Tuesday, October 27, 2009

ಪಾಪ ಉಲ್ಲಾಸ

ನಿಮಗೆ ಹಿಂದೊಮ್ಮೆ ಸವಾರಿ ಲೇಖನದಲ್ಲಿ ಉಲ್ಲಾಸನ ಆವಾಂತರವನ್ನು ಹೇಳಿದ್ದೆ. ಈಗ ನಮ್ಮ ಅದೇ ಉಲ್ಲಾಸನ ಇನ್ನೊಂದು ನೆನಪಿನ ಪುಟ ನಿಮಗಾಗಿ.
ಉಲ್ಲಾಸ್ ಗುಲ್ಬರ್ಗದಲ್ಲಿ ಓದುತ್ತಿರುವಾಗ, ಅಲ್ಲೇ ವಾಸವಾಗಿದ್ದ ತನ್ನ ಹಳೆಯ ಸಂಬಂಧಿಕರ ಮನೆಗೆ ಮಾತನಾಡಿಸಲು, ಮೊದಲ ಬಾರಿ ಅವರ ಮನೆಗೆ ಹೋದ. ಅವರು ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ಇಂದು ಇಲ್ಲೇ ಊಟ ಮಾಡಿ ಹೋಗು ಎಂದು ಬಲವಂತ ಮಾಡಿದರು. ನಮ್ಮ ಉಲ್ಲಾಸನಿಗೂ ದಿನಾಲೂ ಹೋಟೆಲ್ ಊಟ ಮಾಡಿ ಬೇಸರವಾಗಿತ್ತು. ಸರಿ ಆಯ್ತು ಮಾಡಿ ಹೋಗ್ತೀನಿ ಎಂದು ಹೇಳಿದ.
ಬಿಸಿ ಬಿಸಿ ಆಡುಗೆ ಸಿದ್ದ ಮಾಡಿದರು. ಅವರೆಲ್ಲರ ಜೊತೆ ನಮ್ಮ ಉಲ್ಲಾಸ ಊಟಕ್ಕೆ ಕೂತ. ಮೊದಲು ರೊಟ್ಟಿ ಪಲ್ಯ ಊಟ. ನಮ್ಮ ಉಲ್ಲಾಸನಿಗೆ ರೊಟ್ಟಿ ತಿನ್ನೋ ಅಭ್ಯಾಸ ಇರ್ಲಿಲ್ಲ. ಆದರೂ ಒಂದು ರೊಟ್ಟಿ ತಿಂದ. ನಂತರ ಅನ್ನ ಬಡಿಸಲು ಅವರ ಮನೆಯವರು ಮುಂದಾದರು. ಆದರೆ ಅನ್ನ ಸ್ವಲ್ಪ ಸೀದಿಹೊಗಿತ್ತು (ಒತ್ತಿ ಹೋಗಿತ್ತು, ಒತ್ತಿತ್ತು). ಅವರ ಮನೆಯವರು ಉಲ್ಲಾಸನಿಗೆ ಅನ್ನ ಸೀದಿರುವ ಸಂಗತಿ ಹೇಳಿ, ಕ್ಷಮೆ ಕೇಳಿ, ರೊಟ್ಟಿನೆ ತಗೋಳಿ ಎಂದರು. ನಮ್ಮ ಉಲ್ಲಾಸನಿಗೆ ಅನ್ನ ತಿನ್ನದೇ ಇದ್ದರೆ, ಊಟ ಮಾಡಿದ ಹಾಗೆ ಆಗುವುದಿಲ್ಲ. ಮೊದಲೇ ರೊಟ್ಟಿ ತಿನ್ನುವ ಅಭ್ಯಾಸವಿಲ್ಲ. ಅನ್ನ ಸೀದಿದ್ದರು ಸರಿ, ಅದನ್ನೇ ತಿನ್ನೋಣ ಎಂದು ಮನಸ್ಸಿನಲ್ಲಿ ಅಂದುಕೊಂಡು, ಅವರಿಗೆ ಒಂದು ಸುಳ್ಳು ಹೇಳಿದ.
'ನನಗೆ ಸೀದಿರುವುದೆಂದರೆ ತುಂಬಾ ಇಷ್ಟ, ನನಗೆ ಅದನ್ನೇ ಬಡಿಸಿ' ಎಂದ.
ಅವರ ಮನೆಯವರು ಸ್ವಲ್ಪ ನಿಟ್ಟುಸಿರು ಬಿಟ್ಟು, ಅದನ್ನೇ ಬಡಿಸಿದರು. ನಮ್ಮ ಉಲ್ಲಾಸ ಸ್ವಲ್ಪ ಕಷ್ಟ ಪಟ್ಟು ಊಟ ಮಾಡಿದ. ಊಟವಾದ ನಂತರ ಅವರಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದ.

