Monday, November 2, 2009

ಅಂಡರ್ಲೈನ್

ಕಾಲೇಜಿನ ಮೆಟ್ಟಿಲು ಏರಿ ಕೇವಲ ಒಂದು ತಿಂಗಳಸ್ಟೇ ಕಳದಿತ್ತು. ಕಾಲೇಜಿನಲ್ಲಿ ನಮ್ಮಂತ ಹುಡುಗರು ಹರಟೆ ಹೊಡಿತ ಕೂಡೋಕೆ ಒಂದು ಕಟ್ಟೆ ಇತ್ತು. ಹರಟೆ ಕಟ್ಟೆ ಅನ್ಕೊಲಿ. ನಾನು, ನನ್ನ ಗೆಳೆಯ ಮಂಜು ಕಟ್ಟೆಮೇಲೆ ಹರಟುತ್ತ ಕೂತಿದ್ವಿ. ದೂರದಲ್ಲಿ ನನ್ನ ಇನ್ನೊಬ್ಬ ಗೆಳೆಯ ಶಿವು(ಶಿವಪ್ರಸಾದ್ ರೆಡ್ಡಿ), ನಮ್ಮ ಕ್ಲಾಸಿನ ಒಂದು ಸುಂದರವಾದ ಹುಡುಗಿ ಸ್ನೇಹ ಜೊತೆ ಮಾತಾಡ್ತಾ ನಿಂತಿದ್ದ. ಮಾತಾಡ್ತಾ ಇದ್ದ ಅನ್ನೋದಕ್ಕಿಂತ ಕಿರುಚಾಡ್ತಾ ಇದ್ದ ಅಂತಾನೆ ಹೇಳಬಹುದು. ಒಂದೇ ಸಮನೆ ಸ್ನೇಹಳನ್ನು ಬೈಯುತ್ತಿದ್ದ. ಯಾವ ವಿಷಯಕ್ಕೆ ಸಂಬಂದಿಸಿ ಸ್ನೇಹಳನ್ನು ಬಯ್ತಾ ಇದನೋ ಅಂತ ಮಂಜನ ಕೇಳಿದೆ. ಮಂಜನಿಗೂ ಗೊತ್ತಿರ್ಲಿಲ್ಲ.
'ಏನಾದ್ರು ಲವ್ ಗಿವ್ ಮಾಡ್ತಾ ಇದಾರ....' ಅಂತ ಮಂಜನ ಕೇಳಿದೆ.
'ನನಗೆ ಗೊತ್ತಿರುವ ಹಾಗೆ, ಲವ್ ಗಿವ್ ಏನು ಇಲ್ಲ ಕಣೋ' ಎಂದ ಮಂಜ.
ಮತ್ತೆ ಯಾಕೆ ಬೈತ ಇರಬಹುದು...? ಎಂದು ತೆಲೆಕೆಡಸಿಕೊಳ್ಳುತ್ತಿರುವಾಗ, ನಮ್ಮ ಶಿವು ನಮ್ಮಲ್ಲಿಗೆ ಬಂದ. ಆ ಹುಡುಗಿ ಕಣ್ಣಿರನ್ನು ತನ್ನ ವೆಲಿನಿಂದ ವರೆಸಿಕೊಳ್ಳುತ್ತ ಕ್ಲಾಸಿನೊಳಗೆ ಹೋದಳು. ನನ್ನ ಮನಸು ಸ್ವಲ್ಪ ಕರಗಿತು. ಎಸ್ಟೆ ಆಗ್ಲಿ ನನ್ನಂತ ಹುಡುಗರ ಮನಸು ತುಂಬಾ ಮೃದು ಅಲ್ವಾ..?.
ನಾನು ಕೇಳಿದೆ.. 'ಯಾಕೋ ಸ್ನೇಹಾನ ಅಸ್ಟೊಂದು ಬೈತಾ ಇದ್ದೆ..?'
'ಹೋಗ್ಲಿ ಬಿಡೋ, ಅದನ್ಯಾಕೆ ಕೇಳ್ತಿಯಾ....' ಎಂದ.
'ಏನ್ ಹೇಳೋ...'
'ಅವಳು ನನ್ನ ನೋಟ್ಸ್ ಕೇಳಿದ್ಲು, ಕೊಟ್ಟಿದ್ದೆ...' ಎಂದ.
