Monday, September 21, 2009

ನಮ್ಮ ಮಾವ

ಮೈಸೂರು.
ಇಲ್ಲಿ ನಾನು ಕಳೆದಿದ್ದು ಸರಿಯಾಗಿ ಮೂರು ವರ್ಷಗಳು.
ಆದ್ರೆ ನೆನಪುಗಳು ಸಾವಿರಾರು. ನನ್ನ ನೆನಪಿನ ಪುಟದ ಇನ್ನೊಂದು ಹಾಳೆ ನಿಮ್ಮ ಮುಂದೆ.
ಒಂದ್ಸಾರಿ ಬೋಗಾದಿಯಿಂದ (ಮೈಸೂರಿನಲ್ಲಿ ಇರುವ ಒಂದು ಬಡಾವಣೆ) ನಾನು, ನಟ, ರಾಘು ಮೂವರು ಸೇರಿ ತುರ್ತಾಗಿ ಜಯಲಕ್ಷ್ಮಿಪುರಂ ಕಡೆ ಹೋಗಬೇಕಾಗಿತ್ತು,
ಬೊಗದಿಯಿಂದ ಜಯಲಕ್ಷ್ಮಿಪುರಂಗೆ ಜಾಸ್ತಿ ಅಂದ್ರು ೩ ಕಿಲೋಮೀಟರು ಆಗಬಹುದು.
ಆದ್ರೆ ಸರಿಯಾದ ಬಸ್ಸುಗಳ ವ್ಯವಸ್ಥೆ ಇರ್ಲಿಲ್ಲ.
ಸದ್ಯಕ್ಕೆ ಇದ್ದದ್ದು ನನ್ನದೊಂದು ಬೈಕ್...
ಮೂವರು ಒಂದು ಬೈಕಿನಲ್ಲಿ ಹೋಗುವುದು ಅಪರಾಧ. ಆದ್ರೆ ಏನು ಮಾಡೋದು ನೀವೇ ಹೇಳಿ, ೩ ಕಿಲೋಮೀಟರು ಹೋಗೋಕೆ ಬಸ್ಸಿಗಾಗಿ ಗಂಟೆಗಳ ಕಾಲ ಕಾಯಬೇಕಾ ...?
ಸರಿ, ಮೂವರು ಒಂದು ಬೈಕಿನಲ್ಲಿ ಕುಳಿತು ಹೊರೆಟೆವು..
ಮುಖ್ಯರಸ್ತೆಯಲ್ಲಿ ಹೋದ್ರೆ ಮಾವ ಇರ್ತಾನೆ ಅಲ್ವಾ... ? (ಮಾವ ಅಂದ್ರೆ ನಮ್ಮ ಹುಡುಗರ ಭಾಷೆಯಲ್ಲಿ ಪೋಲಿಸ್ ಅಂತ :D ).
ಆದಕಾರಣ ಅಡ್ಡದಾರಿಯಲ್ಲಿ ಹೋಗೋದಕ್ಕೆ ಶುರು ಮಾಡಿದ್ವಿ..
ನಮ್ಮ ಹಣೆಬರಹಕ್ಕೆ ಮಾವ ಅಡ್ಡ ರಸ್ತೆಯಲ್ಲಿ ಅಡ್ಡ ಹಾಕೊಂಡು ಕಾಯ್ತಾ ಇದ್ದ..
ತಪ್ಪಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾಗ ನಮ್ಮನ್ನು ನಿಲ್ಲಿಸಿಬಿಟ್ಟ..
ಗಾಡಿ ಹೊಡೆಯುತ್ತಿದ್ದ ನಾನು, ಬೇರೆ ದಾರಿಯಿಲ್ಲದೆ ಗಾಡಿ ನಿಲ್ಲಿಸಿದೆ....
ಮಾವ ನಮ್ಮನ್ನು ಪ್ರೀತಿಯಿಂದ ಕರೆದು, ಗಾಡಿಯ ಕೀಲಿಯನ್ನು ಕೈಗೆತ್ತಿಕೊಂಡು... "ಕಟ್ಟಪ್ಪ ಫೈನ್" ಅಂದ..
(ನಾನು ಮನಸಲ್ಲೇ ಅಂದುಕೊಂಡೆ, ನೀವು (ಪೊಲೀಸರು) ಹತ್ತು ಹತ್ತು ಜನ ಒಂದೇ ಬೈಕಿನಲ್ಲಿ ಹೋದರೆ ಪೆರೇಡ್.. ನಾವು ಹೋದರೆ ಅಪರಾಧ... P )
ನಾವು ಏನು ಕೇಳಿಕೊಂಡರು ಮಾವ ಬಿಡುವ ಸ್ತಿತಿಯಲ್ಲಿರ್ಲಿಲ್ಲ..
ಬೇರೆ ದಾರಿ ಇಲ್ಲದೆ ಫೈನ್ ಕಟ್ಟಿದ್ವಿ...
ರಸೀದಿ ಕೊಟ್ರೋ, ಇಲ್ವೋ ಅಂತ ಸರಿಯಾಗಿ ನೆನಪಿಲ್ಲ....
ಸರಿ, ಮತ್ತೆ ಮೂವರು ಬೈಕ್ ಹತ್ತಿ ಹೊರಡುತ್ತಿರುವಾಗ....
ಅವರ ಗುಂಪಿನಲ್ಲೇ ಇದ್ದ ಇನ್ನೊಬ್ಬ ಮಾವ "ನಿಲ್ಲಿಸ್ರೋ..." ಅಂತ ಕೂಗಿದ..
ನಾವು ... "ಸಾರ್, ನಾವು ಆವಾಗಲೇ ಫೈನ್ ಕಟ್ಟಿದಿವಿ"
"ಫೈನ್ ಕಟ್ಟಿದ ಮಾತ್ರಕ್ಕೆ ನಮ್ಮ ಮುಂದೇನೆ ಟ್ರಿಪ್ಸ್ ಹೋಗೋದ...?... ಸ್ವಲ್ಪ ಮುಂದೆ ಹೋಗಿ, ಹತ್ತಿ..." ಅಂದ
ನಮ್ಮ ಮಾವನ ಸಲಹೆಯಂತೆ ಮುಂದೆ ಹೋಗಿ ಮತ್ತೆ ಮೂವರು ಒಂದೇ ಬೈಕಿನಲ್ಲಿ ಹತ್ತಿ ಹೊರಟೆವು...