೨ ವರ್ಷಗಳ ನಂತರ.........

ಮತ್ತೊಮ್ಮೆ ನಮ್ಮ ಉಲ್ಲಾಸನಿಗೆ, ಅವರ ಮನೆಗೆ ಹೊಗಿಬರಬೇಕಾದ ಪ್ರಸಂಗ ಬಂತು. ಮತ್ತೊಮ್ಮೆ ಅವರ ಮನೆಗೆ ಹೋದ.
'ಇಲ್ಲೇ ಓದ್ತಾ ಇದ್ರು, ಅವಾಗವಾಗ ಮನೆಗೆ ಬರ್ತಾ ಇರಬಾರದ.. ?' ಎಂದು ಅವರ ಮನೆಯವರು ಕೇಳಿ, ಮತ್ತೊಮ್ಮೆ ಅತ್ಮಿಯತೆಯಿಂದ ಮಾತನಾಡಿಸಿದರು. ಬಂದ ಕೆಲಸವಾದ ನಂತರ, ನಾನು ಹೋಗಿಬರ್ತೀನಿ ಎಂದು ಹೇಳಿ, ಎದ್ದು ನಿಂತ.
'ಹೇ, ಕೂತ್ಕೊಳೋ, ಊಟ ಮಾಡ್ಕೊಡು ಹೋಗು...' ಎಂದರು.
ಬೇಡವೆಂದರೂ, ಬಲವಂತ ಮಾಡಿದರು. ನಮ್ಮ ಉಲ್ಲಾಸ ಅವರೆಲ್ಲರ ಜೊತೆ ಊಟಕ್ಕೆ ಕೂತ. ಮತ್ತದೇ ರೊಟ್ಟಿ ಪಲ್ಯ. ಇಷ್ಟವಿಲ್ಲದಿದ್ದರೂ ಒಂದು ರೊಟ್ಟಿ ತಿಂದ. ನಂತರ ಅನ್ನ ಬಡಿಸಲು ಮುಂದಾದರು..
ನಮ್ಮ ಉಲ್ಲಾಸನದು, ಏನು ಕೆಟ್ಟ ಹಣೆಬರಹವೋ ಏನೋ... ಇವತ್ತು ಕೂಡ ಅನ್ನ ಸೀದಿತ್ತು...
ಅದನ್ನು ಗಮನಿಸಿದ ಮನೆಯವರು 'ಅನ್ನ ಸೀದಿದೆ...' ಎಂದರು.
ಅವರ ಮನೆಯಲ್ಲಿರುವ ಇನ್ನೊಬ್ಬ ವ್ಯಕ್ತಿ... 'ಒಹ್, ಅನ್ನ ಸೀದಿದೆಯ... ? ನಮ್ಮ ಉಲ್ಲಾಸನಿಗೆ ಸೀದಿರೋದು ಅಂದ್ರೆ ತುಂಬಾ ಇಷ್ಟ. ಅವನಿಗೆ ಬಡಿಸಿ...' ಎಂದರು.
ನಮ್ಮ ಉಲ್ಲಾಸ ಮನದಲ್ಲೇ ಕೊರಗಿದ. ಅವತ್ತು ನಾನು ಹೇಳಿದ ಸುಳ್ಳಿನಿಂದ ಇವತ್ತು ಕೂಡ ನನಗೆ ಸೀದಿರುವ ಊಟ... :(
ಆ ಮನೆಯವರು ನಮ್ಮ ಉಲ್ಲಾಸನಿಗೆ ಸೀದಿರುವುದು ಇಷ್ಟವೆಂದು ತಿಳಿದ ಬಳಿದ, ಕೆಳಗೆ ಸೀದಿರುವುದನ್ನೆಲ್ಲ ಹುಡುಕಾಡಿ ಬಡಿಸಿದರು.
ಪಾಪ, ನಮ್ಮ ಉಲ್ಲಾಸನಿಗೆ ಬೇರೆ ದಾರಿಯಿಲ್ಲದೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ತಿಂದ..
Share/Save/Bookmark