(ನಮ್ಮ ಕ್ಲಾಸಿನಲ್ಲಿ ಲೆಕ್ಚರರ್ ಪಾಠ ಮಾಡುತ್ತಾ ನೋಟ್ಸ್ ಬರಿಸ್ತಾ ಇದ್ರು. ನಾವು ಅವರು ಹೇಳುವ ವೇಗದಲ್ಲಿ ಬರೆದುಕೊಳ್ಳಲು ಆಗುತ್ತಿರಲಿಲ್ಲ. ಮದ್ಯ ಮದ್ಯ ಜಾಗ ಕಾಲಿ ಬಿಟು ಬಿಟ್ಟು ಬರೆದುಕೊಳ್ಳುತ್ತಿದ್ದೆವು. ಆದರೆ ನಮ್ಮ ಶಿವು, ಲೆಕ್ಚರರ್ ಎಸ್ಟೆ ವೇಗವಾಗಿ ಹೇಳಿದರೂ ಬರೆದುಕೊಳ್ಳುತ್ತಿದ್ದ. ನಾವು, ನಂತರ ಅವನ ನೋಟ್ಸ್ ತಗೊಂಡು ಜಾಗ ಕಾಲಿ ಬಿಟ್ಟಿದ್ದ ಸ್ಥಳಗಳಲ್ಲಿ ಭರ್ತಿ ಮಾಡಿಕೊಳ್ಳುತ್ತಿದ್ದೆವು.).
'ಅದಕ್ಕೆ ಏನಾಯ್ತೋ ಈಗ........?' ಎಂದೆ.
'ಕ್ಲಾಸ್ನಲ್ಲಿ ಲೆಕ್ಚರ್ ಸ್ಪೀಡ್ ಆಗಿ ನೋಟ್ಸ್ ಹೇಳುವುದನ್ನು, ನಾನು ಬರೆದುಕೊಳ್ಳುವಾಗ ನೋಟ್ಸ್'ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ (Spelling mistake) ಮಾಡಿದ್ದೆ...' ಎಂದ.
'ಅದಕ್ಕೆ ಏನಾಯ್ತು.... ?'
'ಅವಳು ನನ್ನ ನೋಟ್ಸ್ ತೆಗೆದುಕೊಂಡಿದ್ದಳು ಅಲ್ವಾ... ನಾನು ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ ಪದಗಳಿಗೆಲ್ಲ ಪೆನ್ಸಿಲ್'ನಲ್ಲಿ ಕೆಳಗೆ ಅಂಡರ್ಲೈನ್ (Underline) ಮಾಡಿದಾಳೆ'.
'ಒಹ್ ಅಸ್ಟೆನಾ...? ಅದಕ್ಕೆ ಅವಳಿಗೆ ಅಸ್ಟೊಂದು ಬೈಯೋದ......?' ಎಂದು ಕೇಳಿದೆ.
'ಆದರೆ ಏನ್ ಮಾಡೋದು, ನೋಟ್ಸಿನಲ್ಲಿ ನಾನು ಬರೆದಿರುವುದಕ್ಕಿಂತ ಅವಳ Underlines ಜಾಸ್ತಿ ಇದಾವೆ...ಪ್ರತಿಯೊಂದು ಪದಕ್ಕೂ ಅಂಡರ್ಲೈನ್ ಮಾಡಿದಾಳೆ ' ಎಂದ ಸಂಕಟದಲ್ಲಿ ಹೇಳಿದ.
ನಾನು, ಮಂಜ ಇದನ್ನು ಕೇಳಿ ಬಿದ್ದು ಬಿದ್ದು ನಕ್ಕೆವು.