ಮನವಿ: ಈ ಲೇಖನ ಯಾರಾದ್ರೂ ಪೋಲೀಸಿನವರು ಓದಿದ್ರೆ ಕ್ಷಮಿಸಿಬಿಡಿ.. ಏನೋ ಹುಡುಗ ತಿಳಿಯದೆ ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿದಾನೆ ಅಂತ ಹೊಟ್ಟೆಗೆ ಹಕೊಂಬಿಡಿ... ಇಂತಿ ನಿಮ್ಮ ಪ್ರೀತಿಯ ಆಳಿಯ...
Share/Save/Bookmark

19 comments:

 1. ಹಾಯ್,
  ಮಾವ ಕ್ಹಮಿಸಿಬಿದಬಹುದು ಆದ್ರೆ ಅವರಿಗೆ ಮಗಳಿದ್ರೆ ಕಷ್ಟ.... ನೀವು ಹೇಳಿದ ಪ್ರಸಂಗ ಎಲ್ಲರಿಗು ಆಗಿರತ್ತೆ, ನೀವು ಹೇಳಿದ ರೀತಿ ಮಾತ್ರ ಭಿನ್ನವಾಗಿತ್ತು....

  ReplyDelete
 2. ರೀಸೆಂಟ್ಆಗಿ ಕ್ರೆಡಿಟ್ ಕಾರ್ಡ್ ಪೇಮೆನ್ಟೂ accept ಮಾಡ್ತಾ ಇದಾರಂತೆ ಸ್ವಲ್ಪ ಹುಷಾರು...!!!

  http://eyeclickedit.blogspot.com/

  ReplyDelete
 3. ನಿಮ್ಮ ಮಾವ ಉದಾರಿ ಬಿಡಿ... ಸ್ವಲ್ಪ ಮುಂದೆ ಹೋಗಿ ಹತ್ತಿ ಅಂತ ಅವ್ರೆ ಅಂದ್ರಾ? !!! ಮಸ್ತ್ ಇದೆ :)

  ReplyDelete
 4. ರಸೀದಿ ಕೊಡದೆ ಇದ್ದರೆ, ನಿಮಗೆ ಅಲ್ಲೇ ಪರ್ಮಿಶನ್ ಕೊಟ್ಟು ಬಿಡುತ್ತಿದ್ದರು ಟ್ರಿಬಲ್ ರೈಡಿಂಗಕ್ಕೆ. ಅಂದ್ಮೇಲೆ ರಸೀದಿ ಕೊಟ್ಟಿರಲೇ ಬೇಕು.