18 comments:

  1. ಶಿವು,
    ಸುಳ್ಳು ಹೇಳಿದರೆ ಎನಾಗುತ್ತೆ ಅಂತ ಚೆನ್ನಾಗಿ ನಿರೂಪಿಸಿದ್ದೀರಾ...
    ಪಾಪ ಉಲ್ಲಾಸ....

    ReplyDelete
  2. ನನ್ನ ಮಗನಿಗೆ ನಿಮ್ಮ ಕಥೆ ಕೇಳಿ ನಗುನೋ ನಗು ಹಹಹ ಸುಳ್ಳು ಹೇಳಿ ಈ ಗತಿ ಬಂತು ಉಲ್ಲಾಸ್ ಅವರಿಗೆ ಹಹ ತುಂಬಾ ಚೆನ್ನಾಗಿದೆ.

    ReplyDelete
  3. ಶಿವು,
    ಉಲ್ಲಾಸನಿಗೆ ಚೆನ್ನಾಗಿ ಊಟ ಮಾಡುವ ಉಲ್ಲಾಸ ಇಲ್ಲದಿದ್ದರು ಪಡ್ಕೊಂಡು ಬಂದಿರೋದು ಬೆನ್ನು ಬಿಡೋಲ್ಲ.. 'ಪಾಲಿಗೆ ಬಂದಿದ್ದು ಪಂಚಾಮೃತ' ಅಂತ ತಿನ್ನಲೇ ಬೇಕು... ಲೇಖನ ತುಂಬಾ ಚೆನ್ನಾಗಿದೆ...
    ನಿಮ್ಮವ,
    ರಾಘು.

    ReplyDelete
  4. ಅದಕ್ಕೆ ಹೇಳೋದು... ಸುಳ್ಳು ಹೇಳಿದ್ರೆ ಸಿಕ್ಕಿ ಹಾಕಿಕೊಳ್ತಾರೆ ಅಂತ!! ನಿಮ್ಮ ಉಲ್ಲಾಸನಿಗೆ ಇನ್ನೂ ಯಾವತ್ತೂ ಹೀಗೆ ಹೇಳುವ ಧೈರ್ಯ ಬರೋಲ್ಲ ಅಂದ್ಕೋತೀನಿ!!
    good post!

    ReplyDelete
  5. ಸುಳ್ಳಿನ ಪರಿಣಾಮ ಅಧುತವಾಗಿ ಉಲ್ಲಾಸನ ಮುಖಾ೦ತರ ಹೇಳಿದ್ದಿರಾ!
    ಚೆನ್ನಾಗಿದೆ ಲೇಖನ

    ReplyDelete
  6. ನಿಜಕ್ಕೂ ಪಾಪಚ್ಚಿ ಉಲ್ಲಾಸ! ಮತ್ತೆಂದು ಆತ ಸುಳ್ಳು ಹೇಳಲ್ಲ ಅಂತ ತೀರ್ಮಾನಿಸಿರಬೇಕು ಅಲ್ವಾ..

    ReplyDelete
  7. ಶಿವು....

    ಹ್ಹಾ...ಹ್ಹಾ...ಹ್ಹಾ...!

    ಮುಕ್ತವಾಗಿ ಹೇಳಿಕೊಳ್ಳದೆ..
    ಸಂಕೋಚಪಟ್ಟುಕೊಂಡರೆ ಆಗುವ ಪರಿಣಾಮ ಇದು... ಅಲ್ಲವಾ...?

    ನಿಮ್ಮ ಅನುಭವ ಓದಿ..
    ನನ್ನ ಅನುಭವವೊಂದು ನೆನಪಾಯಿತು...
    ಬ್ಲಾಗಿನಲ್ಲಿ ಬರೆಯುವೆ..

