Thursday, October 8, 2009

ಉಪ್ಪಿಗಿಂತ ರುಚಿ ಬೇರೆ ಇಲ್ಲ


ಮೈಸೂರಿನಲ್ಲಿದ್ದಾಗ ನಾವು ದಿನಾಲೂ ರಾತ್ರಿ ಊಟಕ್ಕೆ ಒಂದು ಮೆಸ್ಸ್'ಗೆ ಹೋಗ್ತಾ ಇದ್ವಿ.
ಊಟ ಪರವಾಗಿಲ್ಲ. ಬೇರೆ ಹೋಟೆಲುಗಳಿಗೆ ಹೋಲಿಸಿದರೆ ಚನ್ನಾಗೆ ಮಾಡ್ತಾ ಇದ್ರು..
ನಾವು ದಿನಾಲೂ ತಪ್ಪಿಸದೇ ಹೋಗ್ತಾ ಇದ್ದುದರಿಂದ, ಹೋಟೆಲ್ ನಡೆಸುತ್ತಿದ್ದ ಅಂಕಲ್, ಆಂಟಿ, ಅವರ ಮಗಳು ಹಾಗು ಅವರ ಮಗ ಎಲ್ರೂ ಪರಿಚಯವಾಗಿದ್ರು.
ಊಟ ಆದ ನಂತರ ಒಂದು ಲೋಟದಲ್ಲಿ ಮಜ್ಜಿಗೆ ಕೂಡ ಕೊಡ್ತಾ ಇದ್ರು. ಮಜ್ಜಿಗೆಗೆ ಸ್ವಲ್ಪ ಉಪ್ಪು ಕಮ್ಮಿ ಹಾಕ್ತ ಇದ್ರು. ನಾನು ಮಜ್ಜಿಗೆ ಕುಡಿತ ಇರುವಾಗ, ಕಡಿಮೆ ಉಪ್ಪು ಇರುವುದು ಗಮನಿಸಿ, ಮತ್ತೊಮ್ಮೆ ಉಪ್ಪು ತರಿಸಿ ಹಾಕಿಕೊಳ್ಳುತ್ತಿದ್ದೆ. ಊಟದ ನಂತರ ಮಜ್ಜಿಗೆ ಕುಡಿಯುವಾಗ ದಿನಾಲೂ ಉಪ್ಪು ಜಾಸ್ತಿ ಹಾಕಿಸಿಕೊಂಡು ಕುಡಿತ ಇದ್ದೆ.. ಎಸ್ಟೆ ಆಗ್ಲಿ ನಾನು ಉಪ್ಪು-ಖಾರ ತಿನ್ನೋ ಹುಡುಗ ಅಲ್ವಾ :P

ಸರಿ, ಎಲ್ಲ ಪರೀಕ್ಷೆಗಳು ಮುಗಿದವು. ಮರುದಿನ ಮೈಸೂರಿಗೆ ವಿದಾಯ ಹೇಳೋ ದಿನ. ಹಾಗಾಗಿ ಆ ಮೆಸ್ಸಿನಲ್ಲಿ ಕೊನೆಯ ದಿನ ಊಟ ಮಾಡಲು ಹೋದೆವು. ಹೋಟೆಲಿನ ಆಂಟಿ, ಅಂಕಲ್'ಗೆ ಹೇಳಿದ್ವಿ. "ಇದು ನಿಮ್ಮ ಮೆಸ್ಸಿನಲ್ಲಿ ಕೊನೆ ದಿನ" ಅಂತ.
ಅವರು ಅಂದು ನಮ್ಮನ್ನು ಮನೆ ಮಕ್ಕಳಂತೆ ತುಂಬಾ ಆತ್ಮಿಯಾವಾಗಿ ಸಲುಗೆಯಿಂದ ಊಟ ಬಡಿಸಿದರು.
"ಅವಾಗವಾಗ ಮೈಸೂರಿಗೆ, ನಮ್ಮ ಮನೆಗೆ ಬರ್ತಾ ಇರಿ..." ಅಂತ ಹೇಳಿದ್ರು...
ನಾವು "ಗ್ಯಾರೆಂಟಿ" ಬರ್ತಿವಿ ಅಂತ ಆಶ್ವಾಸನೆ ಕೊಟ್ವಿ..