  ReplyDelete
 5. ಶಿವಪ್ರಕಾಶ್ ಅವರೇ,
  ಚೆನ್ನಾಗಿದೆ ನಿಮ್ಮ ಮಾವ ಅಳಿಯನ ಅಡ್ಜಸ್ಟ್ಮೆಂಟ್ ! ನೀವು ಸಿಗಾಕೋಬಾರದೂ ಅಂತ ಶಾರ್ಟ್ಕಟ್ ನಲ್ಲಿ ಹೋದರೆ ಅಲ್ಲೇ ಕಾದಿದ್ದು ಹಿಡಿದರು ಮಾವ, ಅದೂ ಮೈಸೂರಲ್ಲಿ!! ಇಲ್ಲಿ ಬೆಂಗಳೂರಿನಲ್ಲಿ, ಕೆಲವು ವರ್ಷಗಳ ಹಿಂದೆ, ನನ್ನ TVS ನಲ್ಲಿ ನಾವು ಮೂವರು ಗೆಳತಿಯರು ಎಷ್ಟೆಲ್ಲ ಸುತ್ತಾಡಿದೀವಿ ಗೊತ್ತಾ?! ಆದರೆ ಪುಣ್ಯಕ್ಕೆ ಒಂದು ಸಲಾನೂ ಸಿಗಾಕ್ಕೊಳ್ಳಲಿಲ್ಲ. (ಈ ವಿಷಯ ಯಾರಿಗೂ ಹೇಳಬೇಡಿ ಆಯಿತಾ.... ವಿಶೇಷವಾಗಿ ನಿಮ್ಮ ಮಾವನಿಗೆ..!) :)

  ReplyDelete
 6. ಶಿವು
  ಚೆನ್ನಾಗಿದೆ ಮಾವ ಅಳಿಯ ಕಥೆ ಹ ಹ ಹ ಹುಷಾರು ಹಿಂಗೆಲ್ಲ ನೀವು ಬ್ಲಾಗ್ನಲ್ಲಿ ಡಂಗೂರ ಸಾರಿದರೆ ಮಾಮ ಮಗಳನ್ನ ಕೊಡೊಲ್ಲ್ವಂತೆ ಹ ಹ ಅಹ...

  ReplyDelete
 7. ಶಿವು,
  ಸೂಪರ್ ಆಗಿದೆ...ನನ್ನ ಹತ್ತಿರ ಇಲ್ಲಿ ತನಕ ಲೈಸೆನ್ಸ್ ಇಲ್ಲ ಆದ್ರು ಗಾಡಿ ಓಡಿಸ್ತೀನಿ ರಜೆಗೆ ಬಂದಾಗ...ಎಲ್ಲಾ ನಮ್ಮ ಮಾಮಂದಿರು ಅಲ್ವ...
  ಎರಡು ಸಾರಿ ಸಿಕ್ಕಿಕೊಂಡಿದ್ದೀನಿ...ಒಂದು ಸಾರಿ ದುಡ್ಡು ಕೊಡದೆ ಸರಿಯಾಗಿ ರೀಲು ಬಿಟ್ಟಿದೆ....ಒಂದು ಸಾರಿ ಗಾಡಿ ನಿಲ್ಲಿಸಲೆ ಇಲ್ಲ....ಹಹಹ್ಹ...
  ಮತ್ತಷ್ಟು ಬರಲಿ....ಮಾಮನ ಕಥೆಗಳು
  ಮಹೇಶ್..!