Share/Save/Bookmark

22 comments:

  1. ಹಹ್ಹಹಹ್ಹಾಹಾ ...ಚೆನ್ನಾಗಿದೆ ಶಿವು.....
    ಅಡ್ಡಗೆರೆ ಮಹತ್ಮೆ....

    ReplyDelete
  2. ಹ ಹ ಹ.....
    ನಾನು ೨ ನೆ ವರ್ಷದ ಡಿಪ್ಲೊಮಾಗೆ ಬಂದಾಗ , ನನ್ನ ಕಿರಿಯ ಹುಡುಗರು ನನ್ನಿಂದ ೧ ಇಯರ್ ನೋಟ್ ಬುಕ್ ಕೇಳಿದ್ರು ..... ನನ್ನ ಕಥೆಯೂ ಆಲ್ಮೋಸ್ಟ್ ಇದೆ ಆಗಿತ್ತು...... ಒಂದೇ ವ್ಯತ್ಯಾಸ ಎಂದರೆ ಅಂಡರ್ಲೈನ್ ಹಾಕ್ಲಿಕ್ಕೆ ನಾನು ಯಾರಿಗೂ ಬಿಟ್ಟಿಲ್ಲ, ಯಾಕಂದ್ರೆ ನಾನು ಆ ನೋಟ್ಸ್ ಯಾರಿಗೂ ಕೊಡ್ಲಿಲ್ಲ.....

    ReplyDelete
  3. ಹ್ಹ ಹ ಹ್ಹ ಹ ಹ್ಹ. Mistake ಮಾಡೋದು ನಮ್ಮ ಕೆಲಸ ತಿದ್ದೋದು ಹುಡುಗಿಯರ ಕೆಲಸ. 'ಅಂಡರ್ಲೈನ್'ಗೆ 'ಅಂಡರ್ಲೈನ್' ಯಾಕೆ? :)
    ನಿಮ್ಮವ,
    ರಾಘು.

    ReplyDelete
  4. ಈ ಅಂಡರ್‌ಲೈನ್ ಇಷ್ಟೊಂದು ತಾಪತ್ರಯ ಕೊಡುತ್ತೆ ಅನ್ನೋದು ಗೊತ್ತೇ ಇರ್ಲಿಲ್ಲ!!

    ReplyDelete
  5. ಆತ್ಮೀಯ

    ಪಾಪ ಕಣ್ರೀ, ನಿಮ್ಮ ಸ್ನೇಹಿತನಿಗೆ ಹೀಗ ಕಾಲೆಳೆಯೋದು?

    ReplyDelete
  6. ಶಿವು...

    ಚೆನ್ನಾಗಿದೆ...

    ಹ್ಹಾ..ಹ್ಹಾ...! ಏನೇ ಆದ್ರೂ ಅವಳು ನಿಮ್ಮ ಸ್ನೇಹಿತನಿಗೆ ಲೈನ್ ಹೊಡಿಬರ್ದಿತ್ತು...!
    (ಅಂಡರ್ ಲೈನ್)

    ReplyDelete
  7. ಅಂಡರ್ ಲೈನ್ ಕತೆ ಚೆನ್ನಾಗಿದೆ

    ReplyDelete
  8. ಹಹ ಚೆನ್ನಾಗಿದೆ ನಿಮ್ಮ ಗೆಳೆಯ ಹುಡುಗಿಯಿಂದ ಲೈನ್ ಹೊಡೆಸಿಕೊಂಡನಲ್ಲ ಬಿಡಿ ಹಹಹಹ... ನಿಮಗೇನಾದರು ಸಾಧ್ಯವಾಗಿತ್ತ ಇಂತಹದು ಹಹಹ...

    ReplyDelete
  9. ಗುಣಮಟ್ಟ ಹಾಗೂ ಪ್ರಮಾಣ ಪರಸ್ಪರ ವಿಲೋಮನುಪಾತದಲ್ಲಿರುವದು ಇದರಿ೦ದ ಗೊತ್ತಾಗುತ್ತೆ. ಪೂರಾ ಬರೆದವನಲ್ಲಿ ಗುಣಮತ್ತ ಕಳಪೆ. ಸರಿಯಾಗಿ ಬರೆದವರ ನೋಟ್ಸ್ ಅಪೂರ್ಣವಾಗಿದೆ. ಒಳ್ಳೇ ತಮಾಷೆ ಪ್ರಸ೦ಗ ವಿವರಿಸಿದ್ದಿರಾ!

