕರವಾದ ತೊಳಲಾಟ ಅನುಭವಿಸುತ್ತಾ ಇದಿರಾ ಅಂತಾಯ್ತು..:) ಅದ್ಕೆ ಈ ನಡುವೆ ಬ್ಲೋಗು, ಬಜ್ಜು, ಫೇಸ್ಬುಕ್ ಕಡೆ ಕಾಣಸಿಗುತ್ತಿಲ್ಲ ನೀವು...ಸಾವಿರ ಶುಭಹಾರೈಕೆಗಳು ಈ ಅಕ್ಕನಿಂದ :)

  ReplyDelete
 8. ಹುಡುಗಾ..
  ನಿನ್ನ ಹೊಟ್ಟೆಕಿಚ್ಚಾಗುತ್ತಿದೆ...

  ಇಂಥಹ ಸಮಯ ಚೆನ್ನಾಗಿ ಉಪಯೋಗಿಸಿಕೊ..

  ಮತ್ತೆ ಬೇಕೆಂದರೆ ಬಾರದು..
  ಸಿಗದು ಈ ಮಧುರ ಕ್ಷಣಗಳು..

  ಜೈ ಜೈ ಹೋ !!

  ReplyDelete
 9. ಮಾಡಿದ್ದುಣ್ಣೊ ಮಾರಾಯ!

  ReplyDelete
 10. nice...and congrats shivaprakash :)

  ReplyDelete
 11. he he he ... nice one .. :) All the best :))

  ReplyDelete