  ReplyDelete
 8. Super... maava mattu aliya kathe chennaagide.. :-)

  ReplyDelete
 9. iyyo swamy naanu adilde (Licence) somaaru 14 varshadinda odaadtaa idini, omme maadisi kaledu hogiddu matte maadisilla, hogli bidi aden mahaa apraadha alla

  ReplyDelete
 10. ಶಿವಪ್ರಕಾಶ್,

  ಇಂಥ ಅನುಭವಗಳು ನಮಗೂ ಆಗಿದೆ. ಬೆಳಗಿನ ಹೊತ್ತಲ್ಲಿ ನಾವು ಹೀಗೆ ಟ್ರಿಬ್ಬಲ್ ರೈಡ್ ಹೋಗುವಾಗ ತುಂಬ ಸಲ ಸಿಕ್ಕಿಹಾಕಿಕೊಂಡಿದ್ದೇವೆ ಪೈನ್ ಕಟ್ಟಿದ್ದೇವೆ...

  ReplyDelete
 11. ಶಿವೂ ಸರ್,
  ಮಾವ ಅಳಿಯನ ಕಥೆ ಚೆನ್ನಾಗಿದೆ, ಬರೆಯುತ್ತಿರಿ

  ReplyDelete
 12. ಓಹ್... ಈ ಮಾವಂದಿರ ಉಪಟಳ ಏನ್ ಕೇಳ್ತೀರಾ ಸಾರ್.... ಆದ್ರೆ ಈಗೀಗ ಸ್ವಲ್ಪ Rules ಎಲ್ಲಾ change ಆಗಿರೋದ್ರಿಂದ ಸಿಕ್ಕ ಸಿಕ್ಕಲ್ಲಿ ಅಡ್ಡ ಹಾಕ್ತಾ ಇಲ್ಲಾ ಮಾವಂದಿರು... ಚೆನ್ನಾಗಿ ಬರೆದಿದ್ದೀರಾ.... :)

  ReplyDelete
 13. ದಿನಕರ ಮೊಗೇರ ಅವರೇ,
  ರೀ, ಮಗಳು ಇದಾಳೆ ಅಂತ ಹೇಳಿ ನನ್ನ ಹೆದರಿಸಬೇಡಿ... ನನಗೆ ಭಯ ಆಗುತ್ತೆ... P
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  Amit Hegde ಅವರೇ,
  ಒಹ್... ನನಗೆ ಅದರ ಭಯ ಇಲ್ಲ ಬಿಡಿ.. ಯಾಕಂದ್ರೆ ನನ್ಹತ್ರ ಕ್ರೆಡಿಟ್ ಕಾರ್ಡ್ ಇಲ್ಲ... :P
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  ದಿವ್ಯ ಅವರೇ,
  ಹೌದು ರೀ.. ನಮ್ ಮಾವ ಸ್ವಲ್ಪ ಒಳ್ಳೆಯವರು... ಸಲಹೆ ಕೂಡ ಅವರೇ ಕೊಟ್ರಲ್ಲ... :P
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  sunaath ಅವರೇ,
  ನನಗೆ ರಸೀದಿ ಕೊಟ್ರೋ ಇಲ್ವೋ ಸರಿಯಾಗಿ ನೆನಪಿಲ್ಲ...
  ನನ್ನ ಹತ್ತಿರ ದುಡ್ಡು ಕಟ್ಟಿಸಿಕೊಂಡ ಮಾವ ಬೇರೆ, ನನ್ನನ್ನು ಕೂಗಿ ಕರೆದ ಮಾವ ಬೇರೆ..
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  SSK ಅವರೇ,
  ಹೌದು ರೀ.. ಮಾವ ಅಳಿಯಂದ್ರನ ತುಂಬಾ ಚನ್ನಾಗಿ ಅರ್ಥಮಾಡಿಕೊಂಡು ಅಡ್ಡ ರಸ್ತೆಯಲ್ಲಿ ಅಡ್ಡ ಹಾಕೊಂಡು ಕಾಯ್ತಾ ಇದ್ರು.
  ನೀವು ಸಮನ್ಯದವರು ಅಲ್ಲ ಬಿಡಿ.. ಬೆಂಗಳೂರಿನಲ್ಲಿ ಟ್ರಿಪ್ಸ್.. ಗ್ರೇಟ್ ರೀ ನೀವು...
  ನಾನು ಹೇಳಲ್ಲ ಬಿಡಿ.. ಹೇಳಿದ್ರೆ ನನ್ನ ಬಂಡವಾಳ ಕೂಡ ಬಯಲಗುತ್ತಲ್ಲ ಅದಕ್ಕೆ... P
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  ಮನಸು ಅವರೇ,
  ಒಹ್.. ಮಾವನ ಮಗಳ ? ಬೇಡ ರೀ..
  ಮಾವ ಅಂದ್ರೇನೆ ಭಯ ಆಗುತ್ತೆ.. ಇನ್ನು ಮಾವನ ಮಗಳು ಅಂದ್ರೆ, ಆ ದೇವರೇ ನನ್ನ ಕಾಪಾಡಬೇಕು...
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  ಮಹೇಶ್ ಅವರೇ,
  ನೀವು ಸಕತ್ ಚಾನಕ್ಷರು ಬಿಡಿ... ಮಾವನಿಗೆ ರೀಲು ಬಿಟ್ಟಿದಿರಲ್ವ...
  ನಮಗೂ ನಿಮ್ಮ ವಿದ್ಯೆಗಳನ್ನು ಸ್ವಲ್ಪ ಹೇಳಿಕೊಡಿ...
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  ರವಿಕಾಂತ ಗೋರೆ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  UMESH VASHIST H K. ಅವರೇ,
  ಅದು ಹೆಂಗೆ ಮಾವನಿಗೆ ಸಿಗದೇ ೧೪ ವರ್ಷ ಕಳೆದಿದ್ದಿರಿ...
  ಮಾವ ನಮ್ಮನ್ನು ನೋಡಿದ್ರೆ ಸಾಕು, ಕರಿತಾ ಇರ್ತಾನೆ...
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  ತೇಜಸ್ವಿನಿ ಹೆಗಡೆ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  ಶಿವು ಅವರೇ,
  ಹೌದು ರೀ... ಕೆಲವೊಂದು ಸಲ ಟ್ರಿಪ್ಸ್ ಹೋಗದೆ ಬೇರೆ ದಾರಿ ಇರಲ್ಲ...
  ನಾನು ಕೂಡ ಬಹಳ ಸಲ ತಿರುಗಾಡಿದ್ದೇನೆ.. (ಮಾವನಿಗೆ ಹೇಳ್ಬೇಡಿ..:P )
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  ಗುರುಮೂರ್ತಿ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  ಚಕೋರ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =================