    ReplyDelete
  10. ನಿಮ್ಮ ಗೆಳೆಯನ ಪ್ರತಿಯೊಂದು ಪದಕ್ಕೂ ಅವಳು ಲೈನ್ ಹೊಡೆದಿದ್ದಾಳೆ ಎಂದರೆ, ಅವನೇ ಗ್ರೇಟ್ ಅಲ್ವಾ?

    ReplyDelete
  11. ಲೈನ್ ಹೊಡೆಸಿ ಕೊಂಡ ಅವನೇ ಗ್ರೇಟ್ ಅಲ್ವ?

    ReplyDelete
  12. ಚೆನ್ನಾಗಿದೆ ಶಿವು ಅವರೇ .. :)

    ReplyDelete
  13. nice one, even i used to do the same :P

    ReplyDelete
  14. ಶಿವೂ
    ಸೂಪರ್
    ಸಕಾತ್ತಾಗಿದೆ

    ReplyDelete
  15. ಶಿವಪ್ರಕಾಶ್,

    ಮೊದಲು ಸಹಜವಾಗಿ ಓದಿಸಿಕೊಂಡು ಹೋದ ಬರಹ ಕೊನೆಯಲ್ಲಿನ ಪಂಚ್ ಸಕ್ಕತ್ ಖುಷಿಕೊಟ್ಟಿತು. ನಿಮ್ಮ ಗೆಳೆಯನ ಪ್ರತಿ ಪದವೂ ತಪ್ಪು ಎಂದು ತೋರಿಸಲು ಅವಳು ಹಾಗೆ ಮಾಡಿದಳೋ, ಅಥವ ನಿಜಕ್ಕೂ ಅವಳು ಲೈನ್ ಹೊಡೆಯುವದನ್ನು ಸೂಕ್ಷ್ಮವಾಗಿ ತೋರಿಸುತ್ತಿದ್ದಳೋ.....
    ಮತ್ತೊಮ್ಮೆ ವಿಚಾರಿಸಿ ನೋಡಿ.

