Friday, December 4, 2015

Devon Avenue (Chicago)


ಯಾವದೇ ಊರಿಗೆ ಹೋದರೂ, ಯಾವುದೇ ರಾಜ್ಯಕ್ಕೆ ಹೋದರೂ, ಯಾವುದೇ ದೇಶಕ್ಕೆ ಹೋದರೂ, ಹೋಗುವ ಮುಂಚೆ "ಅಲ್ಲಿ ನಮ್ಮವರು ಇರುವರೇ?" ಎನ್ನುವ ಪ್ರಶ್ನೆ ನಮ್ಮಲ್ಲಿ ಹಲವರಿಗೆ ಮೂಡುತ್ತದೆ.

ನಮ್ಮವರು ಎನ್ನುವ ಪದ ಊರಿಂದ ಆಚೆ ಹೋದಾಗ ನಮ್ಮೂರಿನವರು, ರಾಜ್ಯದಿಂದ ಆಚೆ ಹೋದಾಗ ನಮ್ಮ ರಾಜ್ಯದವರು ಅಥವಾ ನಮ್ಮ ಭಾಷೆಯವರು, ಹಾಗೆ ದೇಶದಿಂದ ಆಚೆ ಹೋದಾಗ ನಮ್ಮ ದೇಶದವರು ಎಂದು ಬದಲಾಗುತ್ತದೆ. ನಮ್ಮವರು ಇದ್ದಾರೆ ಎನ್ನುವ ಪದ ನಮಗೆ ಒಂದು ರೀತಿಯ ಸಮಾಧಾನ ಕೊಡುತ್ತದೆ.

ನನ್ನ ಮಡದಿ ನಂದಿನಿ ಈ ಹಿಂದೆ ಶಿಕಾಗೋದಲ್ಲಿನ ಕನ್ನಡಿಗರ ಪರಿಚಯವನ್ನು ನಿಮಗೆ "ವಿದ್ಯಾರಣ್ಯ ಕನ್ನಡ ಕೂಟದ ಸಂಕ್ರಾಂತಿ ಹಬ್ಬ - 2015" ಎನ್ನುವ ಲೇಖನದಲ್ಲಿ ಪರಿಚಯಿಸಿದ್ದಳು. ನಾನು ಈ ಲೇಖನದಲ್ಲಿ ನಿಮಗೆ ಶಿಕಾಗೋದಲ್ಲಿ ಇರುವ ಡಿವಾನ್ ಅವೆನ್ಯೂ ಸ್ಥಳದ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತೇನೆ. ಇಲ್ಲಿ ನಿಮಗೆ ಭಾರತೀಯ ಹಾಗು ಪಾಕಿಸ್ತಾನಿ ಅಂಗಡಿಗಳು, ಹೋಟೆಲ್ ಗಳು ಕಾಣಸಿಗುತ್ತವೆ. ಈ ಸ್ಥಳದಲ್ಲಿ ಇದ್ದಾಗ ನಿಮಗೆ ನಿಮ್ಮ ದೇಶದಲ್ಲೇ ಇದ್ದೀರಾ ಎನ್ನುವ ಭಾವನೆ ಮೂಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕೆಳಗಿನ ಕೆಲವು ಚಿತ್ರಗಳನ್ನು ನೋಡಿದರೆ ನಿಮಗೆ ಆ ಸ್ಥಳದ ಬಗ್ಗೆ ಒಂದು ಚಿತ್ರಣ ಮೂಡಬಹುದು:
ಮೊದಲಿಗೆ ನಮ್ಮ "ಉಡುಪಿ ಪ್ಯಾಲೇಸ್":







ಉಡುಪಿ ಪ್ಯಾಲೇಸ್ ಹೋಟೆಲ್ ನಲ್ಲಿ ನಿಮಗೆ ದಕ್ಷಿಣ ಭಾರತದ ತಿಂಡಿ ಮತ್ತು ಉಪಹಾರಗಳು ದೊರೆಯುತ್ತದೆ. ಇದಕ್ಕೆ ಕರ್ನಾಟಕದ ಉಡುಪಿಯ ಹೆಸರಿದ್ದರೂ, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರಿಗೆ ಕನ್ನಡ ಗೊತ್ತಿರಲಿಲ್ಲ. ನಾನು ಮಾತನಾಡಿಸಿದ ಇಬ್ಬರಲ್ಲಿ ಒಬ್ಬರಿಗೆ ತೆಲುಗು ಹಾಗು ಇನ್ನೊಬ್ಬರಿಗೆ ಹಿಂದಿ ಗೊತ್ತಿತ್ತು. ಅದೊಂದು ವಿಷಯ ಬಿಟ್ಟರೆ ತುಂಬಾ ಚನ್ನಾಗಿ ಮಾತನಾಡಿಸಿದರು. ಉಪಹಾರದ ರುಚಿ ಅಧ್ಭುತ ಅಲ್ಲದಿದ್ದರೂ ಒಂದು ಲೆವೆಲ್ ಗೆ OK.

ನಮ್ಮ "Mysore Woodlands":



ಮೈಸೂರು ವುಡ್-ಲ್ಯಾಂಡ್ಸ ಹೋಟೆಲ್ ನಲ್ಲಿ ನಿಮಗೆ ದಕ್ಷಿಣ ಭಾರತದ ತಿಂಡಿ ಮತ್ತು ಉಪಹಾರಗಳು ದೊರೆಯುತ್ತದೆ. ಇಲ್ಲಿ ಕೆಲವರು ಕನ್ನಡದಲ್ಲಿ ಮಾತನಾಡಿದ್ದನ್ನು ಕೇಳಿ ಕುಶಿಯಾಯಿತು. ಇಲ್ಲಿಯ ಉಪಾಹಾರ ರುಚಿಯಾಗಿತ್ತು.

