Tuesday, May 31, 2016

Reynolds


ಇಂದು ಆಫೀಸ್ ನಲ್ಲಿ ಹೊಸ Note Pad ತಗೊಳೋಕೆ ಹೋದೆ...
Store in-charge ಹತ್ರ "Note Pad" ಕೇಳಿದೆ...
Store in-charge ನೋಟ್ ಪ್ಯಾಡ್ ಕೊಡ್ತಾ, ಬಗೆಬಗೆಯ ಪೆನ್ ತೋರಿಸಿ "ಪೆನ್ ಬೇಕಾ?" ಎಂದ...

ಹಾಗೆ ಎಲ್ಲಾ  ಬಗೆಬಗೆಯ ಬಣ್ಣ ಬಣ್ಣದ ಪೆನ್ನುಗಳನ್ನು ನೋಡುತ್ತಿರುವಾಗ,......
ಎಲ್ಲಾ ಪೆನ್ನುಗಳ ನಡುವೆ Reynolds ಬಾಲ್ ಪೆನ್ ಕಾಣಿಸಿತು... !!!!
ಹಾಗೆ ಒಂದೆರೆಡು ನಿಮಿಷ ನಾನು ಅಲ್ಲಿ ನಿಂತಿರುವುದನ್ನು ಮರೆತು, ನನ್ನ ಬಾಲ್ಯಕ್ಕೆ ಹಾರಿದೆ...


ಬಾಲ್ಯದಲ್ಲಿ ಮೊದಲು ನನ್ನ ಕೈಗೆ ಸಿಕ್ಕದ್ದು ಬಳಪ...
ನಂತರ ಸಿಕ್ಕಿದ್ದು ಸೀಸ ಕಡ್ಡಿ...
ಅನಂತರ ಸಿಕ್ಕಿದ್ದು ಯಾವುದೋ ಪೆನ್ನು...
ಅನಂತರ ಬಹಳ ಆಸೆ ಪಟ್ಟು ಕೊಂಡಿದ್ದು Reynolds ಬಾಲ್ ಪೆನ್..
ಅನಂತರ ಇಂಕ್ ಪೆನ್ ಇಷ್ಟ ಪಟ್ಟೆ....
ಹಾಗೆ ಒಂದು ಪೆನ್ ಆದ್ಮೇಲೆ ಇನ್ನೊಂದು ಪೆನ್ ಇಷ್ಟ ಪಟ್ಟು ತಗೊಳ್ತಾ ಹೋದೆ...



ನಾನು ಮೊದಲ ಬಾರಿ Reynolds ಪೆನ್ ಹಿಡದಿದ್ದು ಐದನೇ ತರಗತಿಯಲ್ಲಿ ಇದ್ದಾಗ ಅನ್ಸುತ್ತೆ...
ಶಾಲೆಯಲ್ಲಿ ಅದೆಸ್ಟೋ ಹುಡುಗರು ಸೀಸಕಡ್ಡಿ ಹಿಡ್ಕೊಂಡು ಬರಿತಾ ಇದ್ರೂ...
Reynolds ಪೆನ್ ಇದ್ದದ್ದು ಕೆಲವೇ ಕೆಲವರ ಬಳಿ..
ಅಂದು ನಾನು ಮೊದಲ ಬಾರಿಗೆ ಆ ಪೆನ್ ಹಿಡಿದಾಗ ಏನೋ ಒಂದು ಹೆಮ್ಮೆ..
ನನ್ನ ಹತ್ರನೂ Reynolds ಪೆನ್ ಇದೆ ಎನ್ನುವ ಹೆಮ್ಮೆ...
ಈ ಎಲ್ಲ ಕಾರಣಗಳಿಂದಾಗಿ ಅಂದು ಈ ಪೆನ್ ನನಗೆ ಬಹಳ ವಿಶೇಷವಾಗಿ ಕಾಣುತ್ತಿತ್ತು...