  dileephs ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

  ReplyDelete
 14. ಶಿವೂ
  ಕೂಟ್ಟಿದು ಕೆಟ್ಟಿತು ಎನಬೇಡ ಮೊಂದೆ ಕಟ್ಟಿಹ ಬೂತ್ತಿ !
  ಪೋಲಿಸ್ ಮಾಮನ ಮಗಳೆ ಸಿಕ್ಕಥಾಳೆ, ಬಿಡ್ರಿ
  ಹ್ಹ ಹ್ಹ ಹ್ಹ
  ನಾನು ನನ್ನ ಜೀವನದಾಗೆ ಹತ್ತು ರೂಪಾಯಿ ಫೈನ್ ಕಟ್ಟಿದೆನಿ ಕಾರಣ ತ್ರಿಬಲ್ ರೈಡಿಂಗ್.
  ತುಂಬಾ ಚೆನ್ನಾಗೆದೆ ಮಾಮ ಅಳಿಯನ ಕಥೆ
  ಪೋಲಿಸ್ ಮಾಮ ಹುಷಾರ್ !

  ReplyDelete
 15. ಹಲೋ ಬಸವ,
  ಮಾವನ ಮಗಳು ಬೇಡ ಕಣೋ...
  ಮಾವ ಅಂದ್ರೇನೆ ಭಯ ಆಗುತ್ತೆ.. ಇನ್ನು ಮಾವನ ಮಗಳು ಅಂದ್ರೆ, ಆ ದೇವರೇ ನನ್ನ ಕಾಪಾಡಬೇಕು...
  ಬರಿ ಹತ್ತು ರೂಪಾಯಿ ಫೈನ್ ಕಟ್ಟಿದ್ಯಾ.. ? ಅದು ಹೇಗೋ... ?
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

  ReplyDelete
 16. Nimma Mavanige Nimaamele tumba preeti anisutte....

  Munya madiddiyya...


  And ur truly gifted writer :)

  ReplyDelete