    ReplyDelete
  16. ಮಹೇಶ್ ಅವರೇ,
    ಅಡ್ಡಗೆರೆ ಮಹತ್ಮೆ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ದಿನಕರ ಮೊಗೇರ ಅವರೇ,
    ನೀವು ನೋಟ್ಸ್ ಕೊಟ್ರೆ ತಾನೇ ಅಂಡರ್ಲೈನ್ ಹಾಕೋದು... ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ರಘು ಅವರೇ,
    ಹುಡುಗರು ಅಸ್ಟೊಂದು ದಡ್ಡರಲ್ಲ ಬಿಡಿ... ಏನೋ ಅವಾಗವಾಗ ತಿಳಿಯದೆ ತಪ್ಪು ಮಾಡಿರುತ್ತಾರೆ... :)
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಸುಮನ ಅವರೇ,
    ನಿಜ ರೀ. ನನಗೂ ಹೀಗಾಗುತ್ತೆ ಅಂತ ಗೊತ್ತಿರ್ಲಿಲ್ಲ. ಪಾಪ ನಮ್ಮ ಶಿವು...
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಲೋದ್ಯಾಶಿ ಅವರೇ,
    ನೋಡ್ರಿ ಪಾಪ. ನಮ್ಮ ಹುಡುಗನಿಗೆ ಈ ಥರನ ಕಾಲೆಳೆಯೋದು ???
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಪ್ರಕಾಶ್ ಅವರೇ,
    ಆದ್ರೆ ಏನ್ ಮಾಡೋದು ಹೇಳಿ, ಅವಳು ಲೈನ್ ಮೇಲೆ ಲೈನ್ ಹೊಡೆದಿದ್ದಾಳೆ.. ಹ್ಹಾ ಹ್ಹಾ ಹ್ಹಾ...
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    umesh desai ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಮನಸು ಅವರೇ,
    ಅಯ್ಯೋ... ನನಗೂ ಹುಡುಗಿಯರಿಗೂ ಕಿಲೋಮೀಟರ್ ದೂರ... :D
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಸೀತಾರಾಮ. ಕೆ. ಅವರೇ,
    ನೀವು ಹೇಳಿದ್ದು ನಿಜ. ಸರಿಯಾಗಿ ಬರೆಯುತ್ತ ಕೂಡಲು ಸಮಯ ಇರುವುದಿಲ್ಲ. ಅದಕ್ಕೆ ಈ ಈತರಹದ ತಪ್ಪುಗಳಗುತ್ತವೆ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    sunaath ಅವರೇ,
    ಹ್ಹಾ ಹ್ಹಾ ಹ್ಹಾ... ಹಾಗಾದ್ರೆ ನಮ್ ಶಿವು ಗ್ರೇಟ್...
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಬಾಲು ಅವರೇ,
    ನಿಜ ರೀ. ಅವನೇ ಗ್ರೇಟ್.. ಹ್ಹಾ ಹ್ಹಾ ಹ್ಹಾ
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    Snow White ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    Shree ಅವರೇ,
    ನೀವು ಇದೇ ತರ ಮಾಡ್ತಾ ಇದ್ರಾ.. ?. ಪಾಪ ಎಷ್ಟು ಹುಡುಗರಿಗೆ ಕಾಡಿಸಿದ್ದಿರೋ...? .. ಹ್ಹಾ ಹ್ಹಾ ಹ್ಹಾ..
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಗುರುಮೂರ್ತಿ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    Shrinidhi Hande ಅವರೇ,
    ನನ್ನ ಬ್ಲಾಗ್ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಶಿವು ಅವರೇ,
    ನೀವು ಹೇಳಿದ ಹಾಗೆ ಇದ್ದರು ಇರಬಹುದು.. ಹ್ಹಾ ಹ್ಹಾ ಹ್ಹಾ
    ಲೇಖನದಲ್ಲಿನ ಪಂಚ್ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  17. ರವಿಕಾಂತ ಗೋರೆ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  18. ಮಹೇಶ್ ಅವರೇ,

    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  19. ಸೀತಾರಾಮ. ಕೆ. ಅವರೇ,
    ನೀವು ಹೇಳಿದ್ದು ನಿಜ. ಸರಿಯಾಗಿ ಬರೆಯುತ್ತ ಕೂಡಲು ಸಮಯ ಇರುವುದಿಲ್ಲ. ಅದಕ್ಕೆ ಈ ಈತರಹದ ತಪ್ಪುಗಳಗುತ್ತವೆ.
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    sunaath ಅವರೇ,
    ಹ್ಹಾ ಹ್ಹಾ ಹ್ಹಾ... ಹಾಗಾದ್ರೆ ನಮ್ ಶಿವು ಗ್ರೇಟ್...
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಬಾಲು ಅವರೇ,
    ನಿಜ ರೀ. ಅವನೇ ಗ್ರೇಟ್.. ಹ್ಹಾ ಹ್ಹಾ ಹ್ಹಾ
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    Snow White ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    Shree ಅವರೇ,
    ನೀವು ಇದೇ ತರ ಮಾಡ್ತಾ ಇದ್ರಾ.. ?. ಪಾಪ ಎಷ್ಟು ಹುಡುಗರಿಗೆ ಕಾಡಿಸಿದ್ದಿರೋ...? .. ಹ್ಹಾ ಹ್ಹಾ ಹ್ಹಾ..
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಗುರುಮೂರ್ತಿ ಅವರೇ,
    ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    Shrinidhi Hande ಅವರೇ,
    ನನ್ನ ಬ್ಲಾಗ್ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ======

    ಶಿವು ಅವರೇ,
    ನೀವು ಹೇಳಿದ ಹಾಗೆ ಇದ್ದರು ಇರಬಹುದು.. ಹ್ಹಾ ಹ್ಹಾ ಹ್ಹಾ
    ಲೇಖನದಲ್ಲಿನ ಪಂಚ್ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  20. eilli kannadadalli post madalu hege bariyodu?
    google tansletion nalli baredare eilli paste
    madokagalla!!!!!!
    alva?

    ReplyDelete