ಹಾಗೆ ಬೆಳೆಯುತ್ತಿದ್ದಂತೆ Reynolds ಹೋಗಿ Cello, Parker ಹಾಗೆ ಹಲವು ಹೊಸ ಮಾದರಿಯ ಪೆನ್ನುಗಳು ನನ್ನ ಕೈ ಸೇರಿದವು... 
ಏನೇ ಹೇಳಿ ಅಂದು Reynolds ನನ್ನ ಕೈಗೆ ಸಿಕ್ಕಾಗ ಪಟ್ಟ ಹೆಮ್ಮೆ....!!!!,  ಇಂದು ಅದೆಸ್ಟೋ ಹಣ ಕೊಟ್ಟು ಪೆನ್ ಕೊಂಡರು ನನಗೆ ಸಿಗುವುದಿಲ್ಲ..



"ಸರ್, ಯಾವ ಪೆನ್ ಬೇಕು...?" ಎಂದು Store in-charge ನನ್ನ ಅಲುಗಾಡಿಸಿ ಕೇಳಿದಾಗಲೇ ನಾನು ವಾಸ್ತವಕ್ಕೆ ಬಂದದ್ದು..
ಪ್ರಜ್ಞೆಯಿಂದ ಹೊರಬಂದವನಂತೆ "ಹಾಂ..." ಎಂದೆ...
"ಯಾವ ಪೆನ್ ಬೇಕು ಸಾರ್...?"
"Reynolds ಬಾಲ್ ಪೆನ್.. " ಕೊಡಿ ಎಂದು ಮುಗುಳ್ನಗುತ್ತಾ ಕೇಳಿದೆ...



ಅಂದಹಾಗೆ, ಐದನೇ ಕ್ಲಾಸ್ ಗು ಇಂದಿಗೂ ಸುಮಾರು 23-24 ವರ್ಷಗಳ ಅಂತರ..
ಅದೆಸ್ಟೋ ಪೆನ್ನುಗಳು ಹಿಡಿದ ನಂತರ ಇಂದು ಮತ್ತೆ Reynolds ಬಾಲ್ ಪೆನ್ ಹಿಡಿತಾ ಇದೀನಿ..
ಅಂದಿನಂತೆ ಇಂದು ಕೂಡ ಯಾಕೋ ಈ ಪೆನ್ನು ಬಹಳ ವಿಶೇಷವಾಗಿ ಕಾಣಿಸ್ತಾ ಇದೆ...


ವಯಸ್ಸಾದಂತೆ(Seriously... ಹ್ಹ ಹ್ಹ ಹ್ಹ) ನಾವು ನೋಡುವ ವಸ್ತುಗಳು ನಮಗೆ ವಿಭಿನ್ನವಾಗಿ ಕಾಣಿಸುತ್ತವೆ ಅಂತಾರೆ... ಅದಕ್ಕೆ ಅನ್ಸುತ್ತೆ ನನಗೆ Reynolds ಬಾಲ್ ಪೆನ್ ವಿಶೇಷವಾಗಿ ಕಾಣಿಸ್ತಾ ಇದೆ...


“The simple things are also the most extraordinary things, and only the wise can see them.” -- Paulo Coelho







Share/Save/Bookmark

8 comments:

  1. ಬಳಪದಿಂದ, ಸೀಸದ ಕಡ್ಡಿ, ಆಬಳಿಕ ಪೆನ್ನು ಈ evolution ಇದೆಯಲ್ಲ, ಇದು ಶಾಲಾಮಕ್ಕಳಿಗೆ ಸಂತಸವನ್ನು ಕೊಡುವ ಬೆಳವಣಿಗೆ. ನನ್ನದೂ ಇಂತಹ ಲೇಖನಿಯಾತ್ರೆಯೇ! ನಿಮ್ಮ ಲೇಖನ ಓದಿ ಸಂತಸವಾಯಿತು ಹಾಗು ನನ್ನ ಭೂತಕಾಲ ನೆನಪಾಯಿತು. ಧನ್ಯವಾದಗಳು.

    ReplyDelete
  2. Nenapina putagalige nenapannu tandukoduva lekhana.... esto nenapagalu
    Nenapaguttive....dhanyavadagalu bhava....

    ReplyDelete
  3. ನಾನು ಯಾವಾಗ್ಲೂ ಆ ಪೆನ್ ಮೇಲೆ ಹೆಸರು ಕೆತ್ತುತ್ತಲಿದ್ದೆ ಹಹಹ. Reynolds ಪೆನ್ ಎಷ್ಟು ಚೆಂದ ಬರೆಯುತ್ತಿತ್ತು ಅಲ್ವಾ

    ReplyDelete