ಪ್ರತಿದಿನದ ಹಾಗೆ ಊಟ ಮುಗಿಯುತ್ತಿರುವಾಗ ನನ್ನ ಟೇಬಲ್ಲಿನ ಮೇಲೆ ಮಜ್ಜಿಗೆ ಲೋಟವನ್ನು ಇಟ್ಟರು. ಆಂಟಿ, ಅಂಕಲ್, ಅವರ ಮಗಳು ಹಾಗು ಅವರ ಮಗ ಎಲ್ಲರು ನನ್ನನ್ನೇ ನೋಡ್ತಾ ಇದ್ರು.. ಬಹುಶ ಇದು ಕೊನೆ ದಿನ ಅಂತ ಸ್ವಲ್ಪ ಸೆಂಟಿಮೆಂಟ್ ಆಗಿರಬಹುದು ಅನ್ಕೊಂಡು ಸುಮ್ಮನಿದ್ದೆ. ಸರಿ, ಊಟದ ನಂತರ ಮಜ್ಜಿಗೆಯನ್ನು ಕುಡಿದೆ. ಆದರೆ ಇಂದು ಉಪ್ಪು ಹಾಕಿಕೊಳ್ಳುವುದನ್ನು ಮರೆತೆ. ಇನ್ನೂ ಅವರು ನನ್ನನ್ನೇ ನೋಡುತ್ತಿದ್ದುದು ನೋಡಿ...
ತಡೆದುಕೊಳ್ಳಲಾಗದೆ ಕೊನೆಗೆ ಕೇಳೆಬಿಟ್ಟೆ... "ಯಾಕೆ ಆವಗ್ಲಿಂದ ಆ ಥರ ನೋಡ್ತಾ ಇದ್ದೀರಾ....??"
ಅವರು ನಗುತ್ತ ಕೇಳಿದರು... "ಮಜ್ಜಿಗೆ ಹೇಗಿತ್ತು.. ?"
ನಾನು.. "ಚನ್ನಾಗಿತ್ತು...."
ಅವರು.. "ಮತ್ತೆ.. ಉಪ್ಪು ಜಾಸ್ತಿ ಇರ್ಲಿಲ್ವ...?"
ನಾನು... "ಇಲ್ಲ. ಸರಿಯಾಗೆ ಇತ್ತು"
ಅವರು... "ಅಯ್ಯೋ ದೇವರೇ, ನಾವು ನಿಮ್ಮನ್ನು ಚೂಡಯಿಸಲು ಬಹಳ ಜಾಸ್ತಿ ಉಪ್ಪು ಹಾಕಿದರೂ, ನೀವು ಅದೇನು ಲೆಕ್ಕವಿಲ್ಲದಂತೆ ಕುಡಿದಿರಲ್ವಾ...?"
ನಾನು... "ಒಹ್.. ಹಾಗಾ... ನನಗೆ ಹಾಗೇನೂ ಅನ್ನಿಸಲಿಲ್ಲ... "
ಆಗ ಅವರು... "ನೀವು ಸಾಮಾನ್ಯದವರು ಅಲ್ಲ ಬಿಡಿ" ಅಂತ ನಗುತ್ತ ನುಡಿದರು...

NO BP, BE HAPPY.... :)
Share/Save/Bookmark

13 comments:

 1. ಶಿವು,
  ಉಪ್ಪು ಮಿತವಾಗಿದ್ರೆನೆ ಚೆಂದ...ನಾನು ಸಹ ಸ್ವಲ್ಪ ಉಪ್ಪು ಜಾಸ್ತಿ ತಿನ್ನೋದು....
  ಅವರ ವಿಶ್ವಾಸದ ಮುಂದೆ ಉಪ್ಪು ಜಾಸ್ತಿ ಅಂತ ನಿಮಗೆ ಅನ್ನಿಸಲಿಲ್ಲ ಅನ್ನಿಸುತ್ತೆ...
  ಚೆನ್ನಾಗಿ ನಿರೂಪಿಸಿದ್ದೀರಾ...