"Patel Brothers" Grocery shop:

ಪಾಟೇಲ್ ಬ್ರದರ್ಸ್ ನಲ್ಲಿ ದಿನಸಿ, ಹಣ್ಣು, ತರಕಾರಿ, ಬೇಕರಿ ತಿನಿಸುಗಳು, Ready to eat ಪ್ಯಾಕೆಟ್ ಗಳು ಹಾಗು ಹಲವು ದಿನನಿತ್ಯದ ಸಾಮಾನುಗಳು ದೊರೆಯುತ್ತಿದ್ದವು.

Hotel Annapurna:



India Book House:

ಇಲ್ಲಿ ತೆಲುಗು, ತಮಿಳು ಬಾಷೆ ಸೇರಿ ಹಲವು ಬಾಷೆಯ ಪುಸ್ತಕಗಳು ಇದ್ದವು ಆದರೆ ಕನ್ನಡದ ಒಂದೇ ಒಂದು ಪುಸ್ತಕ ಇಲ್ಲಿ ಇರದೇ ಇದ್ದದ್ದು ನಮಗೆ ಬಹಳ ಬೇಸರ ತರಿಸಿತು. ಮುಂದಿನ ಬಾರಿ ಹೋದಾಗ ಕೆಲವು ಕನ್ನಡ ಪುಸ್ತಕಗಳನ್ನು ನಾನೇ ಉಡುಗೊರೆಯಾಗಿ ಕೊಡಬೇಕೆಂದಿದ್ದೇನೆ.


Taj Sari Palace:




Other Shops:








Devon Street:




ನಾನು ಗಮನಿಸಿದಂತೆ, ಇಲ್ಲಿರುವ ಅಂಗಡಿಗಳಿಗೆ ಬರುವ ಗ್ರಾಹಕರು ತುಂಬಾ ಆರಾಮವಾಗಿ ಸಂತೋಷದಿಂದ ಅವರವರ  ಭಾಷೆಯಲ್ಲಿ ಮಾತನಾಡುತ್ತಿದ್ದರು. ಆದರೆ ಕೆಲವು ಕನ್ನಡಿಗರು ಕನ್ನಡ ಮಾತನಾಡಲು ಬಂದರೂ ಅಸ್ಟೊಂದು ಉತ್ಸಾಹ ತೋರಿಸದಿದ್ದದ್ದು ಬೇಸರ ತರಿಸಿತು. ನಿಜ ಎಲ್ಲರೂ ಹಾಗೆ ಇರುವುದಿಲ್ಲ ಆದರೆ ನಾ ಗಮನಿಸಿದ ಕೆಲವರಲ್ಲಿ ಕಂಡದ್ದು ಇದು. ಇದಕ್ಕೆ ಇರಬೇಕು "ಇಂಡಿಯನ್ ಬುಕ್ ಹೌಸ್"ನ ಅಂಗಡಿಯಲ್ಲಿ ಒಂದೇ ಒಂದು ಕನ್ನಡ ಪುಸ್ತಕ ಇಡದಿರುವುದು. ಕೆಲವು ಸಣ್ಣ ವಿಷಯಗಳನ್ನು ಬಿಟ್ಟರೆ ಇಲ್ಲಿ ನಿಮಗೆ "Home away from home" ಫೀಲ್ ಆಗುವುದಂತೂ ನಿಜ. 

ಈ "ಡಿವಾನ್ ಅವೆನ್ಯೂ" ರಸ್ತೆಯ ಒಂದು ಭಾಗಕ್ಕೆ "ಮಹಾತ್ಮ ಗಾಂಧಿ ಮಾರ್ಗ್" ಎಂದು ಹೆಸರಿಡಲಾಗಿದೆ. (ಮಾಹಿತಿ: https://en.wikipedia.org/wiki/Devon_Avenue_(Chicago))


ನಿಮ್ಮವ,
ಶಿವಪ್ರಕಾಶ್

Share/Save/Bookmark

4 comments:

  1. ನಮ್ಮ ಕನ್ನಡಿಗರಿಗೆ ಓದುವ ಹವ್ಯಾಸ ಇಲ್ಲವೇ ಇಲ್ಲ ಎನ್ನಬಹುದೆ!?

    ReplyDelete
    Replies
    1. ಓದುವ ಹವ್ಯಾಸ ಇದೆ ಸರ್.. ಆದರೆ ಕನ್ನಡ ಓದುವುದಕ್ಕೆ ಹಾಗು ಮಾತನಾಡುವುದಕ್ಕೆ ಮುಜುಗರ ಇರಬೇಕು.. ಏನೇ ಇರಲಿ ಅವರು ಬದಲಾಗಲಿ ಎಂದು ಆಶಿಸುತ್ತೇನೆ.

      Delete
  2. ಒಳ್ಳೆಯ ಚಿತ್ರ ಲೇಖನ ಶಿವಪ್ರಕಾಶ್ , ಬಹಳ ಖುಷಿಯಾಯ್ತು, ವಿವರಣೆ ಚೆನ್ನಾಗಿದೆ ನಾವೇ ಅಲ್ಲಿ ಇದ್ದು ನೋಡಿದಂತಾ ಅನುಭವ ನೀಡುವ ಚಿತ್ರಗಳು, ಮತ್ತಷ್ಟು ಬರಲಿ ನಿಮ್ಮ ಅನುಭವದ ಪ್ರವಾಸದ ಲೇಖನಗಳು

    ReplyDelete
    Replies
    1. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್.. :) :)

      Delete