    ನಿಮ್ಮ ಸ್ನೇಹಿತ ಉಲ್ಲಾಸರಿಗೆ ನಮ್ಮ ಸಹಾನು ಭೂತಿಗಳು...

    ಮತ್ತೊಮ್ಮೆ ನಮ್ಮನ್ನು ನಗಿಸಿದ್ದಕ್ಕೆ..
    ನನಗೊಂದು ಘಟನೆ ನೆನಪಿಸಿದ್ದಕ್ಕೆ ನಿಮಗೆ ಸಿಕ್ಕಾಪಟ್ಟೆ ಧನ್ಯವಾದಗಳು..

    ReplyDelete
  8. ಶಿವಪ್ರಕಾಶ್,
    ನನ್ನ ಸಹಾನುಭೂತಿ ನಿಮ್ಮ ಗೆಳೆಯ ಉಲ್ಲಾಸನಿಗೆ ತಿಳಿಸಿ...... ತುಂಬಾ ಚೆನ್ನಾಗಿದೆ ನಿಮ್ಮ ನಿರೂಪಣೆ.....

    ReplyDelete
  9. ಮಾಡಿದ್ದುಣ್ಣೋ ಮಾರಾಯ!

    ReplyDelete
  10. ಶಿವೂ,
    ನಿಜಾ, ಸುಳ್ಳು ಹೇಳಿದ್ರೆ ಸೀದದ್ದೇ ಸಿಗೋದು,
    ಚೆನ್ನಾಗಿ ಬರೆದಿದ್ದೀರ

    ReplyDelete
  11. ತುಂಬ ಚೆನ್ನಾಗಿದೆ ಸರ್ ನಿಮ್ಮ ಉಲ್ಲಾಸನ ಕತೆ ಹ್ಹಾ..ಹ್ಹಾ ವ್ಯಥೆ :) ಒಮ್ಮೆ ಸುಳ್ಳು ಹೇಳಿದರೆ ಈಗೆಲ್ಲ ಆಗುತ್ತೆ ಅಂಥ ಗೊತ್ತೇ ಇರ್ಲಿಲ್ಲ .. :)
    ಇನ್ಮೇಲೆ ಊಟದ ವಿಷಯದಲ್ಲಿ ಸುಳ್ಳು ಹೇಳುವ ಸಾಹಸ ಮಾಡೊಲ್ಲ :) :)

    ReplyDelete
  12. ಛೆ........ಪಾಪ......... ಹೀಗಾಗಬಾರದಿತ್ತು!
    ಆ ಮನೆಯವರು ಎಂತಾ ಮನುಷ್ಯರೋ? ಮನೆಗೆ ಬಂದ ಅತಿಥಿಗೆ ಹೀಗಾ ಮಾಡೋದು, ಸಂಸ್ಕಾರವಿಲ್ಲದವರು!!!
    ಅಂತಹವರಿಗೆ ನನ್ನ ಧಿಕ್ಕಾರ. ಅವರ ಪರಿಸ್ಥಿತಿ ಏನೇ ಇದ್ದರೂ ಈ ರೀತಿ ಮಾಡಬಾರದಾಗಿತ್ತು!