  ReplyDelete
 2. ಶಿವ ಪ್ರಕಾಶ ಸರ್.
  ಉಪ್ಪು ಹದ ಇದ್ದರೆ ರುಚಿ ಅಲ್ಲವೇ ? ಉಪ್ಪು ಜಾಸ್ತಿ ತಿನ್ನುವುದು ಆರೋಗ್ಯದ ದೃಷ್ಟಿ ಯಲ್ಲಿ ಒಳ್ಳೆಯದಲ್ಲ ? ನಿಮಗೆ ಅವರ ಅಭಿಮಾನದ ಮು೦ದೆ ಉಪ್ಪು ಜಾಸ್ತಿ ಎ೦ದು ಅನ್ನಿಸಿಲ್ಲ .. ನಿಮ್ಮ ಬರಹ ಓದಿದಾಗ ನೆಟ್ ನಲ್ಲಿ ಓದಿದ ಕತೆ ನೆನಪಾಯಿತು . ಅದರಲ್ಲಿ ಹುಡುಗ ಹುಡುಗಿಯ ಪ್ರೀತಿಯನ್ನು ಗಳಿಸಲು ಕಾಫಿಗೆ ಸಕ್ಕೆರೆಯ ಬದಲು ಉಪ್ಪು ಬಳಸಿ ಜೀವನ ಪೂರ್ತಿ ಆ ಸುಳ್ಳನ್ನು ಸಮರ್ಥನೆ ಮಾಡಲು ಸಾಯುವ ವರೆಗೆ ಉಪ್ಪು ಹಾಕಿದ ಕಾಫಿ ಕುಡಿಯುತ್ತಾನೆ.
  ವ೦ದನೆಗಳು

  ReplyDelete
 3. ಉಪ್ಪಿಗಿಂತ ರುಚಿ ಬೇರೆ ಇಲ್ಲ...
  ನೀವು ಅವರ ಮೇಲಿಟ್ಟ ಗೌರವ,ಅಭಿಮಾನ ಉಪ್ಪು ಮಜ್ಜಿಗೆ ಕುಡಿಯುವ ಮೂಲಕ ತೋರಿಸಿದ್ದೀರಿ...ಪ್ರೀತಿ ವಿಶ್ವಾಸ ತೋರುವುದೇ ಜೀವನ..

  ReplyDelete
 4. ನಿರೂಪಣೆ ಚೆನ್ನಾಗಿದೆ,
  ಹಿರಿಯರು ಅಂತಾರೆ, ಎರಡು 'ಮುತ್ತುಗಳ' ಗೆಳೆತನ ಮಾಡಬಾರದಂತೆ..... ಮೊದಲನೆಯದು,,, ಉಪ್ಪು,,,, ಎರಡನೆಯದು,,,,,ಸಕ್ಕರೆ.... .....
  ಅವರ ಪ್ರೀತಿಯ ಮುಂದೆ ನಿಮಗೆ ಅದರ ರುಚಿ ಗೊತ್ತಾಗ್ಲಿಲ್ಲ ಅಸ್ಟೆ.....

  ReplyDelete
 5. ಹ..ಹ.. ಚೆನ್ನಾಗಿದೆ .... ಲೇಖನಕ್ಕೆ ಉಪ್ಪು ಜಾಸ್ತಿ ಅನ್ನಿಸಲಿಲ್ವಾ.....
  ಉಪ್ಪು ಜಾಸ್ತಿ ಅನ್ನುವದಕ್ಕಿಂತ ಅದರಲ್ಲಿನ ಪ್ರೀತಿ ವಿಶ್ವಾಸ ಮುಖ್ಯ ಅಲ್ವಾ..

  ReplyDelete
 6. ಉಪ್ಪಿಗಿಂತ ರುಚಿಯಿಲ್ಲ ಅನ್ನೋದನ್ನ demonstrate ಮಾಡಿದಿರೇನೋ!

  ReplyDelete
 7. ಉಪ್ಪಿಗಿಂತ ಪ್ರೀತಿ ಮುಖ್ಯ ಅನ್ನೋದು ನಿಜ
  ಮನಸ್ಸಿಗೆ ಇಷ್ಟ ಅದ ಯಾರೇ ಇರಲಿ ಅವರ ಬಗ್ಗೆ ನಮ್ಮ ಅಭಿಪ್ರಾಯ ಬದಲಾಗೋದಿಲ್ಲ.
  ನಿಮ್ಮ ಉಪ್ಪಿನ ಕಥೆ ಚೆನ್ನಾಗಿದೆ

  ReplyDelete
 8. ಶಿವಪ್ರಕಾಶ್,

  ಉಪ್ಪಿಗಿಂತ ರುಚಿ ಬೇರೆಯಿಲ್ಲ ನಿಜ. ದಿನವೂ ಹೋಗುವ ಹೋಟಲ್ಲಿನವರ ಜೊತೆ ಭಾವನಾತ್ಮಕ ವ್ಯವಹಾರವಿದ್ದರೆ ಎಲ್ಲವೂ ಚೆನ್ನಾಗಿರುತ್ತೆ ಅನ್ನುವುದಕ್ಕೆ ನಿಮ್ಮ ಲೇಖನವೇ ಸಾಕ್ಷಿ...

