Tuesday, September 15, 2009

ಮಂಜ, ಮಹೇಶ ಹಾಗು ಹೊಸ ಪಲ್ಸರ್..

ಮೊನ್ನೆ ನಮ್ಮ ಎದುರುಮನೆ ಮಂಜ, ಹೊಸ ಪಲ್ಸರ್ ಬೈಕ್ ಖರೀದಿಸಿ ಅದನ್ನು ತರುವುದಕ್ಕೆ ನಮ್ಮ ಮಹೇಶನ ಜೊತೆ ಹೋದ.
ಸರಿ. ಹೊಸ ಗಾಡಿಗೆ ಏನೇನು ಹಾಕಿಸಬೇಕೋ ಅದನ್ನೆಲ್ಲಾ ಹಾಕಿಸಿಕೊಂಡರು.
ಈಗ ಹೊಸ ಗಾಡಿ ರೆಡಿಯಾಗಿದೆ.
ಶೋರೂಮಿನವರು ಗಾಡಿಯ ಕೀಯನ್ನು ನಮ್ಮ ಮಂಜನ ಕೈಗಿಟ್ಟರು.
ಅವನು ಆ ಗಾಡಿಗೆ ಕೀ ಇಂದ ಗಾಡಿಯನ್ನು ಸ್ಟಾರ್ಟ್ ಮಾಡಿ, ಮಹೇಶನಿಗೆ ಓಡಿಸಲು ಹೇಳಿದ.
ಆಗ ನಮ್ಮ ಮಹೇಶ "ಪರವಾಗಿಲ್ಲ ನೀನೆ ಓಡಿಸೋ. " ಎಂದ.
ಮಂಜ: "ನೀನೆ ಓಡಿಸೋ" ಎಂದ.
ಮಹೇಶ: "ಲೋ, ಇದು ನಿನ್ನ ಹೊಸ ಗಾಡಿ, ಮೊದಲು ನೀನೆ ಓಡಿಸು".
ಆಗ ನಮ್ಮ ಮಂಜ "ಗುರುವೇ, ನನಗೆ ಗಾಡಿ ಓಡಿಸಲು ಬರುವುದಿಲ್ಲ, ಅದಕ್ಕೆ ನಿನ್ನನ್ನು ಕರೆದುಕೊಂಡು ಬಂದಿದ್ದು" ಎಂದುಬಿಡುವುದೇ ?
Share/Save/Bookmark

19 comments:

  1. ಮತ್ತೆಂತಕೆ ಮಂಜ ಬೈಕ್ ಖರೀದಿ ಮಾಡಿದ್ದಂತೆ??? ಇದೊಳ್ಳೇ ಕಥೆ ಆಯ್ತಲ್ಲ!!!

    ReplyDelete
  2. :-) ಶಿವಪ್ರಕಾಶ ಸರ್,
    ಸ್ನೇಹಿತರಿದ್ದರೆ ಅ೦ತವರು ಇರಬೇಕು . :-) :-)

    ReplyDelete
  3. ಶಿವಪ್ರಕಾಶ,
    ಸಣ್ಣ ಕತೆಯಲ್ಲೇ ದೊಡ್ಡದಾಗಿ ನಗಿಸುತ್ತೀರಿ!

    ReplyDelete
  4. ಹೇಗೊ ಮಹೇಶನಿಗೆ ಚಾನ್ಸ್ ಸಿಕ್ಕಿತ್ತಲ್ಲ....
    ಚೆನ್ನಾಗಿತ್ತು....
    ಮಹೇsh !

    ReplyDelete
  5. ಹ್ಹ ಹಾ ಹ್ಹ ಹಾ..

    ಕುಣಿಯೋಕೆ ಬರದಿದ್ದರೂ ನೆಲ ಚೆನ್ನಾಗಿರಬೇಕು !

    ಹ್ಹ ಹಾ ಹ್ಹ ಹಾ..

    ReplyDelete
  6. ಶಿವಪ್ರಕಾಶ್ ಅವರೇ,
    ನಕ್ಕು ನಕ್ಕು ಸಾಕಾಯಿತು! ಇನ್ನು ಕಾಮೆಂಟಿಸಲು ಪದಗಳೇ ಇಲ್ಲ.......!!

    ReplyDelete
  7. ಮಂಜ ಎಲ್ಲಿ ಬೆಂಗಳೂರಿನಲ್ಲಿದಾನಾ ? ಸಮಾನ ದುಃಖಿ ನಾನು ಭೇಟಿಯಾಗಬೇಕು....!