    ReplyDelete
  13. ಮಹೇಶ್ ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ಮನಸು ಅವರೇ,
    ಲೇಖನ ಓದಿ, ನಿಮ್ಮ ಮಗನಿಗೂ ಹೇಳಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ರಘು ಅವರೇ,
    ನೀವು ಹೇಳಿದ್ದು ನಿಜ. 'ಪಾಲಿಗೆ ಬಂದಿದ್ದು ಪಂಚಾಮೃತ'. ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ಸುಮನ ಅವರೇ,
    ಸುಳ್ಳು ಹೇಳಿದರೆ ಮುಂದೆ ಕಷ್ಟ ತಪ್ಪಿದ್ದಲ್ಲ ಎನ್ನುವುದಕ್ಕೆ ಸಾಕ್ಷಿ.. ಹ್ಹಾ ಹ್ಹಾ ಹ್ಹಾ... :)
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ಸೀತಾರಾಮ. ಕೆ. ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ಶಿವು ಅವರೇ,
    ಹೌದು ರೀ...ಇನ್ಮೇಲೆ ಇಂತ ವಿಷಯಗಳಲ್ಲಿ ನಮ್ಮ ಉಲ್ಲಾಸ ಸುಳ್ಳು ಹೇಳೋದಿಲ್ಲ ಅನ್ಸುತ್ತೆ...
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ಪ್ರಕಾಶ್ ಅವರೇ,
    ನಿಮಗೆ ಈ ಲೇಖನದಿಂದ, ನಿಮ್ಮ ಒಂದು ನೆನಪಿನ ಪುಟ ಜ್ಞಾಪಕವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು..
    ತಪ್ಪದೆ ನಿಮ್ಮ ಸಹಾನುಭೂತಿಯನ್ನು ಉಲ್ಲಾಸನಿಗೆ ತಿಳಿಸುತ್ತೇನೆ.
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ದಿನಕರ ಅವರೇ,
    ತಪ್ಪದೆ ನಿಮ್ಮ ಸಹಾನುಭೂತಿಯನ್ನು ಉಲ್ಲಾಸನಿಗೆ ತಿಳಿಸುತ್ತೇನೆ.
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    sunaath ಅವರೇ,
    ನಿಜ ರೀ. ಮಾಡಿದ್ದುಣ್ಣೋ ಮಾರಾಯ :)
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ತೇಜಸ್ವಿನಿ ಹೆಗಡೆ ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ಗುರುಮೂರ್ತಿ ಅವರೇ,
    ಸುಳ್ಳು ಹೇಳಿದರೆ ಮುಂದೆ ಕಷ್ಟ ತಪ್ಪಿದ್ದಲ್ಲ ಎನ್ನುವುದಕ್ಕೆ ಸಾಕ್ಷಿ.. ಹ್ಹಾ ಹ್ಹಾ ಹ್ಹಾ... :)
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    Snow White ಅವರೇ,
    ಅಪ್ಪಿ ತಪ್ಪಿ ಕೂಡ ಊಟದ ವಿಷಯದಲ್ಲಿ ಸುಳ್ಳು ಹೇಳಬೇಡಿ.. ಎಲ್ಲಾ ಮಾಡೋದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಅಲ್ವಾ.. ಹ್ಹಾ ಹ್ಹಾ ಹ್ಹಾ..
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ರವಿಕಾಂತ ಗೋರೆ ಅವರೇ,
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    ಶಿವಶಂಕರ ವಿಷ್ಣು ಯಳವತ್ತಿ ಅವರೇ,
    ಪಾಪ ರೀ.. ನಮ್ಮ ಉಲ್ಲಾಸ... :)
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    ==========

    SSK ಅವರೇ,
    ಅವರು ಅಂತವರಲ್ಲ, ಸನ್ನಿವೇಶ ಹಾಗಿತ್ತು ಅಸ್ಟೆ... ದಯವಿಟ್ಟು ಬೇಜಾರ ಮಾಡ್ಕೋಬೇಡಿ...
    ಲೇಖನ ಓದಿ, ಉಲ್ಲಾಸನ ಮೇಲೆ ಸಹಾನುಭೂತಿ ವ್ಯಕ್ತಪಡಿಸಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  14. wow very bad experience ullasaavrdhu ...........................................

    ReplyDelete
  15. neev bardiro e ulllasavardhu nangu hage ondhu anubava hagidhe kandri.......... nan ondh madvege late hagi odhee adike avru ulidiro.palidiro. seedhogiro oota hakidro sari adhu tinoona antha iiti kai toliyake hodre a palteu maya reeeeeeeee very badd................ neev nenepu madri..

    ReplyDelete
  16. ರೂಪ ಅವರೇ,
    ಛೆ... ನಿಮಗೆ ಹೀಗಾಗಬಾರದಿತ್ತು...!!!
    ನಮ್ಮ ಉಲ್ಲಾಸನ ಮೇಲೆ ಕನಿಕರ ತೋರಿಸಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

    ReplyDelete