  ReplyDelete
 9. ಉಪ್ಪು ರುಚಿ ನಿಜ ಆದರೆ ಜಾಸ್ತಿ ಯಾಗಬಾರದು....

  ReplyDelete
 10. ಮಹೇಶ್ ಅವರೇ,
  ನನಗೆ ಬುದ್ದಿವಾದ ಹೇಳಿ ನೀವು ಜಾಸ್ತಿ ಉಪ್ಪು ತಿನ್ನೋದ..? :P
  ಈಗ ನಾನು ಅಸ್ಟೊಂದು ಉಪ್ಪು ಹಕೊಳೋಲ್ಲ. ಬದಲಾಗಿದ್ದೇನೆ :P.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ==============

  ರೂಪ ಅವರೇ,
  ನಾನು ಉಪ್ಪೇ ಆಗಲಿ, ಖಾರವಾಗಲಿ ಸ್ವಲ್ಪ ಜಾಸ್ತಿನೆ ತಿನ್ನುತಾ ಇದ್ದೆ. ಈಗ ಸ್ವಲ್ಪ ಕಡಿಮೆ ಮಾಡಿದಿನಿ.
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ==============

  ಮನಸು ಅವರೇ,
  ನನಗೆ ನಿಜವಾಗಿಯೂ ಉಪ್ಪು ಜಾಸ್ತಿ ಹಾಕಿರುವ ವಿಷಯ ತಿಳಿಯಲಿಲ್ಲ ಯಾಕೆಂದರೆ ನನಗೆ ಅದು normal ಆಗೇ ಇತ್ತು.
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ==============

  ದಿನಕರ ಅವರೇ,
  ನಿಜವಾಗ್ಲೂ ನನಗೆ ಅವತ್ತು ಗೊತ್ತಾಗ್ಲಿಲ್ಲ ರೀ.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ==============

  ಲಕ್ಷ್ಮಣ ಅವರೇ,
  ಪ್ರೀತಿ ವಿಶ್ವಾಸ ಮುಖ್ಯ ನಿಜ ಆದರೆ ಅವತ್ತು ನಿಜವಾಗಿಯೂ ಉಪ್ಪು ಜಾಸ್ತಿ ಇದೆ ಅಂತ ಅನ್ನಿಸಲಿಲ್ಲ.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ==============

  sunaath ಅವರೇ,
  ನಾನು ಮುಂಚೆ ಉಪ್ಪು-ಖಾರ ಜಾಸ್ತಿ ತಿನ್ನುತ್ತಾ ಇದ್ದೆ. ಈಗ ಕಡಿಮೆ ಮಾಡಿದಿನಿ.
  ನನಗೆ ಈಗಲೂ ಉಪ್ಪು-ಖಾರ ಅಂದ್ರೆ ತುಂಬಾ ಇಷ್ಟ. ಆದರೆ ಮುಂಚಿನ ಹಾಗೆ ತಿನ್ನೋಕೆ ಆಗೋಲ್ಲ ಅಂತ ಬಾಧೆ.
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ==============

  ಗುರುಮೂರ್ತಿ ಅವರೇ,
  ನಿಜವಾಗ್ಲೂ ನನಗೆ ಅವತ್ತು ಗೊತ್ತಾಗ್ಲಿಲ್ಲ ರೀ.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ==============

  ಶಿವು ಅವರೇ,
  ನನಗೆ ಹೋಟೆಲ್ಲಿನವರ ಜೊತೆ ಸ್ವಲ್ಪ ದೋಸ್ತಿ ಜಾಸ್ತಿ.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ==============

  umesh desai ಅವರೇ,
  ನಾನು ಈಗ ಜಾಸ್ತಿ ಉಪ್ಪು ಹಕೊಳೋದಿಲ್ಲ.
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

  ReplyDelete
 11. re jasthi uupu tindre B.P ANTHEE REEE.................

  ReplyDelete
 12. ರೂಪ ಅವರೇ,
  Not to worry..
  No BP, Be Happy :)
  ಧನ್ಯವಾದಗಳು :)

  ReplyDelete