    ReplyDelete
  8. Yaro adu manJa ...!!!!!!!!! :-)

    Indra

    ReplyDelete
  9. ಶಿವು ಅವರೇ,
    ಹೌದು ರೀ, ಮಹೇಶನಿಗೆ ಒಳ್ಳೆ ಚಾನ್ಸ್...
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ಸುಮನ ಅವರೇ,
    ಅದೇ ಗಾಡಿನಲ್ಲಿ ಪ್ರಾಕ್ಟೀಸ್ ಮಾಡಿ, ಆಮೇಲೆ ಆ ಗಾಡಿನಲ್ಲಿ ಆಫೀಸ್ಗೆ ಹೋಗ್ತಾನಂತೆ. ಸ್ವಲ್ಪ ವಿಚಿತ್ರ ಅಲ್ವಾ ?
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ರೂಪ ಅವರೇ,
    ಹೌದು ರೀ. ಒಳ್ಳೆ ಹುಡುಗರು... :)
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ಗುರುಮೂರ್ತಿ ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ಸುನಾಥ್ ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ಮನಸು ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ಮಹೇಶ್ ಅವರೇ,
    ಹೌದು ರೀ. ನಮ್ಮ ಮಹೇಶನದು ಒಳ್ಳೆ ಚಾನ್ಸ್....
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ಹಾಯ್ ಬಸವ,
    ಮಂಜ ಸ್ವಲ್ಪ ನಿನ್ನ ತರಹನೇ ಕಣೋ...
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    SSK ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    umesh desai ಅವರೇ,
    ಹೌದು ರೀ. ಮಂಜ ನಮ್ಮ ಎದುರುಮನೆಯಲ್ಲೇ ಇರೋದು.
    ನೀವು ಬೆಂಗಳೂರಿಗೆ ಬಂದ್ರೆ ನಮ್ಮ ಮನೆಗೆ ಬನ್ನಿ, ಮಂಜನನ್ನು ತೋರಿಸ್ತೀನಿ...
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ಹಾಯ್ ಇಂದ್ರ ,
    ಅವನು ನಮ್ಮ ಇದುರುಗಡೆ ರೂಂನಲ್ಲಿ ಇದಾನೆ... ಮೊನ್ನೆ ಹೊಸ ಗಾಡಿ ತಗೊಂಡ.
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  10. ನೀವು ಅವನಿಗೆ ಕಾರು ಕೊಳ್ಳಲು ಸಲಹೆ ನೀಡಿ, ಬೇಕಿದ್ದರೆ ನಾನು ಜೊತೆ ಬರುವೆ!! (ನಾನು ಇ ಕೂಡಲೆ ಡ್ರೈವಿ೦ಗ್ ಕ್ಲಾಸ್ ಗೆ ಸೇರುವೆ!!)

    ReplyDelete
  11. ಚೆನ್ನಾಗಿದೆ.
    ಅಂತೂ ಹುಚ್ಮುಂಡೇ ಮದ್ವೇಲಿ ಉಂಡೋನೆ ಜಾಣ ಅನ್ನೋ ಹಾಗೆ ಆಯ್ತಲ್ಲ ನಮ್ಮ ಮಹೇಶನ ಕತೆ

    ReplyDelete
  12. ಹಹಾ.... ಚೆನ್ನಾಗಿದೆ...!

    ReplyDelete
  13. ಹಹಹ .. ಚೆನ್ನಾಗಿದೆ ನಿಮ್ಮ ಪಲ್ಸರ್ ಕಥೆ... ಓದಿ ಹಿಂದೊಮ್ಮೆ ಆಟೋ ಹಿಂದ್ಗಡೆ ಓದಿದ ಬರಹ ನೆನಪಾಯಿತು.. ಏನ್ ಬರದಿತ್ತು ಗೊತ್ತೇ?? "ಪ್ರೀತ್ಸೆ ಅಂದ್ರೆ ಪೋಲ್ಸರ್ ತಗೊಂಬಾ ಅಂದ್ಲು "...

    ReplyDelete
  14. ಉದಯ್ ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ಬಾಲು ಅವರೇ,
    ನಿಮ್ಮ ಸಲಹೆಯನ್ನು ಅವನಿಗೆ ಹೇಳುತ್ತೇನೆ..
    ಅವನು ಕಾರ್ ತಂದಾಗ ನೀವೇ ಅದಕ್ಕೆ ಚಾಲಕ :P
    ನೀವು ಅದಸ್ತು ಬೇಗ ಡ್ರೈವಿಂಗ್ ಕಲೀರಿ... :D
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ರೂಪ ಅವರೇ,
    ನಮ್ಮ ಮಹೇಶನದು ಒಳ್ಳೆ ಚಾನ್ಸ್ ಅಲ್ವಾ...
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ದಿಲೀಪ್ ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ದಿನಕರ ಮೊಗೇರ ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    =========

    ರವಿಕಾಂತ ಗೋರೆ ಅವರೇ,
    ಹ್ಹಾ ಹ್ಹಾ ಹ್ಹಾ.. ನೀವು ಹೇಳಿದ ಆಟೋ ಕೊಟ್ ತುಂಬಾ ಚನ್ನಾಗಿದೆ..
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete