Monday, January 9, 2017

Random Thoughts: ಕೆಲವು ಪುಟಗಳೇ ಹಾಗೆ...


ಕೆಲವು ಪುಟಗಳೇ ಹಾಗೆ...

ಓದುಗನನ್ನು ಮುಂದೆ ಸಾಗಲು ಬಿಡುವುದಿಲ್ಲ... ಅಲ್ಲೇ ನಿಲ್ಲಿಸಿಬಿಡುತ್ತವೆ... ಬಹುಶಃ ಆ ಪುಟಗಳಿಗೆ ಯಾವುದೋ ವಾಸ್ತು ದೋಷ ಇರಬೇಕು ಅನ್ಸುತ್ತೆ... ಇಂತಹ ಪುಟಗಳಲ್ಲಿ ಸಿಕ್ಕಿ ನಲುಗುವವರಲ್ಲಿ ನಾನು ಒಬ್ಬ. ನನ್ನ ಈ ಸಮಸ್ಸೆ, ನಿನ್ನೆ ಮೊನ್ನೆಯದಲ್ಲ. ಸ್ಕೂಲು ಕಾಲೇಜಿನಲ್ಲಿ ಇದ್ದಾಗಿನಿಂದಲೂ ಇದೆ ಸಮಸ್ಸೆ. ಇದರಿಂದ ಹೊರಬರಲು ಪ್ರಯತ್ನಿಸಿ, ಪ್ರಯತ್ನಿಸಿ, ಸಾಕಾಗಿ ಹೋಗಿದೆ.

ನನ್ನದೊಂದು ಕೆಟ್ಟ ಚಾಳಿ. ಯಾವಾಗಲೂ ಮೊದಲನೇ ಪುಟದಿಂದ ಶುರು ಮಾಡಿ ಕೊನೆ ಪುಟ ತಲುಪುವುದು. ಮಧ್ಯೆ ಎಲ್ಲಾದರೂ ಮೇಲೆ ಹೇಳಿದ ಸಮಸ್ಸೆ ಬಂದರೆ, ಅದರಿಂದ ಹೊರಬರಲು ನಾ ಪಡುವ ಕಷ್ಟ ಅಷ್ಟಿಷ್ಟಲ್ಲ.

ನನ್ನ ಬಹಳಷ್ಟು ಸ್ನೇಹಿತರಿಗೆ ಈ ಸಮಸ್ಸೆ ಇಲ್ಲ. ಅವರು ಅಂತಹ ಪುಟ ಬಂದೊಡನೆ, JUMP ಮಾಡಿ, ಬೇರೆ ಪುಟಕ್ಕೆ ಹಾರಿಬಿಡ್ತಾರೆ... "ಲೋ ಹ್ಯಾಗೋ ಜಂಪ್ ಮಾಡ್ತೀರಾ ?, ಆ ಪುಟಕ್ಕೂ, ಈ ಪುಟಕ್ಕೂ link miss ಆಗೋಲ್ವಾ ?" ಎಂದು ಕೇಳಿದರೆ ಅವರು "ಅಲ್ಲೇ ಸಿಕ್ಕು ಒದ್ದಾಡುವ ಬದಲು, JUMP ಮಾಡುವುದೇ ಒಳಿತು" ಅಂತಾರೆ. ಇನ್ನು ಕೆಲವು ಮಹಾಶಯರು, Random ಆಗಿ Chapter ತೆಗೆದು ಓದ್ತಾರೆ. ಅವರಿಗೊಂದು Hats Off..

ನನ್ನ ಪ್ರಕಾರ ಅವರ ಈ ವಿಧಾನ ಸೂಕ್ತ ಅನ್ನಿಸುತ್ತೆ. ಸುಮ್ಮನೆ ಅಂತಹ ಪುಟದಲ್ಲಿ ಸಿಕ್ಕಿ ನಲುಗುವ ಬದಲು, ಜಂಪ್ ಮಾಡುವುದೇ ವಾಸಿ.

ಇನ್ನೂ ಕಾದಂಬರಿ ಓದುವಾಗಲಂತೂ, ಯಾವುದೋ ವಿಷಯದಲ್ಲಿ ಕಳೆದು ಹೋಗಿ ಮತ್ತೆ ವಾಪಸ್ ಬಂದು ಶುರು ಮಾಡುವ ವೇಳೆಗೆ, ಮೂಲ ಕಥೆಯೇ ಮರೆತು ಹೋಗಿರುತ್ತದೆ... 
ಇದು ಕಾದಂಬರಿಯ ಶ್ರೇಷ್ಠತೆ ಇರಬಹುದು. ಆದರೆ ನನ್ನಂತವರಿಗೆ... ಇದು ಜೇಡರಬಲೆ ....!!!



Share/Save/Bookmark

2 comments:

  1. ಒಂದು ಪುಸ್ತಕವನ್ನು ಓದುವಾಗ ಕೆಲವೊಮ್ಮೆ high jump, ಕೆಲವೊಮ್ಮೆ long jump ಮಾಡುವುದು ಅನಿವಾರ್ಯವಾಗುತ್ತದೆ. ಆದರೆ, ಮಾಡುತ್ತ, ಮಾಡುತ್ತ ಮಕಾಟೆ ಬೀಳಬಾರದಷ್ಟೆ!

    ReplyDelete